ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಸೂಪರ್ ಹಿಟ್ ಚಿತ್ರಗಳು

  2007 ರಲ್ಲಿ ತೆರೆಕಂಡ ಸಿಕ್ಸರ್ ಚಿತ್ರದಿಂದ ಪ್ರಜ್ವಲ್ ದೇವರಾಜ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಡೈನಾಮಿಕ್ ಹೀರೋ ದೇವರಾಜ್ ರ ಹಿರಿಯ ಪುತ್ರರಾಗಿರುವ ಇವರು ತಮ್ಮ ಮೊದಲ ಚಿತ್ರದಲ್ಲಿಯೇ ಭರವಸೆ ಮೂಡಸಿದರು. ನಂತರ ಮೆರವಣಿಗೆ, ಮುರಳಿ ಮೀಟ್ಸ್ ಮೀರಾ, ಭದ್ರ, ಚೌಕ ಮುಂತಾದ ಚಿತ್ರಗಳ ಮೂಲಕ ಪ್ರಜ್ವಲ್ ಕನ್ನಡ ಸಿನಿರಸಿಕರ ಮನದಲ್ಲಿ ಸ್ಥಾನ ಪಡೆದಿದ್ದಾರೆ. ಇಲ್ಲಿ ಪ್ರಜ್ವಲ್ ಸಿನಿ ಜೀವನದ ಸೂಪರ್ ಹಿಟ್ ಚಿತ್ರಗಳನ್ನು ನೀಡಲಾಗಿದೆ.
  ಶಶಾಂಕ್ ನಿರ್ದೇಶನದ ಸಿಕ್ಸರ್ ಚಿತ್ರದಿಂದ ಪ್ರಜ್ವಲ್ ಚಿತ್ರರಂಗಕ್ಕೆ ಬಂದರು. ಈ ಚಿತ್ರದ ನಟನೆಗಾಗಿ ಸುವರ್ಣ ಅತ್ಯುತ್ತಮ ಡೆಬ್ಯೂ ಪ್ರಶಸ್ತಿ ಪಡೆದರು. ರಾಮೋಜಿ ಫಿಲ್ಮ ಸಿಟಿ ನಿರ್ಮಾತೃ ಮತ್ತು ಖ್ಯಾತಿ ನಿರ್ಮಾಪಕ ರಾಮೋಜಿ ರಾವ್ ಈ ಚಿತ್ರವನ್ನು ನಿರ್ಮಿಸಿದರು. ಒಬ್ಬ ಟಿನೇಜ್ ಹುಡುಗ ಕ್ರಿಕೆಟ್ ಆಟಗಾರ್ ಆಗುವ ಕನಸನ್ನು ಈ ಚಿತ್ರ ಹೇಳುತ್ತದೆ.
  ಎ ಹರ್ಷ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಜೊತೆ ತರುಣ್ ಚಂದ್ರ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದರು. ದುನಿಯಾ ವಿಜಿ ಮತ್ತು ಪೂಜಾ ಗಾಂಧಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರು ಪ್ರಾಣ ಸ್ನೇಹಿತರು ಎರಡು ವಿರುದ್ಧ ಕ್ರಿಮಿನಲ್ ಗ್ಯಾಂಗ್ ಸೇರಿದಾಗ ನೆಡೆಯುವ ಘಟನೆಗಳನ್ನು ಇಟ್ಟುಕೊಂಡು ಚಿತ್ರ ಮೂಡಿ ಬಂತು.
  ಮಹೇಶ್ ಬಾಬು ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಪ್ರಜ್ವಲ ಜೊತೆ ಐಂದ್ರಿತಾ ರೇ ಮುಖ್ಯ ಪಾತ್ರದಲ್ಲಿ ನಟಿಸಿದರು. ರಮ್ಯಾ ಒಂದು ಚಿಕ್ಕ ಪಾತ್ರದಲ್ಲಿ ನಟಿಸಿದ್ದರು. ಇಬ್ಬರು ಪ್ರಾಣ ಸ್ನೇಹಿತರು ತಮ್ಮ ಮಕ್ಕಳನ್ನು ಪರಸ್ಪರ ವಿವಾಹ ಬಂಧನದಲ್ಲಿ ಒಂದುಗೂಡಿಸಲು ಪ್ರಯತ್ನಿಸಿದಾಗ ಅಲ್ಲಿ ನೆಡೆಯುವ ಘಟನೆಗಳನ್ನು ಈ ಚಿತ್ರ ಚಿತ್ರಿಸುತ್ತದೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X