'ಯೇ ಮಾಯಾ ಚೆಸಾವೇ' 13: ಕಾರ್ತಿಕ್‌ನ ಮರೆತ ಸಮಂತಾ: ಜೆಸ್ಸಿನ ನೆನಪಿಸಿಕೊಂಡ ಚೈತನ್ಯಾ!
ನಾಗಚೈತನ್ಯಾ- ಸಮಂತಾ ನಟನೆಯ 'ಯೇ ಮಾಯಾ ಚೆಸಾವೇ' ಚಿತ್ರ 13 ವರ್ಷ ಪೂರೈಸಿದೆ. ಸೋಶಿಯಲ್ ಮೀಡಿಯಾದಲ್ಲಿ ಚೈ ಹಾಗೂ ಸ್ಯಾಮ್ ಇಬ್ಬರೂ ಈ ಸಂತಸವನ್ನು ಹಂಚಿಕೊಂಡಿದ್ದಾರೆ. ಆದರೆ ಇಬ್ಬರು ಪೋಸ್ಟ್‌ನಲ್ಲಿ ವ್ಯತ್ಯಾಸವಿದೆ. ಇದೇ ಈಗ ಹಾಟ್ ಟಾಪಿಕ್ ಆಗಿದೆ. ಇನ್ನು ಈ ಸಿನಿಮಾ ಮೂಲಕ ಸಮಂತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಹಾಗಾಗಿ ಸ್ಯಾಮ್ ಸಿನಿಕರಿಯರ್‌ಗೂ 13 ವರ್ಷ ತುಂಬಿದಂತಾಗಿದೆ.
ಫೆ. 26, 2010ರಲ್ಲಿ 'ಯೇ ಮಾಯಾ ಚೆಸಾವೇ' ಸಿನಿಮಾ ರಿಲೀಸ್ ಆಗಿತ್ತು. ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಈ ಸಿನಿಮಾ ಏಕಕಾಲಕ್ಕೆ ತೆಲುಗು, ತಮಿಳಿನಲ್ಲಿ ನಿರ್ಮಾಣವಾಗಿತ್ತು. ತಮಿಳಿನಲ್ಲಿ ಸಿಂಬು ಹಾಗೂ ತ್ರಿಶಾ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದರು. ಚಿತ್ರದಲ್ಲಿ ಅನ್ಯ ಧರ್ಮಿಯ ಹುಡುಗ ಹುಡುಗಿ ಪ್ರೀತಿಸಿ ಮದುವೆ ಆಗುವ ಕಥೆ ಇದೆ. ಕಾರ್ತಿಕ್ ಶಿವಕುಮಾರ್ ಆಗಿ ನಾಗಚೈತನ್ಯಾ ನಟಿಸಿದ್ದರೆ ಜೆಸ್ಸಿ ತೆಕ್ಕೆಕುಟ್ಟು ಆಗಿ ಸಮಂತಾ ಮಿಂಚಿದ್ದರು.

ಈ ಸಿನಿಮಾ ಶೂಟಿಂಗ್ ಸಮಯದಲ್ಲೇ ಚೈ-ಸ್ಯಾಮ್ ಜೋಡಿ ನಡುವೆ ಪ್ರೀತಿ ಹುಟ್ಟಿತ್ತು. ಅದು ನಿಧಾನವಾಗಿ ಬೆಳೆದು ಮುಂದೆ ಜೋಡಿ ಕದ್ದು ಮುಚ್ಚಿ ಓಡಾಡಲು ಆರಂಭಿಸಿದರು. 3 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದರು. ಪೋಷಕರ ಒಪ್ಪಿಗೆ ಪಡೆದು 2017ರಲ್ಲಿ ಗೋವಾದಲ್ಲಿ ಜೋಡಿ ಹಸೆಮಣೆ ಏರಿತ್ತು. ನಿಜ ಜೀವನದಲ್ಲಿ ಸಮಂತಾ ಕ್ರಿಶ್ಚಿಯನ್. ಹಾಗಾಗಿ ಎರಡೂ ಸಂಪ್ರದಾಯಗಳಂತೆ ಜೋಡಿ ಹೊಸ ಬಾಳಿಗೆ ಕಾಲಿಟ್ಟಿತ್ತು. ಇಬ್ಬರು ಪ್ರಣ ಪಕ್ಷಿಗಳಂತೆ ಸುತ್ತಾಡಿಕೊಂಡಿದ್ದರು. ಆದರೆ ಇದ್ದಕ್ಕಿದಂತೆ ಜೋಡಿ ಡಿವೋರ್ಸ್ ತೆಗೆದುಕೊಳ್ಳತ್ತೆ ಎನ್ನುವ ಗುಸುಗುಸು ಶುರುವಾಯಿತು.
ಪರಸ್ಪರ ಪ್ರೀತಿಸಿ ಮದುವೆಯಾದ ಜೋಡಿ ಡಿವೋರ್ಸ್ ತೆಗೆದುಕೊಳ್ಳುತ್ತಾರೆ ಎಂದಾಗ ಮೊದಲು ಯಾರು ನಂಬಲಿಲ್ಲ. ಆದರೆ 2021 ಅಕ್ಟೋಬರ್‌ನಲ್ಲಿ ಜೋಡಿ ಸೋಶಿಯಲ್ ಮೀಡಿಯಾ ಮುಖಾಂತರ ಇಬ್ಬರು ದೂರಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ಈ ಸುದ್ದಿ ಕೇಳಿ ಟಾಲಿವುಡ್ ಚಿತ್ರರಂಗ, ಅಭಿಮಾನಿಗಳು ಶಾಕ್ ಆಗಿದ್ದರು. ಸದ್ಯ ಇಬ್ಬರು ತಮ್ಮ ಪಾಡಿಗೆ ತಾವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಸಮಂತಾ ಮಯೋಸೈಟಿಸ್ ಎನ್ನುವ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

'ಯೇ ಮಾಯಾ ಚೆಸಾವೇ' ಚಿತ್ರ 13 ವರ್ಷ ಪೂರೈಸಿದ್ದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಚೈ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಚಿತ್ರದ ಪೋಸ್ಟರ್ ಹಾಕಿದ್ದಾರೆ. ಚಿತ್ರದ ಫೋಟೊವೊಂದನ್ನು ಶೇರ್ ಮಾಡಿದ್ದಾರೆ. ಜೆಸ್ಸಿ ಸಮಂತಾ ಇರುವಂತಹ ಫೋಟೊವನ್ನು ಚೈತು ಹಾಕಿಕೊಂಡಿದ್ದಾರೆ. ಆದರೆ ಸಮಂತಾ ಮಾತ್ರ ಜೆಸ್ಸಿ ಪಾತ್ರದ ವಿವಿಧ ಫೋಟೊಗಳನ್ನು ಕೊಲಾಜ್ ಮಾಡಿ ಹಾಕಿಕೊಂಡಿದ್ದಾರೆ. ಇದರಲ್ಲಿ ನಾಗಚೈತನ್ಯ ಕಾಣುತ್ತಿಲ್ಲ.
ಸಮಂತಾ- ಚೈತನ್ಯಾ ಪೋಸ್ಟ್‌ಗಳನ್ನು ನೋಡಿ ಅಭಿಮಾನಿಗಳು ಹೊಸ ಚರ್ಚೆ ಶುರು ಮಾಡಿದ್ದಾರೆ. ಚೈತು ಇನ್ನು ಸ್ಯಾಮ್‌ನ ಮರೆತ್ತಿಲ್ಲ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಸ್ಯಾಮ್ ಸಂಪೂರ್ಣವಾಗಿ ಚೈತುನ ಮರೆತುಬಿಟ್ಟಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ನಲ್ಲಿ 13 ವರ್ಷಗಳ ಹಿಂದೆ ರಿಲೀಸ್ ಆಗಿದ್ದ 'ಯೇ ಮಾಯಾ ಚೆಸಾವೇ' ಸಿನಿಮಾ ಸಿನಿರಸಿಕರ ಮನಗೆದ್ದಿತ್ತು. ಚಿತ್ರದ ಪ್ರತಿ ಹಾಡು, ಪ್ರತಿ ಸನ್ನಿವೇಶ ಅಭಿಮಾನಿಗಳ ಕಣ್ಣ ಮುಂದಿದೆ.
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ನಾಗಚೈತನ್ಯಾ 'ಕಸ್ಟಡಿ' ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಮಂತಾ ನಟನೆಯ 'ಶಾಕುಂತಲಂ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ವಿಜಯ್ ದೇವರಕೊಂಡ ಜೊತೆ 'ಖುಷಿ' ಸಿನಿಮಾ ಚಿತ್ರೀಕರಣ ನಡೆಯಬೇಕಿದೆ. ಇನ್ನು ಬಾಲಿವುಡ್ ವೆಬ್ ಸೀರಿಸ್ ಒಂದನ್ನು ಸ್ಯಾಮ್ ಒಪ್ಪಿಕೊಂಡಿದ್ದಾರೆ. ಮಯೋಸೈಟಿಸ್‌ನಿಂದ ಬಳಲುತ್ತಿರುವುದರಿಂದ ಸಮಂತಾ ಸಿನಿಮಾ ಕೆಲಸಗಳು ತಡವಾಗುತ್ತಿದೆ. ಕೊನೆಯದಾಗಿ ಸಮಂತಾ ನಟನೆಯ 'ಯಶೋದ' ಸಿನಿಮಾ ಬಿಡುಗಡೆ ಆಗಿತ್ತು.


Click it and Unblock the Notifications











