For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಮಾಡಲು ದುಡ್ಡಿನ ಕೊರತೆ?: ಟಾಲಿವುಡ್‌ನಲ್ಲಿ ಶುರುವಾಯ್ತು ತಳಮಳ

  |

  ಅದ್ಧೂರಿ ವೆಚ್ಚದ ಸಿನಿಮಾಗಳನ್ನು ನಿರ್ಮಿಸುವುದರಲ್ಲಿ ತೆಲುಗು ಚಿತ್ರರಂಗ ಹೆಸರುವಾಸಿ. ಸಣ್ಣಪುಟ್ಟ ದೃಶ್ಯಗಳಿಗೂ ಕೋಟಿಗಟ್ಟಲೆ ಹಣ ಸುರಿಯುವ ಮಟ್ಟಕ್ಕೆ ಟಾಲಿವುಡ್ ಬೆಳೆದಿದೆ. ಆದರೆ ಗುರುವಾರದಿಂದ ಟಾಲಿವುಡ್‌ನಲ್ಲಿ ತಳಮಳ ಶುರುವಾಗಿದೆ. ಕೆಲವು ಸಿನಿಮಾ ನಿರ್ಮಾಣ ಸಂಸ್ಥೆಗಳು ಇದ್ದಕ್ಕಿದ್ದಂತೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಅಪಾಯ ಎದುರಾಗಿದೆ

  ಹಾಗೆಂದು ಸಿನಿಮಾ ನಿರ್ಮಾಣ ಸಂಸ್ಥೆಗಳು ಆರ್ಥಿಕ ಕೊರತೆ ಎದುರಿಸುತ್ತಿವೆ ಎಂದಲ್ಲ. ಹಣವಿದ್ದರೂ ಅದನ್ನು ಬಳಸಿಕೊಳ್ಳಲಾಗದ ಪರಿಸ್ಥಿತಿ ಉಂಟಾಗಿದೆ. ಈ ಆತಂಕ, ತಳಮಳ ಉಂಟಾಗಿರುವುದು 'ಯೆಸ್ ಬ್ಯಾಂಕ್'ನಿಂದ.

   ನಾಗಾರ್ಜುನ್ ಪುತ್ರ ಅಖಿಲ್ ಗೆ ಗಾಯ: ನಡೆದ ಘಟನೆ ಏನು? ನಾಗಾರ್ಜುನ್ ಪುತ್ರ ಅಖಿಲ್ ಗೆ ಗಾಯ: ನಡೆದ ಘಟನೆ ಏನು?

  ನಿಜ. ಯೆಸ್ ಬ್ಯಾಂಕ್ ಖಾತೆದಾರರು ತಿಂಗಳಿಗೆ 50 ಸಾವಿರಕ್ಕಿಂತ ಹೆಚ್ಚು ಹಣ ಡ್ರಾ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಬಂಧ ವಿಧಿಸಿದೆ. ತೆಲುಗು ಚಿತ್ರರಂಗದಲ್ಲಿ ಅನೇಕ ದೊಡ್ಡ ನಿರ್ಮಾಣ ಸಂಸ್ಥೆಗಳು, ನಿರ್ಮಾಪಕರು, ಫೈನಾನ್ಶಿಯರ್‌ಗಳು ಯೆಸ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ.

  ನಿರ್ಮಾಣ ಸಂಸ್ಥೆಗಳ ಖಾತೆಯಿದೆ

  ನಿರ್ಮಾಣ ಸಂಸ್ಥೆಗಳ ಖಾತೆಯಿದೆ

  ತೆಲುಗಿನ ಹೆಚ್ಚಿನ ನಿರ್ಮಾಪಕರು ಯೆಸ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ. ಸಾಮಾನ್ಯವಾಗಿ ನಿರ್ಮಾಪಕರು ಹಾಗೂ ಫೈನಾನ್ಶಿಯರ್‌ಗಳು ವಿವಿಧ ಬ್ಯಾಂಕ್ ಖಾತೆಗಳಲ್ಲಿ ಲಕ್ಷ ಅಥವಾ ಕೋಟಿಗಟ್ಟಲೆ ಹಣ ಇರಿಸಿರುತ್ತಾರೆ. ಬ್ಯಾಂಕ್‌ಗಳು ನೀಡುವ ಸಾಲ, ಓವರ್ ಡ್ರಾಫ್ಟ್ ಸೇವೆ ಮುಂತಾದವುಗಳಿಗೆ ಇದರಿಂದ ಅನುಕೂಲವಾಗುತ್ತದೆ.

  50 ಸಾವಿರ ತೆಗೆಯಲು ಮಾತ್ರ ಅವಕಾಶ

  50 ಸಾವಿರ ತೆಗೆಯಲು ಮಾತ್ರ ಅವಕಾಶ

  ಕೆಲವು ಮಾಧ್ಯಮಗಳ ವರದಿ ಪ್ರಕಾರ ತೆಲುಗು ಚಿತ್ರರಂಗದ ಭಾರಿ ಮೊತ್ತದ ಹಣ ಯೆಸ್ ಬ್ಯಾಂಕ್ ಖಾತೆಯಲ್ಲಿವೆ. ಆದರೆ ಮಾಚ್ 5ರಂದು ಸಂಜೆ ಆರ್‌ಬಿಐ ಹೊರಡಿಸಿರುವ ಸೂಚನೆಯಂತೆ ಏಪ್ರಿಲ್ 3ರ ಸಂಜೆ 6 ಗಂಟೆಯವರೆಗೂ ಯೆಸ್ ಬ್ಯಾಂಕ್ ಖಾತೆಯಿಂದ ಒಟ್ಟು 50 ಸಾವಿರ ರೂ ಮಾತ್ರ ಡ್ರಾ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

  ದೊಡ್ಡ ನಿರ್ಮಾಣ ಸಂಸ್ಥೆಗಳು

  ದೊಡ್ಡ ನಿರ್ಮಾಣ ಸಂಸ್ಥೆಗಳು

  ಸುರೇಶ್ ಮೂವೀಸ್, ಗೀತಾ ಆರ್ಟ್ಸ್, ದಿಲ್ ರಾಜು ಮುಂತಾದ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಯೆಸ್ ಬ್ಯಾಂಕ್‌ನಲ್ಲಿ ಪ್ರಾಥಮಿಕ ಅಥವಾ ಸೆಕೆಂಡರಿ ಖಾತೆಗಳನ್ನು ಹೊಂದಿದ್ದಾರೆ. ಅವರದ್ದು ಒ.ಡಿ. ಖಾತೆಗಳಾಗಿದ್ದರೆ ಅಷ್ಟೇನೂ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಲಾಗಿದೆ.

  ಏರ್ಪೋರ್ಟ್ ನಲ್ಲಿ ಜಾರಿದ ವಿಜಯ್ ದೇವರಕೊಂಡ: ನೆಟ್ಟಿಗರಿಂದ ಸಖತ್ ಟ್ರೋಲ್ಏರ್ಪೋರ್ಟ್ ನಲ್ಲಿ ಜಾರಿದ ವಿಜಯ್ ದೇವರಕೊಂಡ: ನೆಟ್ಟಿಗರಿಂದ ಸಖತ್ ಟ್ರೋಲ್

  ಆರ್‌ಬಿಐ ಅನುಮತಿ ಬೇಕು

  ಆರ್‌ಬಿಐ ಅನುಮತಿ ಬೇಕು

  ಯೆಸ್‌ಬ್ಯಾಂಕ್ ಖಾತೆಯಲ್ಲಿ ಹಣ ಇರಿಸಿರುವ ಗ್ರಾಹಕರು ಏಪ್ರಿಲ್ 3ರವರೆಗೂ ಗರಿಷ್ಠ 50,000 ರೂ ಪಡೆದುಕೊಳ್ಳಬಹುದಾಗಿದೆ. ಅದಕ್ಕಿಂತ ಹೆಚ್ಚು ಹಣ ಡ್ರಾ ಮಾಡಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್‌ನ ಅನುಮತಿ ಪಡೆದುಕೊಳ್ಳುವುದು ಅನಿವಾರ್ಯ. ಉಳಿತಾಯ, ಚಾಲ್ತಿ ಅಥವಾ ಯಾವುದೇ ಇತರೆ ಖಾತೆಗಳಲ್ಲಿಯೂ ಅಧಿಕ ಹಣ ತೆಗೆದುಕೊಳ್ಳಲು ಅವಕಾಶವಿಲ್ಲ. ಇದರಿಂದ ತೆಲುಗು ಚಿತ್ರರಂಗವಲ್ಲದೆ, ಇತರೆ ಭಾಷೆಯ ಚಿತ್ರಗಳ ನಿರ್ಮಾಪಕರೂ ತೊಂದರೆ ಅನುಭವಿಸುವಂತಾಗಿದೆ.

  English summary
  Reports says some of the production houses in Tollywood may face shortage of money as RBI restricted the withdrawal of money from Yes Bank.
  Friday, March 6, 2020, 16:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X