For Quick Alerts
  ALLOW NOTIFICATIONS  
  For Daily Alerts

  ಏಳು ವರ್ಷ ಹಳೆಯ ಯಶ್ ಸಿನಿಮಾ ತೆಲುಗಿನಲ್ಲಿ ಮರುಬಿಡುಗಡೆ!

  |

  ವರ್ಷದಿಂದಕ್ಕೆ ವರ್ಷಕ್ಕೆ ಯಶ್ ಅಭಿಮಾನಿಗಳ ಸಂಖ್ಯೆ ಏರುತ್ತಲೇ ಸಾಗುತ್ತಿದೆ. ಈಗಂತೂ ಯಶ್ ನ್ಯಾಷನಲ್ ಸ್ಟಾರ್. ಅವರ ಅಭಿಮಾನಿಗಳು ರಾಷ್ಟ್ರದಾದ್ಯಂತ ಇದ್ದಾರೆ.

  ಕೆಜಿಎಫ್ ಸಿನಿಮಾದ ಬಳಿಕ ಯಶ್‌ ಗೆ ಅಭಿಮಾನಿಗಳ ಸಾಗರವೇ ದೊರತಿದೆ. ಕೆಜಿಎಫ್ ಸಿನಿಮಾ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸೂಪರ್ ಹಿಟ್ ಆಗಿದೆ. ಮಾಸ್ ಸಿನಿಮಾಗಳನ್ನು ಬಹುವಾಗಿ ಮೆಚ್ಚಿಕೊಳ್ಳುವ ತೆಲುಗು ರಾಷ್ಟ್ರಗಳಲ್ಲಿ ಯಶ್ ರಿಗೆ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ.

  ತೆಲುಗು ರಾಜ್ಯಗಳಲ್ಲಿ ಯಶ್ ರ ಸಿನಿಮಾಗಳಿಗೆ ಭಾರಿ ಬೇಡಿಕೆ ಇದೆ. ಹಾಗಾಗಿಯೇ ಈಗ ಯಶ್ ಅವರ ಹಳೆಯ ಸಿನಿಮಾಗಳನ್ನು ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.

  ಏಳು ವರ್ಷಗಳ ಹಿಂದೆ 2014 ರಲ್ಲಿ ಬಿಡುಗಡೆ ಆಗಿದ್ದ ಯಶ್ ಅಭಿನಯದ ಸೂಪರ್ ಹಿಟ್ ಸಿನಿಮಾ 'ಗಜಕೇಸರಿ' ಇದೀಗ ತೆಲುಗಿಗೆ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಇಂದು (ಫೆಬ್ರವರಿ 26) ಗಜಕೇಸರಿ ಸಿನಿಮಾದ ತೆಲುಗು ಟೀಸರ್ ಬಿಡುಗಡೆ ಆಗಿದೆ. ಟೀಸರ್‌ನಲ್ಲಿ 'ಆಫ್ಟರ್ ಕೆಜಿಎಫ್' ಎಂದು ಸೇರಿಸಲಾಗಿದೆ.

  'ಗಜಕೇಸರಿ' ಸಿನಿಮಾದ ತೆಲುಗು ಡಬ್ ವರ್ಷನ್ ಮಾರ್ಚ್ 5 ರಂದು ಎರಡೂ ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಆಗಲಿದೆ. ಅದ್ಧೂರಿ ಫೈಟ್ಸ್, ಹಾಸ್ಯ-ಪ್ರೇಮ, ಭಾವನೆಗಳನ್ನು ಹದವಾಗಿ ಹೊಂದಿರುವ ಈ ಸಿನಿಮಾ ತೆಲುಗು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ನಿರೀಕ್ಷೆ ಇದೆ.

  'ಗಜಕೇಸರಿ' ಸಿನಿಮಾವನ್ನು ಎಸ್ ಕೃಷ್ಣ ಅವರು ನಿರ್ದೇಶಿಸಿದ್ದರು. ಸಿನಿಮಾದ ನಿರ್ಮಾಣ ಮಾಡಿದ್ದಿದ್ದು ಜಯಣ್ಣ-ಬೋಗೇಂದ್ರ. ಸಿನಿಮಾದಲ್ಲಿ ನಾಯಕಿಯಾಗಿ ಅಮೂಲ್ಯ ನಟಿಸಿದ್ದರೆ. ಮುಖ್ಯ ಸಹಪಾತ್ರಗಳಲ್ಲಿ ಅನಂತ್ ನಾಗ್, ರಂಗಾಯಣ ರಘು, ಸಾಧುಕೋಕಿಲ, ಗಿರಿಜಾ ಲೋಕೇಶ್, ಮಂಡ್ಯ ರಮೇಶ್ ನಟಿಸಿದ್ದರು. ವಿಲನ್ ಗಳಾಗಿ ಜಾನ್ ವಿಜಯ್, ಪ್ರಭಾಕರ್ ನಟಿಸಿದ್ದರು.

  ವಿನೋದ್ ಪ್ರಭಾಕರ್ ಗೆ ವಂದಿಸಿದ ಚಾಲೆಂಜಿಂಗ್ ಸ್ಟಾರ್ | Darshan | Vinod Prabhakar | Filmibeat Kannada

  ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಜುಲೈ 16 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ತೆಲುಗು ಡಬ್ಬಿಂಗ್ ವರ್ಷನ್ ಬಿಡುಗಡೆ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ನಿರ್ಮಾಪಕ ದಿಲ್ ರಾಜು ಸಿನಿಮಾದ ವಿತರಣೆ ಹಕ್ಕನ್ನು ಖರೀದಿಸಿದ್ದಾರೆ.

  English summary
  Yash's old movie Gajakesari Telugu dubbed version releasing On March 05 in both Telugu states.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X