twitter
    X
    Home ಚಲನಚಿತ್ರಗಳ ಒಳನೋಟ

    ಡಾ. ವಿಷ್ಣುವರ್ಧನ್ ರ ಅತ್ಯುತ್ತಮ ಶೋಕಗೀತೆಗಳು

    Author Administrator | Updated: Friday, May 6, 2022, 10:04 AM [IST]

    ಸಾಹಸಸಿಂಹ ಡಾ. ವಿಷ್ಣುವರ್ಧನ್ ತಮ್ಮ ವಿಭಿನ್ನ ನಟನೆಯಿಂದ ಅಭಿನಯ ಭಾರ್ಗವ ಎಂದೇ ಹೆಸರು ಪಡೆದಿದ್ದಾರೆ. ವಿಷ್ಣು ಭಗ್ನ ಪ್ರೇಮಯಾಗಿ, ತ್ಯಾಗಮಯಿಯಾಗಿ ಪ್ರೇಕ್ಷಕರನ್ನು ಸಾಕಷ್ಟು ಬಾರಿ ಕಣ್ಣೀರ ಧಾರೆಯಲ್ಲಿ ತೋಯಿಸಿದ್ದುಂಟು. ಇಲ್ಲಿ ವಿಷ್ಣುರ ಟಾಪ್ 10 ಶೋಕ ಗೀತೆಗಳನ್ನು ನೀಡಿದೆ. (ನಿಮಗೆ ಯಾವುದೇ ಗೀತೆಗಳನ್ನು ಈ ಲಿಸ್ಟಿನಲ್ಲಿ ಸೇರಿಸಬೇಕೆಂದರೆ, ಗೀತೆಯ ಹೆಸರೊಂದಿಗೆ [email protected] ಗೆ ಮೇಲ್ ಮಾಡಿ)

    cover image

    ಆ ಕರ್ಣನಂತೆ

    ವಿಷ್ಣುವರ್ಧನ್ ಮತ್ತು ಸುಮಲತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಕರ್ಣ ಚಿತ್ರದ `ಆ ಕರ್ಣನಂತೆ' ಗೀತೆ ಕನ್ನಡದ ಅತ್ಯುತ್ತಮ ಶೋಕಗೀತೆಗಳಲ್ಲೊಂದು. ವಿಷ್ಣುವರ್ಧನ್ ತನ್ನ ತಂಗಿಗೆ ಮದುವೆ ಮಾಡಲು, ತನ್ನ ತಂದೆಗೆ ಸಹಾಯ ಮಾಡಲು ತನ್ನ ಕಿಡ್ನಿಯನ್ನೇ ಮಾರುವ ಸಂದರ್ಭದಲ್ಲಿ ಈ ಹಾಡು ಮೂಡಿ ಬರುತ್ತದೆ.

    ಪ್ರೇಮದಾ ಕಾದಂಬರಿ

    ವಿಷ್ಣುವರ್ಧನ್ ಮತ್ತು ಸುಹಾಸಿನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಬಂಧನ ಚಿತ್ರದ ಗೀತೆಯಿದು. ಬ್ಲಡ್ ಕ್ಯಾನ್ಸರ್ ನಿಂದ ಬಳುಲುತ್ತಿದ್ದ ವಿಷ್ಣುವರ್ಧನ್ ಸುಹಾಸಿನಿ ಸೀಮಂತ್ ಕಾರ್ಯಕ್ರಮದಲ್ಲಿ ಹಾಡುವ ಗೀತೆಯಿದು. ತನ್ನ ಪ್ರೇಯಸಿಯು ತನ್ನ ಆಪ್ತಮಿತ್ರನೊಂದಿಗೆ ವಿವಾಹವಾದಾಗ, ಪ್ರೇಮ ವೈಫಲ್ಯದಿಂದ ಕುಡಿತದ ಮೊರೆ ಹೋಗುವ ನಾಯಕ ಕೊನೆಗೆ ಬ್ಲಡ್ ಕ್ಯಾನ್ಸರ್ ನಿಂದ ಮಡಿಯುತ್ತಾನೆ.

    ಪ್ರೇಮಾನುರಾಗ

    ವಿಷ್ಣುವರ್ಧನ್, ಭವ್ಯಾ ಮತ್ತು ಖುಷ್ಬು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಹೃದಯಗೀತೆ ಚಿತ್ರದಲ್ಲಿ ಬರುವ ಹಾಡಿದು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಕಂಠದಲ್ಲಿ ಮೂಡಿದ ಗೀತೆಯಿದು. ತನ್ನ ಪ್ರೇಯಸಿಯು ಬೇರೊಬ್ಬನ ಜೊತೆ ಮದುವೆಯಾಗುವಾಗ ಈ ಗೀತೆ ಮೂಡಿ ಬರುತ್ತದೆ.

    ಪ್ರೇಮ ಚಂದ್ರಮ

    ವಿಷ್ಣುವರ್ಧನ್ ರವರು ದ್ವಿಪಾತ್ರದಲ್ಲಿ ನಟಿಸಿದ್ದ `ಯಜಮಾನ' ವಿಷ್ಣುವರ್ಧನ್ ರ ಸಿನಿಜೀವನದ ಅತಿ ದೊಡ್ಡ ಹಿಟ್ ಚಿತ್ರ. ಕೆ ಕಲ್ಯಾಣ್ ಸಾಹಿತ್ಯ ಮತ್ತು ರಾಜೇಶ್ ಕೃಷ್ಣನ್ ಕಂಠದಲ್ಲಿ ಮೂಡಿಬಂದ ಪ್ರೇಮ ಚಂದ್ರಮ ಗೀತೆ ಎರಡು ವರ್ಷನ್ ನಲ್ಲಿ ಮೂಡಿ ಬಂತು. ತನ್ನ ಪ್ರೇಯಸಿಯ ಜನ್ಮದಿನದ ಸಂಭ್ರಮದಲ್ಲಿ ಪ್ರೇಯಸಿಯಿಂದಲೇ ಅವಮಾನಕ್ಕೊಳಗಾಗುವ ಪ್ರೇಮಿಯೊಬ್ಬ ಹಾಡುವ ಶೋಕಗೀತೆಯಾಗಿ ಈ ಗೀತೆ ಮೂಡಿ ಬಂದಿತ್ತು.

    ನೀ ಮೀಟಿದ ನೆನಪೆಲ್ಲವೂ

    ವಿಷ್ಣುವರ್ಧನ್ ಮತ್ತು ಭವ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ನೀ ಬರೆದ ಕಾದಂಬರಿ ಚಿತ್ರದಲ್ಲಿದ್ದ ಈ ಗೀತೆ ಆರ್.ಎನ್.ಜಯಗೋಪಾಲ್ ಸಾಹಿತ್ಯ ಮತ್ತು ಎಸ್.ಪಿ.ಬಿ-ಜಾನಕಮ್ಮ ಕಂಠದಲ್ಲಿ ಮೂಡಿ ಬಂದಿತ್ತು. ಪ್ರೀತಿಸಿ ಮದುವೆಯಾದ ದಂಪತಿಗಳಿಬ್ಬರು ಪುತ್ರ ಸಂತಾನದ ನಂತರ ಕೆಲ ಭಿನ್ನಾಭಿಪ್ರಾಯಗಳಿಂದ ಬೇರಾಗುವ ಸಂದರ್ಭದಲ್ಲಿ ಈ ಗೀತೆ ಮೂಡಿ ಬಂದಿತ್ತು.

    ಈ ಬಾಳಲ್ಲಿ ಶಾಂತಿ ಎಲ್ಲಿದೆ

    ವಿಷ್ಣುವರ್ಧನ್ ಮತ್ತು ಭವ್ಯಾ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಕೃಷ್ಣಾ ನೀ ಬೇಗನೆ ಬಾರೋ ಚಿತ್ರವನ್ನು ಬಾರ್ಗವ ನಿರ್ದೇಶಿಸಿದ್ದರು. `ಈ ಬಾಳಲ್ಲಿ ಶಾಂತಿ ಎಲ್ಲಿದೆ' ಗೀತೆ ಚಿ. ಉದಯಶಂಕರ್ ಸಾಹಿತ್ಯದಲ್ಲಿ ಮೂಡಿ ಬಂದಿತ್ತು. ಎಸ್.ಪಿ.ಬಿ-ಜಾನಕಮ್ಮ ಕಂಠದಲ್ಲಿ ಈ ಗೀತೆ ಮೂಡಿ ಬಂದಿತ್ತು.

    ಜೀವ ಜ್ಯೋತಿಯೇ

    ವಿಷ್ಣುವರ್ಧನ್ ಮತ್ತು ಶೃತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರವನ್ನು ಎಸ್ ನಾರಾಯಣ್ ನಿರ್ದೇಶಿಸಿದ್ದರು. ಜಗಳವಾಡಿ ಮಾತು ಬಿಟ್ಟಿದ್ದರೂ ತನ್ನ ಜೊತೆ ಸಹಬಾಳ್ವೆ ನೆಡೆಸುತ್ತಿದ್ದ ಪತ್ನಿ ಮಡಿದಾಗ ಬರುವ ಗೀತೆಯಿದು. ರಾಜೇಶ್ ರಾಮನಾಥ್ ಸಂಗೀತ ಮತ್ತು ಎಸ್.ಪಿ.ಬಾಲಸುಬ್ರಹ್ಮಣ್ಯಂ ಕಂಠದಲ್ಲಿ ಈ ಗೀತೆ ಮೂಡಿ ಬಂದಿತ್ತು.

    ನನ್ನವರು ಯಾರು ಇಲ್ಲ

    ವಿ‍ಷ್ಣುವರ್ಧನ್ ಮತ್ತು ರಾಧಿಕಾ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಜೀವನ ಚಕ್ರ ಚಿತ್ರವನ್ನು ಭಾರ್ಗವ ನಿರ್ದೇಶನ ಮಾಡಿದ್ದರು. ಚಿ. ಉದಯಶಂಕರ್ ಸಾಹಿತ್ಯದಲ್ಲಿ ಮೂಡಿಬಂದಿದ್ದ `ನನ್ನವರು ಯಾರು ಇಲ್ಲ' ಎಸ್.ಪಿ. ಬಾಲಸುಬ್ರಹ್ಮಣ್ಯಂ ಕಂಠದಲ್ಲಿ ಮೂಡಿ ಬಂದಿತ್ತು.

    ಬೆಟ್ಟದಂಥ ಮನಸು

    ಎಸ್ ನಾರಾಯಣ್ ನಿರ್ದೇಶನದಲ್ಲಿ ಮೂಡಿಬಂದ ಜಮೀನ್ದಾರು ಚಿತ್ರದಲ್ಲಿ ಡಾ. ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿದ್ದರು. ಎಸ್ ನಾರಾಯಣ್ ಸಾಹಿತ್ಯದಲ್ಲಿ ಮೂಡಿಬಂದಿದ್ದ ಈ ಗೀತೆಗೆ ಎಂ.ಎಂ.ಕೀರವಾಣಿ ಸಂಗೀತ ನೀಡಿ ಹಾಡಿದ್ದರು. ಜೀವನದಲ್ಲಿ ವಿಧಿಯಾಟಗಳಿಂದ ಸಂಸಾರ ಸುಖ ಮತ್ತು ಕುಟುಂಬದಿಂದ ದೂರಾಗಿ ಒಂಟಿಯಾಗಿ ಬದುಕುವ ಬೆಟ್ಟಪ್ಪ ಕೊನೆಗೆ ತನ್ನ ಕುಟುಂಬಕ್ಕಾಗಿ ಮಡಿಯುತ್ತಾನೆ. ಆ ಸಂದರ್ಭದಲ್ಲಿ ಮೂಡಿಬರುವ ಈ ಹಾಡು ಬೆಟ್ಟಪ್ಪನ ವ್ಯಕ್ತಿತ್ವವನ್ನು ಚಿತ್ರಿಸುತ್ತಾನೆ.

    ನೂರೊಂದು ನೆನಪು

    ಡಾ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿ ಬಂದ ಬಂಧನ ಚಿತ್ರದಲ್ಲಿನ `ನೂರೊಂದು ನೆನಪು' ಗೀತೆ ಕನ್ನಡದ ಅತ್ಯುತ್ತಮ ಶೋಕಗೀತೆಗಳಲ್ಲೊಂದು. ಈ ಚಿತ್ರದ ಮೂಲಕ ವಿಷ್ಣು-ಸುಹಾಸಿನಿ ಜೋಡಿ ಕನ್ನಡದ ಜನಪ್ರಿಯ ಜೋಡಿಗಳಲ್ಲೊಂದಾಯಿತು. ತನ್ನ ಪ್ರೇಯಸಿಯು ತನ್ನ ಸ್ನೇಹಿತನನ್ನು ಮದುವೆಯಾದ ಸಂದರ್ಭದಲ್ಲಿ ಮೂಡಿ ಬರುವ ಹಾಡಿದು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X