ನಾಗ ಚೈತನ್ಯ ಚಿತ್ರಕ್ಕೆ ರಶ್ಮಿಕಾ ಬದಲು ಪೂಜಾ ಹೆಗ್ಡೆ ನಾಯಕಿ.?
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಗೀತ ಗೋವಿಂದಂ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಪರಶುರಾಮ್ ಇದೀಗ ನಾಗ ಚೈತನ್ಯಗಾಗಿ ಒಂದು ಚಿತ್ರ ರೆಡಿ ಮಾಡುತ್ತಿದ್ದಾರೆ. ಆ ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣಗೆ ನಿರ್ದೇಶಕ ಪರಶುರಾಮ್ ಆಫರ್ ನೀಡಿದ್ದರು.
ಆದ್ರೀಗ, ಟಾಲಿವುಡ್ ನಿಂದ ಹೊರಬಿದ್ದಿರುವ ಸುದ್ದಿಯ ಪ್ರಕಾರ ನಾಗ ಚೈತನ್ಯ-ಪರಶುರಾಮ್ ಕಾಂಬಿನೇಶನ್ ನಲ್ಲಿ ಮೂಡಿಬರುವ ಚಿತ್ರಕ್ಕೆ ನಾಯಕಿಯಾಗಿ ಪೂಜಾ ಹೆಗ್ಡೆ ರನ್ನ ಕರೆತರಲು ನಿರ್ಮಾಪಕರು ಮನಸ್ಸು ಮಾಡಿದ್ದಾರಂತೆ.
ಈಗಾಗಲೇ 'ಒಕ ಲೈಲಾ ಕೋಸಂ' ಚಿತ್ರದಲ್ಲಿ ನಾಗ ಚೈತನ್ಯ ಮತ್ತು ಪೂಜಾ ಹೆಗ್ಡೆ ಒಟ್ಟಿಗೆ ಅಭಿನಯಿಸಿದ್ದರು. ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಅಷ್ಟೇನು ಕಮಾಲ್ ಮಾಡಲಿಲ್ಲ. ಆದರೂ ಇದೇ ಜೋಡಿಯನ್ನ ಮತ್ತೆ ತೆರೆ ಮೇಲೆ ಒಂದಾಗಿಸಲು ನಿರ್ಮಾಪಕರು ಪ್ರಯತ್ನ ಪಡುತ್ತಿದ್ದಾರಂತೆ.

ಅತ್ತ, ರಶ್ಮಿಕಾ ಮಂದಣ್ಣ ಕೂಡ ನಾಗ ಚೈತನ್ಯ ಜೊತೆಗೆ ನಟಿಸಲು ಹಿಂದು ಮುಂದು ನೋಡುತ್ತಿದ್ದಾರಂತೆ. ಪ್ರಿನ್ಸ್ ಮಹೇಶ್ ಬಾಬು, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಂತಹ ಎ-ಲಿಸ್ಟ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡುತ್ತಿರುವ ರಶ್ಮಿಕಾ, ನಾಗ ಚೈತನ್ಯ ರಂತಹ ಬಿ-ಲಿಸ್ಟ್ ನಟರ ಜೊತೆಗೆ ಅಭಿನಯಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಗುಲ್ಲೆದ್ದಿದೆ.
ಹೀಗಾಗಿ, ರಶ್ಮಿಕಾ ಮಂದಣ್ಣ ಬಿಟ್ಟು ಸದ್ಯ ಟಾಲಿವುಡ್ ನಲ್ಲಿ ಬಹು ಬೇಡಿಕೆ ಕಂಡುಕೊಂಡಿರುವ ಪೂಜಾ ಹೆಗ್ಡೆಗೆ ಬುಲಾವ್ ನೀಡಿದ್ದಾರೆ ನಾಗ ಚೈತನ್ಯ-ಪರಶುರಾಮ್ ಕಾಂಬಿನೇಶನ್ ನಲ್ಲಿ ಮೂಡಿಬರಲಿರುವ ಇನ್ನೂ ಹೆಸರಿಡದ ಚಿತ್ರದ ನಿರ್ಮಾಪಕರು.
ಹಾಗಾದ್ರೆ, ನಾಗ ಚೈತನ್ಯ ಜೊತೆಗೆ ನಟಿಸಲು ಪೂಜಾ ಹೆಗ್ಡೆ ಮತ್ತೆ ಒಪ್ಪಿಕೊಳ್ತಾರಾ.? ಕಾದು ನೋಡಬೇಕು.


Click it and Unblock the Notifications











