For Quick Alerts
  ALLOW NOTIFICATIONS  
  For Daily Alerts

  325 ಕೋಟಿಗೆ RRR ಚಿತ್ರದ ಡಿಜಿಟಲ್ ಹಕ್ಕು ಮಾರಾಟ, ಫ್ಯಾನ್ಸ್‌ಗೆ ನಿರಾಸೆ

  |

  ಆರ್‌ಆರ್‌ಆರ್ ಸಿನಿಮಾ ಬಿಡುಗಡೆಗೂ ಮುಂಚೆಯೇ 1000 ಸಾವಿರ ಕೋಟಿ ಬಿಸಿನೆಸ್ ಮಾಡಲಿದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿದೆ. ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಕಾಣಲಿರುವ ಈ ಚಿತ್ರದ ವಿತರಣೆ ಹಕ್ಕು 500 ಕೋಟಿಗೂ ಅಧಿಕ ಮೊತ್ತಕ್ಕೆ ಈಗಾಗಲೇ ಮಾರಾಟವಾಗಿದೆ ಎಂದು ವರದಿಯಾಗಿದೆ.

  ಇದೀಗ, ಡಿಜಿಟಲ್ ಹಕ್ಕು ಮತ್ತು ಸ್ಯಾಟ್‌ಲೈಕ್ ಹಕ್ಕು ಭಾರಿ ಮೊತ್ತಕ್ಕೆ ಸೇಲ್ ಆಗಿರುವ ಮಾಹಿತಿ ಹೊರಬಿದ್ದಿದೆ. ಈ ಹಿಂದೆ ಪೆನ್ ಸ್ಟುಡಿಯೋ ಸಂಸ್ಥೆ ಉತ್ತರ ಭಾರತದ ವಿತರಣೆ ಜೊತೆಗೆ ಡಿಜಿಟಲ್ ಹಕ್ಕು ಖರೀದಿ ಮಾಡಿದ್ದರು. ಆದ್ರೀಗ, ಎಲ್ಲಾ ಭಾಷೆಯ ಡಿಜಿಟಲ್ ಮತ್ತು ಸ್ಯಾಟ್‌ಲೈಟ್ ಹಕ್ಕು ಜೀ ಗ್ರೂಪ್ ಸಂಸ್ಥೆ ಪಾಲಾಗಿದೆ ಎಂಬ ವಿಚಾರ ಬಹಿರಂಗವಾಗಿದೆ. ಮುಂದೆ ಓದಿ...

  ಆರ್‌ಆರ್‌ಆರ್ ಚಿತ್ರದ ಬಾಲಿವುಡ್ ಹಕ್ಕು ಖರೀದಿಸಿದ ಪೆನ್ ಸ್ಟುಡಿಯೋ ಆರ್‌ಆರ್‌ಆರ್ ಚಿತ್ರದ ಬಾಲಿವುಡ್ ಹಕ್ಕು ಖರೀದಿಸಿದ ಪೆನ್ ಸ್ಟುಡಿಯೋ

  325 ಕೋಟಿಗೆ ಡಿಜಿಟಲ್ ಹಕ್ಕು ಮಾರಾಟ

  325 ಕೋಟಿಗೆ ಡಿಜಿಟಲ್ ಹಕ್ಕು ಮಾರಾಟ

  ಜೀ ಗ್ರೂಪ್‌ (ಜೀ 5) ಸಂಸ್ಥೆ ಆರ್‌ಆರ್‌ಆರ್‌ ಚಿತ್ರದ ಎಲ್ಲಾ ಭಾಷೆಯ ಡಿಜಿಟಲ್ ಮತ್ತು ಸ್ಯಾಟ್‌ಲೈಕ್ ಹಕ್ಕನ್ನು 325 ಕೋಟಿ ನೀಡಿ ಖರೀದಿ ಮಾಡಿದೆ. ಹಿಂದಿಯ ಡಿಜಿಟಲ್ ಹಕ್ಕು ಕೊಂಡುಕೊಂಡಿದ್ದ ಪೆನ್ ಸ್ಟುಡಿಯೋ, ಜೀ ಗ್ರೂಪ್‌ಗೆ ಹಕ್ಕು ವರ್ಗಾಯಿಸಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಆರ್ ಆರ್ ಆರ್ ಸಿನಿಮಾ ಎಲ್ಲಾ ಭಾಷೆಯ ಡಿಜಿಟಲ್ ಪ್ರಸಾರದ ಹಕ್ಕು ಜೀ ಗ್ರೂಪ್ ತೆಕ್ಕೆಗೆ ಹೋಗಿದೆ.

  ದಕ್ಷಿಣದ ಅಭಿಮಾನಿಗಳು ನಿರಾಸೆ

  ದಕ್ಷಿಣದ ಅಭಿಮಾನಿಗಳು ನಿರಾಸೆ

  ರಾಜಮೌಳಿ ಚಿತ್ರದ ಡಿಜಿಟಲ್ ಹಕ್ಕು ಜೀ ಗ್ರೂಪ್ ಖರೀದಿ ಮಾಡಿದೆ ಎನ್ನುವ ವಿಚಾರ ಹೊರಬೀಳುತ್ತಿದ್ದಂತೆ, ಇತ್ತ ಸೌತ್ ಇಂಡಿಯಾದ ಚಿತ್ರಪ್ರೇಮಿಗಳು ನಿರಾಸೆಯಾಗಿದ್ದಾರೆ. ಸೌತ್‌ನಲ್ಲಿ ಜೀ5 ಚಂದಾದಾರ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ, ಸಿನಿಮಾ ಹೆಚ್ಚು ಜನರಿಗೆ ತಲುಪಲ್ಲ ಎಂಬ ಬೇಸರ ಹೊರಹಾಕುತ್ತಿದ್ದಾರೆ. ಅಮೇಜಾನ್ ಪ್ರೈಮ್‌ಗೆ ಡಿಜಿಟಲ್ ಪ್ರಸಾರದ ಹಕ್ಕು ಹೋಗಬಹುದು ಎಂದು ನಿರೀಕ್ಷೆ ಇತ್ತು.

  ಬಿಡುಗಡೆಗೂ ಮುಂಚೆ 900 ಕೋಟಿ ಗಳಿಸಿದ ಆರ್‌ಆರ್‌ಆರ್‌: 'ಬಾಹುಬಲಿ' ದಾಖಲೆ ಉಡೀಸ್ಬಿಡುಗಡೆಗೂ ಮುಂಚೆ 900 ಕೋಟಿ ಗಳಿಸಿದ ಆರ್‌ಆರ್‌ಆರ್‌: 'ಬಾಹುಬಲಿ' ದಾಖಲೆ ಉಡೀಸ್

  400 ಕೋಟಿ ಬಂಡವಾಳ?

  400 ಕೋಟಿ ಬಂಡವಾಳ?

  ಆರ್ ಆರ್ ಆರ್ ಚಿತ್ರಕ್ಕೆ ಡಿವಿವಿ ದಾನಯ್ಯ ಬಂಡವಾಳ ಹಾಕಿದ್ದಾರೆ. ಈ ಚಿತ್ರಕ್ಕೆ ಸುಮಾರು 350-400 ಕೋಟಿಗೂ ಅಧಿಕ ಖರ್ಚು ಆಗಿದೆ ಎಂದು ವರದಿಯಾಗಿದೆ. ತೆಲುಗು ನಟ ರಾಮ್ ಚರಣ್ ತೇಜ್ ಮತ್ತು ಜೂನಿಯರ್ ಎನ್ ಟಿ ಆರ್ ಈ ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜು ಹಾಗೂ ಜೂ ಎನ್‌ಟಿಆರ್ ಕೊಮ್ಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಜಯ್ ದೇವಗನ್, ಆಲಿಯಾ ಭಟ್ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  ಚಿರು ನಂತರ ಮನೆಯಲ್ಲಿದ್ದ ಮತ್ತೊಬ್ಬ ಆಪ್ತನನ್ನು ಕಳೆದುಕೊಂಡ ಮೇಘನಾ ರಾಜ್ | Filmibeat Kannada
  ಅಕ್ಟೋಬರ್ 13ಕ್ಕೆ ತೆರೆಗೆ?

  ಅಕ್ಟೋಬರ್ 13ಕ್ಕೆ ತೆರೆಗೆ?

  ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿರುವ ಆರ್ ಆರ್ ಆರ್ ಸಿನಿಮಾ ಅಕ್ಟೋಬರ್ 13ಕ್ಕೆ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅದಾಗಲೇ ಅಧಿಕೃತವಾಗಿ ಘೋಷಿಸಿದೆ. ಆದರೆ, ಕೊರೊನಾ ಬಿಕ್ಕಟ್ಟಿನಿಂದ ಪ್ರಕಟಿಸಿದ ದಿನಾಂಕ ಸಿನಿಮಾಗಳು ಬರುವುದು ಅನುಮಾನ ಎನಿಸುತ್ತಿದೆ. ಕೊರೊನಾ ಪರಿಣಾಮ ಆರ್‌ಆರ್‌ಆರ್ ಸಿನಿಮಾ ಮೇಲೂ ಬಿದ್ದರೆ, ಅಕ್ಟೋಬರ್ 13ಕ್ಕೆ ಪ್ರೇಕ್ಷಕರ ಮುಂದೆ ಬರುವುದು ಡೌಟು.

  English summary
  SS Rajamouli’s RRR has locked the biggest deal in the history of Digital and Satellite Rights of Indian Cinema.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X