twitter
    X
    Home ಚಲನಚಿತ್ರಗಳ ಒಳನೋಟ

    ಮದುವೆಗೂ ಮುನ್ನವೇ ಗರ್ಭಿಣಿಯಾದ 9 ನಟಿಯರಿವರು

    Author Sowmya Bairappa | Updated: Saturday, February 18, 2023, 11:22 AM [IST]

    ಬಾಲಿವುಡ್‌ನ ಹಲವು ನಟಿಮಣಿಯರು ಮದುವೆಗೂ ಮುನ್ನ ಗರ್ಭ ಧರಿಸಿದ್ದಾರೆ. ಬಳಿಕ ಮದುವೆ ಆಗಿದ್ದಾರೆ. ಈ ಸಾಲಿನಲ್ಲಿ ಸ್ಟಾರ್ ನಟಿಯರೂ ಕೂಡ ಇದ್ದಾರೆ. ನೇಹಾ ಧೂಪಿಯಾ, ಕೊಂಕಣ ಸೇನ್, ಶ್ರೀದೇವಿ ಕೂಡ ಇದ್ದಾರೆ.ಹೀಗೆ ಮದುವೆಗೂ ಮುನ್ನ ಗರ್ಭಿಣಿಯಾರಾದ ನಟಿಯರ ಪಟ್ಟಿ ಇಲ್ಲಿದೆ.

    cover image
    ಆಲಿಯಾ ಭಟ್

    ಆಲಿಯಾ ಭಟ್

    1

    ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ 14 ಏಪ್ರಿಲ್ 2022 ರಂದು ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ವಿವಾಹವಾದರು. ಕೆಲವೇ ಆತ್ಮೀಯರು, ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆ ಆಗಿದೆ. ಆಲಿಯಾ ಭಟ್ ತನ್ನ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದ ನಂತರ, ಮದುವೆಗೆ ಮೊದಲು ಗರ್ಭಧರಿಸಿದ ನಟಿಯರ ಬಗ್ಗೆ ಸುದ್ದಿ ಹಬ್ಬಿತ್ತು. 

    ಶ್ರೀದೇವಿ

    ಶ್ರೀದೇವಿ

    2

    ಚಿತ್ರರಂಗದಲ್ಲಿ ಅತಿಲೋಕ ಸುಂದರಿ ಎಂದೇ ಹೆಸರಾಗಿದ್ದ ದಿವಂಗತ ನಟಿ ಶ್ರೀದೇವಿ ಬೋನಿ ಕಪೂರ್ ಅವರನ್ನು ಮದುವೆಯಾಗುವ ಮೊದಲು ತಮ್ಮ ಮೊದಲ ಮಗು ಜಾಹ್ನವಿ ಹೊಟ್ಟೆಯಲ್ಲಿ ಇದ್ದರು. ಇವರು ಮದುವೆ ಆಗುವ ಸಂದರ್ಭದಲ್ಲಿ ಶ್ರೀದೇವಿ 7 ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದೆ. 

    ನೇಹಾ ಧೂಪಿಯಾ

    ನೇಹಾ ಧೂಪಿಯಾ

    3

    ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ 2018ರಲ್ಲಿ ಮದುವೆ ಆದರು. ಯಾವುದೇ ಸುದ್ದಿ ಇಲ್ಲದೇ ಈ ಜೋಡಿ ಗೌಪ್ಯವಾಗಿ ಮದುವೆ ಮಾಡಿಕೊಂಡಿದ್ದರು. ಆದರೆ ಇವರ ಮದುವೆಗಿಂತ ಮಗುವಿನ ಬಗ್ಗೆ ಹೆಚ್ಚಿನ ಸುದ್ದಿ ಹಬ್ಬಿತ್ತು. ಇನ್ನು ಮದುವೆಯಾದ 3 ತಿಂಗಳಲ್ಲಿ ನೇಹಾ ಧೂಪಿಯಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಘೋಷಿಸುವ ಮೂಲಕ ಆಶ್ಚರ್ಯಕ್ಕೆ ಕಾರಣವಾಗಿದ್ದರು.

    ಸಾರಿಕಾ

    ಸಾರಿಕಾ

    4

    ನಟಿ ಸಾರಿಕಾ ಜನಪ್ರಿಯ ನಟ ಕಮಲ್ ಹಾಸನ್ ಅವರೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ಗರ್ಭಿಣಿಯಾದ ಬಳಿಕ ಇಬ್ಬರೂ ಮದುವೆ ಆದರು ಎನ್ನಲಾಗಿದೆ.

     ವೀಣಾ ಮಲಿಕ್

    ವೀಣಾ ಮಲಿಕ್

    5

    ಪಾಕಿಸ್ತಾನಿ ಮೂಲದ ವೀಣಾ ಮಲಿಕ್ ಬಾಲಿವುಡ್ ಹಾಗೂ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ವೀಣಾ ಮಲಿಕ್ ತಾವು ಪ್ರೀತಿಸುತ್ತಿದ್ದ ಪ್ರಶಾಂತ್ ಪ್ರತಾಪ್ ಸಿಂಗ್ ರಿಂದ ಮದುವೆಯಾಗದೆ ಮಗುವಿಗೆ ಜನ್ಮ ನೀಡಿದ್ದರು. ಇದಾದ ಬಳಿಕ ಆಷಾಢ ಬಶೀರ್ ಖಾನ್ ಎಂಬಾತನನ್ನು ಮದುವೆಯಾದರು.  

    ಆಮಿ ಜಾಕ್ಸನ್

    ಆಮಿ ಜಾಕ್ಸನ್

    6

    ಆಮಿ ಜಾಕ್ಸನ್ ಕನ್ನಡದ 'ದಿ ವಿಲನ್' ಸೇರಿದಂತೆ ಹಿಂದಿ, ತಮಿಳು, ತೆಲುಗಿನ ಅನೇಕ ಚಲನಚಿತಗಳಲ್ಲಿ ನಟಿಸಿದ್ದಾರೆ. ೨೦೧೯ರ ಜನವರಿ ೧ರಂದು ಜಾರ್ಜ್ ಪಣಯೌಟು ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಕೆಲವೇ ದಿನಗಳಲ್ಲಿ ತಾವು ಗರ್ಭಿಣಿಯಾಗಿರುವ ಬಗ್ಗೆ ಹೇಳಿಕೊಂಡಿದ್ದರು. ಬೇಬಿ ಬಂಪ್ ಫೋಟೋಗಳನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಮಗು ಜನಿಸಿದ ಬಳಿಕ ಈ ಜೋಡಿ ಮದುವೆಯಾಗಿತ್ತು .   

     ನತಾಶಾ ಸ್ಟಾಂಕೋವಿಕ್

    ನತಾಶಾ ಸ್ಟಾಂಕೋವಿಕ್

    7

    ಸರ್ಬಿಯಾ ಮೂಲದ ನಟಿ ನತಾಶಾ ಸ್ಟಾಂಕೋವಿಕ್,  2020ರ ಜನವರಿಯಲ್ಲಿ ಭಾರತೀಯ ಮೂಲದ ಕ್ರಿಕೆಟರ್ ಹಾರ್ದಿಕ್ ಪಾಡ್ಯ ಅವರನ್ನು ಮದುವೆಯಾಗಿ, ಅದೇ ವರ್ಷ ಮೇ 30ರಂದು ವಿವಾಹವಾದರು. ಜುಲೈನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. 

     ದಿಯಾ ಮಿರ್ಜಾ

    ದಿಯಾ ಮಿರ್ಜಾ

    8

    2019ರಲ್ಲಿ ಮೊದಲನೇ ಪತಿಯಿಂದ ದೂರವಾಗಿದ್ದ ದಿಯಾ ಮಿರ್ಜಾ, 2021ರಲ್ಲಿ  ಮುಂಬೈ ಮೂಲದ ಉದ್ಯಮಿ ವೈಭವ್ ರೇಖಿ ಅವರನ್ನು ಮದುವೆಯಾದರು. ವಿವಾಹವಾದ 2 ತಿಂಗಳ ಬಳಿಕ ದಿಯಾ ಮಿರ್ಜಾ ತಾವು ಗರ್ಭಿಣಿಯಾಗಿರುವ ವಿಚಾರ ತಿಳಿಸಿದ್ದರು. 

    ಕೊಂಕಣ ಸೇನ್ ಶರ್ಮಾ

    ಕೊಂಕಣ ಸೇನ್ ಶರ್ಮಾ

    9

    ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೊಂಕಣ ಸೇನ್ ಶರ್ಮಾ ಮತ್ತು ರಣವೀರ್ ಶೋರೆ ಖಾಸಗಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಶೀಘ್ರದಲ್ಲೇ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದರು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X