ರಾಂಗ್ ರೂಟ್‌ನಲ್ಲಿ ಕಾರು ಚಲಾಯಿಸಿದ ನಟಿ; ಪ್ರಶ್ನಿಸಿದ ಟ್ರಾಫಿಕ್ ಪೊಲೀಸ್ ಸಮವಸ್ತ್ರ ಹರಿದು ರಂಪಾಟ
ಎಲ್ಲರಿಗೂ ಸಂಚಾರ ನಿಯಮಗಳು ಒಂದೇ. ಅದು ಶ್ರೀಮಂತನಾಗಲಿ, ಬಡವನಾಗಲಿ ಇಲ್ಲ ಸಿನಿಮಾ ಕಲಾವಿದರೇ ಆಗಲಿ. ತಪ್ಪು ಮಾಡಿದರೆ ಅದು ತಪ್ಪೇ. ಅದನ್ನು ಪ್ರಶ್ನಿಸುವ ಅಧಿಕಾರ ಟ್ರಾಫಿಕ್ ಪೊಲೀಸರಿಗೆ ಇರುತ್ತದೆ. ಸಂಚಾರಿ ನಿಮಯ ಉಲ್ಲಂಘಿಸಿ ತಪ್ಪು ಮಾಡಿದ್ದರೆ ದಂಡ ಕಟ್ಟಲೇಬೇಕು.
ಕೆಲವೊಮ್ಮೆ ಸಂಚಾರಿ ನಿಮಯ ಉಲ್ಲಂಘಿಸಿದವರು ನಮ್ಮದೇನು ತಪ್ಪಿಲ್ಲ ಎಂದ ವಾದಿಸುತ್ತಾರೆ. ಪೊಲೀಸರ ಎದುರು ರಂಪಾಟ ಮಾಡುತ್ತಾರೆ. ರಸ್ತೆಯಲ್ಲೇ ನಾನ್‌ಸೆನ್ಸ್ ಕ್ರಿಯೇಟ್ ಮಾಡಿ ಸುದ್ದಿ ಆಗುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ವಿಡಿಯೋ ವೈರಲ್ ಆಗಿ ಭಾರೀ ಸುದ್ದಿ ಆಗುತ್ತದೆ. ಟಾಲಿವುಡ್ ನಟ, ನಟಿಯರು ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿ ಹಾಕಿಕೊಳ್ಳುವುದು ಹೊಸದೇನು ಅಲ್ಲ.

ತೆಲುಗು ನಟ, ನಟಿಯರು ಡ್ರಿಂಕ್ ಡ್ರೈವ್ ಪ್ರಕರಣದಲ್ಲಿ ಸಾಕಷ್ಟು ಬಾರಿ ದಂಡ ಕಟ್ಟಿರುವ ಉದಾಹರಣೆ ಇದೆ. ಆದರೆ ತಪ್ಪು ಮಾಡಿದ ಮೇಲೆ ಟ್ರಾಫಿಕ್ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡಿರುವ ಘಟನೆ ನಡೆದಿಲ್ಲ. ಆದರೆ ಟಾಲಿವುಡ್ ಯುವ ನಟಿ ಸೌಮ್ಯಾ ಜಾನು ಹೈದರಾಬಾದ್ ರಸ್ತೆಯಲ್ಲಿ ರಾದ್ಧಾಂತ ಸೃಷ್ಟಿಸಿದ ಘಟನೆ ಈಗ ಭಾರೀ ಸುದ್ದಿಯಾಗುತ್ತಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗ್ತಿದೆ.
ಟಾಲಿವುಡ್ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿರುವ ನಟಿ ಸೌಮ್ಯ ಜಾನು. ಆಕೆ ಇತ್ತೀಚೆಗೆ ತನ್ನ ಜಾಗ್ವಾರ್ ಕಾರಿನಲ್ಲಿ ಪ್ರಯಾಣಿಸುವಾಗ ರಾಂಗ್ ರೂಟ್‌ನಲ್ಲಿ ಕಾರು ಚಾಲಾಯಿಸಿದ್ದಾರೆ. ಈ ಬಗ್ಗೆ ಟ್ರಾಫಿಕ್ ಹೋಮ್ ಗಾರ್ಡ್ ಕಾರು ತಡೆದಿದ್ದಾರೆ. ದಂಡ ಕಟ್ಟುವಂತೆ ಹೇಳಿದ್ದಾರೆ. ಆಗ ಸೌಮ್ಯಾ ಕಾರನ್ನು ರಾಂಗ್ ರೂಟ್‌ನಲ್ಲಿ ಚಲಾಯಿಸಿದ್ದು ಯಾಕೆ ಎಂದು ವಿವರಣೆ ನೀಡಬೇಕು, ಅಥವಾ ದಂಡ ಕಟ್ಟಬೇಕಿತ್ತು. ಅದು ಬಿಟ್ಟು ರಸ್ತೆಯಲ್ಲೇ ಗಲಾಟೆ ಶುರು ಮಾಡಿದ್ದಾರೆ.

ತಪ್ಪು ಮಾಡಿದ್ದಲ್ಲದೇ ಟ್ರಾಫಿಕ್ ಹೋಮ್ ಗಾರ್ಡ್ ಮೇಲೆ ನಟಿ ಸೌಮ್ಯ ಜಾನು ಗರಂ ಆಗಿದ್ದಾರೆ. ಆತನ ಮೇಳೆ ರೇಗಾಡಿ ಭಾರೀ ಹಂಗಾಮ ಮಾಡಿದ್ದಾಳೆ. ಏಕಾಏಕಿ ಆತನ ಸಮವಸ್ತ್ರ ಹರಿದಿರುವ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಂಜಾರ ಹಿಲ್ಸ್ ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ವಿಡಿಯೋ ವೈರಲ್ ಆಗುತ್ತಿದ್ದಂತೆ ತನ್ನ ತಪ್ಪನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಸೆಂಟಿಮೆಂಟ್ ವಿಚಾರ ಮುನ್ನಲೆ ತಂದಿದ್ದಾರೆ. ತಮ್ಮ ತಾಯಿಗೆ ಮೆಡಿಸಿನ್ ತರಬೇಕಿತ್ತು ಅದಕ್ಕೆ ರಾಂಗ್ ರೂಟ್‌ನಲ್ಲಿ ಕಾರು ಚಲಾಯಿಸಿದ್ದಾರೆ ಸೌಮ್ಯ ಜಾನು ಹೇಳುತ್ತಿದ್ದಾರೆ.
ತುರ್ತು ಸಂದರ್ಭದಲ್ಲಿ ರಾಂಗ್ ರೂಟ್‌ನಲ್ಲಿ ಕಾರು ಚಲಾಯಿಸಿದೆ ಅದು ತಪ್ಪಾ? ಟ್ರಾಫಿಕ್ ಹೋಮ್ ಗಾರ್ಡ್ ನನ್ನನ್ನು ನನ್ನನ್ನು ಕೆಟ್ಟದಾಗಿ ನಿಂದಿಸಿದರು. ಹಾಗಾಗಿ ನಾನು ಗರಂ ಆಗಿದ್ದೆ ಎಂದು ಸ್ಪಷ್ಟನೆ ಕೊಡಲು ಮುಂದಾಗಿದ್ದಾರೆ. ನಾನು ಕುಡಿದು ಕಾರು ಚಲಾಯಿಸುತ್ತಿದ್ದೆ ಎಂದು ಕೆಲವರು ಹೇಳುತ್ತಾರೆ. ಆದರೆ ನನಗೆ ಕುಡಿಯುವ ಅಭ್ಯಾಸವೇ ಇಲ್ಲ, ಬೇಕಿದ್ದರೆ ಪರೀಕ್ಷೆ ಮಾಡಿ ಎಂದಿದ್ದಾರೆ.
ಸೌಮ್ಯ ಜಾನು 'ತಡಾಕ', 'ಚಂದಮಾನ ಕಥಲು' ಹಾಗೂ 'ಲಯನ್' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದಾರೆ. ಹೋಮ್ ಗಾರ್ಡ್ ನನ್ನನ್ನು ನಿಂದಿಸಿದ್ದಕ್ಕೂ ನನ್ನ ಬಳಿ ಸಾಕ್ಷ್ಯಧಾರ ಇದೆ. ನಾನು ಆತನ ವಿರುದ್ಧ ದೂರು ನೀಡುತ್ತೇನೆ ಎಂದು ಸೌಮ್ಯ ಹೇಳಿದ್ದಾರೆ.


Click it and Unblock the Notifications











