'ಪುಷ್ಪ'ರಾಜ್ ಆರ್ಭಟ ಫುಲ್ ಡಲ್ಲು: ಟೀಸರ್ ಫೇಕ್ ವೀವ್ಸ್ ತೋರಿಸ್ತಿದ್ದಾರಾ?

ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಪುಷ್ಪ'-2 ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಗಂಗಮ್ಮ ವೇಷದಲ್ಲಿ 'ಪುಷ್ಪ'ರಾಜ್ ಅಬ್ಬರಿಸಿದ್ದಾನೆ. ಸ್ಟೈಲಿಶ್ ಸ್ಟಾರ್ ಲುಕ್ಕು, ಆರ್ಭಟ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಟೀಸರ್ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರ ಮನಗೆಲ್ಲಲಿಲ್ಲ.

ದೇವಿಶ್ರೀ ಪ್ರಸಾದ್ ಬಿಜಿಎಂ, ಗಂಗಮ್ಮ ಜಾತ್ರೆ ಸೆಟ್ಟು, ಸ್ತ್ರೀ ವೇಷದಲ್ಲಿ ಅಲ್ಲು ಅರ್ಜುನ್ ಲುಕ್, ಫೈಟ್ ಎಲ್ಲವೂ ಚೆನ್ನಾಗಿದೆ. ಆದರೂ ಏನೋ ಮಿಸ್ಸಿಂಗ್ ಎನ್ನುವ ಚರ್ಚೆ ನಡೀತಿದೆ. ಇದೇ ಕಾರಣಕ್ಕೆ ಟೀಸರ್‌ಗೆ ನಿರೀಕ್ಷಿತ ಮಟ್ಟದಲ್ಲಿ ರೆಸ್ಪಾನ್ಸ್ ಸಿಗುತ್ತಿಲ್ಲ. ಸೋಮವಾರ(ಏಪ್ರಿಲ್ 8) ಬೆಳಗ್ಗೆ 11 ಗಂಟೆ ಸುಮಾರಿಗೆ ಬಿಡುಗಡೆ ಆಗಿದ್ದ ಝಲಕ್‌ಗೆ ಈವರೆಗೆ 8 ಕೋಟಿ 70 ಲಕ್ಷಕ್ಕೂ ಅಧಿಕ ವೀವ್ಸ್ ಸಿಕ್ಕಿದೆ. 10 ಲಕ್ಷಕ್ಕೂ ಹೆಚ್ಚು ಲೈಕ್ಸ್ ಕೊಟ್ಟಿದ್ದಾರೆ.

Yash starrer Kgf-2 teaser is better than allu arjun s Pushpa-2

2 ವರ್ಷಗಳ ಹಿಂದೆ 'ಪುಷ್ಪ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇದೀಗ ಅದರ ಸೀಕ್ವೆಲ್ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ಸಾಮಾನ್ಯವಾಗಿ ಪ್ರೀಕ್ವೆಲ್‌ಗಿಂತ ಸೀಕ್ವೆಲ್ ಎಲ್ಲಾ ವಿಧದಲ್ಲೂ ದೊಡ್ಡ ಸಿನಿಮಾ ಆಗಿರುತ್ತದೆ. 'ಪುಷ್ಪ'-2 ವಿಚಾರದಲ್ಲೂ ಅದೇ ಲೆಕ್ಕಾಚಾರ ನಡೀತಿದೆ. ಆದರೆ ಟೀಸರ್ ಮಾತ್ರ ನಿರೀಕ್ಷೆ ಹುಸಿಯಾಗಿಸಿದೆ.

'KGF-2' ಟೀಸರ್ ಜೊತೆಗೆ ಕೆಲವರು 'ಪುಷ್ಪ'-2 ಟೀಸರ್ ಹೋಲಿಕೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. 'KGF' ರೀತಿಯಲ್ಲೇ 2 ಭಾಗಗಳಾಗಿ 'ಪುಷ್ಪ' ಸಿನಿಮಾ ಬರ್ತಿದೆ. ಎರಡೂ ಸಿನಿಮಾಗಳ ವಿಚಾರದಲ್ಲಿ ಸಾಕಷ್ಟು ಸಾಮ್ಯತೆಗಳಿವೆ. 'KGF'-1 ಎಲ್ಲರ ನಿರೀಕ್ಷೆ ಮೀರಿ 250 ಕೋಟಿ ರೂ. ಗಳಿಕೆ ಕಂಡಿತ್ತು. ಅದೇ ರೀತಿಯಲ್ಲಿ 'ಪುಷ್ಪ' ದಿ ರೈಸ್ ಸಿನಿಮಾ ಕೂಡ ದಾಖಲೆ ಬರೆದಿತ್ತು. ಇನ್ನು 'ಬಾಹುಬಲಿ' ಹಾಗೂ 'KGF' ಸೀಕ್ವೆಲ್‌ಗಳಿಗೆ ಸಿಕ್ಕ ಅಡ್ವಾನ್‌ಟೇಂಜ್ 'ಪುಷ್ಪ'-2ಗೆ ಸಿಕ್ತಿದೆ. ಹಾಗಾಗಿ ಸೀಕ್ವೆಲ್ ವಿಚಾರದಲ್ಲೂ ಅದೇ ಕುತೂಹಲವಿದೆ.

Yash starrer Kgf-2 teaser is better than allu arjun s Pushpa-2

'KGF-2' ರೀತಿಯಲ್ಲೇ ಹಲವು ಪಟ್ಟು ದೊಡ್ಡದಾಗಿ 'ಪುಷ್ಪ'-2 ನಿರ್ಮಾಣವಾಗುತ್ತಿದೆ. ಸಂಭಾವನೆ, ಬಜೆಟ್ ಎಲ್ಲಾ ವಿಚಾರದಲ್ಲೂ ಇದು ದೊಡ್ಡ ಸಿನಿಮಾ. ಹಾಗಾಗಿ ಕೆಲ ತೆಲುಗು ಪ್ರೇಕ್ಷಕರು ಕೂಡ ಎರಡೂ ಸಿನಿಮಾಗಳನ್ನು ಹೋಲಿಸಿ ನೋಡುತ್ತಿದ್ದಾರೆ. ಇನ್ನು "ಒಂದು 'ಪುಷ್ಪ' ಸಿನಿಮಾ 10 'KGF'ಗೆ ಸಮ" ಎಂದು ನಿರ್ದೇಶಕ ಸುಕುಮಾರ್ ಶಿಷ್ಯ ಬುಚ್ಚಿಬಾಬು ಹೇಳಿದ್ದರು. ಅದನ್ನೆಲ್ಲಾ ಪರಿಗಣಿಸಿ ಈಗ 'ಪುಷ್ಪ'-2 ಟೀಸರ್ ಹೇಗಿದೆ ಎನ್ನುವ ಚರ್ಚೆ ನಡೀತಿದೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ 'KGF-2' ಸೃಷ್ಟಿಸಿದ ಸಂಚಲನ ಗೊತ್ತೇಯಿದೆ. ಇವತ್ತಿಗೂ ಆ ಟೀಸರ್ ಕಟ್ ಮತ್ಯಾವುದರಲ್ಲೂ ಕಂಡಿಲ್ಲ. 'ಪುಷ್ಪ'-2 ಅಂತೂ ಬಹಳ ಹಿಂದೆಯೇ ಉಳಿದುಬಿಟ್ಟಿದೆ. ಈ ಟೀಸರ್ ಕಟ್ ಥ್ರಿಲ್ ಕೊಡುವಲ್ಲಿ ಸಕ್ಸಸ್ ಕಂಡಿಲ್ಲ. ಅಷ್ಟಾಗಿ ಮಜಾ ಕೊಡುತ್ತಿಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 24 ಗಂಟೆಗಳಲ್ಲಿ ಟೀಸರ್ 8 ಕೋಟಿ 50 ಲಕ್ಷ ವೀವ್ಸ್ ಸಾಧಿಸಿದೆ ಎಂದು ಚಿತ್ರತಂಡ ಘೋಷಿಸಿದೆ. ಆದರೆ ಕೇವರ 4 ಕೋಟಿ ವೀವ್ಸ್ ಅಷ್ಟೇ ಆಗಿರುವುದು ಎಂದು ಕೆಲವರು ವಾದಿಸುತ್ತಿದ್ದಾರೆ.

ಸುಕುಮಾರ್ ನಿರ್ದೇಶನದ 'ಪುಷ್ಪ'-2 ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಫಹಾಸ್ ಫಾಸಿಲ್, ಧನಂಜಯ್, ಅನಸೂಯ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರಮೋಷನ್, ರಿಲೀಸ್‌ಗೆ ಚಿತ್ರತಂಡ ಮುಂದಾಗಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ತೆರೆಗೆ ತರಲಾಗುತ್ತಿದೆ.

More from Filmibeat

English summary
Fans Disappointed with Allu Arjun's Pushpa-2 teaser;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X