For Quick Alerts
  ALLOW NOTIFICATIONS  
  For Daily Alerts

  ದೇವರಕೊಂಡ ಹೊಸ ಟೀಸರ್ ನೋಡಿ ಬೇಸರಗೊಂಡ ಪ್ರೇಕ್ಷಕರು: ಅಂತಹದ್ದೇನಿದೆ?

  |
  ವಿಜಯ್ ದೇವರಕೊಂಡಗೆ ಬುದ್ಧಿವಾದ ಹೇಳ್ತಿದ್ದಾರೆ ಪ್ರೇಕ್ಷಕರು | FILMIBEAT KANNADA

  ಒಂದು ಸಿನಿಮಾ ಹಿಟ್ ಆದ್ರೆ ಆ ಚಿತ್ರವನ್ನೇ ಫಾಲೋ ಮಾಡೋದು ಇಂಡಸ್ಟ್ರಿಯಲ್ಲಿ ಟ್ರೆಂಡ್. ಅರ್ಜುನ್ ರೆಡ್ಡಿ ಸಿನಿಮಾ ಸೂಪರ್ ಸಕ್ಸಸ್ ಕಂಡ ಬೆನ್ನಲ್ಲೆ ಅದೇ ರೀತಿ ಕಾನ್ಸೆಪ್ಟ್ ಇಟ್ಕೊಂಡು ಹಲವು ಚಿತ್ರಗಳು ಬಂದವು. ಆದರೆ, ಆ ಸಿನಿಮಾ ಮಾಡಿದ ಹವಾ ಬೇರೆ ಸಿನಿಮಾ ಮಾಡಿಲ್ಲ.

  ಬಾಕ್ಸ್ ಆಫೀಸ್ ನಲ್ಲು ಮುಗ್ಗಿರಿಸಿದ ಉದಾಹರಣೆಗಳೇ ಹೆಚ್ಚು. ಅರ್ಜುನ್ ರೆಡ್ಡಿ ಚಿತ್ರ ಆದ್ಮೇಲೆ ಗೀತಾ ಗೋವಿಂದಂ, ನೋಟಾ, ಟ್ಯಾಕ್ಸಿವಾಲಾ, ಡಿಯರ್ ಕಾಮ್ರೇಡ್ ಅಂತಹ ಸಿನಿಮಾಗಳು ಬಂತು. ಈ ಸಿನಿಮಾಗಳು ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿಯೇ ಇತ್ತು. ಆದರೆ, ಟ್ರೈಲರ್ ಕಟ್ ಮಾಡ್ಬೇಕಾದರೆ ಒಂದೇ ಸ್ಟೈಲ್ ನಲ್ಲಿ ಇದ್ದಿದ್ದು ಗಮನಿಸಬಹುದು.

  'ಅರ್ಜುನ್ ರೆಡ್ಡಿ' ನಟಿ ಶಾಲಿನಿ ಪಾಂಡೆ ವಿರುದ್ಧ ಕ್ರಿಮಿನಲ್ ಕೇಸ್'ಅರ್ಜುನ್ ರೆಡ್ಡಿ' ನಟಿ ಶಾಲಿನಿ ಪಾಂಡೆ ವಿರುದ್ಧ ಕ್ರಿಮಿನಲ್ ಕೇಸ್

  ಇದೀಗ, ವಿಜಯ್ ದೇವರಕೊಂಡ ನಟಿಸುತ್ತಿರುವ ಹೊಸ ಸಿನಿಮಾ 'ವರ್ಲ್ಡ್ ಫೇಮಸ್ ಲವರ್' ಸಿನಿಮಾ ಟೀಸರ್ ಬಂದಿದೆ. ಈ ಟೀಸರ್ ನೋಡಿ ಮೆಚ್ಚಿಕೊಳ್ಳುವುದಕ್ಕಿಂತ ಬುದ್ದಿವಾದ ಹೇಳುತ್ತಿರುವ ಪ್ರೇಕ್ಷಕರೇ ಹೆಚ್ಚು. ಅಷ್ಟಕ್ಕೂ, ಪ್ರೇಕ್ಷಕರಿಗೆ ಬೇಸರವಾಗುತ್ತಿರುವುದು ಯಾಕೆ? ಮುಂದೆ ಓದಿ....

  ಹೊಸತು ಪ್ರಯತ್ನ ಪಡಿ

  ಹೊಸತು ಪ್ರಯತ್ನ ಪಡಿ

  ''ಹೊಸತು ಏನಾದರೂ ಮಾಡು. ಪ್ರತಿಯೊಂದು ಚಿತ್ರದಲ್ಲೂ ಅದೇ ಕಿಸ್, ತಬ್ಬಿಕೊಳ್ಳುವುದು, ಉದ್ದನೇಯ ಕೂದಲು, ಡ್ರಗ್ಸ್, ಕುಡಿಯುವುದು....ನಿನ್ನ ಚಿತ್ರದಲ್ಲಿ ಇದೇ ಇರುತ್ತೆ. ಇದನ್ನು ಬಿಟ್ಟು ಬೇರೆ ಏನಾದರೂ ಮಾಡು'' ಎಂದು ಚಿತ್ರರಸಿಕರೊಬ್ಬರು ವಿಜಯ್ ದೇವರಕೊಂಡಗೆ ಬುದ್ದಿವಾದ ಹೇಳಿದ್ದಾರೆ.

  ಟೀಸರ್ ಕಟ್ ಸರಿಯಾಗಿ ಮಾಡ್ತಿಲ್ಲ

  ಟೀಸರ್ ಕಟ್ ಸರಿಯಾಗಿ ಮಾಡ್ತಿಲ್ಲ

  ''ಸಿನಿಮಾದ ಕಥೆಯಲ್ಲಿ ವಿಭಿನ್ನತೆ ಇದೆ. ಆದರೆ, ಟೀಸರ್ ಅಥವಾ ಟ್ರೈಲರ್ ಕಟ್ ಮಾಡುವವರು ಸರಿಯಾಗಿ ಮಾಡುತ್ತಿಲ್ಲ. ಒಂದೇ ಸ್ಟೈಲ್ ನಲ್ಲಿ ಇರುವಂತೆ ಭಾಸವಾಗುತ್ತಿದೆ. ಕೋಪದ ವ್ಯಕ್ತಿತ್ವ, ಕುಡಿಯುವುದು, ಸೆಕ್ಸ್, ಲವ್ ಇದೇ ಅಂಶಗಳನ್ನು ಹೈಲೈಟ್ ಮಾಡಲಾಗುತ್ತಿದೆ. ಟೀಸರ್ ನಲ್ಲಿ ವಿಭಿನ್ನತೆ ಇರಲಿ'' ಎಂದು ಮತ್ತೊಬ್ಬರು ಕಾಮೆಂಟ್ ಮಾಡ್ತಿದ್ದಾರೆ.

  ವಿಜಯ್ ದೇವರಕೊಂಡಗೆ 48 ಕೋಟಿ ಆಫರ್ ಬಂದಿದ್ದು ನಿಜಾನ?ವಿಜಯ್ ದೇವರಕೊಂಡಗೆ 48 ಕೋಟಿ ಆಫರ್ ಬಂದಿದ್ದು ನಿಜಾನ?

  ಅರ್ಜುನ್ ರೆಡ್ಡಿ 2 ಇದು!

  ಅರ್ಜುನ್ ರೆಡ್ಡಿ 2 ಇದು!

  ''ಪದೇ ಪದೇ ಇಂತಹದೇ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೀರಾ. ಈ ಟೀಸರ್ ನೋಡಿದ್ರೆ ಇದೊಂದು ರೀತಿ ಅರ್ಜುನ್ ರೆಡ್ಡಿ 2 ಎನಿಸುತ್ತಿದೆ. ಚಿತ್ರಕತೆಯಲ್ಲಾದರೂ ಬದಲಾವಣೆ ಇರಲಿ'' ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

  ಸಿನಿಮಾ ಚೆನ್ನಾಗಿರಲಿದೆ

  ಸಿನಿಮಾ ಚೆನ್ನಾಗಿರಲಿದೆ

  ''ಈ ರೀತಿಯ ಕಾಮೆಂಟ್ ಗಳ ಜೊತೆ ವರ್ಲ್ಡ್ ಫೇಮಸ್ ಲವರ್ ಟೀಸರ್ ಇಷ್ಟಪಟ್ಟಿರುವ ಪ್ರೇಕಕ್ಷಕರು ಹೆಚ್ಚಿದ್ದಾರೆ. ಸಿನಿಮಾ ಚೆನ್ನಾಗಿರಬಹುದು ಎಂಬ ನಿರೀಕ್ಷೆ ವ್ಯಕ್ತಪಡಿಸುತ್ತಿದ್ದಾರೆ. ಈ ಸಿನಿಮಾ ಕೂಡ ಬಾಲಿವುಡ್ ಗೆ ರೀಮೇಕ್ ಆಗುತ್ತೆ ನೋಡಿ'' ಎಂದು ಭರವಸೆ ಹಂಚಿಕೊಂಡಿದ್ದಾರೆ.

  English summary
  Tollywood Star Vijay Devarakonada starrer World Famous Lover movie teaser has released. here is the audience reaction about the teaser.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X