ಕನ್ನಡ ಚಿತ್ರರಂಗ ಚಿಕ್ಕದು ಎಂದಿದ್ದ ನಿರ್ಮಾಪಕ ಎಷ್ಟು ಕೋಟಿಗೆ 'ಟಾಕ್ಸಿಕ್' ರೈಟ್ಸ್ ತಗೊಂಡಿದ್ದಾರೆ ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ಆರ್ಭಟ ಶುರುವಾಗಿದೆ. ಇಷ್ಟು ದಿನ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಅಂತ ಬ್ಯುಸಿಯಾಗಿದ್ದ ಚಿತ್ರತಂಡ ಈಗ ವ್ಯವಹಾರ ಕುದುರಿಸುತ್ತಿದೆ. ಆಂಧ್ರ, ತೆಲಂಗಾಣದ ಥ್ರಿಯೇಟ್ರಿಕಲ್ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

ಮಾರ್ಚ್ 19ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಬಿಡುಗಡೆ ಆಗಲಿದೆ. ಗೀತು ಮೋಹನ್ ನಿರ್ದೇಶನದ ಸಿನಿಮಾ ಮೇಕಿಂಗ್ ಹಂತದಲ್ಲೇ ಭಾರೀ ಸದ್ದು ಮಾಡಿತ್ತು. ಶೀಘ್ರದಲ್ಲೇ ಸಿನಿಮಾ ಪ್ರಚಾರ ಆರಂಭವಾಗಲಿದೆ. ಸಿನಿಮಾ ಬಿಡುಗಡೆಗೆ ಇನ್ನು 45 ದಿನ ಮಾತ್ರ ಬಾಕಿಯಿದೆ.

Yash s Toxic film Creates Record Buzz Andhra-Telangana Rights Sold to Dil Raju for 120 Crore

ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಇಂಗ್ಲೀಷ್ ಭಾಷೆಯಲ್ಲಿ ಕೂಡ ಸಿನಿಮಾ ಚಿತ್ರೀಕರಣವಾಗಿದ್ದು ಏಕಕಾಲಕ್ಕೆ ದೊಡ್ಟಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ದುಡಿಯುತ್ತಿದ್ದಾರೆ. ಮುಖ್ಯವಾಗಿ ಯೂರೋಪ್ ಭಾಷೆಗಳಿಗೆ ಚಿತ್ರವನ್ನು ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ.

'ಟಾಕ್ಸಿಕ್' ಸಿನಿಮಾ ಬಗ್ಗೆ ಪರಭಾಷಿಕರಲ್ಲಿ ಕೂಡ ಕುತೂಹಲ ಇದೆ. ಕೆಜಿಎಫ್ ಸರಣಿ ಸಿನಿಮಾಗಳು ದೇಶದ ಮೂಲೆ ಮೂಲೆಯಲ್ಲಿ ಯಶ್ ಅಭಿಮಾನಿಗಳನ್ನು ಸೃಷ್ಟಿಸಿದೆ. ಅವರೆಲ್ಲರೂ ಈ ಚಿತ್ರಕ್ಕಾಗಿ ಬೆರಗುಗಣ್ಣಿನಿಂದ ಕಾಯುತ್ತಿದ್ದಾರೆ. ಹಾಗಾಗಿ ಬೇಡಿಕೆಗೆ ತಕ್ಕಂತೆ ರೈಟ್ಸ್ ಮಾರಾಟ ಮಾಡಲಾಗ್ತಿದೆ. ಸದ್ಯ ಆಂಧ್ರ, ತೆಲಂಗಾಣ ರೈಟ್ಸ್ ಸೇಲ್ ಆಗಿದೆ.

Yash s Toxic film Creates Record Buzz Andhra-Telangana Rights Sold to Dil Raju for 120 Crore

ತೆಲುಗು ರಾಜ್ಯಗಳ ಡಿಸ್ಟ್ರಿಬ್ಯೂಷನ್ ರೈಟ್ಸ್ ದಿಲ್ ರಾಜು ಪಾಲಾಗಿದೆ. 120 ಕೋಟಿ ರೂ.ಗೂ ಡೀಲ್ ಕುದುರಿಸಲಾಗಿದೆ. ತೆಲುಗು ಮೂಲದ್ದಲ್ಲದ ಚಿತ್ರವೊಂದರ ಅತಿದೊಡ್ಡ ದಾಖಲೆ ಒಪ್ಪಂದ ಇದು. ಈ ಹಿಂದೆ 'ವಾರ್- 2' ಹಾಗೂ 'ಕಾಂತಾರ- 1' ಚಿತ್ರಗಳ ರೈಟ್ಸ್ ಕೂಡ ದಾಖಲೆ ಬೆಲೆಗೆ ಬಿಕರಿಯಾಗಿತ್ತು. ಅದನ್ನು ಮೀರಿ 'ಟಾಕ್ಸಿಕ್' ಸಿನಿಮಾ ಸಂಚಲನ ಸೃಷ್ಟಿಸಿದೆ.

ಬಾಲಿವುಡ್ 'ವಾರ್- 2' ಚಿತ್ರದಲ್ಲಿ ತೆಲುಗು ನಟ ಜ್ಯೂ. ಎನ್‌ಟಿಆರ್ ನಟಿಸಿದ್ದರು. ಹೃತಿಕ್ ರೋಷನ್ ಎದುರು ಅಬ್ಬರಿಸಿದ್ದರು. ಹಾಗಾಗಿ ತೆಲುಗು ರಾಜ್ಯಗಳಲ್ಲಿ ಭಾರೀ ನಿರೀಕ್ಷೆ ಇತ್ತು. ಅದಕ್ಕೆ ತಕ್ಕಂತೆ 80-90 ಕೋಟಿ ರೂ.ಗೆ ರೈಟ್ಸ್ ಮಾರಾಟವಾಗಿತ್ತು. 'ಕಾಂತಾರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿ ಪ್ರೀಕ್ವೆಲ್ ಹೈಪ್ ಕ್ರಿಯೇಟ್ ಮಾಡಿದ್ದು ಗೊತ್ತೇಯಿದೆ. 'ಕಾಂತಾರ'-1 ಚಿತ್ರದ ಆಂಧ್ರ, ತೆಲಂಗಾಣ ರೈಟ್ಸ್ 100 ಕೋಟಿ ರೂ.ಗೂ ಡೀಲ್ ಆಗಿತ್ತು ಎನ್ನುವ ಮಾತುಗಳು ಕೇಳಿಬಂದಿತ್ತು. ಅದನ್ನೆಲ್ಲಾ ಮೀರಿ ಈಗ 'ಟಾಕ್ಸಿಕ್' ಸಿನಿಮಾ ಸಂಚಲನ ಸೃಷ್ಟಿಸಿದೆ.

ಕನ್ನಡ ಚಿತ್ರರಂಗ ಚಿಕ್ಕದು. ಅವ್ರು ಹೆಚ್ಚು ಅಂದ್ರೆ 5 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಮಾಡ್ತಾರೆ ಎಂದುಕೊಂಡಿದ್ದೆವು ಎಂದು ನಿರ್ಮಾಪಕ ದಿಲ್‌ ರಾಜು ಹೇಳಿದ್ದರು. ಕೂಡಲೇ ಅದೇ ವೇದಿಕೆಯಲ್ಲಿ ಯಶ್ ತಿರುಗೇಟು ನೀಡಿದ್ದರು. ನಮ್ಮ ಕನ್ನಡ ಸಿನಿಮಾಗಳು 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿವೆ. ಅದು ಪರಭಾಷೆಯ ಕೆಲವರಿಗೆ ಗೊತ್ತಿಲ್ಲ. ಅದಕ್ಕೆ ಕಾರಣ ಏನು ಎನ್ನುವುದು ಗೊತ್ತಿಲ್ಲ" ಎಂದಿದ್ದರು. ಈಗ ಅದೇ ದಿಲ್ ರಾಜು 120 ಕೋಟಿ ರೂ. ಕೊಟ್ಟು 'ಟಾಕ್ಸಿಕ್' ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿದ್ದಾರೆ.

ಯಶ್ ಜೊತೆ ನಯನತಾರಾ, ಕಿಯಾರಾ ಅದ್ವಾನಿ, ರುಕ್ಮಿಣಿ ವಸಂತ್ ಸೇರಿ ದೊಡ್ಡ ತಾರಾಗಣ 'ಟಾಕ್ಸಿಕ್' ಚಿತ್ರದಲ್ಲಿದೆ. ರಾಜೀವ್ ರವಿ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. 'ಧುರಂಧರ್'- 2 ಎದುರು 'ಟಾಕ್ಸಿಕ್' ಸಿನಿಮಾ ತೆರೆಗಪ್ಪಳಿಸುತ್ತಿದೆ.

More from Filmibeat

Read more about: toxic yash tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X