ನನ್ನ ಹೀಗೆ ಸಾಯಲು ಬಿಡ್ತೀರಾ ? ಸಹಾಯಕ್ಕೆ ತೆಲುಗು ಸ್ಟಾರ್‌ಗಳ ಬಳಿ ಅಂಗಲಾಚಿದ ಹಿರಿಯ ಕಲಾವಿದೆ..!

ಕಾಲು ಸೋತ ಕಲಾವಿದರನ್ನು ಕಸಕ್ಕಿಂತಲೂ ಕಡೆಯಾಗಿ ಕಾಣುವುದು ಬಣ್ಣದ ಲೋಕದ ಹಳೆ ಚಾಳಿ. ಆ ಭಾಷೆ ಈ ಭಾಷೆ ಅಂತಲ್ಲ. ಎಲ್ಲ ಭಾಷೆಯಲ್ಲಿ ಈ ದುರ್ಬುದ್ದಿ ಇದ್ದೇ ಇದೆ.

ಇನ್ನೂ ಕಲಾವಿದರ ನೆರವಿಗೆ ಎಂದು ಸ್ಥಾಪನೆಯಾದ ಕಲಾವಿದರ ಸಂಘಗಳು ಅದೇನು ಕೆಲಸಸ ಮಾಡುತ್ತಿವೆಯೋ ಗೊತ್ತಿಲ್ಲ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಕಲೆಯನ್ನೇ ನೆಚ್ಚಿಕೊಂಡಿದ್ದ ಜೀವವೊಂದು ಪಕ್ಕದ ಹೈದ್ರಾಬಾದ್‌ನಲ್ಲಿ ನರಳುತ್ತಿದೆ. ಒಂದ್ಕಾಲದಲ್ಲಿ ಸಾಕ್ಷಾತ್ತು ಮೆಗಾ ಸ್ಟಾರ್ ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್ ಸಿನಿಮಾಗಳಲ್ಲಿ ಖಾಯಂ ನಟಿಯಾಗಿದ್ದರು, ಜ್ಯೂ.ಎನ್.ಟಿ.ಆರ್, ನಾನಿ, ಗೋಪಿಚಂದ್, ರವಿತೇಜಾ ಅವರ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದರು ಈ ಹಿರಿಯ ಜೀವದ ಕಷ್ಟಕ್ಕೆ ಸ್ಪಂದನೆ ಸಿಗುತ್ತಿಲ್ಲ. ಚಿತ್ರರಂಗದ ನೆರಳು ಕೂಡ ಸುಳಿದಿಲ್ಲ.

Will you make me commit suicide Pavala Shyamala tearfully asks Telugu superstars

ಹೌದು, ಪಾವಲಾ ಶ್ಯಾಮಲಾ.. ಒಂದ್ಕಾಲದಲ್ಲಿ ಬಿಡುವಿರದ ನಟಿ. ಆ ಕಾಲಕ್ಕೆ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರನ್ನ ಮಾಡಿದವರು ಇವರು. ಇಂಥ ಪಾವಲಾ ಶ್ಯಾಮಲಾ ಅವರಿಗೆ ಈಗ 73ರ ಪ್ರಾಯ. ವಿಪರ್ಯಾಸ ಎಂದರೆ ಜೀವನದ ಸಂಧ್ಯಾಕಾಲದಲ್ಲಿ ಇರುವ ಈ ಹಿರಿಯ ನಟಿ ವೃದ್ದಾಶ್ರಮದಲ್ಲಿ ಇದ್ದಾರೆ. ಕಷ್ಟಕರವಾದ ಜೀವನವನ್ನ ನಡೆಸುತ್ತಿದ್ದಾರೆ. ಆರ್ಥಿಕ ಸಮಸ್ಯೆಯ ಜೊತೆ ದೈಹಿಕ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಅನೇಕ ಬಾರಿ ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ. ಆದರೂ ಕೂಡ ಯಾರು ಕ್ಯಾರೇ ಎನ್ನಲಿಲ್ಲ. ಸಹಾಯದ ಹಸ್ತವನ್ನು ಕೂಡ ಚಾಚಲಿಲ್ಲ.

ಹೀಗಾಗಿಯೇ ನೊಂದು-ಬೆಂದು ಈಗ ಕಣ್ಣೀರು ಹಾಕಿರುವ ಪಾವಲಾ ಶ್ಯಾಮಲಾ ಬದುಕುವುದಕ್ಕಿಂತ ಸಾಯುವುದೇ ಉತ್ತಮ ಎಂದು ಬಿಕ್ಕಿದ್ದಾರೆ. ವಿಡಿಯೋ ಮೂಲಕ ತಮ್ಮ ದುಃಖವನ್ನು ಹಂಚಿಕೊಂಡಿರುವ ಪಾವಲಾ ಸರ್, ನಾನು ನಟಿಯಾಗಿ 50 ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ, ಕಷ್ಟ ಪಟ್ಟಿದ್ದೇನೆ ಆದರೆ ಕಳೆದ ಮೂರು ವರ್ಷಗಳಿಂದ ನನ್ನ ಪರಿಸ್ಥಿತಿ ಹೇಗಿದೆ ಎಂದು ನಿಮಗೆಲ್ಲ ಗೊತ್ತೇ ಇದೆ ಎಂದು ಹೇಳಿದ್ದಾರೆ. ನಾನು ಈಗಾಗಲೇ ಹಲವಾರು ಸಂದರ್ಶನಗಳಲ್ಲಿ ನನ್ನ ಕಷ್ಟವನ್ನು ಹೇಳಿಕೊಂಡಿದ್ದೇನೆ ಆದರೂ ಕೂಡ ನನಗೆ ಯಾರು ಸಹಾಯ ಮಾಡಲಿಲ್ಲ, ಕೊನೆ ಪಕ್ಷ ಪ್ರತಿಕ್ರಿಯೆಯನ್ನು ನೀಡಲಿಲ್ಲ ಎಂದಿರುವ ಪಾವಲಾ ಶ್ಯಾಮಲಾ ಆದರೂ ನಾನು ಹೇಗೋ ನನ್ನನ್ನು ನಾನು ಸಂಭಾಳಿಸಿಕೊಂಡು ಇಲ್ಲಿಯವರೆಗೆ ಬಂದೆ. ಆದರೆ ಈಗ ನನಗೆ ಉಸಿರು ಕಟ್ಟುತ್ತಿದೆ ಎಂದು ಹೇಳಿದ್ದಾರೆ.

ಮುಂದುವರೆದು ನಾನು ಸುಮಾರು 300 ಚಿತ್ರಗಳನ್ನು ಮಾಡಿದ್ದೇನೆ, ಚಿರಂಜೀವಿ, ಪ್ರಭಾಸ್, ಎನ್‌.ಟಿ.ಆರ್, ಮಹೇಶ್ ಹೀಗೆ ಎಲ್ಲ ಸ್ಟಾರ್‌ಗಳ ಜೊತೆ ಕೆಲಸ ಮಾಡಿದೀನಿ ಆದರೂ ನನ್ನ ಸ್ಥಿತಿ ಹೀಗಿದೆ ಎಂದಿರುವ ಪಾವಲಾ ಶ್ಯಾಮಲಾ ಚಿಕಿತ್ಸೆಯನ್ನು ಕೂಡ ಪಡೆಯಲು ಸಾಧ್ಯವಾಗದೇ ನಾನು ದಿನನಿತ್ಯ ನರಳುತ್ತಿದ್ದೇನೆ, ನನ್ನನ್ನು ಹೀಗೆ ಬಿಟ್ಟು ನಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತೀರಾ ? ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಕೈಮುಗಿದಿದ್ದಾರೆ. ಕಣ್ಣೀರಿಟ್ಟಿದ್ದಾರೆ. ಪಾವಲಾ ಶ್ಯಾಮಲಾ ಅವರ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತೆಲುಗು ಚಿತ್ರರಂಗದ ಸ್ಟಾರ್‌ಗಳ ವಿರುದ್ಧ ಆಕ್ರೋಶವೂ ವ್ಯಕ್ತವಾಗುತ್ತಿದೆ. ಆರ್‌ ಟಿವಿ ಪಾವಲಾ ಶ್ಯಾಮಲಾ ಅವರ ಈ ವಿಡಿಯೋವನ್ನು ಹಂಚಿಕೊಂಡಿದ್ದು ದಾನ ಮಾಡಲು ಬಯಸುವರಿಗೆ ಮೊಬೈಲ್‌ ನಂಬರ್‌ವೊಂದನ್ನು ಕೂಡ ನಮೂದಿಸಿದೆ.

More from Filmibeat

Read more about: help filmibeat news tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X