ತಮ್ಮ ವಾರಸ್ದಾರನನ್ನು ಪರಿಚಯಿಸಿ ಚಿತ್ರರಂಗಕ್ಕೆ ಪವನ್ ಕಲ್ಯಾಣ್ ಗುಡ್‌ಬೈ?

ತೆಲುಗು ನಟ ಪವನ್ ಕಲ್ಯಾಣ್ ಆಂಧ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಪ್ರಧಾನಿ ಮೋದಿ ಕೂಡ ಪವರ್ ಸ್ಟಾರ್ ಕ್ರೇಜ್ ಬಗ್ಗೆ ಹಾಡಿ ಕೊಂಡಾಡುತ್ತಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಸಭೆಗೂ ಪವನ್‌ಗೆ ಆಹ್ವಾನ ಸಿಕ್ಕಿತ್ತು. ಇನ್ನು ಪವರ್ ಸ್ಟಾರ್ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ.

10 ವರ್ಷಗಳ ಹಿಂದೆ ಪವನ್ ಕಲ್ಯಾಣ್ ಜನಸೇನಾ ಪಕ್ಷ ಕಟ್ಟಿದ್ದರು. ಆದರೆ 2015ರ ಚುನಾವಣೆಗೆ ಸ್ಪರ್ಧಿಸಲಿಲ್ಲ. 2019ರ ಚುನಾವಣೆಯಲ್ಲಿ ಪಕ್ಷಕ ಹೀನಾಯವಾಗಿ ಸೋತಿತ್ತು. ಆದರೆ ಛಲ ಬಿಡದೇ ಪವನ್ ಪಕ್ಷ ಸಂಘಟನೆ ಮಾಡಿದರು. ವೈಎಸ್‌ಆರ್‌ ಕಾಂಗ್ರೆಸ್ ಸರ್ಕಾರದ ಬಗ್ಗೆ ಟೀಕಿಸುತ್ತಲೇ ಬಂದರು. ವೇದಿಕೆಗಳಲ್ಲಿ ಥೇಟ್ ಸಿನಿಮಾ ಶೈಲಿಯಲ್ಲೇ ಅಬ್ಬರದ ಭಾಷಣ ಮಾಡಿ ಗಮನ ಸೆಳೆದರು. ಅಂತೂ ಇಂತೂ ಬಾರಿ ಪಕ್ಷ ಗೆದ್ದಿದೆ.

Will Pawan kalyan introduces his son to tollywood before he s saying good bye to silver screen

ಪವನ್ ಕಲ್ಯಾಣ್ ಸೇರಿದಂತೆ ಜನಸೇನಾ ಪಕ್ಷದಿಂದ 21 ಜನ ಶಾಸಕರು ಹಾಗೂ ಇಬ್ಬರು ಸಂಸದರು ಆಯ್ಕೆ ಆಗಿದ್ದಾರೆ. 100% ಸಕ್ಸಸ್ ರೇಟ್‌ನೊಂದಿಗೆ ಪಕ್ಷ ದಾಖಲೆ ಬರೆದಿದೆ. ಇನ್ನು ಆಂಧ್ರದಲ್ಲಿ ಟಿಡಿಪಿ ಹಾಗೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಪವನ್ ಚುನಾವಣೆ ಎದುರಿಸಿದ್ದರು. ತಮ್ಮ ಮತಗಳು ಹೆಚ್ಚು ಇರುವ ಕಡೆಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಅವರು ಲೆಕ್ಕಾಚಾರ ಸರಿಯಾಗಿದ್ದು ಎಲ್ಲರೂ ಗೆದ್ದು ಬೀಗಿದ್ದಾರೆ.

ಪವನ್ ಕಲ್ಯಾಣ್ ರಾಜಕೀಯರಂಗದಲ್ಲಿ ಗೆದ್ದಿದ್ದಾರೆ ಸರಿ. ಮುಂದೆ ಅವರು ಸಿನಿಮಾ ಜರ್ನಿ ಹೇಗೆ? ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಸಾಮಾನ್ಯವಾಗಿ ರಾಜಕೀಯರಂಗಕ್ಕೆ ಬಂದವರು ಸಿನಿಮಾಗಳಲ್ಲಿ ನಟಿಸೋದು ಕಮ್ಮಿ. ಅದರಲ್ಲೂ ಒಂದು ಪಕ್ಷದ ಅಧ್ಯಕ್ಷರು ಆಗಿರುವ ಪವನ್ ಕಲ್ಯಾಣ್ ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಟಿಸುತ್ತಾರಾ? ಎನ್ನುವ ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ. ಇನ್ನು ಪವನ್ ನಟಿಸುತ್ತಿರುವ 3 ಸಿನಿಮಾಗಳು ಬಿಡುಗಡೆ ಆಗಬೇಕಿದೆ.

ಸುಜಿತ್ ನಿರ್ದೇಶನದ 'OG', ಹರೀಶ್ ಶಂಕರ್ ಸಾರಥ್ಯದ 'ಉಸ್ತಾದ್ ಭಗತ್ ಸಿಂಗ್' ಜೊತೆಗೆ ಐತಿಹಾಸಿಕ ಕಥಾಹಂದರ 'ಹರಿಹರ ವೀರಮಲ್ಲು' ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. 3 ಚಿತ್ರಗಳು ಬಹಳ ನಿರೀಕ್ಷೆ ಹುಟ್ಟಾಕ್ಕಿವೆ. ಆದರೆ ಪವನ್ ಶಾಸಕರಾಗಿ ಗೆದ್ದು ಮುಂದೆ ಆಂಧ್ರ ಸರ್ಕಾರದಲ್ಲಿ ಸಚಿವರು ಆಗಿ ಸೇವೆ ಸಲ್ಲಿಸಲಿದ್ದಾರೆ. ಹಾಗಿರುವಾಗ ಈ ಸಿನಿಮಾಗಳ ಕಥೆಯೇನು? ಎನ್ನುವ ಗೊಂದಲ ಶುರುವಾಗಿದೆ.

ತೆಲುಗಿನ ಬಹುಬೇಡಿಕೆಯ ನಟ ಪವನ್ ಕಲ್ಯಾಣ್. ಅಣ್ಣ ಚಿರಂಜೀವಿ ಹಾದಿಯಲ್ಲೇ ಬಣ್ಣದಲೋಕಕ್ಕೆ ಬಂದ ಪವನ್ ತಮ್ಮದೇ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಚಿತ್ರವೊಂದಕ್ಕೆ 20 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ. ಅದನ್ನೆಲ್ಲಾ ಬಿಟ್ಟು ಈಗ ಜನಸೇವೆ ಮಾಡುವುದಾಗಿ ರಾಜಕೀಯರಂಗ ಪ್ರವೇಶಿಸಿದ್ದಾರೆ. ಪವನ್ ಗೆಲುವು ಅಭಿಮಾನಿಗಳಿಗೆ ಸಂತಸ ತಂದಿದ್ದರೂ ಮುಂದೆ ಸಿನಿಮಾಗಳಲ್ಲಿ ನಟಿಸಲ್ವಾ? ಎನ್ನುವ ಬೇಸರವೂ ಕಾಡುತ್ತಿದೆ.

Will Pawan kalyan introduces his son to tollywood before he s saying good bye to silver screen

ಈಗಾಗಲೇ ಮೆಗಾ ಫ್ಯಾಮಿಲಿಯಿಂದ ಹಲವರು ಹೀರೊಗಳಾಗಿ ಬಂದಿದ್ದಾರೆ. ಇದೀಗ ಪವನ್ ಕಲ್ಯಾಣ್ ಪುತ್ರ ಅಕಿರಾ ನಂದನ್ ಕೂಡ ಬಣ್ಣದಲೋಕಕ್ಕೆ ಬರ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಕಳೆದೆರಡು ದಿನಗಳಿಂದ ಅಕಿರಾ ನಂದನ್ ಹೆಸರು ಭಾರೀ ಸದ್ದು ಮಾಡ್ತಿದೆ. ಪವನ್ ಎರಡನೇ ಪತ್ನಿ ರೇಣು ದೇಸಾಯಿ ಆರೈಕೆಯಲ್ಲಿ ಬೆಳೆದ ಅಕಿರಾ ಇದೀಗ ತಂದೆ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾನೆ. ಇತ್ತೀಚೆಗೆ ತಂದೆ ಜೊತೆ ಹೋಗಿ ಪ್ರಧಾನಿ ಮೋದಿ ಭೇಟಿ ಮಾಡಿ ಬಂದಿದ್ದಾರೆ.

ಅಕಿರಾ ನಂದನ್ ಸಿನಿಎಂಟ್ರಿಗೆ ವೇದಿಕೆ ಸಿದ್ಧವಾಗ್ತಿದೆ ಎನ್ನುವ ಚರ್ಚೆ ನಡೀತಿದೆ. ಅಭಿಮಾನಿಗಳು ಕೂಡ ಪವನ್ ಕಲ್ಯಾಣ್‌ ಮಗ ಚಿತ್ರರಂಗಕ್ಕೆ ಬರೋದು ಯಾವಾಗ ಎಂದು ಕೇಳುತ್ತಿದ್ದಾರೆ. ಪವನ್ ಪಾಲಿಟಿಕ್ಸ್ ಕಡೆ ಮುಖ ಮಾಡಿರುವುದರಿಂದ ಚಿತ್ರರಂಗಕ್ಕೆ ತಮ್ಮ ವಾರಸ್ದಾರನನ್ನು ಪರಿಚಯಿಸುತ್ತಾರೆ ಎನ್ನಲಾಗ್ತಿದೆ. ಈಗಾಗಲೇ ದೊಡ್ಡ ನಿರ್ಮಾಣ ಸಂಸ್ಥೆಯೊಂದು ಅದಕ್ಕಾಗಿ ಪ್ರಯತ್ನ ನಡೆಸುತ್ತಿದೆ. ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ ಸಿದ್ದವಾಗ್ತಿದೆ ಎನ್ನಲಾಗ್ತಿದೆ. ಅಕಿರಾ ಸಿನಿ ಆರಂಗೇಟ್ರಂ ಬಗ್ಗೆ ತಾಯಿ ರೇಣು ದೇಸಾಯಿ ಪ್ರತಿಕ್ರಿಯಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಭಿಮಾನಿಯೊಬ್ಬರು ಅಕಿರಾ ಚಿತ್ರರಂಗಕ್ಕೆ ಬರೋದು ಯಾವಾಗ ಎಂದು ಕೇಳಿದ ಪ್ರಶ್ನೆಗೆ ರಿಪ್ಲೇ ಮಾಡಿದ್ದಾರೆ. "ಅಕಿರಾ ಹುಟ್ಟಿದ ಕ್ಷಣದಿಂದ ನಾನು ಅವನ ಮೊದಲ ಅಭಿಮಾನಿ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ. ಆತ ಶೀಘ್ರದಲ್ಲೇ ನಟನೆಯನ್ನು ಪ್ರಾರಂಭಿಸುತ್ತಾನೆ ಎಂದು ನಾನು ಆಶಿಸುತ್ತಿದ್ದೇನೆ. ಆದರೆ ನಾನು ಅವನ ನಿರ್ಧಾರ ಮತ್ತು ಭಾವನೆಗಳನ್ನು ಗೌರವಿಸಬೇಕು. ಆದ್ದರಿಂದ ಅವನ ಚಿತ್ರರಂಗದ ಎಂಟ್ರಿ ಬಗ್ಗೆ ಪದೇ ಪದೆ ನನ್ನನ್ನು ಕೇಳಬೇಡಿ" ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಅಕಿರಾ ನಂದನ್ 6 ಅಡಿ 4 ಇಂಚು ಎತ್ತರ ಇದ್ದಾನೆ. ಪ್ರಧಾನಿ ಮೋದಿ ಭೇಟಿಯ ಫೋಟೊಗಳು ಸಖತ್ ವೈರಲ್ ಆಗಿ ಉತ್ತರ ಭಾರತದವರು ಯಾರಪ್ಪಾ ಈತ, ಇಷ್ಟು ಎತ್ತರ ಇದ್ದಾನೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಅಕಿರಾ ನಂದನ್‌ಗೆ ಎಡಿಟಿಂಗ್ ಸ್ಕಿಲ್ಸ್ ಚೆನ್ನಾಗಿದೆ ಎಂದು ಇತ್ತೀಚೆಗೆ ರೇಣು ಹೇಳಿದ್ದರು. ತಂದೆ ಪೊಲಿಟಿಕಲ್ ಸಕ್ಸಸ್ ಬೆನ್ನಲ್ಲೇ ಅವರಿಗೆ ಅಕಿರಾ ಎಡಿಟ್ ಮಾಡಿದ್ದ ಸ್ಪೆಷಲ್ ವಿಡಿಯೋವನ್ನು ಹಂಚಿಕೊಂಡಿದ್ದರು. ಅದು ಸಖತ್ ವೈರಲ್ ಆಗಿತ್ತು. ಇದನ್ನು ನೋಡಿ ಅಕಿರಾಗೆ ನಟನೆಗಿಂತ ತಂತ್ರಜ್ಞನಾಗಿ ಚಿತ್ರರಂಗಕ್ಕೆ ಬರುವ ಉದ್ದೇಶ ಇದ್ದಂತಿದೆ ಎಂದು ಕೆಲವರು ಹೇಳುತ್ತಿದ್ದಾರೆ.

More from Filmibeat

English summary
Is Pawan kalyan planning retirement after Victory In Andhra Assembly Polls
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X