ಪ್ರೇಮ ವೈಫಲ್ಯ ; 21ರ ಹರೆಯದಲ್ಲಿ ನೇಣಿಗೆ ಕೊರಳೊಡ್ಡಿದ ಖ್ಯಾತ ಯೂಟ್ಯೂಬರ್

ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ, ಪ್ರೀತಿಯ ಕೆಲವೊಮ್ಮೆ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು.

ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳೋ ಈ ಬ್ರೇಕ್ ಅಪ್‌ನ ನೋವು ಸಹಿಸಲಾಗದೇ ಹಲವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಪ್ರೀತಿ ಮರೆಯಲಾಗದೆ.. ಅನೇಕರು ಆತ್ಮಹತ್ಯೆಯನ್ನು ಕೂಡ ಮಾಡಿಕೊಂಡಿದ್ದಾರೆ. ಇದಕ್ಕೆ ಕೋಮಲಿ ಆ*ತ್ಮಹತ್ಯೆ ಪ್ರಕರಣ ಮತ್ತೊಂದು ಉದಾಹರಣೆ.

youtuber-komali-suicide-relationship-dispute-nikhil-reddy-hyderabad

ಹೌದು. ಕೋಮಾಲಿ.. 21ವರ್ಷದಲ್ಲಿಯೇ ಯೂಟ್ಯೂಬ್ ಮೂಲಕ ಹಲವರ ಮನ ಗೆದ್ದಿದ್ದ ಚೆಲುವೆ. ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಪದವಿ ಅಧ್ಯಯನ ಮಾಡುತ್ತಲೇ ಯೂಟ್ಯೂಬ್ ಮೂಲಕ ಹೆಸರು‌ ಮಾಡಿದ್ದ ಕೋಮಾಲಿ ತಮ್ಮ 21ರ ಹರೆಯದಲ್ಲಿ ಪ್ರೇಮ ವೈಫಲ್ಯದಿಂದ ನೇಣಿಗೆ ಕೊರಳೊಡ್ಡಿದ್ದಾರೆ. ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೈದರಾಬಾದಿನ ವಿಶಾಖ ಪಟ್ಟಣಂ ಮೂಲದವರಾಗಿದ್ದ ಕೋಮಾಲಿ ಮಣಿಕೊಂಡದ ಚಿತ್ರಪುರಿ ಕಾಲೋನಿಯಲ್ಲಿರುವ ತನ್ನ ಮಾವನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ (ಫೆಬ್ರವರಿ 24) ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ.

ಮಂಗಳವಾರ (ಫೆಬ್ರವರಿ 25) ಕೋಮಲಿ ಅವರ ತಾಯಿ ರಾಯದುರ್ಗಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಮಾಲಿ ಅವರ ಸಾವಿಗೆ ಪ್ರೇಮ ವೈಫಲ್ಯ ಕಾರಣವೆಂದು ಸದ್ಯ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಕಳೆದ 3 ವರ್ಷಗಳಿಂದ ಕೋಮಾಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಮತ್ತು ಕೋಮಾಲಿ ಅವರಂತೆಯೇ ಪಾರ್ಟ್ ಟೈಮ್ ಯೂಟ್ಯೂಬರ್ ಕೂಡ ಆಗಿರುವ ನಿಖಿಲ್ ರೆಡ್ಡಿ ಅವರನ್ನು ಪ್ರೀತಿ ಮಾಡುತ್ತಿದ್ದರು.

youtuber-komali-suicide-relationship-dispute-nikhil-reddy-hyderabad

ಆದರೆ, ಕಳೆದ ಒಂದು ವರ್ಷದ ಹಿಂದೆ ಇವರ ಸಂಬಂಧ ಮುರಿದು ಬಿದ್ದಿತ್ತು. ಭಿನ್ನಾಭಿಪ್ರಾಯಗಳಿಂದ ಇಬ್ಬರು ದೂರವಾಗಿದ್ದರು ಎಂದು ಹೇಳಲಾಗುತ್ತಿದ್ದು, ನಿಖಿಲ್ ರೆಡ್ಡಿ ಅವರಿಂದ ದೂರವಾದ ನಂತರ ಕೋಮಾಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ನಿಖಿಲ್ ಅವರನ್ನು ಮರೆಯಲು ಸಾಧ್ಯವಾಗದೇ ಈ ಹಿಂದೆಯೂ ಕೋಮಾಲಿ ಆ*ತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು ಎಂದು ವರದಿಯಾಗಿದ್ದು, ಆಗ ಕೋಮಾಲಿ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿತ್ತು.

ಇನ್ನೂ ಎರಡು ದಿನಗಳ ಹಿಂದೆ ಮದುವೆಯ ವಿಚಾರಕ್ಕೆ ಸಂಬಂಧಿಸಿದಂತೆ ನಿಖಿಲ್‌ಗೆ ಕೋಮಾಲಿ ಕರೆ ಮಾಡಿದ್ದ ಸಮಯದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ಕೂಡ ಹೇಳಲಾಗುತ್ತಿದ್ದು, ಈ ವಾಗ್ವಾದದ ನಂತರ ಕೋಮಾಲಿ ತುಂಬಾನೇ ನೊಂದುಕೊಂಡಿದ್ದರು ಎಂದು ಮಾಧ್ಯಮಗಳ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಕಳೆದ ಜೂನ್‌ನಲ್ಲಿ ತಿರುಮಲಕ್ಕೆ ನಡೆದುಕೊಂಡು ಹೋಗುತ್ತಿರುವ ಅವರ ಕೊನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸದ್ಯ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ತಮ್ಮ ಆಸೆ ಈಡೇರಲಿ ಎಂಬ ಪ್ರಾರ್ಥನೆಯೊಂದಿಗೆ ಕೋಮಾಲಿ ಮೆಟ್ಟಿಲನ್ನೇರಿದ್ದರು. ಇದರ ನಂತರ ಈ ಜನವರಿಯಲ್ಲಿ ಒಂದು ಕಾಲದಲ್ಲಿ ಬೇರೆಯವರು ಮಿಂಚುವಂತೆ ಮಾಡಿದ್ದ ಹುಡುಗಿ ಇಂದು ನಿಧಾನವಾಗಿ ಕತ್ತಲ ಕೋಣೆಯಲ್ಲಿ ಕಳೆದು ಹೋಗುತ್ತಿದ್ದಾಳೆ ಎಂದು ವಿಡಿಯೋವನ್ನು ಹಂಚಿಕೊಂಡಿದ್ದ ಕೋಮಾಲಿ ನಾಲ್ಕು ದಿನಗಳ ಹಿಂದೆ (ಫೆಬ್ರವರಿ 21) ಕೊನೆಯ ವಿಡಿಯೋವನ್ನು ಹಂಚಿಕೊಂಡಿದ್ದರು.

ಕೋಮಾಲಿ ಅವರ ನಿಧನದ ಸುದ್ದಿಯಿಂದ ಇವರ ಹಿಂಬಾಲಕರು ಮತ್ತು ಸ್ನೇಹಿತರು ಆಘಾತಕ್ಕೊಳಗಾಗಿದ್ದು ಕೋಮಾಲಿ ಅವರ ನಿಧನಕ್ಕೆ ಹಲವರು ಸಂತಾಪವನ್ನು ಸೂಚಿಸುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ನಿಖಿಲ್ ರೆಡ್ಡಿ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

More from Filmibeat

English summary
A voice silenced too soon. YouTuber Komali’s tragic end after a heartbreak has left fans in shock. Explore the events leading up to the Rayadurgam police report and the fallout with her partner.
Read more about: death depression youtube
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X