For Quick Alerts
  ALLOW NOTIFICATIONS  
  For Daily Alerts

  TRPಯಲ್ಲಿ ಮಹೇಶ್ ಬಾಬು 'ಸರಿಲೇರು ನೀಕೆವ್ವರು' ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡುತ್ತಾ ಯಶ್ 'ಕೆಜಿಎಫ್-1'?

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-1 ರಿಲೀಸ್ ಆಗಿ ಎರಡು ವರ್ಷ ಆಗುತ್ತಿದೆ. ದೇಶ ವಿದೇಶದಲ್ಲಿ ಸದ್ದು ಮಾಡಿದ ಕೆಜಿಎಫ್ ಇತ್ತೀಚಿಗೆ ತೆಲುಗು ಟಿವಿಯಲ್ಲಿ ಪ್ರಸಾರವಾಗಿದೆ. ರಿಲೀಸ್ ಆಗಿ ವರ್ಷದ ಮೇಲಾದರೂ ಸಿನಿಮಾದ ಕ್ರೇಜ್ ಇನ್ನೂ ಕಮ್ಮಿ ಆಗಿಲ್ಲ. ಟಿವಿಯಲ್ಲಿ ಪ್ರಸಾರವಾದ ಕೆಜಿಎಫ್-1ಅನ್ನು ತೆಲುಗು ಚಿತ್ರಾಭಿಮಾನಿಗಳು ಮುಗಿಬಿದ್ದು ನೋಡಿದ್ದಾರೆ.

  ತೆಲುಗು ಟಿವಿ ಲೋಕದಲ್ಲಿ ದಾಖಲೆ ಬರೆದಿದ್ಯಂತೆ KGF | TRP | KGF1 | Filmibeat Kannada

  ಇತ್ತೀಚಿಗೆ ಚಿತ್ರಮಂದಿರಗಳು ಮುಚ್ಚಿರುವುದರಿಂದ ಒಟಿಟಿ ಮತ್ತು ಟಿವಿ ವಾಹಿನಿಗಳು ವೀಕ್ಷಕರಿಗೆ ಹೆಚ್ಚು ಮನರಂಜನೆ ನೀಡುತ್ತಿವೆ. ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಸಿನಿಮಾ ಟಿಆರ್ ಪಿಯಲ್ಲಿ ದಾಖಲೆ ನಿರ್ಮಿಸಿತ್ತು. ಇದೀಗ ಯಶ್ ಕೆಜಿಎಫ್ ಸಿನಿಮಾ ಮಹೇಶ್ ಬಾಬು ಸಿನಿಮಾದ ದಾಖಲೆಯನ್ನು ಬ್ರೇಕ್ ಮಾಡಿದೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಮುಂದೆ ಓದಿ...

  ತೆಲುಗು ಸಿನಿಮಾ ಪ್ರೇಕ್ಷಕರಿಗೆ ಮನವಿ ಮಾಡಿದ ರಾಕಿಂಗ್‌ ಸ್ಟಾರ್ ಯಶ್ತೆಲುಗು ಸಿನಿಮಾ ಪ್ರೇಕ್ಷಕರಿಗೆ ಮನವಿ ಮಾಡಿದ ರಾಕಿಂಗ್‌ ಸ್ಟಾರ್ ಯಶ್

  'ಸರಿಲೇರು ನೀಕೆವ್ವರು' ದಾಖಲೆ ಮುರಿಯುತ್ತಾ KGF-2?

  'ಸರಿಲೇರು ನೀಕೆವ್ವರು' ದಾಖಲೆ ಮುರಿಯುತ್ತಾ KGF-2?

  ಕೆಜಿಎಫ್-1 ತೆಲುಗು ವರ್ಷನ್ ಜುಲೈ 5 ರಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿದೆ. ಸಿನಿಮಾಗೆ ಯಶ್ ಮತ್ತು ಪ್ರಶಾಂತ್ ನೀಲ್ ಇಬ್ಬರು ಪ್ರಚಾರ ಮಾಡಿದ್ದರು. ಟಿವಿಯಲ್ಲಿಯೂ ಕೆಜಿಎಫ್-1 ದಾಖಲೆ ಮಾಡಿದೆ ಎಂದು ಹೇಳಲಾಗುತ್ತಿದೆ. ತೆಲುಗಿನ ಎಲ್ಲಾ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿ ಕೆಜಿಎಫ್ ಮೊದಲ ಸ್ಥಾನದಲ್ಲಿದೆ ಎನ್ನಲಾಗುತ್ತಿದೆ.

  ಟಿ ಆರ್ ಪಿ ಯಲ್ಲಿ ಮಹೇಶ್ ಬಾಬು ನಂ.1

  ಟಿ ಆರ್ ಪಿ ಯಲ್ಲಿ ಮಹೇಶ್ ಬಾಬು ನಂ.1

  ಸದ್ಯ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಸಿನಿಮಾ ಟಿ ಆರ್ ಪಿ ಯಲ್ಲಿ ನಂಬರ್-1 ಸ್ಥಾನದಲ್ಲಿದೆ. 23.4 ಟಿ ಆರ್ ಪಿ ಪಡೆದು ಸರಿಲೇರು ನೀಕೆವ್ವರು ಸಿನಿಮಾ ತೆಲುಗಿನ ಎಲ್ಲಾ ಸಿನಿಮಾಗಳ ದಾಖಲೆ ಮುರಿದು ಹಾಕಿತ್ತು. ಆದರೀಗ ಕೆಜಿಎಫ್ ಮಹೇಶ್ ಬಾಬು ಸಿನಿಮಾವನ್ನು ಹಿಂದಿಕ್ಕಿದೆ ಎನ್ನಲಾಗುತ್ತಿದೆ. ಆದರೆ ಇನ್ನೂ ಟಿ ಆರ್ ಪಿ ಬಿಡುಗಡೆಯಾಗಿಲ್ಲ. ಹಾಗಾಗಿ ಅಭಿಮಾನಿಗಲು ಎರಡು ಸಿನಿಮಾದಲ್ಲಿ ಯಾರು ಹೆಚ್ಚು ಟಿ ಆರ್ ಪಿ ಪಡೆದಿದ್ದಾರೆ ಎಂದು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  ಕೆಜಿಎಫ್ 2 ರವೀನಾ ಟಂಡನ್ ಪಾತ್ರವೇನು? ಅವರೇ ಹೇಳಿದ್ದಾರೆ ನೋಡಿಕೆಜಿಎಫ್ 2 ರವೀನಾ ಟಂಡನ್ ಪಾತ್ರವೇನು? ಅವರೇ ಹೇಳಿದ್ದಾರೆ ನೋಡಿ

  ಬಾಹುಬಲಿ ದಾಖಲೆ ಮುರಿದ ಸರಿಲೇರು ನೀಕೆವ್ವರು

  ಬಾಹುಬಲಿ ದಾಖಲೆ ಮುರಿದ ಸರಿಲೇರು ನೀಕೆವ್ವರು

  ಸರಿಲೇರು ನೀಕೆವ್ವರು ಸಿನಿಮಾ ಅತಿ ಹೆಚ್ಚು ಟಿ ಆರ್ ಪಿ ಪಡೆಯುವ ಜೊತೆಗೆ ಬಾಹುಬಲಿ ಸಿನಿಮಾದ ದಾಖಲೆಯನ್ನು ಪುಡಿ ಪುಡಿ ಮಾಡಿತ್ತು. ಬಾಹುಬಲಿ-2 ಸಿನಿಮಾ ರಿಲೀಸ್ ಆಗಿ ಮೂರು ವರ್ಷಗಳಾಗಿದ್ದು, ಈ ಮೂರು ವರ್ಷಗಳಲ್ಲಿಯೂ ಬಾಹುಬಲಿ ಟಿ ಆರ್ ಪಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ಸಾಕಷ್ಟು ದಾಖಲೆಗಳನ್ನು ನಿರ್ಮಿಸಿರುವ ಬಾಹುಬಲಿ ಟಿ ಆರ್ ಪಿಯಲ್ಲೂ ಕಿಂಗ್ ಆಗಿತ್ತು. ಆದರೆ ಮಹೇಶ್ ಬಾಬು ಸಿನಿಮಾ ಪ್ರಭಾಸ್ ದಾಖಲೆಯನ್ನು ಮುರಿದು ಹಾಕಿತ್ತು.

  ಕೆಜಿಎಫ್-2 ರಿಲೀಸ್ ಗೆ ತಯಾರಿ

  ಕೆಜಿಎಫ್-2 ರಿಲೀಸ್ ಗೆ ತಯಾರಿ

  ಕೆಜಿಎಫ್-1 ರಿಲೀಸ್ ನಂತರ ಪಾರ್ಟ್-2 ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಕೊನೆಯ 25 ದಿನದ ಚಿತ್ರೀಕರಣ ಬಾಕಿಯುಳಿಸಿಕೊಂಡಿದೆ. ಕೊರೊನಾ ವೈರಸ್ ಹಾವಳಿಯ ಪರಿಣಾಮ ಚಿತ್ರೀಕರಣ ಸ್ಥಗಿತವಾಗಿದೆ. ಸಿನಿಮಾ ಅಕ್ಟೋಬರ್ 23ರಂದು ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದೆ. ಆದರೆ ಅಂದುಕೊಂಡ ದಿನಕ್ಕೆ ರಿಲೀಸ್ ಆಗುತ್ತಾ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.

  English summary
  Will Yash starrer KGF-1 beat Sarileru Neekevvaru's TRP rating record.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X