For Quick Alerts
  ALLOW NOTIFICATIONS  
  For Daily Alerts

  ತೆಲುಗು ನಿರ್ಮಾಪಕನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸೌತ್ ಸ್ಟಾರ್ಸ್; ಯಶ್, ಪ್ರಾಶಾಂತ್ ನೀಲ್ ಭಾಗಿ

  By ಫಿಲ್ಮ್ ಡೆಸ್ಕ್
  |

  ಹುಟ್ಟುಹಬ್ಬದ ಸಂಭ್ರಮಾಚರಣೆ, ಪಾರ್ಟಿ ಅಂತ ಸೆಲೆಬ್ರಿಟಿಗಳು ಆಗಾಗ ಒಂದೇ ಸೂರಿನಡಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಹೆಚ್ಚಾಗಿ ಬಾಲಿವುಡ್ ಸೆಲೆಬ್ರಿಟಿಗಳು ಆಗಾಗ ಪಾರ್ಟಿ ಅಂತ ಒಟ್ಟಿಗೆ ಸೇರುತ್ತಾರೆ. ಆದರೆ ದಕ್ಷಿಣ ಭಾರತದ ಸಿನಿಮಾರಂಗದ ವಿಚಾರಕ್ಕೆ ಬಂದರೆ ಎಲ್ಲಾ ಕಲಾವಿದರು ಒಟ್ಟಿಗೆ ಕಾಣಿಸಿಕೊಳ್ಳುವುದು ತೀರಾ ವಿರಳ.

  ಅವಾರ್ಡ್ ಕಾರ್ಯಕ್ರಮಗಳು ಬಿಟ್ಟರೆ ದಕ್ಷಿಣ ಭಾರತದ ತಾರೆಯನ್ನು ಒಂದೇ ಸೂರಿನಡಿ ನೋಡಲು ಸಾಧ್ಯವಾಗುವುದಿಲ್ಲ. ಆದರೆ ಇತ್ತೀಚಿಗೆ ತೆಲುಗು ಸಿನಿಮಾರಂಗದ ತಾರೆಯ ಜೊತೆ ಸ್ಯಾಂಡಲ್ ವುಡ್ ನ ಕೆಲವು ಸ್ಟಾರ್ಸ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜ್ ಅವರ 50ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ತೆಲುಗಿನ ಘಟಾನುಘಟಿ ಕಲಾವಿದರು ಭಾಗಿಯಾಗಿದ್ದರು. ಇದರಲ್ಲಿ ಕೆಜಿಎಫ್ ಟೀಂ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

  'ಸಲಾರ್' ಬಳಿಕ ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೊಂದು ಹೊಸ ಸಿನಿಮಾ; ನಾಯಕ ಯಾರು?

  ದಿಲ್ ರಾಜು ಹುಟ್ಟುಹಬ್ಬದ ಸಂಭ್ರಮದಲ್ಲಿ ಕೆಜಿಎಫ್ ಟೀಂ

  ದಿಲ್ ರಾಜು ಹುಟ್ಟುಹಬ್ಬದ ಸಂಭ್ರಮದಲ್ಲಿ ಕೆಜಿಎಫ್ ಟೀಂ

  ಗುರುವಾರ ರಾತ್ರಿ (ಡಿ.17)ತೆಲುಗಿನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿರುವ ದಿಲ್ ರಾಜು ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಿದ್ದರು. ಪಾರ್ಟಿಯಲ್ಲಿ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ವಿಜಯ್ ಕಿರಗಂದೂರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೂ ಆಹ್ವಾನ ನೀಡಲಾಗಿತ್ತು. ದಿಲ್ ರಾಜು ಹುಟ್ಟುಹಬ್ಬದ ಪಾರ್ಟಿಯಲ್ಲಿ ಕನ್ನಡದ ಈ ಸ್ಟಾರ್ಸ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

  ನಟ ಚಿರಂಜೀವಿ, ಪವನ್ ಕಲ್ಯಾಣ್

  ನಟ ಚಿರಂಜೀವಿ, ಪವನ್ ಕಲ್ಯಾಣ್

  ದಿಲ್ ರಾಜು ಹುಟ್ಟುಹಬ್ಬದ ಪಾರ್ಟಿಯಲ್ಲಿ ನಟ ಚಿರಂಜೀವಿ ಸಹ ಭಾಗಿಯಾಗಿದ್ದರು. ಜೊತೆಗೆ ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ ಸಹ ಪಾರ್ಟಿಗೆ ಹಾಜರಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಚಿರಂಜೀವಿ ಆಚಾರ್ಯ ಸಿನಿಮಾದ ಚಿತ್ರೀಕರಣ ಮುಗಿಸಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು.

  'KGF-2' ಸಿನಿಮಾದ ಬಿಗ್ ಅಪ್ ಡೇಟ್: ಟೀಸರ್ ಬಿಡುಗಡೆಗೆ ಡೇಟ್ ಫಿಕ್ಸ್

  ನಾಗಚೈತನ್ಯ ದಂಪತಿ ಮತ್ತು ಮಹೇಶ್ ಬಾಬು

  ನಾಗಚೈತನ್ಯ ದಂಪತಿ ಮತ್ತು ಮಹೇಶ್ ಬಾಬು

  ದಿಲ್ ರಾಜು ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ನಾಗಚೈತನ್ಯ ದಂಪತಿ ಭಾಗಿಯಾಗಿದ್ದರು. ನಾಗಚೈತನ್ಯ ಮತ್ತು ಸಮಂತಾ ಇಬ್ಬರು ಪಾರ್ಟಿಗೆ ಹಾಜರಾಗಿರುವುದು ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ಇಬ್ಬರು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋ ಎಲ್ಲಾ ಕಡೆ ಹರಿದಾಡುತ್ತಿದೆ. ಇನ್ನೂ ನಟ ಮಹೇಶ್ ಬಾಬು ಸಹ ಪಾರ್ಟಿಯಲ್ಲಿ ಕಾಣಿಕೊಂಡಿದ್ದಾರೆ.

  ರಾಮ್ ಚರಣ್ ಮತ್ತು ಪ್ರಭಾಸ್

  ರಾಮ್ ಚರಣ್ ಮತ್ತು ಪ್ರಭಾಸ್

  ಖ್ಯಾತ ನಟರಾಜ ರಾಮ್ ಚರಣ್ ಮತ್ತು ಪ್ರಭಾಸ್ ಇಬ್ಬರು ಒಟ್ಟಿಗೆ ಪಾರ್ಟಿಗೆ ಹಾಜರಾಗಿದ್ದಾರೆ. ಇಬ್ಬರು ಒಟ್ಟಿಗೆ ನಿಂತು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಒಂದೇ ಫ್ರೇಮ್ ನಲ್ಲಿ ಸೆರೆಯಾಗಿರುವ ಸ್ಟಾರ್ ನಟರನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

  KGF 2 ಸೆಟ್ ಗೆ ಹೋದ ಕಾರ್ತಿಕ್ ಗೌಡ ಪರಿಸ್ಥಿತಿ ನೋಡಿ | Filmibeat Kannada
  ವಿಜಯ್ ದೇವರಕೊಂಡ, ನಿತಿನ್, ಪೂಜಾ ಹೆಗಡೆ

  ವಿಜಯ್ ದೇವರಕೊಂಡ, ನಿತಿನ್, ಪೂಜಾ ಹೆಗಡೆ

  ದಿಲ್ ರಾಜು ಹಟ್ಟುಹಬ್ಬದ ಪಾರ್ಟಿಯಲ್ಲಿ ವಿಜಯ್ ದೇವರಕೊಂಡ, ನಟ ನಿತಿನ್ ದಂಪತಿ, ನಟಿ ಪೂಜಾ ಹೆಗ್ಡೆ, ರಾಶಿ ಖನ್ನಾ, ವರುಣ್ ತೇಜ್ ಸೇರಿದಂತೆೆ ತೆಲುಗು ಸಿನಿಮಾರಂಗದ ಬಹುತೇಕ ಕಲಾವಿದರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ದಿಲ್ ರಾಜು ಸದ್ಯ ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

  English summary
  Kannada Actor Yash, Prashanth Neel, Vijay Kiragandur Attends Telugu Producer Dil Raju 50th Birthday bash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X