'ಸಲಾರ್' ಚಿತ್ರ ನೋಡಲು ಮಕ್ಕಳನ್ನು ಬಿಡದ್ದಕ್ಕೆ ತಾಯಿ ಗಲಾಟೆ: 'A' ಸರ್ಟಿಫಿಕೇಟ್ ಸಿನ್ಮಾ ಅಂದ್ರು ಕೇಳದೇ ಕಿರಿಕ್

ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ವಿಶ್ವದಾದ್ಯಂತ ತೆರಗಪ್ಪಳಿಸಿ ಸದ್ದು ಮಾಡ್ತಿದೆ. ಮೂರು ದಿನಕ್ಕೆ ಬಾಕ್ಸಾಫೀಸ್‌ನಲ್ಲಿ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಮಾಸ್ ಪ್ರೇಕ್ಷಕರಿಗೆ ಸಿನಿಮಾ ಬಹಳ ಇಷ್ಟವಾಗಿದೆ. ಪ್ರಭಾಸ್ ಕಂಬ್ಯಾಕ್ ಆದ್ರು ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಸಲಾರ್' ಚಿತ್ರದಲ್ಲಿ ಪ್ರಭಾಸ್ ಜೊತೆ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ. ನಾಯಕಿಯಾಗಿ ಶ್ರುತಿ ಹಾಸನ್ ಮಿಂಚಿದ್ದು ಘಟಾನುಘಟಿ ಕಲಾವಿದರು ತಾರಾಗಣದಲ್ಲಿದ್ದಾರೆ. ಕನ್ನಡದ 'ಉಗ್ರಂ' ಸಿನಿಮಾ ಕಥೆಯನ್ನೇ ಬಹಳ ದೊಡ್ಡಮಟ್ಟದಲ್ಲಿ ನೀಲ್ ತೆರೆಗೆ ತಂದಿದ್ದಾರೆ. ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದಾರೆ. ಒಟ್ಟಾರೆಯಾಗಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.

Womans Heated Argument With multiplex staff for not let her children to watch salaar

'ಸಲಾರ್' ಚಿತ್ರದಲ್ಲಿ ವೈಲೆನ್ಸ್ ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ಸೆನ್ಸಾರ್ ಮಂಡಳಿ 'A'(ವಯಸ್ಕ ಪ್ರಮಾಣ ಪತ್ರ) ಸರ್ಟಿಫಿಕೇಟ್ ಕೊಟ್ಟಿದೆ. ಅಂದರೆ 18 ವರ್ಷಕ್ಕಿಂತ ಚಿಕ್ಕ ಮಕ್ಕಳು ಸಿನಿಮಾ ನೋಡಲು ಅವಕಾಶವಿಲ್ಲ. ತಮ್ಮ ಕಥೆಗೆ ವೈಲೆನ್ಸ್ ಅವಶ್ಯಕತೆ ಇತ್ತು. ಅದಕ್ಕೆ 'A' ಸರ್ಟಿಫಿಕೇಟ್ ತಗೊಂಡಿದ್ದಾಗಿ ಚಿತ್ರತಂಡ ಕೂಡ ಹೇಳಿದೆ. ಆ ಆದರೂ ಈ ವಿಚಾರದಲ್ಲಿ ನನಗೆ ನಿರಾಸೆಯಾಗಿದೆ ಎಂದು ಪ್ರಶಾಂತ್ ನೀಲ್ ಹೇಳಿದ್ದರು.

ಸಿಂಗಲ್ ಸ್ಕ್ರೀನ್‌ ಥಿಯೇಟರ್‌ಗಳಲ್ಲಿ 'A' ಸರ್ಟಿಫಿಕೇಟ್ ಚಿತ್ರಗಳಿಗೂ ಕೆಲವರು ಮಕ್ಕಳನ್ನು ಕರೆದುಕೊಂಡು ಹೋಗಿಬಿಡುತ್ತಾರೆ. ಆದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಇದಕ್ಕೆ ಅವಕಾಶವಿರುವುದಿಲ್ಲ. ಹೈದರಾಬಾದ್‌ನಲ್ಲಿ ಕುಟುಂಬವೊಂದು ಮಕ್ಕಳೊಂದಿಗೆ 'ಸಲಾರ್' ಚಿತ್ರಕ್ಕೆ ವೀಕ್ಷಿಸಲು ತೆರಳಿತ್ತು. ಮಲ್ಟಿಪ್ಲೆಕ್ಸ್ ಆಗಿರುವುದರಿಂದ ಮಕ್ಕಳಿಗೆ ಅವಕಾಶವಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. ಇದಕ್ಕೆ ಮಕ್ಕಳ ತಾಯಿ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೈದರಾಬಾದ್ ಉಪ್ಪಲ್ ಬಳಿ DSL ವಿರ್ತು ಮಾಲ್ ಇದೆ. ಅಲ್ಲಿ ಸಿನಿ ಪೊಲೀಸ್ ಪರದೆಗಳನ್ನು ಹೊಂದಿದೆ. ಸದ್ಯ 'ಸಲಾರ್' ಸಿನಿಮಾ ಪ್ರದರ್ಶನವಾಗುತ್ತಿದೆ. ಕುಟುಂಬವೊಂದು 'ಸಲಾರ್' ಚಿತ್ರದ ಟಿಕೆಟ್‌ ಬುಕ್ ಮಾಡಿಕೊಂಡು ಸಿನಿಮಾ ನೋಡಲು ಹೋಗಿದೆ. ಆದರೆ, ಇಬ್ಬರು ಪುಟ್ಟ ಮಕ್ಕಳಿದ್ದ ಕಾರಣ ಅವರನ್ನು ಥಿಯೇಟರ್ ಒಳಗೆ ಬಿಡಲಿಲ್ಲ. ಕೂಡಲೇ ಮಕ್ಕಳ ತಾಯಿ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಆದರೂ ಸಿಬ್ಬಂದಿ ಅವರನ್ನು ಥಿಯೇಟರ್ ಒಳಗೆ ಬಿಡಲಿಲ್ಲ.

ಆ ಥಿಯೇಟರ್ ಸಿಬ್ಬಂದಿಯೊಂದಿಗೆ ತಾಯಿ ಜಗಳವಾಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಕ್ಕಳಿಗೆ 'A' ಸರ್ಟಿಫಿಕೇಟ್ ಸಿನಿಮಾ ತೋರಿಸಲು ಹೇಗೆ ಸಾಧ್ಯ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಹಿಂಸೆಯ ಸನ್ನಿವೇಶಗಳಲ್ಲಿ ಸೌಂಡ್ ಕೂಡ ಹೆಚ್ಚಾಗಿರುತ್ತದೆ. ಅಂತಹ ಶಬ್ಧ ಮಕ್ಕಳು ಸಹಿಸುವುದು ಕಷ್ಟ ಎನ್ನುತ್ತಿದ್ದಾರೆ. ಆದರೆ ಕೆಲವರು ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ಟೀಕಿಸುತ್ತಿದ್ದಾರೆ. ಮಕ್ಕಳು 'A' ಸರ್ಟಿಫಿಕೇಟ್ ಸಿನಿಮಾ ನೋಡಬೇಕೋ ಬೇಡವೋ ಎಂಬುದು ಪೋಷಕರಿಗೆ ಬಿಟ್ಟ ವಿಚಾರ ಎನ್ನುವುದು ಅವರ ಅಭಿಪ್ರಾಯ. 'A' ಸರ್ಟಿಫಿಕೇಟ್ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡದಿದ್ದರೆ ಬಳಿಕ ಓಟಿಟಿಯಲ್ಲಿ ಬಂದರೆ ಮನೆಯಲ್ಲಿರುವ ಮಕ್ಕಳು ನೋಡಲ್ವಾ? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.

"ನನ್ನ ಮಕ್ಕಳನ್ನು ಯಾವ ಸಿನಿಮಾ ನೋಡಲು ಕರ್ಕೊಂಡು ಹೋಗಬೇಕೋ ನನಗೆ ಗೊತ್ತಿಲ್ವಾ?" ಎಂದು ಆ ಮಹಿಳೆ ಸಿಬ್ಬಂದಿ ಜೊತೆ ವಾದಿಸುತ್ತಿರುವುದು ಹೈಲೆಟ್ ಆಗಿದೆ. ಆ ತಾಯಿಯ ವಾದ ದೊಡ್ಡ ಚರ್ಚೆ ಹುಟ್ಟಾಕ್ಕಿರುವುದು ಸುಳ್ಳಲ್ಲ. ಸಿಂಗಲ್ ಸ್ಕ್ರೀನ್‌ ಥಿಯೇಟರ್ ಸಿಬ್ಬಂದಿ ಈ ರೀತಿ 'A' ಸರ್ಟಿಫಿಕೇಟ್ ಚಿತ್ರಕ್ಕೆ ಮಕ್ಕಳು ಬರುವುದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಆದರೆ ಪಿವಿಆರ್, ಐನಾಕ್ಸ್, ಸಿನಿಪೊಲಿಸ್ ರೀತಿಯ ಮಲ್ಟಿಪ್ಲೆಕ್ಸ್ ಚೈನ್‌ಗಳಲ್ಲಿ ಈ ನಿಯಮಗಳನ್ನು ತಪ್ಪದೇ ಪಾಲಿಸುತ್ತಾರೆ.

More from Filmibeat

English summary
Lady quarrel With multiplex staff in Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X