ಯಶ್‌20 ಬಿಗ್ ಅಪ್‌ಡೇಟ್: ರಾಕಿಂಗ್‌ ಸ್ಟಾರ್‌ ಜೊತೆ ಸಿನಿಮಾ ಖಚಿತಪಡಿಸಿದ ನಿರ್ಮಾಪಕ ದಿಲ್ ರಾಜು

ಯಶ್ ನಟನೆಯ 19ನೇ ಸಿನಿಮಾ ಯಾವ್ದು ಎನ್ನುವ ಬಗ್ಗೆ ಈವರೆಗೆ ಮಾಹಿತಿ ಸಿಕ್ಕಿಲ್ಲ. KGF ಚಾಪ್ಟರ್‌-2 ರಿಲೀಸ್ ಆಗಿ ಒಂದು ವರ್ಷ ಕಳೆದಿದೆ. ಆದರೂ ಯಶ್ ಮುಂದಿನ ಸಿನಿಮಾ ಬಗ್ಗೆ ಮೌನವಾಗಿಯೇ ಇದ್ದಾರೆ. ತೆರೆಮರೆಯಲ್ಲಿ ಹೊಸ ಸಿನಿಮಾ ಬಗ್ಗೆ ಪ್ಲ್ಯಾನ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಯಶ್ ಜೊತೆ ಸಿನಿಮಾ ಮಾಡೋದಾಗಿ ತೆಲುಗು ನಿರ್ಮಾಪಕ ದಿಲ್ ರಾಜು ಹೇಳಿದ್ದಾರೆ.

ವರ್ಷದ ಹಿಂದೆಯೇ ದಿಲ್ ರಾಜು ನಿರ್ಮಾಣದ ಚಿತ್ರದಲ್ಲಿ ಯಶ್ ನಟಿಸುವ ಬಗ್ಗೆ ಗುಸುಗುಸು ಕೇಳಿ ಬಂದಿತ್ತು. ಯಶ್‌ಗೆ 100 ಕೋಟಿ ರೂ. ಸಂಭಾವನೆ ಕೊಡಲು ತೆಲುಗು ನಿರ್ಮಾಪಕ ಸಿದ್ಧರಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿತ್ತು. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ದಿಲ್‌ ರಾಜು ತೆಲುಗಿನ ಸ್ಟಾರ್‌ ನಟರ ಜೊತೆಗೆಲ್ಲಾ ಸಿನಿಮಾ ಮಾಡಿದ್ದಾರೆ. ಇತ್ತೀಚೆಗೆ ತಮಿಳು ನಟ ದಳಪತಿ ವಿಜಯ್ ಹೀರೊ ಆಗಿ 'ವಾರಿಸು' ಸಿನಿಮಾ ಮಾಡಿ ಗೆದ್ದಿದ್ದರು. ಇದೀಗ ಯಶ್ ಜೊತೆ ಸಿನಿಮಾ ಬಗ್ಗೆ ಸುಳಿವು ನೀಡಿದ್ದಾರೆ.

Yash20: Producer Dil Raju confirms collaboration with KGF Actor Yash for Big Budget Project

20 ವರ್ಷಗಳ ಹಿಂದೆ 'ದಿಲ್' ಎನ್ನುವ ಚಿತ್ರಕ್ಕೆ ವೆಲಮಕುಚ ವೆಂಕಟ ರಮಣ ರೆಡ್ಡಿ ಬಂಡವಾಳ ಹೂಡಿದ್ದರು. ಆ ಸಿನಿಮಾ ಹಿಟ್ ನಂತರ ಅವರು ದಿಲ್ ರಾಜು ಎಂದೇ ತೆಲುಗು ಚಿತ್ರರಂಗದಲ್ಲಿ ಗುರ್ತಿಸಿಕೊಂಡರು. ತಾವು ನಿರ್ಮಿಸಿದ ಮೊದಲ ಸಿನಿಮಾ(ದಿಲ್) 20 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಭಿಮಾನಿಗಳ ಜೊತೆ ಸೋಶಿಯಲ್ ಮೀಡಿಯಾ ಚಾಟ್‌ನಲ್ಲಿ ಭಾಗಿ ಆಗಿದ್ದರು. ಈ ವೇಳೆ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ದಿಲ್ ರಾಜು ಉತ್ತರಿಸಿದ್ದಾರೆ. ಯಶ್ ಜೊತೆ ಸಿನಿಮಾ ಮಾಡ್ತೀರಾ? ಎನ್ನುವ ಅಭಿಮಾನಿಯ ಪ್ರಶ್ನೆಗೆ ಹೌದು ಎಂದು ಉತ್ತರಿಸಿದ್ದಾರೆ.

Yash20: Producer Dil Raju confirms collaboration with KGF Actor Yash for Big Budget Project

ಈ ಹಿಂದೆ ನಿರ್ಮಾಪಕ ದಿಲ್‌ ರಾಜು 50ನೇ ವರ್ಷದ ಬರ್ತ್‌ಡೇ ಪಾರ್ಟಿಯಲ್ಲಿ ಯಶ್ ಭಾಗವಹಿಸಿದ್ದರು. ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್, ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಯಶ್‌ಗೆ ಸಾಥ್ ನೀಡಿದ್ದರು. ಅಂದಿನಿಂದಲೂ ದಿಲ್ ರಾಜು ನಿರ್ಮಾಣದ ಚಿತ್ರದಲ್ಲಿ ಯಶ್ ನಟಿಸೋ ಬಗ್ಗೆ ಅನುಮಾನ ಮೂಡಿತ್ತು. ಇದೀಗ ಸ್ವತ: ದಿಲ್ ರಾಜು ಈ ಬಗ್ಗೆ ಖಚಿತ ಮಾಹಿತಿ ನೀಡಿದ್ದಾರೆ. ಈ ಸುದ್ದಿ ಕೇಳಿ ರಾಕಿಂಗ್ ಸ್ಟಾರ್ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ.

'ಆರ್ಯ', 'ಬೊಮ್ಮರಿಲ್ಲು', 'ಮುನ್ನಾ', 'ಜೋಶ್', 'ಬೃಂದಾವನಂ', 'ಮಿ. ಪರ್ಫೆಕ್ಟ್', 'ಯವಡು', 'ದುವ್ವಾಡೆ ಜಗನ್ನಾಥಂ', 'ಎಫ್‌2', 'ವಕೀಲ್ ಸಾಬ್' ಸೇರಿದಂತ ಹಲವು ಹಿಟ್ ಸಿನಿಮಾಗಳನ್ನು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಸದ್ಯ ಶಂಕರ್ ಹಾಗೂ ರಾಮ್‌ಚರಣ್ ಕಾಂಬಿನೇಷನ್‌ 'ಗೇಮ್‌ ಚೇಂಜರ್' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗ್ತಿದೆ. ಪ್ರಭಾಸ್ ಜೊತೆಗೂ ಮತ್ತೊಂದು ಸಿನಿಮಾ ಮಾಡೋದಾಗಿ ದಿಲ್ ರಾಜು ಹೇಳಿದ್ದಾರೆ.

ಅಭಿಮಾನಿಗಳ ಜೊತೆ ನಡೆಸಿದ ಟ್ವೀಟ್ ಚಾಟ್‌ನಲ್ಲಿ ಚಿರಂಜೀವಿ, ಪವನ್ ಕಲ್ಯಾಣ್, ಬಾಲಕೃಷ್ಣ ಜೊತೆಗೆ ಸಿನಿಮಾ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ. 'ಜಟಾಯು' ನನ್ನ ಡ್ರೀಮ್ ಪ್ರಾಜೆಕ್ಟ್. ನುರಿತ ತಂತ್ರಜ್ಞರು, ಕಲಾವಿದರ ತಂಡ ಸಿಕ್ಕಿದರೆ ಬಹಳ ದೊಡ್ಡಮಟ್ಟದಲ್ಲಿ ಆ ಸಿನಿಮಾ ಮಾಡ್ತೀನಿ ಎಂದಿದ್ದಾರೆ. ಚಿತ್ರರಂಗಕ್ಕೆ ಬರುವ ಹೊಸಬರರಿಗೆ "ಫೋಕಸ್ ಆಗಿ ಕೆಲಸ ಮಾಡಿ, ಪ್ಯಾಷನ್, ಡಿಡಿಕೇಷನ್ ಇರಬೇಕು. ಪ್ರತಿ ಚಿತ್ರವನ್ನು ಮೊದಲ ಸಿನಿಮಾ ಎನ್ನುವಂತೆ ಮಾಡಿ ಎಂದು ಕಿವಿಮಾತು ಹೇಳಿದ್ದಾರೆ.

ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುವ ಸಾಧ್ಯತೆಯಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಸಿನಿಮಾ ನಿರ್ಮಾಣ ಮಾಡುವ ಸಾಧ್ಯತೆಯಿದೆ. ಆದರೆ ಯಾರು ಸಿನಿಮಾ ನಿರ್ದೇಶನ ಮಾಡುತ್ತಾರೆ? ಕಥೆ ಏನು? ಸಿನಿಮಾ ನಿರ್ಮಾಣದಲ್ಲಿ ಯಶ್ ಕೂಡ ಕೈ ಜೋಡಿಸುತ್ತಾರಾ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

More from Filmibeat

English summary
Yash20: Producer Dil Raju confirms collaboration with KGF Actor Yash for Big Budget Project. Dil Raju recently interacted with his fans on Twitter. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X