twitter
    X
    Home ಚಲನಚಿತ್ರಗಳ ಒಳನೋಟ

    ಕನ್ನಡದ ಕಣ್ಮಣಿ ಪುನೀತ್ ರಾಜ್‌ಕುಮಾರ್ ಸದ್ದಿಲ್ಲದೆ ಮಾಡಿದ ಸಮಾಜ ಸೇವೆಗಳಿವು

    Author Sowmya Bairappa | Updated: Saturday, March 16, 2024, 11:33 PM [IST]

    ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೋಟ್ಯಂತರ ಜನರ ಆರಾಧ್ಯ ದೈವ. ಪುನೀತ್‌ ರಾಜ್‌ಕುಮಾರ್‌ ಅವರು ಎಲೆಮರೆ ಕಾಯಿಯಂತೆ ಅನಾಥಾಶ್ರಮ, ಗೋ ಶಾಲೆ, ಮಕ್ಕಳ ಶಿಕ್ಷಣಕ್ಕಾಗಿ ನೆರವು, ವೃದ್ಧಾಶ್ರಮ ಹೀಗೆ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಯಾವುದೇ ಪ್ರಚಾರ ಬಯಸದೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಎಲ್ಲರಿಗೂ ಮಾದರಿಯಾಗಿದ್ದರು. ಪುನೀತ್ ಮಾಡಿದ ಕೆಲ ಸಮಾಜ ಸೇವೆಗಳ ವಿವರ ಇಲ್ಲಿದೆ

    cover image
    ಶಕ್ತಿಧಾಮದ ಮೂಲಕ‌ ಅಬಲೆಯರಿಗೆ ನೆರವು

    ಶಕ್ತಿಧಾಮದ ಮೂಲಕ‌ ಅಬಲೆಯರಿಗೆ ನೆರವು

    1

    ಕನ್ನಡದ ಕಣ್ಮಣಿ ಅಪ್ಪು ಶಕ್ತಿಧಾಮದ ಮೂಲಕ ನಿರಾಶ್ರಿತ ಅಬಲೆಯರಿಗೆ ಆಸರೆಯಾಗಿದ್ದರು. ಶಕ್ತಿಧಾಮದ ಮುಖಾಂತರ ಸಾವಿರಾರು ವಿದ್ಯಾರ್ಥಿನಿಯರಿಗೆ ನೆರವಾಗಿದ್ದರು.  ಇದರ ಮೂಲಕ ವಿದ್ಯಾರ್ಥಿನಿಯರಿಗೆ ಶಿಕ್ಷಣ ನೀಡುತ್ತಿದ್ದರು. ಶಕ್ತಧಾಮ ವರದಕ್ಷಿಣೆ ಕಿರುಕುಳಕ್ಕೊಳಗಾದ ಮಹಿಳೆ, ವೇಶ್ಯಾವಾಟಿಕೆಯಿಂದ ರಕ್ಷಿಸಲ್ಪಟ್ಟ ಮಹಿಳೆಯರಿಗೂ ಇಂದು ಆಸರೆಯಾಗಿದೆ.  

     

    ನೆರೆ ಸಂತ್ರಸ್ತರಿಗೆ ನೆರವು

    ನೆರೆ ಸಂತ್ರಸ್ತರಿಗೆ ನೆರವು

    2

    ನಟ ಪುನೀತ್ 2019ರಲ್ಲಿ ರಾಜ್ಯ ಭೀಕರ ಪ್ರವಾಹಕ್ಕೆ ಒಳಗಾದಾಗ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 5 ಲಕ್ಷ ರೂ. ದೇಣಿಗೆ ನೀಡಿದ್ದರು. ಆ ಸಂದರ್ಭ ಉತ್ತರ ಕರ್ನಾಟಕ ಭಾಗ ನೆರೆಗೆ ಮುಳುಗಿಹೋಗಿತ್ತು. ಈ ಸಂದರ್ಭ ಅಪ್ಪು ನೆರೆ ಸಂತ್ರಸ್ತರ ನೆರವಿಗೆ ಮುಂದಾಗಿದ್ದರು. 2018ರಲ್ಲಿ ವರುಣನ ಆರ್ಭಟಕ್ಕೆ ಕೇರಳ ತತ್ತರಿಸಿ ಹೋಗಿತ್ತು. ಹೆಚ್ಚಿನ ಜನರು ಮನೆಯನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ನಿರಾಶ್ರಿತರ ನೋವು ಅರಿತ ಅಪ್ಪು ಕೇರಳ ಸಿಎಂ ನಿಧಿಗೆ 5 ಲಕ್ಷ ರೂ. ನೀಡುವ ಮೂಲಕ ಪರರ ಕಷ್ಟಗಳಿಗೆ ಸದ್ದಿಲ್ಲದೆ ಸ್ಪಂದಿಸುವ ಗುಣವಂತನಾಗಿದ್ದರು.  

    ಕೋವಿಡ್ ವೇಳೆ ಸಹಾಯ

    ಕೋವಿಡ್ ವೇಳೆ ಸಹಾಯ

    3

    ಅಪ್ಪು ಯಾವುದೇ ಪ್ರಚಾರ ಬಯಸದೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ರು. ಕರ್ನಾಟಕ ಕೋವಿಡ್ ಸಂಕಷ್ಟದಲ್ಲಿದ್ದಾಗ ಪುನೀತ್ ಸಿಎಂ ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ರೂ. ನೆರವು ನೀಡಿದ್ದರು. ಹಣದ ಸಹಾಯದ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಜನಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಅಭಿಮಾನಿಗಳಿಗೂ ಸಿಎಂ ಕೋವಿಡ್ ಪರಿಹಾರ ನಿಧಿಗೆ ಕೊಡುಗೆ ನೀಡುವಂತೆ ಕರೆ ನೀಡಿದ್ದರು.

     

    ಇಂಡಸ್ಟ್ರಿ ಸಿಬ್ಬಂದಿಗೆ ನೆರವು

    ಇಂಡಸ್ಟ್ರಿ ಸಿಬ್ಬಂದಿಗೆ ನೆರವು

    4

    ಎರಡನೇ ಅಲೆ ವೇಳೆ‌ ಪುನೀತ್ ಬೆಂಗಳೂರು ‌ಪೊಲೀಸರ ಜೊತೆಗೂಡಿ ಕೋವಿಡ್ ಮುಂಜಾಗ್ರತೆ ಬಗ್ಗೆ ವಿಡಿಯೋ ಸಂದೇಶ ನೀಡಿದ್ದರು. ಕೋವಿಡ್ ಸಂದರ್ಭ ಕೆಲಸ ಕಳೆದುಕೊಂಡ ಸಿನಿಮಾ ಇಂಡಸ್ಟ್ರಿ ಸಿಬ್ಬಂದಿಗೆ ಕೂಡ ಸಹಾಯ ಹಸ್ತ ಚಾಚಿದ್ದರು.

    ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆಗಳಿಗೆ ನೆರವು

    ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆಗಳಿಗೆ ನೆರವು

    5

    ಪುನೀತ್  26 ಅನಾಥಾಶ್ರಮ, 26 ಉಚಿತ ಶಾಲೆಗಳು,  16 ವೃದ್ಧಾಶ್ರಮ ಹಾಗೂ 19 ಗೋಶಾಲೆಗಳಿಗೆ ಆರ್ಥಿಕ ನೆರವನ್ನೂ ನೀಡುತ್ತಿದ್ದರು. ತಾನು ಹಾಡುತ್ತಿದ್ದ ಹಾಡಿಗೆ ಬಂದ ಹಣವನ್ನು ಅಪ್ಪು ದಾನ ಮಾಡುತ್ತಿದ್ದರು. ಇದರ ಜೊತೆಗೆ ಆಗಾಗ ಕನ್ನಡ ಮಾಧ್ಯಮ ಶಾಲೆಗಳಿಗೂ ನೆರವಿನ ಹಸ್ತ ಚಾಚುತ್ತಿದ್ದರು.

    ಸರ್ಕಾರಿ‌ ಅಭಿಯಾನಗಳಿಗೆ ಅಪ್ಪು ರಾಯಭಾರಿ

    ಸರ್ಕಾರಿ‌ ಅಭಿಯಾನಗಳಿಗೆ ಅಪ್ಪು ರಾಯಭಾರಿ

    6

    ಅಪ್ಪು ಹಲವು ಸರ್ಕಾರಿ‌ ಅಭಿಯಾನಗಳಿಗೆ ಉಚಿತ ರಾಯಭಾರಿಯಾಗಿದ್ದರು.‌ 2019ರಲ್ಲಿ ಬಿಎಂಟಿಸಿ ಸಂಸ್ಥೆಯ ರಾಯಭಾರಿಯಾಗಿದ್ದರು. ಈ ಸಂದರ್ಭ ಬಸ್ ಲೇನ್, ಕಡಿಮೆ ಸಂಚಾರ ದಟ್ಟಣೆ ದಿನ ಹಾಗೂ ಮಹಿಳಾ ಕಿರುಕುಳ ವಿರುದ್ಧದ ಅಭಿಯಾನದ ಪರ ಜಾಗೃತಿ ಮೂಡಿಸುತ್ತಿದ್ದರು. ಕೆಎಂಎಫ್​ನ ಬ್ರಾಂಡ್ ಅಂಬಾಸಿಡರ್ ಆಗಿದ್ದ ಅಪ್ಪು,  ಕೆಎಂಎಫ್ ಹಾಲು ಉತ್ಪನ್ನಗಳ ಬಗ್ಗೆ ಪ್ರಚಾರ ಮಾಡುತ್ತಿದ್ದರು. ಇದರ ಜೊತೆಗೆ ಪುನೀತ್ ಹಲವು ವರ್ಷ ಬೆಸ್ಕಾಂನ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು.  ಹಣ ಪಡೆಯದೇ ಅಪ್ಪು ಎಲ್‌ಇಡಿ ಬಲ್ಬ್ ಬಗ್ಗೆ ಜನಜಾಗೃತಿ ಮೂಡಿಸಿದ್ದರು. ಇದರ ಜೊತೆಗೆ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೂ ಕರೆ ನೀಡುತ್ತಿದ್ದರು.

     

    ಅಸಂಖ್ಯಾತ ಮಕ್ಕಳ ಶಾಲಾ ಶುಲ್ಕ

    ಅಸಂಖ್ಯಾತ ಮಕ್ಕಳ ಶಾಲಾ ಶುಲ್ಕ

    7

    ಪುನೀತ್ ಶಿಕ್ಷಣಕ್ಕೆ ಹೆಚ್ಚಿನ ಒಟ್ಟು ನೀಡುತ್ತಿದ್ದರು. ಹೀಗಾಗಿ ಪ್ರತಿ ವರ್ಷ ಅಸಂಖ್ಯಾತ ಮಕ್ಕಳ ಶಾಲಾ ಶುಲ್ಕವನ್ನು ಭರಿಸುತ್ತಿದ್ದರು. ಆರ್​ಟಿಇ ಅಡಿ ಅನೇಕ ಸೀಟುಗಳು ಖಾಲಿ ಇದ್ದಾಗ ಪುನೀತ್ ಆ ಬಗ್ಗೆ ಜನಜಾಗೃತಿ ಮೂಡಿಸಿದ್ದರು. 

    ಕಣ್ಣು ದಾನ‌

    ಕಣ್ಣು ದಾನ‌

    8

    ಅಪ್ಪು ಸಾವಿನ ಬಳಿಕ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ಅವರ ಪ್ರೇರಣೆಯಿಂದ ನೇತ್ರದಾನ ಮಾಡುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಯಿತು. ಪುನೀತ್ ನಿಧನದ ನಂತರ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಯಿತು. ಅಪ್ಪು ಅವರ ಎರಡು ಕಣ್ಣುಗಳಿಂದ ನಾಲ್ವರು ಅಂಧರಿಗೆ ಹೊಸಬೆಳಕು ಲಭಿಸಿತ್ತು.  

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X