ಜ್ಯೋತಿ ರೈ ಸೌಂದರ್ಯ ಸಮರ, ಅಮಲೇರಿಸಿಕೊಂಡ ಪಡ್ಡೆ ಹೈಕ್ಳು..!

By ಪ್ರಿಯಾ ದೊರೆ

ಜ್ಯೋತಿ ರೈ ಅಲಿಯಾಸ್ ಜ್ಯೋತಿ ಪೂರ್ವಜ್ ಯಾರಿಗೆ ಗೊತ್ತಿಲ್ಲ. ಕಳೆದ ಎರಡು ದಶಕಗಳಿಂದ ಕನ್ನಡ,ತೆಲುಗು ಕಿರುತೆರೆಯಲ್ಲಿ ಮೋಡಿ ಮಾಡಿದ ನಟಿ.ದಶಕಗಳ ಹಿಂದೆ ದೇವಕಿ ಪಾತ್ರದಲ್ಲಿ ಛಾಪು ಮೂಡಿಸಿದ್ದ ನಟಿ ಈಗ ಸಿನಿರಂಗ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ಪಡ್ಡೆ ಹುಡುಗರ ಕಣ್ಣು ಕುಕ್ಕುವಂತೆ ಕಾಣುತ್ತಿದ್ದಾರೆ. ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಾಗ ನಟಿ ಜ್ಯೋತಿ ರೈ ಅವರು ಇದ್ದ ರೀತಿಗೂ, ಈಗ ಇರುವ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ಒಂದು ಕಡೆ ಜ್ಯೋತಿ ರೈ ಅವರು ತಮ್ಮ ಉಡುಗೆಯನ್ನು ಕಂಪ್ಲೀಟ್ ಆಗಿ ಬದಲಾಯಿಸಿಕೊಂಡಿದ್ದಾರೆ.

ರೂಪವತಿ ಜ್ಯೋತಿ ಸೀರೆಯಿಂದ ಶಾರ್ಟ್ಸ್ ವರೆಗೂ

ಇದರ ಜೊತೆಗೆ ತಮ್ಮ ಬದುಕಿನ ದಿಕ್ಕನ್ನೇ ಬದಲಿಸಿರುವುದು ಅಭಿಮಾನಿಗಳಿಗೆ ಹಾಟ್ ಸುದ್ದಿಯೂ ಆಗಿತ್ತು. ಸದ್ಯ ಜ್ಯೋತಿ ಅವರು ಸದಾ ಪಡ್ಡೆ ಹುಡುಗರ ಕಣ್ಣಿಗೆ ತಂಪೆರೆಯುತ್ತಿದ್ದಾರೆ. ಕನ್ನಡ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಬಂದ ಜ್ಯೋತಿ ಅವರು ಬಹಳ ಸಿಂಪಲ್ ಆಗಿ, ಕಾಣಿಸಿಕೊಳ್ಳುತ್ತಿದ್ದರು. ಸಲ್ವಾರ್, ಸೀರೆಯಲ್ಲೇ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಿದ್ದ ನಟಿ, ಆಗಲೂ ಜನರ ಮನಸ್ಸನ್ನು ಮೃದುವಾಗಿಯೇ ಗೆದ್ದಿದ್ದರು. ದೇವಕಿ, ಜೋಗುಳ, ಗೆಜ್ಜೆ ಪೂಜೆಯಂತಹ ಧಾರಾವಾಹಿಗಳಲ್ಲಿ ನಟಿಸಿ ಜನರ ಮನಸ್ಸನ್ನು ಕಲುಕಿಸಿದ್ದರು. ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಾ ಒಂದೇ ತೆರನಾಗಿ ಕಾಣುತ್ತಿದ್ದ ನಟಿ ನಂತರದ ದಿನಗಳಲ್ಲಿ ಖಳನಾಯಕಿ ರೂಪದಲ್ಲೂ ವೀಕ್ಷಕರನ್ನು ರಂಜಿಸಿದ್ದರು. ಆದರೆ, ಈಗ ಜ್ಯೋತಿ ಅವರು ಪಡ್ಡೆ ಹುಡುಗರ ಹಾಟ್ ಫೇವರಿಟ್ ಹುಡುಗಿಯಾಗಿ ಮಾರ್ಪಾಡಾಗಿದ್ದಾರೆ.

written update on Actress Jyothi Rai


ದಿಢೀರ್ ಎಂದು ಬದಲಾದ ನಟಿ

ಕಳೆದೆರಡು ಮೂರು ವರ್ಷಗಳಿಂದ ನಟಿ ಜ್ಯೋತಿ ಅವರು ತಮ್ಮನ್ನು ತಾವು ಬದಲಾಯಿಸಿಕೊಂಡಿದ್ದಲ್ಲದೇ, ಜನರ ನೋಟವನ್ನು ಬದಲಿಸಿದ್ದಾರೆ. ದಿಢೀರೆಂದು ಬದಲಾದ ನಟಿ ಜ್ಯೋತಿ ಅವರು ರೈ ಬದಲು ಪೂರ್ವಜ್ ಎಂದು ಹೆಸರಿನ ಪಕ್ಕದಲ್ಲಿ ಜೋಡಿಸಿಕೊಂಡಿದ್ದಾರೆ. ತಮ್ಮ ಉಡುಗೆ-ತೊಡುಗೆಯಿಂದಲೇ ಫಾಲೋವರ್ಸ್ ಗಳನ್ನು ಹೆಚ್ಚಿಸಿಕೊಂಡಿದ್ದಾರೆ. 40 ರ ಆಸುಪಾಸಿನಲ್ಲಿರುವ ನಟಿ ಜ್ಯೋತಿ ಅವರು ಇನ್ನು ಟೀನೇಜ್ ಬೆಡಗಿಯಾಗಿದ್ದಾರೆ. ಯಾವ ರಂಬೆ, ಊರ್ವಶಿಗೂ ಕಡಿಮೆ ಇಲ್ಲ ಎಂಬಂತೆ ಸೌಂದರ್ಯವನ್ನು ಹೆಚ್ಚಿಸಿಕೊಂಡಿರುವ ನಟಿ ಜ್ಯೋತಿ ಈಗ ಸೌಂದರ್ಯದ ಅಮಲಿನಲ್ಲಿ ತೇಲಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು.


ಮಾದಕ ಫೋಟೋಗಳಿಗೆ ಸೆಕ್ಸಿ ಕಮೆಂಟ್ ಗಳು

ಇತ್ತೀಚೆಗಷ್ಟೇ ಸುಕು ಪೂರ್ವಜ್ ಅವರೊಂದಿಗೆ ಎರಡನೇ ಮದುವೆಯಾದ ನಟಿ ಜ್ಯೋತಿ ರೈ ಅವರು ಬೋರ್ ಲುಕ್ ನಿಂದ ಬೋಲ್ಡ್ ಲುಕ್ ಗೆ ಟ್ರಾನ್ಸಫರ್ ಆಗಿದ್ದು, ಸದ್ಯ ಮಾಡೆಲ್ ಲೋಕದಲ್ಲಿದ್ದಾರೆ. ಇಂದ್ರ ಲೋಕದಿಂದ ಇಳಿದು ಬಂದ ಅಪ್ಸರೆಯಂತೆ ಕಂಗೊಳಿಸುವ ಜ್ಯೋತಿ ಅವರ ಹೊಸ ಫೋಟೋಗಳನ್ನು ನೋಡಲು ಎಲ್ಲರೂ ಕಾತುರರಾಗಿರುತ್ತಾರೆ. ಮಾದಕ ನೋಟದಿಂದ ಹೊಳೆಯುವ ಜ್ಯೋತಿ ಅವರ ಫೋಟೋಗಳನ್ನು ಮತ್ತೆ ಮತ್ತೆ ನೋಡುವ ಹುಡುಗರು ನಶೆಯಲ್ಲಿರುತ್ತಾರೆ. ಮೈ ಮಾಟದ ಕಿಡಿಯಿಂದಲೇ ಸೆನ್ಷೇನ್ ಕ್ರಿಯೇಟ್ ಮಾಡುತ್ತಲೇ ಇರುವ ನಟಿ ಜ್ಯೋತಿ ಅವರ ಪ್ರತಿಯೊಂದು ಫೋಟೋಗಳಿಗೂ ಸೆಕ್ಸಿಯಂತಹ ಕಮೆಂಟ್ ಗಳು ಬರುತ್ತಲೇ ಇರುತ್ತವೆ.

ಹಾಟ್ ಆಂಡ್ ಯಂಗ್ ಆದ ನಟಿ

ಮಾದಕತೆಯನ್ನ ಸೂಸುವ ಜ್ಯೋತಿ ಅವರ ಫೋಟೋವನ್ನೇ ನೋಡುತ್ತಾ ಸಾಕಷ್ಟು ಕಮೆಂಟ್ ಗಳನ್ನು ಹಾಕುವ ನೆಟ್ಟಿಗರು, ನಿಮಗೆ ಸಿನಿಮಾದಲ್ಲಿ ಚಾನ್ಸ್ ಸಿಗಬಾರದೇಕೆ. ಇಷ್ಟು ಹಾಟ್ ಆಂಡ್ ಯಂಗ್ ಆಗಿ ಕಾಣುವ ಬ್ಯೂಟಿಗೆ ಒಂದು ಸಿನಿಮಾ ಸಿಕ್ಕರೆ ಬಲು ಚೆಂದ ಎಂದು ಸಾಕಷ್ಟು ಮಂದಿ ಬಯಸುತ್ತಿದ್ದಾರೆ. ಸದ್ಯ ವೈಟ್ ಟೀ ಶರ್ಟ್ ಧರಿಸಿ ಫೋಟೋ ಒಂದನ್ನು ಅಪ್ ಲೋಡ್ ಮಾಡಿದ್ದು, ಎಲ್ಲರೂ ಲೈಕ್ಸ್ ಕಮೆಂಟ್ ಮಾಡುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X