ಇಬ್ಬರಿಗಾಗಿ ಊರವರಿಗೆಲ್ಲ ಉಚಿತ ಪೆಟ್ರೋಲ್ ಹಂಚಿದ ಯೂಟ್ಯೂಬರ್!
ಥರ-ಥರಹದ ವಿಡಿಯೋ ಮಾಡಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡುವ ಯೂಟ್ಯೂಬರ್‌ಗಳ ಹವಾ ಜೋರಾಗಿ ನಡೆಯುತ್ತಿದೆ. ಯೂಟ್ಯೂಬ್ ಕೋಟ್ಯಂತರ ಜನರಿಗೆ ಸಂಪಾದನೆಯ ದಾರಿಯಾಗಿದೆ. ಪ್ರತಿಭಾ ಪ್ರದರ್ಶನದ ವೇದಿಕೆಯಾಗಿದೆ.
ಸಬ್‌ಸ್ಕ್ರೈಬರ್‌ಗಳನ್ನು ಹೆಚ್ಚಿಸಿಕೊಳ್ಳಲು ಯೂಟ್ಯೂಬರ್‌ಗಳು ಏನೇನೋ ಸಾಹಸಗಳನ್ನು ಮಾಡುತ್ತಿದ್ದಾರೆ. ಚಿತ್ರ ವಿಚಿತ್ರ ವೇಷಗಳನ್ನು ಹಾಕುವುದು, ಸೆಕ್ಸ್ ಟಾಕ್ ಮಾಡುವುದು, ಸುಳ್ಳು ಸುದ್ದಿಗಳನ್ನು ನಿಜವೆಂಬಂತೆ ವಿಡಿಯೋ ಮಾಡಿ ಅಪ್‌ಲೋಡ್ ಮಾಡುವುದು ಇನ್ನೂ ಏನೇನೋ.
ಸಬ್‌ಸ್ಕ್ರೈಬರ್‌ಗಳು ಹೆಚ್ಚಾದಷ್ಟು ಯೂಟ್ಯೂಬರ್‌ಗಳ ಆದಾಯ ಹೆಚ್ಚಾಗುತ್ತದೆಯಾದ್ದರಿಂದ ಸಬ್‌ಸ್ಕ್ರೈಬರ್‌ಗಳಿಗಾಗಿ ಆಗಾಗ್ಗೆ ಲಕ್ಕಿ ಗೇಮ್ ಆಡಿಸುವುದು, ಅವರಿಗೆ ಏನಾದರೂ ಗಿಫ್ಟ್‌ಗಳನ್ನು ನೀಡುವುದು ಇನ್ನಿತರೆ ಕಾರ್ಯಗಳನ್ನು ಯೂಟ್ಯೂಬರ್‌ಗಳು ಮಾಡುತ್ತಿರುತ್ತಾರೆ. ಆದರೆ ತೆಲುಗಿನ ಯೂಟ್ಯೂಬರ್ ಒಬ್ಬ ಕೇವಲ ಇಬ್ಬರು ಸಬ್‌ಸ್ಕ್ರೈಬರ್‌ಗಳಿಗಾಗಿ ನೂರಾರು ಜನರಿಗೆ ಉಚಿತವಾಗಿ ಪೆಟ್ರೋಲ್ ಹಂಚಿದ್ದಾನೆ!
ಹರ್ಷ ಸಾಯಿ ಹೆಸರಿನ ತೆಲುಗು ಯೂಟ್ಯೂಬರ್ ವಿವಿಧ ಭಾಷೆಯಲ್ಲಿ ತನ್ನದೇ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಹೊಂದಿದ್ದಾನೆ. ಈತ ತನ್ನ ಇಬ್ಬರು ಸಬ್‌ಸ್ಕ್ರೈಬರ್‌ಗಳಿಗಾಗಿ ನೂರಾರು ಮಂದಿಗೆ ಸಾವಿರಾರು ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ಹಂಚಿದ್ದಾನೆ! ಕೇವಲ ಪೆಟ್ರೋಲ್ ಹಂಚಿದ್ದು ಮಾತ್ರವೇ ಅಲ್ಲದೆ ಲಕ್ಷಾಂತರ ಬೆಲೆಯ ಗಿಫ್ಟ್‌ಗಳನ್ನು ಜನರಿಗೆ ನೀಡಿದ್ದಾನೆ.

ಇಬ್ಬರಿಗಾಗಿ ಉಚಿತ ಪೆಟ್ರೋಲ್ ಪಂಪ್ ತೆರೆದ ಹರ್ಷ!
ಹರ್ಷ ಸಾಯಿ ಒಮ್ಮೆ ಕಾರಿನಲ್ಲಿ ಬರಬೇಕಾದರೆ ಇಬ್ಬರು ಯುವಕರು ಜಗಳವಾಡುತ್ತಿದ್ದುದನ್ನು ನೋಡಿದ್ದಾನೆ. ಅವರಿಬ್ಬರೂ ಹರ್ಷ ಸಾಯಿ ಯೂಟ್ಯೂಬ್ ಚಾನೆಲ್‌ನ ಸಬ್‌ಸ್ಕ್ರೈಬರ್‌ಗಳು. ಅವರಿಬ್ಬರೂ ಪೆಟ್ರೋಲ್ ಹಣಕ್ಕಾಗಿ ಜಗಳವಾಡುತ್ತಿದ್ದರು ಎಂಬುದು ಹರ್ಷಗೆ ಗೊತ್ತಾಗಿದೆ. ನನ್ನ ಸಬ್‌ಸ್ಕ್ರೈಬರ್‌ಗಳು ಹೀಗೆ ಪೆಟ್ರೋಲ್ ಹಣಕ್ಕಾಗಿ ಜಗಳವಾಡುತ್ತಿರುವುದು ಇಷ್ಟವಾಗದ ಹರ್ಷ ಮೊದಲಿಗೆ ವಿವಿಧ ಪೆಟ್ರೋಲ್ ವಿತರಣೆ ಏಜೆನ್ಸಿಗಳ ಜೊತೆ ಮಾತನಾಡಿ ಪೆಟ್ರೋಲ್ ಬೆಲೆ ಹೆಚ್ಚು ಏಕೆ ಎಂಬುದನ್ನು ತಿಳಿದುಕೊಂಡಿದ್ದಾರೆ. ಬಳಿಕ ತನ್ನ ಆ ಇಬ್ಬರು ಸಬ್‌ಸ್ಕ್ರೈಬರ್‌ಗಳಿಗಾಗಿ ಉಚಿತವಾಗಿ ಪೆಟ್ರೋಲ್ ಬಂಕ್ ತೆರೆಯಲು ನಿಶ್ಚಯಿಸಿದ್ದಾರೆ ಹರ್ಷ.

ಸಾವಿರಾರು ಲೀಟರ್ ಪೆಟ್ರೋಲ್ ಉಚಿತವಾಗಿ ನೀಡಲಾಗಿದೆ!
ಅಂತೆಯೇ ಆ ಇಬ್ಬರು ಯುವಕರು ಜಗಳವಾಡುತ್ತಿದ್ದ ಜಾಗಕ್ಕೆ ಹತ್ತಿರದಲ್ಲಿಯೇ ಒಂದು ಪೆಟ್ರೋಲ್ ಬಂಕ್ ಹುಡುಕಿ ಮಾಲೀಕರೊಟ್ಟಿಗೆ ಮಾತನಾಡಿ ಬಂಕ್ ಅನ್ನು ಒಂದು ದಿನಕ್ಕಾಗಿ ತಮ್ಮ ಸುಪರ್ಧಿಗೆ ಪಡೆದುಕೊಂಡು ಇಡೀ ದಿನ ಪೆಟ್ರೋಲ್ ಅನ್ನು ಉಚಿತವಾಗಿ ಹಂಚಿದ್ದಾರೆ ಹರ್ಷ. ಯೂಟ್ಯೂಬರ್ ಒಬ್ಬರು ಉಚಿತವಾಗಿ ಪೆಟ್ರೋಲ್ ಹಂಚುತ್ತಿರುವ ವಿಷಯ ತಿಳಿದು ಸಾವಿರಾರು ಮಂದಿ ಬಂಕ್ ಬಳಿ ಜಮಾಯಿಸಿದ್ದಾರೆ. ಆರಂಭದಲ್ಲಿ ಬಂದ ಎಲ್ಲರಿಗೂ ಉಚಿತವಾಗಿ ಫುಲ್‌ಟ್ಯಾಂಕ್ ಪೆಟ್ರೋಲ್ ತುಂಬಲಾಗಿದೆ. ಜನ ಹೆಚ್ಚಾಗುತ್ತಲೇ ಸಾಗಿದ್ದರಿಂದ ಉಚಿತ ಪೆಟ್ರೋಲ್ ನೀಡುವ ಪ್ರಮಾಣ ಕಡಿಮೆ ಮಾಡಲಾಗಿದೆ. ಒಂದು ಗಂಟೆ ಬಂಕ್ ಬಂದ್ ಮಾಡಿ ಮತ್ತೊಂದು ಗಂಟೆ ಬಂಕ್ ತೆರೆದು ಹೀಗೆ ಶಿಫ್ಟ್‌ಗಳಲ್ಲಿ ಪೆಟ್ರೋಲ್ ನೀಡಲಾಗಿದೆ.

ಲಕ್ಷಾಂತರ ಮೌಲ್ಯದ ಉಡುಗೊರೆ ಸಹ ನೀಡಿದ್ದಾರೆ ಹರ್ಷ!
ಪೆಟ್ರೋಲ್ ಉಚಿತವಾಗಿ ನೀಡಿದ್ದು ಮಾತ್ರವೇ ಅಲ್ಲದೆ ಬಂಕ್ ಬಳಿ ಬಂದ ತಮ್ಮ ಸಬ್‌ಸ್ಕ್ರೈಬರ್‌ಗಳಿಗೆ ವಿಶೇಷ ಆಟವನ್ನು ಆಡಿಸಿ ಅವರಿಗೆ ಲಕ್ಷಾಂತರ ಮೌಲ್ಯದ ಉಡುಗೊರೆಗಳನ್ನು ಹರ್ಷ ನೀಡಿದ್ದಾರೆ. ಸಬ್‌ಸ್ಕ್ರೈಬರ್‌ಗಳು ತಮ್ಮ ಎರಡೂ ಕೈಯಿಂದ ಎಷ್ಟು ಹಣ ಬಾಚಬಹುದೊ ಅಷ್ಟು ಹಣವನ್ನು ಸಹ ಹರ್ಷ ಹಲವರಿಗೆ ನೀಡಿದ್ದಾರೆ. ಇಷ್ಟೆಲ್ಲ ಆಗುವ ವೇಳೆಗೆ ಸಂಜೆ ಆಗಿದೆ. ಆ ಬಳಿಕ ಯೂಟ್ಯೂಬರ್ ಹರ್ಷ ತಮಗಾಗಿ ಹೀಗೆ ಉಚಿತವಾಗಿ ಪೆಟ್ರೋಲ್ ವಿತರಿಸುತ್ತಿರುವ ವಿಷಯ ತಿಳಿದು ಇಬ್ಬರು ಸಬ್‌ಸ್ಕ್ರೈಬರ್‌ಗಳು ಪೆಟ್ರೋಲ್ ಬಂಕ್ ಬಳಿ ಬಂದಿದ್ದಾರೆ.

ಪೆಟ್ರೋಲ್ ಹಣಕ್ಕಾಗಿ ಜಗಳವಾಡದಂತೆ ಮಾಡಿದ ಹರ್ಷ!
ಇಬ್ಬರು ಸಬ್‌ಸ್ಕ್ರೈಬರ್‌ಗಳಿಗೂ ದುಬಾರಿ ಗಿಫ್ಟ್ ನೀಡಿದ ಹರ್ಷ ಬಳಿಕ ಅವರಿಬ್ಬರನ್ನು ಫೈವ್ ಸ್ಟಾರ್ ಹೋಟೆಲ್‌ಗೆ ಕರೆದೊಯ್ದಿದ್ದಾರೆ. ಅಲ್ಲಿ ಹಲವು ಸಮಯ ಕಳೆದ ಬಳಿಕ ಆ ಇಬ್ಬರು ಇನ್ನೆಂದು ಪೆಟ್ರೋಲ್ ಹಣಕ್ಕಾಗಿ ಪರಸ್ಪರ ಜಗಳವಾಡಬಾರದೆಂದು ಆ ಇಬ್ಬರಿಗೂ ಪೆಟ್ರೋಲ್ ರಹಿತ ವಿದ್ಯುತ್ ಚಾಲಿತ ಬೈಕ್‌ಗಳನ್ನು ಉಡುಗೊರೆಯಾಗಿ ಹರ್ಷ ನೀಡಿದ್ದಾರೆ. ಯೂಟ್ಯೂಬರ್ ಹರ್ಷರ ಈ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹರ್ಷ ಉಚಿತವಾಗಿ ಪೆಟ್ರೋಲ್ ಹಂಚಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಹಲವು ಕ್ರೇಜಿ ಕಾರ್ಯಗಳನ್ನು ಹರ್ಷ ಮಾಡಿದ್ದಾರೆ
ಹರ್ಷ ಸಾಯಿ ಬಹಳ ಕ್ರೇಜಿ ಯೂಟ್ಯೂಬರ್. ಈ ಹಿಂದೊಮ್ಮೆ 20 ಲಕ್ಷದ ಕಾರನ್ನು ಕೇವಲ ಚಿಲ್ಲರೆ ಹಣ ಕೊಟ್ಟು ಖರೀದಿಸಿದ್ದ ಹರ್ಷ. 8 ಬಡ ಕುಟುಂಬಗಳಿಗೆ ಅವರಿಗೆ ಗೊತ್ತಾಗದಂತೆ ದೊಡ್ಡ ಮೊತ್ತದ ಹಣವನ್ನು ಅವರ ಬಾಗಿಲಲ್ಲಿ ಇಟ್ಟು ಬಂದಿದ್ದರು. ತನ್ನ ಸಬ್‌ಸ್ಕ್ರೈಬರ್ ಒಬ್ಬರಿಗೆ ಮಾಲ್‌ನಲ್ಲಿ ಏನಾದರೂ ಕೊಂಡುಕೊಳ್ಳುವ ಆಫರ್ ಕೊಟ್ಟಿದ್ದರು. ಕಾಫಿಯಿಂದ ಇಡೀಯ ಸ್ವಿಮ್ಮಿಂಗ್ ಪೂಲ್ ತುಂಬಿಸಿದ್ದರು ಹರ್ಷ ಇನ್ನೂ ಹಲವು ಇಂಥಹಾ ಕ್ರೇಜಿ ಕಾರ್ಯಗಳನ್ನು ಹರ್ಷ ಮಾಡುತ್ತಿರುತ್ತಾರೆ ಅವುಗಳನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡುತ್ತಿರುತ್ತಾರೆ.


Click it and Unblock the Notifications











