ನಿರ್ಮಾಪಕಿಯ ಬಣ್ಣದ ಮಾತಿನಿಂದ ಮೂರು ಕೋಟಿ ಕಳೆದುಕೊಂಡ ಯುವನಟ

ತೆಲುಗು ಚಿತ್ರರಂಗಕ್ಕೆ ಸಂಬಂಧಿಸಿದ ದೊಡ್ಡ ವಂಚನೆಯ ಜಾಲವೊಂದನ್ನು ಪೊಲೀಸರು ಬಯಲು ಮಾಡಿದ್ದಾರೆ. ಈ ವಂಚನೆ ಮಾಡಿರುವುದು ಶಿಲ್ಪಾ ಹೆಸರಿನ ಯುವತಿ!

ನಟ ಮಹೇಶ್ ಬಾಬು ಸಹೋದರಿ ಸೇರಿದಂತೆ ಹಲವು ನಟ-ನಟಿಯರಿಗೆ ಭಾರಿ ಮೊತ್ತದ ವಂಚನೆಯನ್ನು ಶಿಲ್ಪಾ ಚೌಧರಿ ಮಾಡಿದ್ದು, ಆಕೆಯ ಬಂಧನದ ಬಳಿಕ ಒಂದೊಂದೆ ಪ್ರಕರಣಗಳು ಬಯಲಿಗೆ ಬರುತ್ತಿವೆ.

ತಮ್ಮನ್ನು ಸಿನಿಮಾ ನಿರ್ಮಾಪಕಿ ಎಂದು ಪರಿಚಯಿಸಿಕೊಳ್ಳುವ ಶಿಲ್ಪಾ ಚೌಧರಿ ನಟ-ನಟಿಯರಿಂದ ದೊಡ್ಡ ಮೊತ್ತದ ಹಣ ಪಡೆಯುತ್ತಾರೆ. ಅವರಿಗೆ ಆಕರ್ಷಕ ಮೊತ್ತದ ಬಡ್ಡಿ ನೀಡುವುದಾಗಿಯೋ ಅಥವಾ ಜಮೀನು ಕೊಡಿಸುವುದಾಗಿಯೋ, ಸಿನಿಮಾ ಅವಕಾಶ ಕೊಡಿಸುವುದಾಗಿಯೇ ಹೇಳಿ ವಂಚನೆ ಮಾಡಿದ್ದಾರೆ ಶಿಲ್ಪಾ.

Young Actor Harsha Kanumilli Lost 3 Crore In A Fraud

ಮಹೇಶ್ ಬಾಬು ಸಹೋದರಿ ಪ್ರಿಯದರ್ಶಿನಿ ಸಹ ಶಿಲ್ಪಾ ಅನ್ನು ನಂಬಿ 3.90 ಕೋಟಿ ಹಣವನ್ನು ನೀಡಿದ್ದರು. ರಿಯಲ್‌ ಎಸ್ಟೇಟ್ ಹೂಡಿಕೆಗೆ ಎಂದು ಹೇಳಿ ಶಿಲ್ಪಾ ಚೌಧರಿ, ಮಹೇಶ್ ಬಾಬು ಸಹೋದರಿಯಿಂದ ಇಷ್ಟು ದೊಡ್ಡ ಮೊತ್ತವನ್ನು ಪಡೆದಿದ್ದರು. ಇದೀಗ ಪ್ರಿಯದರ್ಶಿನಿ, ಶಿಲ್ಪಾ ಚೌಧರಿ ವಿರುದ್ಧ ದೂರು ದಾಖಲಿಸಿದ್ದಾರೆ.

ಪ್ರಿಯದರ್ಶಿನಿ ವಿಷಯ ಹೊರಗೆ ಬರುತ್ತಿದ್ದಂತೆ ತೆಲುಗು ಚಿತ್ರರಂಗದ ಯುವನಟ ಹರ್ಷ ಕನುಮೇಲಿ ತಾನೂ ಸಹ ಶಿಲ್ಪಾ ಚೌಧರಿಯಿಂದ ಮೋಸ ಹೋಗಿರುವುದಾಗಿ ಹೇಳಿಕೊಂಡಿದ್ದಾರೆ. ''ಶಿಲ್ಪಾ ಚೌಧರಿ ನನ್ನ ಬಳಿಯಿಂದ 3 ಕೋಟಿ ರುಪಾಯಿ ಹಣವನ್ನು ಸಾಲವನ್ನಾಗಿ ಪಡೆದಿದ್ದರು. ಆದರೆ ಹಣ ಹಿಂತಿರುಗಿಸಿಲ್ಲ'' ಎಂದರು ಹರ್ಷ ಆರೋಪ ಮಾಡಿದ್ದಾರೆ. ದೂರು ಸಹ ದಾಖಲಿಸಿದ್ದಾರೆ.

ದಿವ್ಯಾ ರೆಡ್ಡಿ ಎಂಬುವರಿಂದ 1.50 ಕೋಟಿ ರುಪಾಯಿ ಸಾಲ ಪಡೆದಿದ್ದರು. ಆದರೆ ಹಣ ಮರಳಿ ಕೇಳಿದಾಗ ಶಿಲ್ಪಾ ಚೌಧರಿ ಕ್ಯಾತೆ ತೆಗೆದಿದ್ದಾರೆ. ಬೌನ್ಸರ್‌ಗಳನ್ನು ಬಿಟ್ಟು ಬೆದರಿಕೆ ಹಾಕಿಸಿದ್ದಾರೆ. ಇದರಿಂದಾಗಿ ದಿವ್ಯಾ ರೆಡ್ಡಿ, ತೆಲಂಗಾಣದ ನರ್ಸಿಂಗಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಪೊಲೀಸರು ಶಿಲ್ಪಾ ಹಾಗೂ ಆಕೆಯ ಪತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಶಿಲ್ಪಾ ಚೌಧರಿ ತೆಲುಗು ಚಿತ್ರರಂಗದ ಹಲವರಿಗೆ ಕೋಟ್ಯಂತರ ಹಣ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ತೆಲುಗು ಚಿತ್ರರಂಗದ ಕೆಲವು ಖ್ಯಾತ ನಟರು ಸಹ ಶಿಲ್ಪಾಳ ವಂಚನೆ ಜಾಲಕ್ಕೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಚಿತ್ರನಟರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸದೆ ಪೊಲೀಸರೊಂದಿಗೆ ಪರೋಕ್ಷವಾಗಿ ಸಂಪರ್ಕ ಸಾಧಿಸಿ ತಾವು ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಯತ್ನ ಸಾಗಿಸಿದ್ದಾರೆ ಎಂದು ತೆಲುಗು ಪತ್ರಿಕೆಗಳು ವರದಿ ಮಾಡಿವೆ.

ನಿರ್ಮಾಪಕಿ ಹಾಗೂ ಉದ್ಯಮಿ ಎಂದು ಹೇಳಿಕೊಳ್ಳುವ ಶಿಲ್ಪಾ ಚೌಧರಿ, ತೆಲುಗು ಚಿತ್ರರಂಗದ ಪಾರ್ಟಿಗಳಿಗೆ ಹಾಜರಾಗಿ ಅಲ್ಲಿ ನಟರನ್ನು ಭೇಟಿ ಮಾಡಿ ಅವರಿಂದ ಹಣ ತೊಡಗಿಸಿಕೊಳ್ಳುತ್ತಿದ್ದರು. ಅಥವಾ ಭಾರಿ ಮೊತ್ತದ ಬಡ್ಡಿ ಹಣ ನೀಡುವುದಾಗಿ ಹೇಳಿ ಸಾಲ ಪಡೆಯುತ್ತಿದ್ದರು. ಹೀಗೆ ಮಾಡಿ ಕೋಟ್ಯಂತರ ರುಪಾಯಿ ಹಣವನ್ನು ಶಿಲ್ಪಾ ಹಾಗೂ ಆಕೆಯ ಪತಿ ವಂಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಶಿಲ್ಪಾ ಹಾಗೂ ಆಕೆಯ ಪತಿಯ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆದಿದೆ.

More from Filmibeat

English summary
Shilpa Chowdary took crores of rs money from Telugu movie actors and businessmen. Actor Harsha Kanumilli lost 3 crore rs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X