ಪ್ರಭಾಸ್- ಸಂಜಯ್ ದತ್ 'ರಾಜಾ ಡೀಲಕ್ಸ್' ಶೂಟಿಂಗ್:ಲೀಕ್ ಆಯ್ತು ಸಿನಿಮಾ ವರ್ಕಿಂಗ್ ಸ್ಟಿಲ್

ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಸದ್ದಿಲ್ಲದೇ ಹೊಸ ಸಿನಿಮಾ ಶೂಟಿಂಗ್ ಆರಂಭಿಸಿದ್ದಾರೆ. ಮಾರುತಿ ನಿರ್ದೇಶನದಲ್ಲಿ 'ರಾಜಾ ಡೀಲಕ್ಸ್' ಸಿನಿಮಾ ಚಿತ್ರೀಕರಣ ನಡೀತಿದ್ದು, ಸೆಟ್‌ನಿಂದ ಸ್ಟಿಲ್‌ವೊಂದು ಹೊರಬಿದ್ದಿದೆ. ಪ್ರಭಾಸ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಸದ್ದಿಲ್ಲದೇ ಸಿನಿಮಾ ಮುಹೂರ್ತ ನೆರವೇರಿಸಿ, ಚಿತ್ರೀಕರಣಕ್ಕೆ ಚಾಲನೆ ಕೊಡಲಾಗಿತ್ತು. ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾಗಳಲ್ಲೇ ನಟಿಸ್ತಿರೋ ಪ್ರಭಾಸ್ ಒಂದು ಮೀಡಿಯಂ ಬಜೆಟ್ ಚಿತ್ರವನ್ನು ಯಾಕೆ ಒಪ್ಪಿಕೊಂಡರು ಎನ್ನುವ ಚರ್ಚೆ ಶುರುವಾಗಿದೆ. ಕಾಮಿಡಿ ಎಂಟರ್‌ಟೈನರ್ ಸಿನಿಮಾಗಳನ್ನು ಕಟ್ಟಿಕೊಟ್ಟು ಗೆದ್ದಿರುವ ನಿರ್ದೇಶಕ ಮಾರುತಿ ಪ್ರಭಾಸ್‌ ರೀತಿಯ ಮಾಸ್ ಹೀರೊ ಜೊತೆ ಯಾವ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಕುತೂಹಲ ಕೂಡ ಇದೆ. ಕೆಲ ದಿನಗಳ ಹಿಂದೆ ಈ ಚಿತ್ರವನ್ನು ಬಾಯ್ಕಾಟ್ ಮಾಡುವುದಾಗಿ ಸ್ವತಃ ಪ್ರಭಾಸ್ ಅಭಿಮಾನಿಗಳೇ ಹೇಳಿದ್ದರು.

Young Rebel Star Prabhas - Maruthis Raja Deluxe Movie Working Still Leaked

'ರಾಜಾ ಡೀಲಕ್ಸ್' ಹಾರರ್‌ ಕಾಮಿಡಿ ಸಿನಿಮಾ ಎಂದು ಹೇಳಲಾಗ್ತಿದೆ. ಒಂದು ಥಿಯೇಟರ್‌ನಲ್ಲೇ ಬಹುತೇಕ ಚಿತ್ರದ ಕಥೆ ನಡೆಯುತ್ತದೆ ಎನ್ನುವ ಗುಸುಗುಸು ಕೇಳಿಬರ್ತಿದೆ. 2ನೇ ಶೆಡ್ಯೂಲ್ ಶೂಟಿಂಗ್ ನಡಿತಿದೆಯಂತೆ. ಸದ್ಯ ಲೀಕ್ ಆಗಿರುವ ಫೋಟೊದಲ್ಲಿ ಪ್ರಭಾಸ್ ಶೂಟಿಂಗ್ ವಿರಾಮದ ವೇಳೆ ರಿಲ್ಯಾಕ್ಸ್ ಮೂಡ್‌ನಲ್ಲಿ ಇರುವುದನ್ನು ನೋಡಬಹುದು. ಪಕ್ಕದಲ್ಲೇ ನಿರ್ದೇಶಕ ಮಾರುತಿ ಕೂಡ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೊ ಸಖತ್ ವೈರಲ್ ಆಗಿದೆ. ಚಿತ್ರದಲ್ಲಿ ಪ್ರಭಾಸ್ ಜೊತೆ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಹಾಗೂ ರಿದ್ಧಿ ಕುಮಾರ್ ನಾಯಕಿಯರಾಗಿ ನಟಿಸುತ್ತಿರುವ ಬಗ್ಗೆ ಮಾತುಗಳು ಕೇಳಿಬರ್ತಿದೆ.

ಒಂದು ಥಿಯೇಟರ್ ಸುತ್ತಾ ಸುತ್ತುವ ತಾತಾ ಮೊಮ್ಮಗನ ಕಥೆ ಇದು ಎನ್ನಲಾಗ್ತಿದೆ. ಚಿತ್ರದಲ್ಲಿ ಪ್ರಭಾಸ್ ತಾತನ ಪಾತ್ರದಲ್ಲಿ ಸಂಜಯ್ ದತ್ ನಟಿಸುವ ಸಾಧ್ಯತೆಯಿದೆ. ಈಗಾಗಲೇ KGF- 2 ಚಿತ್ರದಲ್ಲಿ ಸಂಜು ಬಾಬು ನಟಿಸಿ ಗೆದ್ದಿದ್ದರು. ಇದೀಗ ಮತ್ತೊಂದು ದಕ್ಷಿಣದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರೂ ಅಚ್ಚರಿ ಪಡಬೇಕಿಲ್ಲ. ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಯುವಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗ್ತಿದ್ದು, ಎಸ್, ತಮನ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.

Young Rebel Star Prabhas - Maruthis Raja Deluxe Movie Working Still Leaked

ಮತ್ತೊಂದ್ಕಡೆ ಪ್ರಭಾಸ್ ನಟನೆಯ 'ಆದಿಪುರುಷ್' ರಿಲೀಸ್ ತಡವಾಗುತ್ತಿದೆ. ಚಿತ್ರದ ರೀವರ್ಕ್ ಕೆಲಸ ಶುರುವಾಗಿದ್ದು ಬಹಳ ಸಮಯ ಹಿಡಿಸುತ್ತದೆ. ಇನ್ನು ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರದ 85% ಶೂಟಿಂಗ್ ಕಂಪ್ಲೀಟ್ ಆಗಿದೆ. 'ಪ್ರಾಜೆಕ್ಟ್- K' ಸಿನಿಮಾ ಚಿತ್ರೀಕರಣವೂ ಬಹಳ ಜೋರಾಗಿ ನಡೀತಿದೆ. 400 ಕೋಟಿಗೂ ಅಧಿಕ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗ್ತಿದೆ. 'ಆದಿಪುರುಷ್', 'ಸಲಾರ್', 'ಪ್ರಾಜೆಕ್ಟ್- K' ರೀತಿಯ 300, 400 ಕೋಟಿ ಬಜೆಟ್ ಸಿನಿಮಾಗಳ ನಡುವೆ 'ರಾಜಾ ಡೀಲಕ್ಸ್' ಚಿತ್ರದಲ್ಲಿ ಪ್ರಭಾಸ್ ನಟಿಸ್ತಿರುವುದು ಕೆಲವರಿಗೆ ಬೇಸರ ತಂದಿದೆ.

More from Filmibeat

English summary
Young Rebel Star Prabhas - Maruthi's Raja Deluxe Movie Working Still Leaked. People Media Factory banner is bankrolling the film. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X