"ಪವನ್‌ದು ಬರೀ ಅರಚಾಟ, ಕಿರುಚಾಟ ಅಷ್ಟೇ, ಆತ ಸಹಾಯ ಮಾಡಿದ್ದೇ ನೋಡ್ಲಿಲ್ಲ": ನಿರೂಪಕಿ ಶ್ಯಾಮಲಾ
ಲೋಕಸಭೆ ಚುನಾವಣೆ ಜೊತೆ ಜೊತೆಗೆ 4 ರಾಜ್ಯದ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಆಂಧ್ರದಲ್ಲಿ ಈ ಬಾರಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ? ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತಿದೆ. ವೈಎಸ್‌ಆರ್ ಕಾಂಗ್ರೆಸ್ ಸರ್ಕಾರವನ್ನು ಕೆಳಗಿಳಿಸಿ ಗದ್ದುಗೆ ಏರಲು ಟಿಡಿಪಿ, ಜನಸೇನಾ, ಬಿಜೆಪಿ ಕೈ ಜೋಡಿಸಿವೆ.
ತೆಲುಗು ನಟ ಪವನ್ ಕಲ್ಯಾಣ್ ಜನಸೇನಾ ಪಕ್ಷ ಕಟ್ಟಿ ರಾಜಕೀಯರಂಗದಲ್ಲಿ ಸಕ್ರಿಯರಾಗಿದ್ದಾರೆ. ಬಹಳ ಹಿಂದೆಯೇ ಪಕ್ಷ ಸ್ಥಾಪಿಸಿದರೂ ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಿತ್ತು. ಆದರೆ ಹೀನಾಯವಾಗಿ ಸೋಲುಂಡಿತ್ತು. ಆದರೂ ಛಲ ಬಿಡದೇ ಈ ಬಾರಿ ಅಧಿಕಾರ ಹಿಡಿಯಲು ಪವನ್ ಹರಸಾಹಸ ಪಟ್ಟಿದ್ದಾರೆ. ಟಿಡಿಪಿ ಹಾಗೂ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ.

ಪೀಠಾಪುರಂ ವಿಧಾನಸಭೆ ಕ್ಷೇತ್ರದಿಂದ ಪವನ್ ಕಲ್ಯಾಣ್ ಸ್ಪರ್ಧಿಸಿದ್ದಾರೆ. ವೈಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ವಂಗಾ ಗೀತಾ ಸವಾಲು ಹಾಕಿದ್ದಾರೆ. ಚುಣಾವಣೋತ್ತರ ಸಮೀಕ್ಷೆಗಳಲ್ಲಿ ಪವನ್ ಕಲ್ಯಾಣ್ ಗೆಲ್ಲುವುದು ಖಚಿತ ಎನ್ನಲಾಗುತ್ತಿದೆ. ಆದರೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಿರುವ ನಿರೂಪಕಿ ಶ್ಯಾಮಲಾ ಸಮೀಕ್ಷೆಗಳು ಸುಳ್ಳಾಗುತ್ತದೆ. ವಂಗಾ ಗೀತಾ ಗೆಲ್ಲುತ್ತಾರೆ ನೋಡುತ್ತಿರಿ ಎಂದಿದ್ದಾರೆ.
ನಿರೂಪಕಿ ಶ್ಯಾಮಲಾ ಒಂದಷ್ಟು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ಬಣ್ಣದ ಲೋಕದಿಂದ ದೂರಾಗಿರುವ ಆಕೆ ರಾಜಕೀಯರಂಗದಲ್ಲಿ ಸಕ್ರಿಯರಾಗಿದ್ದಾರೆ. 5 ವರ್ಷಗಳ ಹಿಂದೆ ಆಕೆ ತಮ್ಮ ಪತಿ ನರಸಿಂಹ ರೆಡ್ಡಿ ಜೊತೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಸೇರಿದ್ದರು. ಸದ್ಯ ಇಡೀ ಆಂಧ್ರದ ಗಮನ ಪೀಠಾಪುರಂ ವಿಧಾನಸಭೆ ಕ್ಷೇತ್ರದ ಕಡೆಯಿದೆ. ಯಾಕಂದರೆ ಅಲ್ಲಿ ಪವನ್- ಗೀತಾ ನಡುವೆ ಜಿದ್ದಾ ಜಿದ್ದಿನ ಪೈಪೋಟಿ ನಡೀತಿದೆ.
ಇನ್ನು ವಂಗಾ ಗೀತಾ ಪರ ಕ್ಷೇತ್ರದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ಸೇರಿದಂತೆ ಹಲವರು ಪ್ರಚಾರ ನಡೆಸಿದ್ದರು. ಅದರಲ್ಲಿ ನಿರೂಪಕಿ ಶ್ಯಾಮಲಾ ಸಹ ಇದ್ದರು. ಸಂದರ್ಶನವೊಂದರಲ್ಲಿ ಮಾತನಾಡಿರೂ ಆಕೆ ಹೇಳಿಕೆ ವೈರಲ್ ಆಗುತ್ತಿದೆ. "ರಾಜಕೀಯ ಅಂದ್ರೆ ಕೋಪವಲ್ಲ, ಆವೇಷ ಅಲ್ಲ, ರಾಜಕೀಯ ಅಂದ್ರೆ ಸಹಾಯ ಮಾಡುವುದು ಹಾಗಂತ ನಾನು ಅಂದುಕೊಂಡಿದ್ದೇನೆ. ಆದರೆ ಪವನ್ ಕಲ್ಯಾಣ್ ಅವರಲ್ಲಿ ಇದುವರೆಗೂ ಸಿಟ್ಟು, ಕೂಗಾಟ, ಆಯಾಸ ನೋಡಿದ್ದೇನೆ. ಅವರು ಸಹಾಯ ಮಾಡುವುದನ್ನು ನೋಡಿಲ್ಲ" ಎಂದು ಶ್ಯಾಮಲಾ ಹೇಳಿದ್ದಾರೆ.
ಮಾತು ಮುಂದುವರೆಸಿರುವ ಶ್ಯಾಮಲಾ "ಪಿಠಾಪುರದಲ್ಲಿ ವಂಗಾ ಗೀತಾ ಗೆಲ್ಲುತ್ತಾರೆ. ಪವನ್ ಗೆಲ್ಲುತ್ತಾರೆ ಎಂದು ಸಮೀಕ್ಷೆಗಳು ಹೇಳುತ್ತವೆ, ಆದರೆ ಅದೇ ಫಲಿತಾಂಶವಲ್ಲ, ಅಲ್ಲಿ ಗೆಲ್ಲುವುದು ವೈಎಸ್‌ಆರ್‌ಸಿಪಿ ಅಭ್ಯರ್ಥಿ" ಎಂದಿದ್ದಾರೆ. ಶ್ಯಾಮಲಾ ಹೇಳಿಕೆಗೆ ಪವನ್ ಅಭಿಮಾನಿಗಳು ಹಾಗೂ ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಟ್ಟ ಕೆಟ್ಟ ಪದಗಳನ್ನು ಬಳಿಸಿ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ಆಕೆಯನ್ನು ಟೀಕಿಸುತ್ತಿದ್ದಾರೆ. ಪವನ್ ಸಹಾಯಗುಣ ಆಕೆಗೆ ಗೊತ್ತಿಲ್ಲ. ಬಾವಿಯಲ್ಲಿದ್ದರೆ ಹೊರಗೆ ಬರಬೇಕು, ಜೂನ್ 4ರ ನಂತರ ಅವರ ಸ್ಥಿತಿ ನೋಡಿದರೆ ಬೇಸರವಾಗುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಜನಸೇನಾ, ಟಿಡಿಪಿ, ಬಿಜೆಪಿ ಮೈತ್ರಿ ಅಭ್ಯರ್ಥಿ ಆಗಿ ಪವನ್ ಕಲ್ಯಾಣ್ ಕಣಕ್ಕೆ ಇಳಿದಿದ್ದರಿಂದ ಅಲ್ಲಿ ಬೇರೆ ಪಕ್ಷಗಳು ಆರ್ಭಟ ಇಲ್ಲ. ಪವನ್ ಹಾಗೂ ವಂಗಾ ಗೀತಾ ನಡುವೆಯೇ ಭಾರೀ ಸ್ಪರ್ಧೆ ನಡೆದಿತ್ತು. ಕೆಲವೇ ನಿಮಿಷಗಳಲ್ಲಿ ಯಾರೆಗೆ ವಿಜಯ ಮಾಲೆ ಎನ್ನುವುದು ಬಹಿರಂಗವಾಗಲಿದೆ.


Click it and Unblock the Notifications











