For Quick Alerts
  ALLOW NOTIFICATIONS  
  For Daily Alerts

  ಬಾಲಯ್ಯ ಹೊಸ ಸಿನಿಮಾಗೆ ನಾಯಕಿಯಾದ 'ಯುವರತ್ನ' ಸುಂದರಿ ಸಯೇಶಾ

  |

  ಟಾಲಿವುಡ್ ಸಿಂಹ ನಂದಮೂರಿ ಬಾಲಕೃಷ್ಣ ಸದ್ಯ 'NBK 106' (ತಾತ್ಕಾಲಿಕ ಹೆಸರು) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಗೂ ಮೊದಲು ಚಿತ್ರೀಕರಣ ಪ್ರಾರಂಭ ಮಾಡಿದ್ದ ಸಿನಿಮಾತಂಡ ಸದ್ಯ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದೆ. ಇದೀಗ ಮತ್ತೆ ಶೂಟಿಂಗ್ ಗೆ ಹೊರಡುವ ತಯಾರಿಯಲ್ಲಿರುವ ಚಿತ್ರತಂಡದ ಕಡೆಯಿಂದ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.

  ಹೌದು ಬಾಲಯ್ಯ ಹೊಸ ಸಿನಿಮಾಗೆ ನಾಯಕಿ ಫಿಕ್ಸ್ ಆಗಿದ್ದಾರೆ. ಚಿತ್ರಕ್ಕೆ ನಟಿ ಸಯೇಶಾ ಸೈಗಲ್ ಆಯ್ಕೆಯಾಗಿದ್ದಾರೆ. ಈ ಬಗ್ಗೆ ನಟಿ ಸಯೇಶಾ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ಸಯೇಶಾ ಕನ್ನಡದಲ್ಲಿ ಬಹುನಿರೀಕ್ಷೆಯ ಯುವರತ್ನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮುಂದೆ ಓದಿ...

  ನೀವು ನನ್ನ ಸ್ವಂತ ಅಣ್ಣನಂತೆ: ಹಿರಿಯ ನಟನಿಗೆ ಶಿವಣ್ಣ ಹುಟ್ಟುಹಬ್ಬ ಶುಭಾಶಯನೀವು ನನ್ನ ಸ್ವಂತ ಅಣ್ಣನಂತೆ: ಹಿರಿಯ ನಟನಿಗೆ ಶಿವಣ್ಣ ಹುಟ್ಟುಹಬ್ಬ ಶುಭಾಶಯ

  ಪುನೀತ್ ಜೊತೆ ನಟಿಸಿರುವ ಸಯೇಶಾ

  ಪುನೀತ್ ಜೊತೆ ನಟಿಸಿರುವ ಸಯೇಶಾ

  ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವ ಸಯೇಶಾ ಪವರ್ ಸ್ಟಾರ್ ಪುನೀತ್ ಜೊತೆ ತೆರೆಹಂಚಿಕೊಂಡಿದ್ದಾರೆ. 'ಯುವರತ್ನ' ಸಿನಿಮಾ ಬಳಿಕ ಸಯೇಶಾ ಯಾವ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಇತ್ತೀಚಿಗೆ ಚಿತ್ರದ ಚಿತ್ರೀಕರಣ ಮುಗಿಸಿರುವ ಸಯೇಶಾ ಇದೀಗ ಬಾಲಯ್ಯ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ.

  ದ್ವೇಷ ಮರೆತು ಬಾಲಕೃಷ್ಣಗೆ ಜನ್ಮದಿನದ ಶುಭ ಹಾರೈಸಿದ ಚಿರಂಜೀವಿದ್ವೇಷ ಮರೆತು ಬಾಲಕೃಷ್ಣಗೆ ಜನ್ಮದಿನದ ಶುಭ ಹಾರೈಸಿದ ಚಿರಂಜೀವಿ

  ನಟಿ ಸಯೇಶಾ ಟ್ವೀಟ್

  ನಟಿ ಸಯೇಶಾ ಟ್ವೀಟ್

  ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಸಾಯೇಶಾ 'ಅದ್ಭುತವಾದ ತಂಡದ ಜೊತೆ ಕೆಲಸ ಮಾಡಲು ಸಂತಸವಾಗುತ್ತಿದೆ. ಸದ್ಯದಲ್ಲೇ ಚಿತ್ರೀಕರಣದಲ್ಲಿ ಭಾಗಿಯಾಗಲು ಎದುರು ನೋಡುತ್ತಿದ್ದೀನಿ' ಎಂದು ಟ್ವೀಟ್ ಮಾಡಿದ್ದಾರೆ. ಅಂದಹಾಗೆ ಬಾಲಯ್ಯ NBK106 ಸಿನಿಮಾಗೆ ಬೊಯಪಟಿ ಶ್ರೀನು ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಬೊಯಪಟಿ ಶ್ರೀನು-ಬಾಲಯ್ಯ 3ನೇ ಸಿನಿಮಾ

  ಬೊಯಪಟಿ ಶ್ರೀನು-ಬಾಲಯ್ಯ 3ನೇ ಸಿನಿಮಾ

  ಇವರಿಬ್ಬರ ಕಾಂಬಿನೇಷನ್ ನಲ್ಲಿ ಈ ಹಿಂದೆ 'ಸಿಂಹ' ಮತ್ತು 'ಲೆಜೆಂಡ್' ಸಿನಿಮಾಗಳು ತೆರೆಕಂಡು ಸೂಪರ್ ಹಿಟ್ ಆಗಿತ್ತು. ಈಗ ಮತ್ತದೆ ಜೋಡಿ ಮೂರನೆ ಬಾರಿಗೆ ಒಂದಾಗುತ್ತಿರುವುದು ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ಬಾಲಯ್ಯ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  Vijay Deverakonda ತಮ್ಮನಿಗೋಸ್ಕರ ಸಾಲು ಸಾಲು ಟ್ವೀಟ್ ಮಾಡಿದ Rashmika | Filmibeat Kannada
  ಮತ್ತೋರ್ವ ನಾಯಕಿಯಾಗಿ ನಮಿತಾ ಅಭಿನಯ

  ಮತ್ತೋರ್ವ ನಾಯಕಿಯಾಗಿ ನಮಿತಾ ಅಭಿನಯ

  ಚಿತ್ರಕ್ಕೆ ಮತ್ತೋರ್ವ ನಾಯಕಿಯಾಗಿ ನಮಿತಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. 2010ರಲ್ಲಿ ರಿಲೀಸ್ ಆಗಿದ್ದ ಸಿಂಹ ಸಿನಿಮಾದಲ್ಲಿ ಬಾಲಯ್ಯ ಜೊತೆ ನಮಿತಾ ನಟಿಸಿದ್ದರು. ಇದೀಗ ಮತ್ತೆ ಬಾಲಯ್ಯಗೆ ನಾಯಕಿಯಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

  English summary
  Actress Sayyeshaa to play female lead in balakrishna's next movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X