ಮುಂದಿನ ವರ್ಷ ಮದ್ವೆಯಾಗ್ತಾರಾ ರಶ್ಮಿಕಾ ಮಂದಣ್ಣ ? ಸಂಖ್ಯಾಶಾಸ್ತ್ರ ಏನೇಳುತ್ತೆ..?
ಹೆಚ್ಚೇನಲ್ಲ.. 08 ವರ್ಷದ ಹಿಂದೆ ಅವಕಾಶಕ್ಕೆ ಕಂಡ ಕಂಡಲೆಲ್ಲ ಆಡಿಷನ್ ಕೊಡುತ್ತಿದ್ದ ರಶ್ಮಿಕಾ ಮಂದಣ್ಣ ಆ ನಂತರ ಹೇಗೆಲ್ಲ ಬೆಳೆದರು ಎನ್ನುವುದನ್ನು ಒಮ್ಮೆ ತಿರುಗಿ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತೆ. ಕಿರಿಕ್ ಪಾರ್ಟಿ ಎಂಬ ಒಂದೇ ಒಂದು ಚಿತ್ರದ ಅತ್ಯದ್ಭುತವಾದ ಗೆಲುವು ರಶ್ಮಿಕಾ ಮಂದಣ್ಣ ಅವರನ್ನು ಎಲ್ಲಿಂದ ಎಲ್ಲಿಗೋ ಕರೆದೊಯ್ದು ನಿಲ್ಲಿಸಿತು. ಆ ನಂತರ ರಶ್ಮಿಕಾ ನಂಬಿದವರನ್ನು ಒದ್ದು ನಡೆದಿದ್ದು ಅವಕಾಶವನ್ನು ನೀಡಿದ್ದ ಕನ್ನಡ ಚಿತ್ರರಂಗವನ್ನೇ ಕಡೆಗಣಿಸಿದ್ದೆಲ್ಲವೂ ಕಣ್ಮುಂದೆಯೇ ಇದೆ.
ಇಂಥಾ ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 02 ಚಿತ್ರದ ಗುಂಗಿನಲ್ಲಿದ್ದಾರೆ. ಕೇವಲ ಟಾಲಿವುಡ್ ಮಾತ್ರ ಅಲ್ಲ ಬಾಲಿವುಡ್‌ನಲ್ಲಿ ಕೂಡ ಬಿಡಾರ ಹೂಡಿದ್ದಾರೆ. ಇನ್ನೂ .. ರಶ್ಮಿಕಾ ಮಂದಣ್ಣ ಕೇವಲ ಚಿತ್ರಗಳಿಂದ ಮಾತ್ರ ಸದ್ದು ಮಾಡಲ್ಲ. ಆಗಾಗ ಇವರ ವ್ಯೆಯಕ್ತಿಕ ಬದುಕು ಕೂಡ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತೆ. ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಮದುವೆಯಾಗುವುದು ನಿಜವಂತೆ ಎನ್ನುವ ಮಾತು ಕೂಡ ಕೇಳಿ ಬರುತ್ತೆ. ಇದಕ್ಕೆ ಪೂರಕವಾಗಿ ಇಬ್ಬರು ಆಗಾಗ ನೀನೆಲ್ಲೋ ನಾನಲ್ಲೇ ಈ ಜೀವ ನಿನ್ನಲ್ಲೆ ಎಂಬ ಹಾಡನ್ನು ಗುನುಗುತ್ತಾ ಓಡಾಡುತ್ತಾರೆ. ಜೊತೆ ಜೊತೆಯಲ್ಲಿ ದೀಪಾವಳಿ ಹಬ್ಬವನ್ನು ಕೂಡ ಆಚರಿಸುತ್ತಾರೆ.

ಹೀಗಿರುವಾಗ ರಶ್ಮಿಕಾ ಮಂದಣ್ಣ ಅವರ ಮದುವೆಯ ಕುರಿತು ಸಂಖ್ಯಾಶಾಸ್ತ್ರಜ್ಞೆ ಮೀತಾ ಮಾತನಾಡಿದ್ದಾರೆ. ಹೌದು, ನ್ಯೂಸ್ ಫಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಮದುವೆಯಾಗುತ್ತಾ ಎನ್ನುವ ವಿಚಾರದ ಕುರಿತು ಮಾತನಾಡಿರುವ ಮೀತಾ ಅವರ ಜನುಮದಿನದ ನಂಬರ್ ಆರು ನಮ್ಮ ಸಂಖ್ಯಾಶಾಸ್ತ್ರದ ಪ್ರಕಾರ ಈ ವರ್ಷ ಆರನೇ ನಂಬರ್ ಚೆನ್ನಾಗಿಲ್ಲ. ಆರನೇ ತಾರೀಖು ಆರನೇ ತಿಂಗಳು ಅಷ್ಟೊಂದು ಅದೃಷ್ಟವನ್ನು ತಂದು ಕೊಟ್ಟಿಲ್ಲ. ಆದರೆ ಬರುವ ವರ್ಷ ಆರನೇ ತಾರೀಖು ತುಂಬಾ ಚೆನ್ನಾಗಿದೆ. ಹಿಂದೆ ಅವರು ಇಲ್ಲಿಂದ ತಮ್ಮ ವೃತ್ತಿಯನ್ನು ಶುರು ಮಾಡಿ, ಇಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಆ ನಂತರ ಮುರಿದುಕೊಂಡು ಅಲ್ಲಿ ಹೋದವರು. ಅವರ ವ್ಯೆಯಕ್ತಿಕ ಬದುಕಿನ ಬಗ್ಗೆ ನಕಾರಾತ್ಮಕವಾದ ಮಾತುಗಳನ್ನಾಡಲು ನನಗೆ ಇಷ್ಟ ಇಲ್ಲ. ಗೊತ್ತಿಲ್ಲ ಮುಂದಿನ ವರ್ಷ ಇಬ್ಬರ ಮದುವೆ ಆಗಬಹುದು ಎಂದು ಹೇಳಿದ್ದಾರೆ.
ಇನ್ನುಳಿದಂತೆ ಪುಷ್ಪ 2 ಚಿತ್ರದ ಪ್ರಚಾರದ ಸಮಯದಲ್ಲಿ ಆಂಧ್ರದಲ್ಲಿ ತೆಲುಗು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಿದ ರಶ್ಮಿಕಾ ಮಂದಣ್ಣ ಅವರನ್ನು ಕಂಡು ಅನೇಕರು ಹೌಹಾರಿದ್ದಾರೆ. ರಶ್ಮಿಕಾ ಮಂದಣ್ಣ ತೆಲುಗು ಭಾಷೆಯನ್ನು ಇಷ್ಟು ಚೆನ್ನಾಗಿ ಕಲಿಯಲು ವಿಜಯ್ ದೇವರಕೊಂಡ ಅವರೇ ಕಾರಣವೆನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮಾತನಾಡುವ ಶೈಲಿಯನ್ನು ಕೂಡ ಹೋಲಿಕೆ ಮಾಡುತ್ತಿದ್ದಾರೆ.
ಅಂದ್ಹಾಗೇ ಕಳೆದ ಕೆಲ ದಿನಗಳ ಹಿಂದೆಯಷ್ಟೇ ವಿಜಯ್ ದೇವರಕೊಂಡ ನಾನು ಸಿಂಗಲ್ ಅಲ್ಲ ಎಂದು ಹೇಳಿದ್ದರು. ನನಗೆ ಈಗ 35 ವರ್ಷ, ನಾನು ಇನ್ನೂ ಒಬ್ಬಂಟಿಯಾಗಿದ್ದೇನೆ ಎಂದು ನಿಮಗೆ ಅನ್ಸುತ್ತಾ ಎಂದು ಸಂದರ್ಶನದಲ್ಲಿ ಪ್ರಶ್ನೆ ಕೇಳಿದ್ದ ವಿಜಯ್ ದೇವರಕೊಂಡ ನಾನು ಒಬ್ಬರನ್ನೂ ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದರು. ಪ್ರೀತಿಸುವುದು ಹೇಗೆ ಎನ್ನುವುದು ನನಗೆ ಗೊತ್ತು ಎಂದಿದ್ದರು.
ಸದ್ಯ ರಶ್ಮಿಕಾ ಮಂದಣ್ಣ ಪುಷ್ಪ 2 ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯಿಂದ ಪುಳಕಿತರಾಗಿದ್ಧಾರೆ. ನಿಜಾ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಎಲ್ಲೆಡೆ ವ್ಯಕ್ತವಾಗುತ್ತಿದೆ. ಆದರೂ ಕೂಡ ಇಂತಹದ್ದೊಂದು ದೊಡ್ಡ ಚಿತ್ರದ ಭಾಗವಾದ ಖುಷಿ ರಶ್ಮಿಕಾ ಮಂದಣ್ಣ ಅವರಿಗಂತೂ ಇದ್ದೇ ಇದೆ.


Click it and Unblock the Notifications











