For Quick Alerts
  ALLOW NOTIFICATIONS  
  For Daily Alerts

  ಖ್ಯಾತ ನಿರ್ದೇಶಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಗೆ ಕೋವಿಡ್ ಪಾಸಿಟಿವ್

  |

  ಖ್ಯಾತ ಬರಹಗಾರ ಮತ್ತು ನಿರ್ದೇಶಕ ರಾಜಮೌಳಿ ಅವರ ತಂದೆ ಕೆ.ವಿ ವಿಜಯೇಂದ್ರ ಪ್ರಸಾದ್ ಅವರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದೆ. ಸದ್ಯ ಹೈದರಾಬಾದ್ ನ ತಮ್ಮ ನಿವಾಸದಲ್ಲಿ ಕ್ವಾರಂಟೈನ್ ಆಗಿದ್ದು, ವೈದ್ಯರ ಸಲಹೆ ಪಡೆದುಕೊಳ್ಳುತ್ತಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ವಿಜಯೇಂದ್ರ ಪ್ರಸಾದ್ ಅವರ ತಂಡ, 78 ವರ್ಷದ ಬರಹಗಾರ ವಿಜಯೇಂದ್ರ ಪ್ರಸಾದ್ 2 ವಾರಗಳ ಕಾಲ ಮನೆಯಲ್ಲೇ ಕ್ವಾರಂಟೈನ್ ಆಗಲಿದ್ದು, ಅಲ್ಲಿವರೆಗೂ ಯಾರು ಸಂಪರ್ಕಿಸದಂತೆ ಸ್ನೇಹಿತರಿಗೆ ಮತ್ತು ಹಿತೈಶಿಗಳಿಗೆ ವಿನಂತಿ ಮಾಡಿದ್ದಾರೆ ಎಂದು ಶೇರ್ ಮಾಡಿದ್ದಾರೆ. ಖ್ಯಾತ ಬರಹಗಾರ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

  ಕೊರೊನಾ ಲಸಿಕೆ ಪಡೆದ ಬಾಲಿವುಡ್ ನಟ ಸೋನು ಸೂದ್

  ಕಳೆದ ವರ್ಷ ಪುತ್ರ ರಾಜಮೌಳಿ ಮತ್ತು ಅವರ ಪತ್ನಿ ಹಾಗೂ ಮಗನಿಗೆ ಕೊರೊನಾ ಸೋಂಕು ತಗುಲಿತ್ತು. ಕುಟುಂಬದ ಜೊತೆ ಮನೆಯಲ್ಲೇ ಕ್ವಾರಂಟೈನ್ ಆಗಿದ್ದ ಬಾಹುಬಲಿ ನಿರ್ದೇಶಕ ಸಂಪೂರ್ಣ ಗುಣಮುಖರಾದ ಬಳಿಕ ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

  ವಿಜಯೇಂದ್ರ ಪ್ರಸಾದ್ ಸದ್ಯ ಆರ್ ಆರ್ ಆರ್ ಮತ್ತು ಕಂಗನಾ ರಣಾವತ್ ನಟನೆಯ ತಲೈವಿ ಸಿನಿಮಾಗೆ ಕಥೆ ಬರೆದಿದ್ದಾರೆ. ಈ ಎರಡು ಬಹುನಿರೀಕ್ಷೆಯ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ.

  'ದುಬಾರಿ'ಗೆ ಬ್ರೇಕ್ ಹಾಕಿದ ಧ್ರುವ ಸರ್ಜಾ | Filmibeat Kannada

  ಕೊರೊನಾ ಎರಡನೇ ಅಲೆ ಹೆಚ್ಚಾಗಿದ್ದು, ಅನೇಕ ಸೆಲೆಬ್ರಿಟಿಗಳಿಗೆ ಕೊರೊನಾ ಸೋಂಕು ತಗುಲಿದೆ. ಕೊರೊನಾದಿಂದ ಬಾಲಿವುಡ್ ನಡುಗಿಹೋಗಿದ್ದು, ಬಹುತೇಕ ಕಲಾವಿದರಿಗೆ ಪಾಸಿಟಿವ್ ವರದಿ ಬಂದಿದೆ. ಅಕ್ಷಯ್ ಕುಮಾರ್, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ಅಲಿಯಾ ಭಟ್ ಸೇರಿದಂತೆ ಅನೇಕರಿಗೆ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

  English summary
  Famous Writer and Rajamouli's father KV Vijayendra prasad tests positive for corona.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X