Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿಮ್ಮ ಸಿನಿಮಾದಲ್ಲಿ ನನ್ನ ಬದಲು ಸಲ್ಮಾನ್‌ಗೆ ಅವಕಾಶ ಕೊಟ್ಟಿದ್ದೇಕೆ? ಚಿರಂಜೀವಿಗೆ ಆಮಿರ್ ಪ್ರಶ್ನೆ
ನಟ ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ಒಟ್ಟಿಗೆ ನಟಿಸುತ್ತಿರುವುದು ಗೊತ್ತಿರುವ ವಿಷಯವೇ. ಚಿರಂಜೀವಿ ನಟನೆಯ ಮುಂದಿನ ಸಿನಿಮಾ 'ಗಾಡ್ ಫಾದರ್'ನಲ್ಲಿ ಸಲ್ಮಾನ್ ಖಾನ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.
ಇದೀಗ ಆಮಿರ್ ಖಾನ್ ಅವರ ಹೊಸ ಸಿನಿಮಾ 'ಲಾಲ್ ಸಿಂಗ್ ಛಡ್ಡ' ಅನ್ನು ತೆಲುಗಿನಲ್ಲಿ ಚಿರಂಜೀವಿ ಅವರೇ ಪ್ರೆಸೆಂಟ್ ಮಾಡುತ್ತಿದ್ದಾರೆ. ಸಿನಿಮಾ ನೋಡಿ ಬಹುವಾಗಿ ಮೆಚ್ಚಿಕೊಂಡಿರುವ ಚಿರಂಜೀವಿ ಆಮಿರ್ ಖಾನ್ ನಟನೆಯನ್ನು ಕೊಂಡಾಡಿದ್ದಾರೆ.
ಸಿನಿಮಾದ ಕುರಿತು ನಿನ್ನೆ ಹೈದರಾಬಾದ್‌ನಲ್ಲಿ ಪತ್ರಿಕೋಗೋಷ್ಠಿ ಏರ್ಪಾಟಾಗಿತ್ತು. ಗೋಷ್ಠಿಯಲ್ಲಿ ಆಮಿರ್ ಖಾನ್, ನಾಗ ಚೈತನ್ಯ ಜೊತೆಗೆ ಚಿರಂಜೀವಿ ಸಹ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಚಿರಂಜೀವಿಯನ್ನು ಪ್ರಶ್ನೆ ಮಾಡಿರುವ ಆಮಿರ್ ಖಾನ್ ''ನಿಮ್ಮ ಸಿನಿಮಾದಲ್ಲಿ ನನಗೆ ಅವಕಾಶ ನೀಡದೆ ಸಲ್ಮಾನ್ ಖಾನ್‌ಗೆ ಅವಕಾಶವನ್ನೇಕೆ ನೀಡಿದಿರಿ?'' ಎಂದು ಪ್ರಶ್ನೆ ಮಾಡಿದ್ದಾರೆ.

ಸಲ್ಮಾನ್ ಖಾನ್ ಅನ್ನು ಆಯ್ಕೆ ಮಾಡಿದ್ದು ಏಕೆ?
ಆಮಿರ್ ಖಾನ್‌ರ ಪ್ರಶ್ನೆಗೆ ನಗುತ್ತಲೇ ಉತ್ತರಿಸಿರುವ ಚಿರಂಜೀವಿ, ''ನಮಗೆ ಹೃದಯ ಇರುವ ಬುದ್ಧಿವಂತಿಕೆ ಇರುವ ನಟನಿಗಿಂತಲೂ ದೈತ್ಯ ದೇಹಿಯಾಗಿರುವ, ಅಂಗಸೌಷ್ಟವ ಇರುವ ನಟನ ಅವಶ್ಯಕತೆ ಇತ್ತು ಹಾಗಾಗಿ ನಾವು ಸಲ್ಮಾನ್ ಖಾನ್ ಅನ್ನು ಆಯ್ಕೆ ಮಾಡಿಕೊಂಡೆವು'' ಎಂದಿದ್ದಾರೆ. ಚಿರಂಜೀವಿ ಉತ್ತರಕ್ಕೆ ಮರುಳಾಗಿರುವ ಆಮಿರ್ ಖಾನ್ ಮುಂದೆ ಅವಕಾಶ ಸಿಕ್ಕರೆ ನಾವಿಬ್ಬರೂ ಒಟ್ಟಿಗೆ ನಟಿಸುತ್ತೇವೆ ಎಂದಿದ್ದಾರೆ.

'ಲಾಲ್ ಸಿಂಗ್ ಛಡ್ಡ' ನೋಡಿ ಖುಷಿಪಟ್ಟ ಚಿರಂಜೀವಿ
ಆಮಿರ್ ಖಾನ್ ತಮ್ಮ ಲಾಲ್ ಸಿಂಗ್ ಛಡ್ಡ ಸಿನಿಮಾವನ್ನು ಚಿರಂಜೀವಿಗಾಗಿ ವಿಶೇಷ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿಸಿದ್ದರು. ಚಿರಂಜೀವಿ ಮನೆಯಲ್ಲಿ ಆಮಿರ್ ಖಾನ್, ಚಿರಂಜೀವಿ, ರಾಜಮೌಳಿ, ಸುಕುಮಾರ್, ನಾಗಾರ್ಜುನ, ನಾಗ ಚೈತನ್ಯ ಒಟ್ಟಿಗೆ 'ಲಾಲ್ ಸಿಂಗ್ ಛಡ್ಡ' ವೀಕ್ಷಿಸಿದರು. ಸಿನಿಮಾ ನೋಡಿ ಬಹಳ ಖುಷಿಪಟ್ಟ ಚಿರಂಜೀವಿ ಸಿನಿಮಾ ಮುಗಿಯುತ್ತಲೇ ಓಡಿ ಹೋಗಿ ಆಮಿರ್ ಖಾನ್ ಅನ್ನು ತಬ್ಬಿಕೊಂಡು ಅಭಿನಂದಿಸಿದರು. ಚಿರಂಜೀವಿಯ ಮೆಚ್ಚುಗೆಯ ಮಾತುಗಳಿಗೆ ಆಮಿರ್ ಖಾನ್ ಆನಂದಬಾಷ್ಪ ಸುರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಲ್ಮಾನ್-ಚಿರಂಜೀವಿ ಒಟ್ಟಿಗೆ ನಟನೆ
ಇನ್ನು ಚಿರಂಜೀವಿ, ಸಲ್ಮಾನ್ ಖಾನ್ ಜೊತೆಗೂ ಆಪ್ತ ಬಂಧ ಹೊಂದಿದ್ದು, ತಮ್ಮ ಮುಂದಿನ ಸಿನಿಮಾ 'ಗಾಡ್ ಫಾದರ್'ನಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸುತ್ತಿದ್ದಾರೆ. ಮಲಯಾಳಂನ 'ಲುಸಿಫರ್' ಸಿನಿಮಾದ ರೀಮೇಕ್ ಅದಾಗಿದ್ದು, ಮೂಲ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದ ಪಾತ್ರದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅದ್ಭುತ ಆಕ್ಷನ್ ದೃಶ್ಯದಲ್ಲಿ ಕಾಣಿಸಿಕೊಂಡಿರುವ ಜೊತೆಗೆ ಚಿರಂಜೀವಿ ಜೊತೆ ಡ್ಯಾನ್ಸ್ ಸಹ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ 'ಗಾಡ್ ಫಾದರ್' ಸಿನಿಮಾ ಬಿಡುಗಡೆ ಆಗಲಿದೆ.

ಆಗಸ್ಟ್ 11 ಕ್ಕೆ ಬಿಡುಗಡೆ ಆಗಲಿದೆ 'ಲಾಲ್ ಸಿಂಗ್ ಛಡ್ಡ'
ಇನ್ನು ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಛಡ್ಡ' ಇಂಗ್ಲೀಷ್‌ನ 'ಫಾರೆಸ್ಟ್ ಗಂಫ್' ಸಿನಿಮಾದ ರೀಮೇಕ್ ಆಗಿದ್ದು ಸಿನಿಮಾದಲ್ಲಿ ಆಮಿರ್ ಖಾನ್ ಜೊತೆಗೆ ನಟಿ ಕರೀನಾ ಕಪೂರ್ ನಟಿಸಿದ್ದಾರೆ. ಸಿನಿಮಾವು ಆಗಸ್ಟ್ 11 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಯನ್ನು ಆಮಿರ್ ಖಾನ್ ಹೊಂದಿದ್ದು, ಈ ಸಿನಿಮಾವನ್ನು ಅದ್ವೈತ್ ಚಂದನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.