For Quick Alerts
  ALLOW NOTIFICATIONS  
  For Daily Alerts

  ಬಾಲಕೃಷ್ಣ ಹುಟ್ಟುಹಬ್ಬಕ್ಕೆ ಶುಭಕೋರಿದ 'ಸಿಕ್ಸರ್ ಕಿಂಗ್' ಯುವರಾಜ್

  |

  ತೆಲುಗು ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ 61ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ದೇಶಾದ್ಯಂತ ಬಾಲಯ್ಯ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲ ಸೆಲೆಬ್ರಿಟಿಗಳ ಸಹ ಬಾಲಯ್ಯ ಜನುಮದಿನಕ್ಕೆ ವಿಶ್ ಮಾಡುತ್ತಿದ್ದಾರೆ.

  ಭಾರತೀಯ ಕ್ರಿಕೆಟ್ ಜಗತ್ತು ಕಂಡ ಅದ್ಭುತ ಆಟಗಾರ, 'ಸಿಕ್ಸರ್ ಕಿಂಗ್' ಎಂದೇ ಖ್ಯಾತಿ ಗಳಿಸಿಕೊಂಡಿರುವ ಯುವರಾಜ್ ಸಿಂಗ್, ಬಾಲಕೃಷ್ಣರ ಹುಟ್ಟುಹಬ್ಬಕ್ಕೆ ಟ್ವಿಟ್ಟರ್ ಮೂಲಕ ಶುಭಾಶಯ ತಿಳಿಸಿದ್ದಾರೆ. ನಂದಮೂರಿ ಸಿಂಹಗೆ ಯುವರಾಜ್ ವಿಶ್ ಮಾಡಿರುವುದಕ್ಕೆ ಅಭಿಮಾನಿಗಳ ಸಂಭ್ರಮಿಸುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಬಾಲಕೃಷ್ಣರ ಹೊಸ ಸಿನಿಮಾಗಳು ಸಹ ಪ್ರಕಟಣೆಯಾಗಿದೆ. ಮುಂದೆ ಓದಿ...

  ನನ್ನನ್ನು ಭೇಟಿಯಾಗಲು ಬರಬೇಡಿ: ಅಭಿಮಾನಿಗಳಲ್ಲಿ ನಟ ಬಾಲಕೃಷ್ಣ ಮನವಿ ನನ್ನನ್ನು ಭೇಟಿಯಾಗಲು ಬರಬೇಡಿ: ಅಭಿಮಾನಿಗಳಲ್ಲಿ ನಟ ಬಾಲಕೃಷ್ಣ ಮನವಿ

  ಲೆಜೆಂಡ್‌ಗೆ ಶುಭಕೋರಿದ ಯುವರಾಜ್

  ಲೆಜೆಂಡ್‌ಗೆ ಶುಭಕೋರಿದ ಯುವರಾಜ್

  ''ಹ್ಯಾಪಿ ಬರ್ತಡೇ ನಂದಮೂರಿ ಬಾಲಕೃಷ್ಣ ಸರ್. ನಿಮ್ಮ ಸಿನಿಮಾಗಳ ಮೂಲಕ ಹಾಗೂ ನಿಮ್ಮ ಮಾನವೀಯತೆಯ ಕೆಲಸಗಳ ಮೂಲಕ ಇಡೀ ಜಗತ್ತನ್ನು ರಂಜಿಸುವ ಕೆಲಸ ಮುಂದುವರಿಯಲಿ. ಒಳ್ಳೆಯದಾಗಲಿ ಸರ್'' ಎಂದು ಯುವರಾಜ್ ಸಿಂಗ್ ಫೋಟೋ ಶೇರ್ ಮಾಡಿದ್ದಾರೆ.

  ಮತ್ತೆ ಅಭಿಮಾನಿ ಕಪಾಳಕ್ಕೆ ಹೊಡೆದ ನಟ ಬಾಲಕೃಷ್ಣಮತ್ತೆ ಅಭಿಮಾನಿ ಕಪಾಳಕ್ಕೆ ಹೊಡೆದ ನಟ ಬಾಲಕೃಷ್ಣ

  ಕ್ಯಾನ್ಸರ್ ರೋಗಿಗಳಿಗಾಗಿ ಒಂದಾಗಿದ್ದ ಬಾಲಯ್ಯ-ಯುವಿ

  ಕ್ಯಾನ್ಸರ್ ರೋಗಿಗಳಿಗಾಗಿ ಒಂದಾಗಿದ್ದ ಬಾಲಯ್ಯ-ಯುವಿ

  ಐಪಿಎಲ್ ಪಂದ್ಯಕ್ಕಾಗಿ ಹೈದರಾಬಾದ್‌ಗೆ ಬಂದಿದ್ದ ಸಮಯದಲ್ಲಿ ಕ್ರಿಕೆಟಿಗ ಯುವರಾಜ್ ಸಿಂಗ್‌ರನ್ನು ಬಾಲಕೃಷ್ಣ ಭೇಟಿಯಾಗಿದ್ದರು. ಕ್ಯಾನ್ಸರ್ ರೋಗಿಗಳ ಹೋರಾಟಕ್ಕೆ ಈ ಇಬ್ಬರು ಕೈ ಜೋಡಿಸಿದ್ದರು. ಯುವರಾಜ್ ಸಿಂಗ್ ಸಹ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆದ ಗುಣಮುಖರಾಗಿದ್ದರು.

  107ನೇ ಚಿತ್ರ ಪ್ರಕಟಣೆ

  107ನೇ ಚಿತ್ರ ಪ್ರಕಟಣೆ

  ಬಾಲಕೃಷ್ಣ ಬರ್ತಡೇ ಪ್ರಯುಕ್ತ 107ನೇ ಪ್ರಾಜೆಕ್ಟ್ ಘೋಷಣೆಯಾಗಿದೆ. ಗೋಪಿಚಂದ್ ಮಲಿನೇನಿ ಈ ಚಿತ್ರ ನಿರ್ದೇಶನ ಮಾಡಲಿದ್ದು, #NBK107 ಹೆಸರಿನಲ್ಲಿ ಪೋಸ್ಟರ್‌ವೊಂದು ಬಿಡುಗಡೆ ಮಾಡಿದ್ದಾರೆ. ಇನ್ನುಳಿದಂತೆ ಈ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ.

  ಪ್ರಭಾಸ್ ಗೆ ಪೌರಾಣಿಕ ಕಥೆ ರೆಡಿ ಮಾಡ್ತಿದ್ದಾರೆ ಪ್ರಶಾಂತ್ ನೀಲ್ | Filmibeat Kannada
  'ಅಖಂಡ' ಚಿತ್ರದಲ್ಲಿ ನಟನೆ

  'ಅಖಂಡ' ಚಿತ್ರದಲ್ಲಿ ನಟನೆ

  ಬಯೋಪಟಿ ಶ್ರೀನಿವಾಸ್ ನಿರ್ದೇಶನದಲ್ಲಿ ಅಖಂಡ ಎಂಬ ಸಿನಿಮಾ ಮಾಡ್ತಿದ್ದಾರೆ. ಬರ್ತಡೇ ವಿಶೇಷವಾಗಿ ಹೊಸ ಪೋಸ್ಟರ್ ಸಹ ರಿಲೀಸ್ ಆಗಿದೆ. ಪ್ರಗ್ಯಾ ಜೈಸ್ವಲ್ ಈ ಚಿತ್ರದಲ್ಲಿ ನಟಿಸುತ್ತಿದ್ದು, ಶ್ರೀಕಾಂತ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

  English summary
  Indian Cricketer Yuvaraj Singh Wishes Nandamuri Balakrishna on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X