For Quick Alerts
  ALLOW NOTIFICATIONS  
  For Daily Alerts

  ಒಂದೇ ಸಿನಿಮಾದಲ್ಲಿ ಯಶ್- ಪ್ರಭಾಸ್?

  |

  ನಟ ರಾಕಿಂಗ್ ಸ್ಟಾರ್ ಯಶ್, ಪ್ರಭಾಸ್ ಭಾರತೀಯ ಚಿತ್ರರಂಗದ ಸ್ಟಾರ್ ನಟರ ಸ್ಥಾನದಲ್ಲಿ ಇದ್ದಾರೆ. ಒಂದು ಕಡೆ ನಟ ಪ್ರಭಾಸ್ 'ಬಾಹುಬಲಿ' ಚಿತ್ರದ ಮೂಲಕ ದಾಖಲೆಯನ್ನು ಬರೆದರೆ, ಮತ್ತೊಂದು ಕಡೆ ಯಶ್ 'ಕೆಜಿಎಫ್' ಮೂಲಕ ದಾಖಲೆ ಮಾಡಿದ್ದಾರೆ.

  'ಬಾಹುಬಲಿ' ಸಿನಿಮಾ ಮೂಲಕ ಅತಿ ಹೆಚ್ಚು ಬಾಕ್ಸಾಫೀಸ್ ಗಳಿಕೆ ಕಂಡು, ನಟ ಪ್ರಭಾಸ್‌ ಟಾಪ್‌ನಲ್ಲಿ ಇದ್ದಾರೆ. ಇತ್ತ ಯಶ್ ನಟನೆಯ 'ಕೆಜಿಎಫ್ 2' ಸಿನಿಮಾ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಭಾರತೀಯ ಸ್ಟಾರ್ ನಟನಾಗಿ ಮಿಂಚುತ್ತಿದ್ದಾರೆ.

  ಕೆಜಿಎಫ್ 2: ಮುಂಬೈ, ಪೂಣೆ, ಚೆನ್ನೈನಲ್ಲಿ ಥಿಯೇಟರ್‌ನಲ್ಲಿ ಮುಂದುವರೆದ ಯಶಸ್ವಿ ಪ್ರದರ್ಶನ!ಕೆಜಿಎಫ್ 2: ಮುಂಬೈ, ಪೂಣೆ, ಚೆನ್ನೈನಲ್ಲಿ ಥಿಯೇಟರ್‌ನಲ್ಲಿ ಮುಂದುವರೆದ ಯಶಸ್ವಿ ಪ್ರದರ್ಶನ!

  ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮಾಡಿದ ಈ ತಾರೆಯರು ಒಟ್ಟಿಗೆ ಕಾಣಿಸಿಕೊಂಡಿದ್ದು, 'ಸಲಾರ್' ಚಿತ್ರದ ಮುಹೂರ್ತದಲ್ಲಿ. ಆದರೆ ಈ ಜೋಡಿಯ ಬಗ್ಗೆ ಈಗ ಹೊಸದೊಂದು ಸಿನಿಮಾ ಸುದ್ದಿ ಹರಿದಾಡುತ್ತಿದೆ. ನಟ ಯಶ್ ಮತ್ತು ಪ್ರಭಾಸ್ ಒಂದೇ ಸಿನಿಮಾದಲ್ಲಿ ಇರಲಿದ್ದಾರೆ ಎನ್ನುವ ಬಗ್ಗೆ ಸುದ್ದಿ ಹಬ್ಬಿದೆ.

  'ಸಲಾರ್'ನಲ್ಲಿ ಯಶ್ ಅತಿಥಿ ಪಾತ್ರ!

  'ಸಲಾರ್'ನಲ್ಲಿ ಯಶ್ ಅತಿಥಿ ಪಾತ್ರ!

  ಮೂಲಗಳ ಮಾಹಿತಿಯಂತೆ, ನಟ ಯಶ್ ಪ್ರಭಾಸ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ 'ಸಲಾರ್' ಸಿನಿಮಾದಲ್ಲಿ ನಟ ಯಶ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಪ್ರಭಾಸ್ 'ಸಲಾರ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಯಶ್ ನಟಿಸಬಹುದು ಎಂದು ಟ್ರೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯಾಗಿದೆ.

  ಬಲವಂತಕ್ಕೆ 'ಕೆಜಿಎಫ್ 3' ಮಾಡುತ್ತಿದ್ದಾರೆ ಪ್ರಶಾಂತ್ ನೀಲ್: ಒತ್ತಡಕ್ಕೆ ಕಾರಣವೇನು?ಬಲವಂತಕ್ಕೆ 'ಕೆಜಿಎಫ್ 3' ಮಾಡುತ್ತಿದ್ದಾರೆ ಪ್ರಶಾಂತ್ ನೀಲ್: ಒತ್ತಡಕ್ಕೆ ಕಾರಣವೇನು?

  ಪ್ರಶಾಂತ್ ನೀಲ್ ಮಹಾ ಯೋಜನೆ!

  ಪ್ರಶಾಂತ್ ನೀಲ್ ಮಹಾ ಯೋಜನೆ!

  'ಸಲಾರ್' ಸಿನಿಮಾದಲ್ಲಿ ಮಾತ್ರ ಯಶ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಮಾತ್ರವಲ್ಲ. ನಟ ಯಶ್ ಮತ್ತು ಪ್ರಭಾಸ್ ಇಬ್ಬರೂ ಮಲ್ಟಿ ಸ್ಟಾರ್ ಸಿನಿಮಾದಲ್ಲಿ ಒಂದಾಗಲಿದ್ದಾರೆ ಎನ್ನಲಾಗುತ್ತಿದೆ. ನಿರ್ದೇಶಕ ಪ್ರಶಾಂತ್ ನೀಲ್ 'ಸಲಾರ್' ಮತ್ತು 'ಕೆಜಿಎಫ್' ಪ್ರಪಂಚವನ್ನೂ ಒಂದು ಮಾಡಲಿದ್ದು, ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಯಶ್ ನಾಯಕ ನಟನಾಗಿ ಅಭಿಯಿಸಲಿದ್ದಾರೆ ಎಂದು ಟಾಲಿವುಡ್‌ನಲ್ಲಿ ಓಡಾಡುತ್ತಿದೆ.

  ಪ್ರಭಾಸ್ ಹಲವು ಚಿತ್ರಗಳಲ್ಲಿ ಬ್ಯುಸಿ!

  ಪ್ರಭಾಸ್ ಹಲವು ಚಿತ್ರಗಳಲ್ಲಿ ಬ್ಯುಸಿ!

  ನಟ ಪ್ರಭಾಸ್ ಕೈಯಲ್ಲಿ ಸದ್ಯ ಸಾಲು, ಸಾಲು ಸಿನಿಮಾಗಳಿವೆ. ಒಂದಾದ ಬಳಿಕ ಒಂದು ಪ್ರಭಾಸ್ ಸಿನಿಮಾಗಳು ರಿಲೀಸ್ ಆಗಲಿವೆ. ಸದ್ಯ 'ಸಲಾರ್', 'ಆದಿಪುರುಷ್', ಪ್ರಾಜೆಕ್ಟ್ ಸಿನಿಮಾಗಳಲ್ಲೂ ಪ್ರಭಾಸ್ ನಿರತರಾಗಿದ್ದಾರೆ. ಇನ್ನುಳಿದಂತೆ ಈ ಚಿತ್ರಗಳ ಬಳಿಕ 'ರಾಜ ಡಿಲಕ್ಸ್', 'ಸ್ಪಿರಿಟ್' ಸಿನಿಮಾಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ ಪ್ರಭಾಸ್. ಮುಂದಿನ ವರ್ಷ ಪ್ರಭಾಸ್ ಸಿನಿಮಾಗಳದ್ದೇ ಅಬ್ಬರ ಇರುತ್ತೆ.

  800 ಕೋಟಿ ರೂ. ನಿರ್ದೇಶಕನೊಂದಿಗೆ ಯಶ್ ಸಿನಿಮಾ: ಏನಿದು ಸುದ್ದಿ?800 ಕೋಟಿ ರೂ. ನಿರ್ದೇಶಕನೊಂದಿಗೆ ಯಶ್ ಸಿನಿಮಾ: ಏನಿದು ಸುದ್ದಿ?

  ಯಶ್ ಮುಂದಿನ ಚಿತ್ರಕ್ಕೆ ತಯಾರಿ!

  ಯಶ್ ಮುಂದಿನ ಚಿತ್ರಕ್ಕೆ ತಯಾರಿ!

  ಇನ್ನು ರಾಕಿಂಗ್ ಸ್ಟಾರ್ ಯಶ್ ವಿಚಾರಕ್ಕೆ ಬರುವುದಾದರೆ. 'ಕೆಜಿಎಫ್ 2' ಬಳಿಕ ಯಶ್ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಹೆಚ್ಚಿದೆ. ಒಂದು ಕಡೆ 'ಕೆಜಿಎಫ್ 3' ಸಿನಿಮಾ ಮಾಡುವ ಬಗ್ಗೆ ಸುದ್ದಿ ಹಬ್ಬಿದರೆ, ಮತ್ತೊಂದು ಕಡೆ ನಿರ್ದೇಶಕ ನರ್ತನ್ ಜೊತೆಗೆ ಸಿನಿಮಾ ಮಾಡುತ್ತಾರೆ ಎನ್ನಲಾಗುತ್ತಿದೆ. ಆದರೆ ಸಿನಿಮಾ ಮಾಡುತ್ತಾರೆ ಅನ್ನೋದು ಖಚಿತವಾಗಿಲ್ಲ.

  English summary
  Yash And Prabhas Coming Together For New Project, Know More Details,
  Wednesday, June 29, 2022, 17:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X