ಕುಡಿದು ಕಾರು ಚಲಾಯಿಸಿ ವೃದ್ಧೆಯನ್ನು ಕೊಂದು, ಸ್ವತಃ ಜೀವ ಕಳೆದುಕೊಂಡ ನಟಿ

ಕೆಲ ದಿನಗಳ ಹಿಂದಷ್ಟೆ ನಡೆದಿರುವ ಭೀಕರ ರಸ್ತೆ ಅಪಘಾತದಲ್ಲಿ ತೆಲುಗಿನ ಜನಪ್ರಿಯ ಯೂಟ್ಯೂಬರ್, ನಟಿ ಡಾಲಿ ಡಿ ಕ್ರೂಜ್ ಅಲಿಯಾಸ್ ಗಾಯತ್ರಿ ನಿಧನ ಹೊಂದಿದ್ದಾರೆ. ನಟಿಯು ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ್ದರು ಎಂಬುದು ಪೊಲೀಸರ ತನಿಖೆಯಿಂದ ಇದೀಗ ಬಹಿರಂಗಗೊಂಡಿದೆ.

ನಟಿ ಗಾಯತ್ರಿ ಶುಕ್ರವಾರ ರಾತ್ರಿ ಹೋಳಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅಲ್ಲಿ ಆಕೆ ಮತ್ತು ಗೆಳೆಯ ರೋಹಿತ್ ಮದ್ಯ ಸೇವನೆ ಮಾಡಿದ್ದರು. ಪಾರ್ಟಿ ಮುಗಿಸಿ ಮನೆಗೆ ಬರುವಾಗ ಗಾಯತ್ರಿಯೇ ಕಾರು ಚಾಲನೆ ಮಾಡುತ್ತಿದ್ದರು.

ವೇಗವಾಗಿ ಕಾರು ಚಲಾಯಿಸಿಕೊಂಡು ಬರವಾಗ ಹೈದರಾಬಾದ್‌ನ ಗಚ್ಚಿಬೋಲಿ ಬಳಿ ರಸ್ತೆಯಲ್ಲಿ ವೃದ್ಧೆಯೊಬ್ಬರಿಗೆ ಕಾರು ಗುದ್ದಿ ಬಳಿಕ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾರೆ. ವೃದ್ಧೆ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ನಟಿ ಗಾಯತ್ರಿಯೂ ಸ್ಥಳದಲ್ಲಿಯೇ ನಿಧನ ಹೊಂದಿದ್ದಾರೆ. ಗೆಳೆಯ ರೋಹಿತ್‌ಗೆ ತೀವ್ರ ಗಾಯಗಳಾಗಿವೆ. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

You Tuber Gayatri Alias Dolly D Cruz Died On Road Accident

ಹೋಳಿ ದಿನ ಹೈದರಾಬಾದ್‌ನ ಪಬ್‌ಗಳಲ್ಲಿ ಮದ್ಯ ನಿಷೇಧ ಇತ್ತು ಆದರೆ ಗಾಯತ್ರಿ ಗೆಳೆಯ ರೋಹಿತ್ ಹಿಂದಿನ ದಿನವೇ ಪಾರ್ಟಿಗಾಗಿ ಮದ್ಯ ಖರೀದಿಸಿ ಇಟ್ಟಿದ್ದ. ಗಾಯತ್ರಿ, ರೋಹಿತ್ ಹಾಗೂ ಇನ್ನಿತರ ಗೆಳೆಯರು ಆ ಮದ್ಯವನ್ನು ಎಳನೀರಿನಲ್ಲಿ, ಜ್ಯೂಸ್‌ ನಲ್ಲಿ ಬೆರೆಸಿಕೊಂಡು ಪ್ರಿಜಮ್ ಪಬ್‌ಗೆ ಹೋಗಿದ್ದರು. ಅಲ್ಲಿ ಚೆನ್ನಾಗಿ ಪಾರ್ಟಿ ಮಾಡಿದ್ದರು. ತೆಂಗಿನ ಕಾಯಿಗಳಲ್ಲಿ ಮದ್ಯ ಬೆರೆಸಿ ಕೊಂಡೊಯ್ದಿದ್ದ ಗಾಯತ್ರಿ ಹಾಗೂ ರೋಹಿತ್ ಆರನ್ನು ತಾವೇ ಕುಡಿದು ಎರಡನ್ನು ಕಾರಿನಲ್ಲಿ ಇಟ್ಟುಕೊಂಡಿದ್ದರು. ಕಾರು ಅಪಘಾತದ ಬಳಿಕ ಆ ಎರಡು ತೆಂಗಿನ ಕಾಯಿಗಳನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ಪರೀಕ್ಷೆಗೆ ಲ್ಯಾಬ್‌ಗೆ ಕಳಿಸಿದ್ದಾರೆ.

'ಜಲ್ಸಾ ರಾಯುಡು' ಹೆಸರಿನ ಯೂಟ್ಯೂಬ್ ಚಾನೆಲ್‌ ಅನ್ನು ಗಾಯತ್ರಿ ನಡೆಸುತ್ತಿದ್ದರು. ಜೊತೆಗೆ ವೆಬ್ ಸರಣಿ 'ಮೇಡಮ್ ಸರ್ ಮೇಡಮ್ ಅಂತೆ' ನಲ್ಲಿಯೂ ನಟಿಸಿದ್ದರು. ಯೂಟ್ಯೂಬರ್ ಆಗಿ ಬಹಳ ಜನಪ್ರಿಯತೆಯನ್ನು ಗಾಯತ್ರಿ ಪಡೆದುಕೊಂಡಿದ್ದರು. ಇದರ ಮೂಲವಾಗಿಯೇ ನಟನೆಯ ಆಫರ್‌ಗಳನ್ನು ಸಹ ಗಾಯತ್ರಿ ಗಿಟ್ಟಿಸಿಕೊಂಡಿದ್ದರು.

ಡಾಲಿ ಡಿ ಕ್ರೂಜ್ ನಿಧನಕ್ಕೆ ಟಾಲಿವುಡ್‌ನ ಹಲವರು ಕಂಬನಿ ಮಿಡಿದಿದ್ದಾರೆ. ಶೋ ಒಂದರಲ್ಲಿ ಡಾಲಿಯ ತಾಯಿಯ ಪಾತ್ರದಲ್ಲಿ ನಟಿಸಿದ್ದ ಸುರೇಖಾ ವಾಣಿ ಡಾಲಿಯನ್ನು ನೆನಪಿಸಿಕೊಂಡು ಪೋಸ್ಟ್‌ ಒಂದನ್ನು ಪ್ರಕಟಿಸಿದ್ದು, ''ನೀನು ಈ ತಾಯಿಯನ್ನು ಬಿಟ್ಟು ಹೇಗೆ ಹೋಗಲು ಸಾಧ್ಯ. ನಾವಿಬ್ಬರೂ ಒಟ್ಟಿಗೆ ಸಾಕಷ್ಟು ಸಂತಸದ ಸಮಯಗಳನ್ನು ಕಳೆದಿದ್ದೇವೆ. ಇನ್ನೂ ಸಾಕಷ್ಟು ಸಮಯವನ್ನು ನಾವಿಬ್ಬರೂ ಒಟ್ಟಿಗೆ ಕಳೆಯಬೇಕಿದೆ. ದಯವಿಟ್ಟು ಬಂದು ಬಿಡು. ನಿನ್ನನ್ನು ಮಿಸ್ ಮಾಡಿಕೊಳ್ಳುವುದು ನನಗೆ ಇಷ್ಟವಿಲ್ಲ. ನಿನ್ನನ್ನು ಸದಾ ಪ್ರೀತಿಸುವೆ'' ಎಂದಿದ್ದಾರೆ.

ಗಾಯತ್ರಿಯ ಹಲವು ಅಭಿಮಾನಿಗಳು, ಗೆಳೆಯರು ಆಕೆಯ ಸಾವಿಗೆ ಮರುಗಿದ್ದಾರೆ.

More from Filmibeat

English summary
You Tuber Gayatri alias Dolly D Cruz died on road accident in Hyderabad's Gachibowli. Police said actress was on influence of alcohol.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X