ಕನ್ನಡ ಸಿನಿರಂಗಕ್ಕೆ ಪಾರ್ವತಮ್ಮ ರಾಜಕುಮಾರ್ ಪರಿಚಯಿಸಿದ ನಾಯಕಿಯರು

  ಪಾರ್ವತಮ್ಮ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಸುಮಾರು 78 ಚಿತ್ರಗಳನ್ನು ನಿರ್ಮಿಸಿದ್ದಾರೆ. ವಜ್ರೇಶ್ವರಿ ಕಂಬೈನ್ಸ್ ಮತ್ತು ಪೂರ್ಣಿಮಾ ಎಂಟರ್‍ಪ್ರೈಸಸ್ ಮೂಲಕ ಚಿತ್ರಗಳ ನಿರ್ಮಾಣದಲ್ಲಿ ತೊಡಗಿದ ಪಾರ್ವತಮ್ಮ ನಂತರ ಕನ್ನಡ ಚಿತ್ರರಂಗದ ಶಕ್ತಿದೇವತೆ ಎಂದೇ ಪ್ರಸಿದ್ಧರಾದರು. ಹಲವು ಸಾಮಾಜಿಕ ಸಂದೇಶಯುಳ್ಳ ಚಿತ್ರಗಳನ್ನು ನೀಡಿದ ಪಾರ್ವತಮ್ಮ ರಾಜಕುಮಾರ್ ಕನ್ನಡಕ್ಕೆ ಹಲವು ಕಲಾವಿದರನ್ನು ಪರಿಚಯಿಸಿದರು. ಇದರಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ನಾಯಕಿಯರನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ. ಪಾರ್ವತಮ್ಮನವರ ಬ್ಯಾನರ್ ಮೂಲಕ ಕನ್ನಡದಲ್ಲಿ ನಾಯಕಿಯರಾಗಿ ಸಿನಿಪಯಣ ಆರಂಭಿಸಿದ ಕೆಲವು ಪ್ರಮುಖ ನಾಯಕಿಯರನ್ನು ಕೆಳಗೆ ನೀಡಲಾಗಿದೆ.

  1. ಸುಧಾರಾಣಿ (ಆನಂದ್)

  ಸುಪರಿಚಿತರು

  Actress

  ಜನಪ್ರಿಯ ಚಲನಚಿತ್ರಗಳು

  ಮಾಯಾಬಜಾರ್ 2016, ಲಾ, ಪ್ರೀಮಿಯರ್ ಪದ್ಮಿನಿ

  1986 ರಲ್ಲಿ ತೆರೆಕಂಡ ಶಿವರಾಜಕುಮಾರ್ ನಾಯಕನಾಗಿ ನಟಿಸಿದ ಆನಂದ್ ಚಿತ್ರದಿಂದ ಜಯಶ್ರೀ ಸುಧಾರಾಣಿ ಎಂಬ ಹೊಸ ಹೆಸರಿನಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಶಿವಣ್ಣ ಜೊತೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.

  2. ಆಶಾರಾಣಿ (ರಥಸಪ್ತಮಿ)

  ಸುಪರಿಚಿತರು

  Actress

  ಜನಪ್ರಿಯ ಚಲನಚಿತ್ರಗಳು

  ರಥಸಪ್ತಮಿ, ,

  1986 ರಲ್ಲಿ ತೆರೆಕಂಡ ತೆರೆಕಂಡ ಶಿವರಾಜಕುಮಾರ್ ನಾಯಕನಾಗಿ ನಟಿಸಿದ ರಥಸಪ್ತಮಿ ಚಿತ್ರದಿಂದ ನಾಯಕಿಯಾಗಿ ಸಿನಿಪಯಣ ಆರಂಭಿಸಿದರು. ಕನ್ನಡದ ಖ್ಯಾತ ನಟ ರಾಜೇಶ್ ಪುತ್ರಿಯಾಗಿರುವ ಇವರು ಅರ್ಜುನ್ ಸರ್ಜಾರನ್ನು ವಿವಾಹವಾದರು.

  3. ಮಾಲಾಶ್ರೀ (ನಂಜುಂಡಿ ಕಲ್ಯಾಣ)

  ಸುಪರಿಚಿತರು

  Actress

  1989 ರಲ್ಲಿ ತೆರೆಕಂಡ ತೆರೆಕಂಡ ರಾಘವೇಂದ್ರ ರಾಜಕುಮಾರ್ ನಾಯಕನಾಗಿ ನಟಿಸಿದ ನಂಜುಂಡಿ ಕಲ್ಯಾಣ ಚಿತ್ರದಿಂದ ಶ್ರೀದುರ್ಗಾ ಮಾಲಾಶ್ರೀಯಾಗಿ  ಚಂದನವನ ಪ್ರವೇಶಿಸಿದರು. ಇದಕ್ಕೂ ಮುನ್ನ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X