For Quick Alerts
  ALLOW NOTIFICATIONS  
  For Daily Alerts

  ಜಿಲೇಬಿ ಕೊಟ್ಟಿದ್ದಕ್ಕೆ ಪ್ರೀತಿಯ ಅಪ್ಪುಗೆ: ಸದಾ ನನ್ನೊಟ್ಟಿಗೆ ಇದ್ದಿದ್ದಕ್ಕೆ ಥ್ಯಾಂಕ್ಸ್ ಎಂದ ಸಮಂತಾ

  |

  ಟಾಲಿವುಡ್ ಬ್ಯೂಟಿ ಸಮಂತಾ 'ಯಶೋದ' ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಮಯೋಸೈಟಿಸ್ ಎನ್ನುವ ದೀರ್ಘಕಾಲದ ಸ್ನಾಯು ರೋಗದಿಂದ ಬಳಲುತ್ತಿದ್ದರೂ ಪಾತ್ರಕ್ಕೆ ಡಬ್ಬಿಂಗ್ ಮಾಡಿ ಪ್ರಚಾರ ಕೂಡ ಮಾಡಿದ್ದರು. ಈ ಮೆಡಿಕಲ್ ಸ್ಕ್ಯಾಮ್ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.

  ಇತ್ತೀಚೆಗೆ ಸಮಂತಾ ಮಯೋಸೈಟಿಸ್ ಕಾಯಿಲೆಯ ವಿರುದ್ಧ ಹೋರಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಆಕೆ ಶೀಘ್ರ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳ ಆಪ್ತರು ಪ್ರಾರ್ಥಿಸುತ್ತಿದ್ದಾರೆ. ಅನಾರೋಗ್ಯದ ನಡುವೆಯೇ ಸಮಂತಾ ಲೀಡ್ ರೋಲ್‌ನಲ್ಲಿ ನಟಿಸಿರುವ 'ಯಶೋದ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡ್ತಿದೆ. ಚಿತ್ರ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿದೆ. ಸ್ಯಾಮ್ ನಟನೆಯ ಪ್ರಶಂಸೆಯ ಸುರಿಮಳೆ ಆಗುತ್ತಿದೆ. ಅದರಲ್ಲೂ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಭರ್ಜರಿ ಪರ್ಫಾರ್ಮೆನ್ಸ್ ಮೂಲಕ ಗಮನ ಸೆಳೆದಿದ್ದಾರೆ.

  ಸಮಂತಾ 'ಯಶೋದಾ' ಚಿತ್ರದ ಫಸ್ಟ್ ಡೇ ಕಲೆಕ್ಷನ್ ಬಹಿರಂಗ; ಮಾಜಿ ಪತಿ ಚಿತ್ರಕ್ಕಿಂತಲೂ ಹೆಚ್ಚು!ಸಮಂತಾ 'ಯಶೋದಾ' ಚಿತ್ರದ ಫಸ್ಟ್ ಡೇ ಕಲೆಕ್ಷನ್ ಬಹಿರಂಗ; ಮಾಜಿ ಪತಿ ಚಿತ್ರಕ್ಕಿಂತಲೂ ಹೆಚ್ಚು!

  ಅತಿಯಾದ ವರ್ಕೌಟ್‌ನಿಂದ ಸಮಂತಾ ಮಯೋಸೈಟಿಸ್ ಸಮಸ್ಯೆಗೆ ತುತ್ತಾದರಾ? ಎನ್ನುವ ಸಂಶಯವನ್ನು ಕೂಡ ಕೆಲವರು ವ್ಯಕ್ತಪಡಿಸಿದ್ದರು. ಆದರೆ ಆಕೆ ಮಾತ್ರ ವರ್ಕೌಟ್ ಮಾಡುವುದನ್ನು ಇನ್ನು ನಿಲ್ಲಿಸಿಲ್ಲ. ಜಿಮ್‌ನಲ್ಲಿ ಕಸರತ್ತು ನಡೆಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.

  ಜಿಲೇಬಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್

  ಜಿಲೇಬಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್

  ಜಿಮ್‌ನಲ್ಲಿ ವರ್ಕೌಟ್ ಮಾಡುವವರು ಸ್ವೀಟ್ ಹೆಚ್ಚು ತಿನ್ನಬಾರದು ಎನ್ನುತ್ತಾರೆ. ಅದರಲ್ಲೂ ಕೋಚ್ ಹೇಳಿದಂತೆ ಡಯೆಟ್ ಫಾಲೋ ಮಾಡಲೇಬೇಕು. ಇಷ್ಟು ದಿನ ಸಮಂತಾ ತನಗಿಷ್ಟವಾದ ಜಿಲೇಬಿ ತಿನ್ನುವುದಕ್ಕೆ ಜಿಮ್ ಕೋಚ್ ಜುನೇದ್ ಶೈಕ್ ಒಪ್ಪುತ್ತಿರಲಿಲ್ಲವಂತೆ. ಆದರೆ 'ಯಶೋದ' ಸಕ್ಸಸ್ ಸಂಭ್ರಮದಲ್ಲಿ ಆತನೇ ಜಿಲೇಬಿ ತಂದು ಸ್ಯಾಮ್‌ಗೆ ಕೊಟ್ಟಿದ್ದಾನೆ. ಇದರಿಂದ ಆಕೆ ಖುಷಿಯಾಗಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

  ಸಮಂತಾ ವರ್ಕೌಟ್ ಮಾಡಿ ತೂಕ ಇಳಿಸಿದ್ದಾರೆ. "ನಾನು ನನ್ನಿಷ್ಟದ ಜಿಲೇಬಿ ತಿನ್ನಲು ಅರ್ಹಳಾಗಲು ಸಾಕಷ್ಟು ಕಷ್ಟಪಟ್ಟಿದ್ದೇನೆ ಎಂದು ಜುನೈದ್ ಎಂದಿಗೂ ಯೋಚಿಸಿರಲಿಲ್ಲ. ಆದರೆ 'ಯಶೋದ' ಚಿತ್ರದ ಸಕ್ಸಸ್ ಅದರಲ್ಲೂ ಆಕ್ಷನ್ ಸೀಕ್ವೆನ್ಸ್ ನೋಡಿ ನನಗೆ ಜಿಲೇಬಿ ತಂದುಕೊಟ್ಟಿದ್ದಾನೆ" ಎಂದು ಸಮಂತಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ತಾವು ವರ್ಕೌಟ್‌ ಮಾಡುತ್ತಿರುವ ವಿಡಿಯೋ ಹಾಗೂ ದಿನದಿಂದ ದಿನಕ್ಕೆ ಎಷ್ಟು ತೂಕ ಇಳಿಸಿದ್ದೇನೆ ಎನ್ನುವುದರ ಫೋಟೊ ಶೇರ್ ಮಾಡಿದ್ದಾರೆ.

  "ಕಳೆದ ಕೆಲ ದಿನಗಳಿಂದ ಇವೆಲ್ಲವನ್ನು ನೋಡಿದ ಕೆಲ ವ್ಯಕ್ತಿಗಳಲ್ಲಿ ನೀವು(ಕೋಚ್ ಜುನೈದ್ ಶೇಖ್) ಕೂಡ ಇದ್ದೀರಾ. ಬಲಹೀನತೆ, ಕಣ್ಣೀರು, ಹೆಚ್ಚು ಡೋಸ್ ಸ್ಟೆರಾಯಿಡ್ ಥೆರಪಿಗಳಿಂದ ಈಗ ಈ ರೀತಿ ಇದ್ದೀನಿ. ನೀವು ನನ್ನನ್ನು ಬಿಟ್ಟುಕೊಡಲು ಬಿಡಲಿಲ್ಲ. ನಾನು ಎಂದಿಗೂ ಬಿಟ್ಟುಕೊಡಲು ಬಿಡುವುದಿಲ್ಲ ಎಂದು ನನನಗೆ ತಿಳಿದಿದೆ" ಎಂದು ಕೋಚ್ ಜುನೈದ್ ಶೇಖ್‌ಗೆ ಸಮಂತಾ ಧನ್ಯವಾದ ತಿಳಿಸಿದ್ದಾರೆ.

  ನೋವಿನ ನಡುವೆಯೂ ವರ್ಕೌಟ್

  ನೋವಿನ ನಡುವೆಯೂ ವರ್ಕೌಟ್

  ನಟಿ ಸಮಂತಾ ಫಿಟ್‌ನೆಸ್‌ ಫ್ರೀಕ್ ಎನ್ನುವುದು ಗೊತ್ತೇಯಿದೆ. ಬಹಳ ಭಾರ ಎತ್ತಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುತ್ತಾರೆ. ಕಳೆದ 3 ತಿಂಗಳಿನಿಂದ ಮಯೋಸೈಟಿಸ್‌ ಸಮಸ್ಯೆ ವಿರುದ್ಧ ಹೋರಾಡುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಐವಿ ಡ್ರಿಪ್ ನೀಡೆಲ್ ಕೈಯಲ್ಲಿಟ್ಟುಕೊಂಡೇ ಜಿಮ್‌ನಲ್ಲಿ ಸಮಂತಾ ಕಸರತ್ತು ನಡೆಸಿದ್ದಾರೆ. ಅದರ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈಗಲೇ ವರ್ಕೌಟ್ ಬೇಡ, ಸ್ವಲ್ಪ ದಿನ ರೆಸ್ಟ್ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ.

  'ಯಶೋದ' ಚಿತ್ರಕ್ಕೆ ಸಖತ್ ರೆಸ್ಪಾನ್ಸ್

  'ಯಶೋದ' ಚಿತ್ರಕ್ಕೆ ಸಖತ್ ರೆಸ್ಪಾನ್ಸ್

  ಮೆಡಿಕಲ್ ಸ್ಕ್ಯಾಮ್ ಕುರಿತಾದ 'ಯಶೋದ' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರದಲ್ಲಿ ಸರೋಗಸಿ ವಿಧಾನದ ಬಾಡಿಗೆ ತಾಯಿ ಪಾತ್ರದಲ್ಲಿ ಸಮಂತಾ ನಟಿಸಿದ್ದಾರೆ. ಹರಿ ಹಾಗೂ ಹರೀಶ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರ 5 ಭಾಷೆಗಳಲ್ಲಿ ತೆರೆಗೆ ಬಂದಿದೆ. ಬಾಕ್ಸಾಫೀಸ್‌ನಲ್ಲಿ ಮೊದಲ ದಿನವೇ 3.20 ಕೋಟಿ ರೂ. ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡುತ್ತಿದೆ. ಟೈಟಲ್‌ ರೋಲ್‌ನಲ್ಲಿ ಚೆನ್ನೈ ಚೆಲುವೆ ಸಮಂತಾ ಪರ್ಫಾರ್ಮೆನ್ಸ್‌ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

  English summary
  Yashoda movie success Samantha Ruth Prabhu thanks to her fitness trainer. Samantha took to her Instagram handle and shared a pic with Junaid Shaikh and also Post Workout Video. know more.
  Sunday, November 13, 2022, 9:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X