ಮಹೇಶ್ ಬಾಬು ಹೇರ್‌ಸ್ಟೈಲ್ ವೈರಲ್; ಇದು ವಿಗ್ಗಾ? ಹೇರ್‌ ಟ್ರಾನ್ಸ್‌ಪ್ಲೆಂಟಾ?

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸೆನ್ಸೇಷನಲ್ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಬಂದಿದ್ದ 'ಗುಂಟೂರು ಖಾರಂ' ಅಷ್ಟಾಗಿ ಸದ್ದು ಮಾಡಲಿಲ್ಲ. ರಾಜಮೌಳಿ ನಿರ್ದೇಶನದ ಮುಂದಿ ಚಿತ್ರದಲ್ಲಿ ನಟಿಸೋಕೆ ಸಿದ್ಧತೆ ನಡೆಸುತ್ತಿದ್ದಾರೆ. ಇವರಿಬ್ಬರ ಕ್ರೇಜಿ ಕಾಂಬಿನೇಷನ್‌ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

'RRR' ನಂತರ ಮಹೇಶ್ ಬಾಬು ಜೊತೆ ರಾಜಮೌಳಿ ಪ್ಯಾನ್ ವರ್ಲ್ಡ್ ಸಿನಿಮಾ ಪ್ಲಾನ್ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ನಡೀತಿದ್ದು ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಈ ಚಿತ್ರಕ್ಕೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಬಹುತೇಕ ಜಕ್ಕಣ್ಣನ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡಲಿದೆ. ದೇಶ ವಿದೇಶಗಳಲ್ಲಿ ಚಿತ್ರದ ಕಥೆ ಸಾಗಲಿದೆ. ಇದೊಂದು ಅಡ್ವೆಂಚರಸ್ ಸಿನಿಮಾ ಆಗಿದ್ದು ಹಾಲಿವುಡ್ ಹೀರೊ ರೀತಿ ಮಹೇಶ್ ಬಾಬುನ ಪ್ರಸೆಂಟ್ ಮಾಡುವ ಪ್ರಯತ್ನ ನಡೀತಿದೆ.

Wig or hair transplant Mahesh babu new hair style spark social media debate

'ಸರ್ಕಾರುವಾರಿ ಪಾಟ' ಹಾಗೂ 'ಗುಂಟೂರು ಖಾರಂ' ಚಿತ್ರದಲ್ಲಿ ಮಹೇಶ್ ಬಾಬು ಹೇರ್‌ಸ್ಟೈಲ್ ಬದಲಾಗಿತ್ತು. ಕೊಂಚ ಉದ್ದ ಕೂದಲು ಬಿಟ್ಟು ಮಹೇಶ್ ಬಾಬು ಮಿಂಚಿದ್ದರು. ಆದರೆ ಇತ್ತೀಚೆಗೆ ಮತ್ತಷ್ಟು ಕೂದಲು ಬಿಟ್ಟು ಟಾಲಿವುಡ್ ಪ್ರಿನ್ಸ್ ಕಾಣಿಸಿಕೊಳ್ಳುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ಚಿತ್ರಕ್ಕಾಗಿ ಮಹೇಶ್ ಬಾಬು ಉದ್ದ ಕೂದಲು, ಗಡ್ಡ ಬಿಟ್ಟಿದ್ದಾರೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಇದು ನಿಜವಾದ ಹೇರ್‌ ಸ್ಟೈಲಾ? ವಿಗ್ಗಾ? ಅಥವಾ ಹೇರ್‌ ಟ್ರಾನ್ಸ್‌ಪ್ಲೆಂಟಾ? ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ.

ಮಹೇಶ್ ಬಾಬು ತಂದೆ, ಸಹೋದರ ಎಲ್ಲರಿಗೂ ಬೇಗ ಕೂದಲು ಉದುರಿ ಬೋಳು ತಲೆಯಾಗಿತ್ತು. ಮಹೇಶ್ ಬಾಬುಗೂ ಇದೇ ಸಮಸ್ಯೆ ಇದೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಮಹೇಶ್ ಬಾಬು ಕೂಡ ಬಕ್ಕ ತಲೆ ಆಗಿರುವಂತ ಫೋಟೊವೊಂದು ಆಗಾಗ್ಗೆ ವೈರಲ್ ಆಗುತ್ತದೆ. ಬೇರೆ ನಟರ ಅಭಿಮಾನಿಗಳು ಈ ಫೋಟೊ ಶೇರ್ ಮಾಡಿ ಮಹೇಶ್ ಬಾಬುನ ಟ್ರೋಲ್ ಮಾಡುತ್ತಿರುತ್ತಾರೆ. ಇದೇ ಕಾರಣಕ್ಕೆ ಸದ್ಯ ಮಹೇಶ್ ಬಾಬು ಉದ್ದ ಕೂದಲಿನ ಲುಕ್ ಬಗ್ಗೆ ತರಹೇವಾರಿ ಕಾಮೆಂಟ್ಸ್ ಬರ್ತಿವೆ.

ಮಹೇಶ್ ಬಾಬು ವಯಸ್ಸು 45 ದಾಟಿದೆ. ಈ ವಯಸ್ಸಲ್ಲಿ 20ರ ಹರೆಯದ ಹುಡಗರಂತೆ ಹೇರ್‌ಸ್ಟೈಲ್ ಹೇಗೆ ಸಾಧ್ಯ? ಕೆಲ ಸ್ಟಾರ್ ನಟರು ವಿಗ್ ಧರಿಸುತ್ತಾರೆ. ಹೇರ್‌ ಟ್ರಾನ್ಸ್‌ಪ್ಲೆಂಟ್ ಚಿಕಿತ್ಸೆ ಮೂಲಕ ಬೋಳು ತಲೆಯನ್ನು ಮರೆ ಮಾಚುತ್ತಾರೆ. ಆಧುನಿಕ ತಂತ್ರಜ್ಞಾನ ಬಳಸಿ ಇಂತಹ ಸಾಕಷ್ಟು ಚಿಕಿತ್ಸೆ ನೀಡಲಾಗುತ್ತದೆ. ಸ್ಟಾರ್‌ಗಳು ಕೂಡ ಇಂತಹ ಚಿಕಿತ್ಸೆ ಮೊರೆ ಹೋಗಿರುವ ಉದಾಹರಣೆಗಳಿವೆ. Q6 ಹೇರ್ ಪ್ಯಾಚ್ ತಂತ್ರಜ್ಞಾನ ಬಳಸಿ ಮಹೇಶ್ ಬಾಬು ತಲೆ ತುಂಬಾ ಕೂದಲು ಇರುವಂತೆ ನೋಡಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ.

ಇತ್ತೀಚೆಗೆ ಮಹೇಶ್ ಬಾಬು ಕುಟುಂಬ ಸದಸ್ಯರೆಲ್ಲಾ ಮದುವೆ ಸಮಾರಂಭವೊಂದರಲ್ಲಿ ಭಾಗಿ ಆಗಿದ್ದರು. ಪತ್ನಿ, ಮಕ್ಕಳ ಸಮೇತರಾಗಿ ಟಾಲಿವುಡ್ ಪ್ರಿನ್ಸ್ ಕೂಡ ಹಾಜರಾಗಿದ್ದರು. ಈ ಕಾರ್ಯಕ್ರಮಕ್ಕೆ ಮಹೇಶ್ ಬಾಬು ಸಹೋದರಿ ಮಂಜುಳ ಸಹ ಬಂದಿದ್ದರು. ಈ ವೇಳೆ ಸಹೋದರನ ಉದ್ದ ಕೂದಲಿನ ಸ್ಟೈಲ್ ಬಗ್ಗೆ ಸಹೋದರಿ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಏನೋ ಇಷ್ಟು ಉದ್ದ ಕೂದಲು ಎಂದು ಕೇಳಿದ್ದಾರೆ.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಮತ್ತೆ ಮಹೇಶ್ ಬಾಬು ಹೇರ್‌ಸ್ಟೈಲ್ ಕುರಿತು ಬಗೆ ಬಗೆ ಚರ್ಚೆ ಶುರುವಾಗಿದೆ. ಇನ್ನು ಬಹುಕೋಟಿ ವೆಚ್ಚದಲ್ಲಿ ರಾಜಮೌಳಿ ನಿರ್ದೇಶನದ ಸಿನಿಮಾ ನಿರ್ಮಾಣವಾಗಲಿದೆ. ಇದು ಮಹೇಶ್ ಬಾಬು ನಟನೆಯ 29ನೇ ಸಿನಿಮಾ. ಹಾಗಾಗಿ ಸದ್ಯಕ್ಕೆ SSMB29 ಎಂದೇ ಕರೆಯಲಾಗುತ್ತಿದೆ. ಯಾವಾಗ ಸಿನಿಮಾ ಸೆಟ್ಟೇರುತ್ತದೆ? ಯಾವಾಗ ರಿಲೀಸ್? ಎನ್ನುವ ಬಗ್ಗೆ ಖಚಿತ ಮಾಹಿತಿ ಇನ್ನು ಸಿಕ್ಕಿಲ್ಲ.

More from Filmibeat

English summary
#SSMB29; Mahesh Babu Long Hair and Beard look goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X