ರಿಷಬ್ ಶೆಟ್ಟಿ 'ಜೈ ಹನುಮಾನ್' ಸಿನಿಮಾ ಅಖಾಡಕ್ಕೆ ಆರಡಿ ಖಡಕ್ ನಟನ ಎಂಟ್ರಿ

'ಕಾಂತಾರ- 1' ಬಳಿಕ 'ಜೈ ಹನುಮಾನ್' ಚಿತ್ರದಲ್ಲಿ ನಟಿಸೋಕೆ ರಿಷಬ್ ಶೆಟ್ಟಿ ಸಜ್ಜಾಗುತ್ತಿದ್ದಾರೆ. ಇದೇ ಭಾನುವಾರ(ಫೆಬ್ರವರಿ 22) ಹಂಪಿಯಲ್ಲಿ ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದ್ದು ಮಾರ್ಚ್‌ನಲ್ಲೇ ಚಿತ್ರೀಕರಣ ಪ್ರಾರಂಭಿಸಲು ಸಿದ್ಧತೆ ನಡೆದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಆಗಲಿದೆ.

2 ವರ್ಷಗಳ ಹಿಂದೆ 'ಹನುಮಾನ್' ಚಿತ್ರ ಕಟ್ಟಿಕೊಟ್ಟಿದ್ದ ಪ್ರಶಾಂತ್ ವರ್ಮಾ ಇದೀಗ ಸೀಕ್ವೆಲ್ ಸಿನಿಮಾ ಮಾಡ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡ್ತಿದೆ. 'ಜೈ ಹನುಮಾನ್' ಸಿನಿಮಾ ಸೆಟ್ಟೇರುವ ಮುನ್ನ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆ ದಟ್ಟವಾಗಿದೆ.

Will Rana Daggubati Team Up with Rishab Shetty for Jai Hanuman

ತೇಜಾ ಸಜ್ಜಾ ನಟಿಸಿದ್ದ 'ಹನುಮಾನ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆಗಿತ್ತು. ಕಡಿಮೆ ಬಜೆಟ್‌ನಲ್ಲಿ ಆ ವಿಷ್ಯುವಲ್ ಕ್ವಾಲಿಟಿ ನೋಡಿದವರು ದಂಗಾಗಿದ್ದರು. ಅದೇ ಕಾರಣಕ್ಕೆ ಪ್ರಶಾಂತ್ ವರ್ಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಇನ್ನು ರಿಷಬ್ ಹಾಗೂ ಪ್ರಶಾಂತ್ ಕಾಂಬೋ ಮ್ಯಾಜಿಕ್ ಮಾಡಲು ಸುಳಿವು ಸಿಕ್ತಿದೆ. ಜನವರಿಯಲ್ಲೇ ಸಿನಿಮಾ ಆರಂಭ ಆಗುತ್ತದೆ ಎನ್ನಲಾಗಿತ್ತು. ಕಾರಣಾಂತರಗಳಿಂದ ಕೊಂಚ ತಡವಾಗಿ ಸಿನಿಮಾ ಶುರುವಾಗ್ತಿದೆ.

ತ್ರೇತಾಯುಗದ ಹನುಮಂತನನನ್ನು ಕಲಿಯುಗಕ್ಕೆ ಕರೆಸಿ ಕಾಲ್ಪನಿಕ ಕಥೆಯನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ನಡೀತಿದೆ. ಸದ್ಯ ಚಿತ್ರತಂಡಕ್ಕೆ ರಾಣಾ ದಗ್ಗುಬಾಟಿ ಕೂಡ ಸೇರಿಕೊಂಡಿದ್ದಾರೆ ಎನ್ನುವ ಚರ್ಚೆ ನಡೀತಿದೆ. 'ಜೈ ಹನುಮಾನ್' ಚಿತ್ರದ ಪ್ರಮುಖ ಪಾತ್ರದಲ್ಲಿ ರಾಣಾ ನಟಿಸುತ್ತಿದ್ದು ಈಗಾಗಲೇ ಲುಕ್ ಟೆಸ್ಟ್ ಕೂಡ ಮಾಡಿ ಮುಗಿಸಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

Will Rana Daggubati Team Up with Rishab Shetty for Jai Hanuman

ಹಲವು ವಿಭಿನ್ನ ಗೆಟಪ್‌ಗಳಿರೋ ಪಾತ್ರದಲ್ಲಿ ರಾಣಾ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಲುಕ್‌ ಟೆಸ್ಟ್ ಮಾಡಿ ಪ್ರಶಾಂತ್ ವರ್ಮಾ ಕೂಡ ಥ್ರಿಲ್ಲಾಗಿದ್ದಾರೆ. ರಿಷಬ್ - ರಾಣಾ ಕಾಂಬೋ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡುತ್ತದೆ ಎನ್ನುವ ಚರ್ಚೆ ನಡೀತಿದೆ. ಇತ್ತೀಚಿನ ವರ್ಷಗಳಲ್ಲಿ ರಾಣಾಗೆ ದೊಡ್ಡ ಬ್ರೇಕ್ ಸಿಕ್ಕಿಲ್ಲ. ನಟಿಸುವ ಸಿನಿಮಾಗಳು ಅಷ್ಟಾಗಿ ಕೈಹಿಡಿಯುತ್ತಿಲ್ಲ. 'ಜೈ ಹನುಮಾನ್' ಚಿತ್ರದಲ್ಲಿ ಯಾವ ಪಾತ್ರ ಮಾಡ್ತಿದ್ದಾರೆ ಎನ್ನುವ ಕುತೂಹಲ ಮೂಡಿದೆ.

'ಕಾಂತಾರ- 1' ಚಿತ್ರಕ್ಕಾಗಿ ರಿಷಬ್ ಶೆಟ್ಟಿ 3 ವರ್ಷ ಕುಂದಾಪುರದಲ್ಲಿ ಬೀಡುಬಿಟ್ಟಿದ್ದರು. ಹೊರ ಪ್ರಪಂಚದ ಸಂಪರ್ಕ ಇಲ್ಲದೇ ಸಿನಿಮಾ ಧ್ಯಾನ ಮಾಡಿದ್ದರು. ಅದೇ ಸಮಯದಲ್ಲಿ ಪ್ರಶಾಂತ್ ವರ್ಮಾ ಅಲ್ಲಿಗೆ ತೆರಳಿ 'ಜೈ ಹನುಮಾನ್' ಕಥೆ ಹೇಳಿ ಒಪ್ಪಿಸಿದ್ದರು. 'ಕಾಂತಾರ- 1' ಸಿನಿಮಾ ಚಿತ್ರೀಕರಣದ ನಡುವೆ ಪ್ರೈ ವಿಡಿಯೋಗಾಗಿ ರಾಣಾ ಜೊತೆ ರಿಷಬ್ ಸಂದರ್ಶನದಲ್ಲಿ ಭಾಗಿ ಆಗಿದ್ದರು. ನೇಹಾ ಶೆಟ್ಟಿ ಕೂಡ ಈ ಸಂದರ್ಶನದಲ್ಲಿ ಜೊತೆಯಾಗಿದ್ದರು.

'ದಿ ರಾಣಾ ದಗ್ಗುಬಾಟಿ ಶೋ' ಕಾರ್ಯಕ್ರಮಕ್ಕಾಗಿ ತಮ್ಮ ಹುಟ್ಟೂರಿನಲ್ಲಿ ರಾಣಾ ಜೊತೆ ರಿಷಬ್ ಸುತ್ತಾಡಿದ್ದರು. ಅಷ್ಟರಲ್ಲಾಗಲೇ 'ಜೈ ಹನುಮಾನ್' ಚಿತ್ರದಲ್ಲಿ ರಾಣಾ ಕೂಡ ನಟಿಸುವ ಬಗ್ಗೆ ಚರ್ಚೆ ನಡೆದಿತ್ತಾ ಎನ್ನುವುದು ಗೊತ್ತಿಲ್ಲ. ಹಂಪಿಯ ಅಂಜನಾದ್ರಿ ಬೆಟ್ಟದಲ್ಲಿ ಚಿತ್ರದ ಮುಹೂರ್ತ ನಡೆಯಬಹುದು ಎಂದು ಹೇಳಲಾಗ್ತಿದೆ. ಚಿತ್ರರಂಗದ ಹಲವು ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿ ಆಗುವ ನಿರೀಕ್ಷೆಯಿದೆ.

'ಕಾಂತಾರ- 1' ಸಕ್ಸಸ್ ಬಳಿಕ ರಿಷಬ್ ಶೆಟ್ಟಿ 4 ತಿಂಗಳ ಕಾಲ ವಿಶ್ರಾಂತಿ ಪಡೆದಿದ್ದಾರೆ. ಇನ್ನು 'ಜೈ ಹನುಮಾನ್' ಚಿತ್ರದಲ್ಲಿ ಹನುಮಂತನಾಗಿ ಡಿವೈನ್ ಸ್ಟಾರ್ ನಟಿಸುತ್ತಿರುವುದು ವಿಶೇಷ. ಅವರ ಲುಕ್ ಹೇಗಿರುತ್ತದೆ ಎಂದು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಫೆಬ್ರವರಿ 22ರಂದು ಸಿನಿಮಾ ಬಗ್ಗೆ ಮತ್ತುಷ್ಟು ಮಾಹಿತಿ ಸಿಗಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X