twitter
    X
    Home ಚಲನಚಿತ್ರಗಳ ಒಳನೋಟ

    2022 ಮೇ ತಿಂಗಳಿನಲ್ಲಿ ಓಟಿಟಿ ಮಾಧ್ಯಮಗಳಲ್ಲಿ ಬಿಡುಗಡೆಯಾಗುತ್ತಿರುವ ಚಲನಚಿತ್ರಗಳು

    Author Administrator | Updated: Wednesday, May 18, 2022, 11:21 AM [IST]

    ಪ್ರಸ್ತುತದ ಕಡು ಬೇಸಿಗೆಯಲ್ಲಿ ಮನೆಯಲ್ಲೇ ಕುಳಿತು ಬೇಜಾರಾಗಿರುವವರು, ತಮ್ಮ ನೆಚ್ಚಿನ ಚಿತ್ರಗಳನ್ನು ಓಟಿಟಿ ಮಾಧ್ಯಮಗಳಲ್ಲಿ ನೋಡಬಹುದು. ಇಲ್ಲಿ ಮೇ ತಿಂಗಳಿನಲ್ಲಿ ಓಟಿಟಿ ಮಾಧ್ಯಮಗಳಲ್ಲಿ ಬಿಡುಗಡೆಯಾಗುತ್ತಿರುವ ಚಲನಚಿತ್ರಗಳನ್ನು ನೀಡಿದೆ.

    cover image
    ಕೆಜಿಎಫ್: ಚಾಪ್ಟರ್ 2

    ಕೆಜಿಎಫ್: ಚಾಪ್ಟರ್ 2

    1

    ಭಾರತದಾದ್ಯಂತ ಚಿತ್ರಮಂದಿರಗಳಲ್ಲಿ ಜಯಭೇರಿ ಗಳಿಸಿದ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಮೇ 27 ರಂದು ಅಮೇಜಾನ್ ಪ್ರೈಮ್ ವೀಕ್ಷಕರಿಗೆ ಉಚಿತ ವೀಕ್ಷಣಗೆ ಲಭ್ಯವಿದೆ. ಇದಕ್ಕೂ ಹತ್ತು ದಿನ ಮುನ್ನವೇ ರೆಂಟಲ್ ಮೂಲಕ ಚಿತ್ರವನ್ನು ನೋಡುವ ವ್ಯವಸ್ಥೆಯನ್ನು ಪ್ರೈಮ್ ಮಾಡಿತ್ತು. 

    RRR (ಆರ್.ಆರ್.ಆರ್)

    RRR (ಆರ್.ಆರ್.ಆರ್)

    2

    ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ RRR ಚಿತ್ರವೂ ಮೇ 20 ರಿಂದ ಜೀ5 ಮತ್ತು ನೆಟ್‌ಫ್ಲಿಕ್ಸ್ ನಲ್ಲಿ ಪ್ರಸಾರವಾಗಲಿದೆ. ಮೊದಲಿಗೆ ಚಿತ್ರವೂ ರೆಂಟಲ್ ಆಧಾರದ ಮೇಲೆ ಲಭ್ಯವಾಗಲಿದೆ.

    ದಿ ಕಾಶ್ಮೀರ್ ಫೈಲ್ಸ್

    ದಿ ಕಾಶ್ಮೀರ್ ಫೈಲ್ಸ್

    3

    ವಿವೇಕ್ ಅಗ್ನಿಹೋತ್ರಿ ನಿರ್ದೇಶನದ `ದಿ ಕಾಶ್ಮೀರ್ ಫೈಲ್ಸ್' ಚಿತ್ರ ಕಾಶ್ಮೀರಿ ಪಂಡಿತರು ಅನುಭವಿಸಿದ ನರಕಯಾತನೆಯನ್ನು ಚಿತ್ರಮಂದಿರಗಳ ಮೂಲಕ ದೇಶಾದ್ಯಂತ ತೆರೆದಿಟ್ಟಿತು. ಕಾಶ್ಮೀರಿ ಪಂಡಿತರು ಮೂವತ್ತು ವರ್ಷಗಳ ಹಿಂದೆ ತಾವು ಹುಟ್ಟಿ ಬೆಳೆದ ಭೂಮಿಯನ್ನು ತೊರೆದು, ತಮ್ಮ ದೇಶದಲ್ಲಿಯೇ ನಿರಾಶ್ರಿತರಾಗಿ ಬೆಳೆದ ಕಥೆಯನ್ನು ಹೇಳಿತು.

    ಝುಂಡ್

    ಝುಂಡ್

    4

    ಅಮಿತಾಭ್ ಬಚ್ಚನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಝುಂಡ್ ಚಿತ್ರ 2022 ಮೇ 6 ಕ್ಕೆ ಜೀ5 ನಲ್ಲಿ ಬಿಡುಗಡೆಯಾಗಿದೆ. ನಿವೃತ್ತ ಕ್ರೀಡಾ ಕೋಚ್ `ವಿಜಯ್ ಬರ್ಸೆ' ಹೇಗೆ ಸ್ಲಮ್ ಫೂಟ್‌ಬಾಲ್ ಸಂಘವನ್ನು ಕಟ್ಟುತ್ತಾರೆ ಎಂಬ ಕಥೆಯನ್ನು ಹೊಂದಿದೆ.

    ಥಾರ್

    ಥಾರ್

    5

    ರಾಜ್ ಸಿಂಗ್ ಚೌಧರಿ ನಿರ್ದೇಶನದಲ್ಲಿ ಮೂಡಿಬಂದಿರುವ ಥಾರ್ ಚಿತ್ರದಲ್ಲಿ ಅನಿಲ್ ಕಪೂರ್, ಫಾತಿಮಾ ಸನಾ ಶೇಖ್ ಮತ್ತು ಹರ್ಷವರ್ಧನ್ ಕಪೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಮೇ 6 ರಂದು ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ.

    ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್

    ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್

    6

    ಮ್ಯಾಟ್ರಿಕ್ಸ್ ಸರಣಿಯಲ್ಲಿನ `ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್' ಚಿತ್ರ ಅಮೇಜಾನ್ ಪ್ರೈಮ್ ವೀಡಿಯೋದಲ್ಲಿ ಮೇ 6 ರಂದು ಬಿಡುಗಡೆಯಾಗಲಿದೆ. ಕೀನು ರೀವ್ಸ್ ಮತ್ತೆ ನಿಯೋ ಪಾತ್ರದಲ್ಲಿ ಮಿಂಚಿದ್ದಾರೆ.

    ಸಾನಿ ಕಾಯಿಧಮ್

    ಸಾನಿ ಕಾಯಿಧಮ್

    7

    ಅರುಣ್ ಮಾಥೇಶ್ವರನ್ ನಿರ್ದೇಶನದಲ್ಲಿ ಮೂಡಿಬಂದ `ಸಾನಿ ಕಾಯಿಧಮ್' ಚಿತ್ರ ಅಮೇಜಾನ್ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಯಾಗುತ್ತಿದೆ. ತನಗೆ ಮತ್ತು ತನ್ನ ಕುಟುಂಬಕ್ಕೆ ಆದ ಅನ್ಯಾಯವನ್ನು ಸರಿಪಡಿಸಿಕೊಳ್ಳುವ ಪಾತ್ರದಲ್ಲಿ ಕೀರ್ತಿ ಸುರೇಶ್ ನಟಿಸಿದ್ದಾರೆ.

    ಮ್ಯಾನ್ ಆಫ್ ದಿ ಮ್ಯಾಚ್

    ಮ್ಯಾನ್ ಆಫ್ ದಿ ಮ್ಯಾಚ್

    8

    ಪಿ.ಆರ್.ಕೆ ಪ್ರೊಡಕ್ಷನ್ಸ್ ನಲ್ಲಿ ಮೂಡಿ ಬಂದಿರುವ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರ ಮೇ 5 ರಂದು ಅಮೇಜಾನ್ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಯಾಗಿದೆ.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X