'ಕರೋಡ್ ಪತಿ ' ಆಟದಲ್ಲಿ 1 ಕೋಟಿ ಗೆದ್ದು ಇತಿಹಾಸ ಬರೆದ ಯುವಕ
ಕೌನ್ ಬನೇಗಾ ಕರೋಡ್ ಪತಿ 11ನೇ ಆವೃತ್ತಿಯಲ್ಲಿ ಒಂದು ಕೋಟಿ ಗೆಲ್ಲುವ ಮೂಲಕ ಸನೋಜ್ ರಾಜ್ ದಾಖಲೆ ಬರೆದಿದ್ದಾರೆ. ಈ ಆವೃತ್ತಿಯಲ್ಲಿ ಒಂದು ಕೋಟಿ ಗೆದ್ದ ಮೊದಲ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಸ್ವತಃ ಅಮಿತಾಭ್ ಬಚ್ಚನ್ ಘೋಷಿಸಿದ್ದಾರೆ.
ಹೌದು, ಕರೋಡ್ ಪತಿ 11ನೇಯಲ್ಲಿ ಸನೋಜ್ ಭಾಗವಹಿಸಿದ್ದು, ಒಂದು ಕೋಟಿ ಗೆದ್ದಿರುವ ಪ್ರೋಮೋ ಬಿಡುಗಡೆಯಾಗಿದೆ. ಈ ಪ್ರೋಮೋದಲ್ಲಿ ಸನೋಜ್ ಒಂದು ಕೋಟಿ ಗಳಿಸಿದ್ದಾರೆ ಬಚ್ಚನ್ ಪ್ರಕಟಿಸಿದ್ದಾರೆ.
ಅಂದ್ಹಾಗೆ, ಹಿಂದಿಯ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಒಟ್ಟಾರೆ ಬಹುಮಾನದ ಮೊತ್ತ 7 ಕೋಟಿ. ಹದಿನೈದು ಪ್ರಶ್ನೆಗಳಿಗೆ ಉತ್ತರ ಕೊಟ್ಟಿರುವ ಸನೋಜ್ 1 ಕೋಟಿ ಗಳಿಸಿದ್ದಾರೆ. ಹದಿನಾರನೇ ಪ್ರಶ್ನೆಗೆ ಉತ್ತರ ಕೊಟ್ಟರೆ 7 ಕೋಟಿ ಜಾಕ್ ಪಾಟ್ ಹೊಡೆಯುತ್ತೆ.

ಸನೋಜ್ ಅವರ ಕೌನ್ ಬನೇಗಾ ಕರೋಡ್ ಪತಿ ಸಂಚಿಕೆ ಗುರುವಾರ ಮತ್ತು ಶುಕ್ರವಾರ ಪ್ರಸಾರವಾಗಲಿದೆ. ಆದರೆ, ಒಂದು ಕೋಟಿ ಗೆದ್ದಿರುವ ಸನೋಜ್ ಆಟ ಮುಂದುವರಿಸಿ 7 ಕೋಟಿ ಪ್ರಶ್ನೆಗೆ ಉತ್ತರ ಕೊಡ್ತಾರಾ ಅಥವಾ ಕ್ವಿಟ್ ಮಾಡ್ತಾರಾ ಎಂದು ಎಪಿಸೋಡ್ ಪ್ರಸಾರ ಮುಗಿದ್ಮೇಲೆ ಮಾಹಿತಿ ನೀಡುತ್ತೇವೆ.


Click it and Unblock the Notifications