ಆಂಧ್ರಪ್ರದೇಶದಲ್ಲಿ ಚಿತ್ರಮಂದಿರಗಳ ತೆರೆಯಲು ಅನುಮತಿ

ಕೊರೊನಾ ಎರಡನೇ ತಡೆಯಲು ದೇಶದ ಎಲ್ಲ ರಾಜ್ಯಗಳಲ್ಲಿಯೂ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಅದರ ಭಾಗವಾಗಿಯೇ ಚಿತ್ರಮಂದಿರಗಳನ್ನು ಸಹ ಹಲವು ರಾಜ್ಯಗಳಲ್ಲಿ ಬಂದ್ ಮಾಡಲಾಗಿತ್ತು.

ಇದೀಗ ನೆರೆಯ ರಾಜ್ಯ ಆಂಧ್ರ ಪ್ರದೇಶದಲ್ಲಿ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಆಂಧ್ರ ಪ್ರದೇಶ ರಾಜ್ಯದಾದ್ಯಂತ ಜುಲೈ ಜುಲೈ 8 ರಿಂದ ಚಿತ್ರಮಂದಿರಗಳು ಕಾರ್ಯಾರಂಭ ಮಾಡಲಿವೆ.

ತೆಲಂಗಾಣ ರಾಜ್ಯದಲ್ಲಿ ಕಳೆದ ತಿಂಗಳೇ ಚಿತ್ರಮಂದಿರಗಳು ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ ಆಂಧ್ರದಲ್ಲಿ ಇನ್ನೂ ತೆರೆದಿರಲಿಲ್ಲ. ಹಾಗಾಗಿ ಹಲವು ತೆಲುಗು ಸಿನಿಮಾ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಹಿಂದೇಟು ಹಾಕಿದ್ದರು.

Andhra Pradesh Government Allows To Open Theaters In 50% Occupancy

ಇದೀಗ ಆಂಧ್ರ ಪ್ರದೇಶ ಸರ್ಕಾರವೂ ಸಹ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಿದೆ. ಆದರೆ ಆಂಧ್ರದ ಚಿತ್ರಮಂದಿರಗಳು ಪೂರ್ಣಪ್ರಮಾಣದ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸುವಂತಿಲ್ಲ. ಬದಲಿಗೆ 50% ಸೀಟು ಸಾಮರ್ಥ್ಯದೊಂದಿಗೆ ಅಷ್ಟೆ ಕೆಲಸ ಮಾಡಬೇಕಿದೆ.

ತೆಲುಗಿನಲ್ಲಿ ಹಲವು ಸಿನಿಮಾಗಳು ಚಿತ್ರಮಂದಿರಕ್ಕೆ ಬರಲು ತಯಾರಾಗಿವೆ. ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್', ನಾಗಚೈತನ್ಯ ನಟನೆಯ 'ಲವ್ ಸ್ಟೋರಿ', ಇನ್ನೂ ಹಲವು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಇದೀಗ ಚಿತ್ರಮಂದಿರಗಳು ತೆರೆದಿರುವ ಕಾರಣ ಒಂದೊಂದಾಗಿ ಚಿತ್ರಮಂದಿರಗಳು ತೆರೆಗೆ ಅಪ್ಪಳಿಸಲಿವೆ.

Recommended Video

Dr Shiva Rajkumar Biography | ಶಿವರಾಜ್ ಕುಮಾರ್ ಹುಟ್ಟಿದ ದಿನ ಅಣ್ಣಾವ್ರು ಏನ್ ಮಾಡಿದ್ರು ಗೊತ್ತಾ? | Filmibeat Kannada

ಕರ್ನಾಟಕದಲ್ಲಿ ಇನ್ನೂ ಚಿತ್ರಮಂದಿರಗಳು ತೆರೆದಿಲ್ಲ. ರಾಜ್ಯದಲ್ಲಿ ಮೂರನೇ ಅನ್‌ಲಾಕ್ ಪ್ರಕ್ರಿಯೆ ಇಂದಿನಿಂದ (ಜುಲೈ 05) ಪ್ರಾರಂಭವಾಗಿದೆ. ಹಲವು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ ಆದರೆ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಲಾಗಿಲ್ಲ. ಆದರೆ ಇದೇ ತಿಂಗಳ ಮಧ್ಯಭಾಗದಿಂದ 50% ಸೀಟು ಸಾಮರ್ಥ್ಯದೊಂದಿಗೆ ಚಿತ್ರಮಂದಿರ ತೆರೆಯಲು ಅವಕಾಶ ನೀಡುವ ಸಂಭವ ಹೆಚ್ಚಿಗಿದೆ.

English summary
Andhra Pradesh government ordered to open theaters but theaters can function in only 50% occupancy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X