X
ಹೋಮ್ ಚಲನಚಿತ್ರಗಳ ಒಳನೋಟ

ಈ ವಾರ ಎಲಿಮಿನೇಷನ್ ಇಲ್ಲ: ಈ ಐವರು ಸ್ಪರ್ಧಿಗಳ ಪೈಕಿ ಕ್ಯಾಪ್ಟನ್ ಆಗೋರು ಯಾರು?

Author Sowmya Bairappa | Published: Friday, October 11, 2024, 11:31 AM [IST]

ಬಿಗ್‌ಬಾಸ್ ಮನೆಯಲ್ಲಿ ಮೊದಲ ವಾರ ಕ್ಯಾಪ್ಟನ್ ಆಗಲೇಬೇಕು ಅಂತ ನರಕವಾಸಿಗಳ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದ ಹಂಸಾಗೆ ಸದ್ಯ ನಸೀಬು ಸರಿಯಿಲ್ಲ. ಕ್ಯಾಪ್ಟನ್ ಆದಾಗಿನಿಂದಲೂ ಹಲವು ಸವಾಲುಗಳನ್ನು ಎದುರಿಸುತ್ತಿರುವ ಹಂಸಾ, ಸ್ವರ್ಗ-ನರಕ ನಿವಾಸಿಗಳ ನಡುವೆ ಸಿಲುಕಿ ಒದ್ದಾಡುತ್ತಿದ್ದಾರೆ. ಟಾಸ್ಕ್ ಉಸ್ತುವಾರಿಯಾಗಿದ್ದ ಅವರು ನಿಯಮಗಳನ್ನು ಸರಿಯಾಗಿ ಓದದೇ, ತೀರ್ಮಾನ ತೆಗೆದುಕೊಂಡು ಮತ್ತಷ್ಟು ಎಡವಟ್ಟು ಮಾಡಿಕೊಂಡಿದ್ದಾರೆ. ಕಳೆದ ಸಂಚಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ. ಸದ್ಯ ಎರಡನೇ ವಾರದ ಟಾಸ್ಕ್‌ಗಳು ಮುಕ್ತಾಯಗೊಂಡಿದ್ದು, ಎರಡನೇ ವಾರದ ಕ್ಯಾಪ್ಟನ್ ಆಯ್ಕೆ ಇಂದು ನಡೆಯಲಿದೆ.


cover image
ಕ್ಯಾಪ್ಟನ್ ರೇಸ್‌ನಲ್ಲಿರುವ ಸ್ಪರ್ಧಿಗಳು

ಬಿಗ್‌ಬಾಸ್ ಮನೆಯ ಮೂಲ ನಿಯಮ ಮುರಿದ ಕಾರಣ ಈ ಎರಡನೇ ವಾರ ಬಿಗ್‌ಬಾಸ್‌ ಎಲ್ಲರನ್ನು ನಾಮಿನೇಟ್ ಮಾಡಿದ್ದರು. ಬಳಿಕ ನಾಮಿನೇಷನ್‌ನಿಂದ ಬಚಾವ್ ಆಗಲು ಹಾಗೂ ನೇರವಾಗಿ ನಾಮಿನೇಟ್ ಮಾಡುವುದಕ್ಕೆ ಹಲವು ಟಾಸ್ಕ್‌ಗಳನ್ನು ನೀಡಿದ್ದರು. ಇದರ ಅನುಸಾರ, ನಾಮಿಷನ್‌ನಿಂದ ಸೇವ್ ಆಗಿರುವ ಮೋಕ್ಷಿತಾ ಪೈ, ಉಗ್ರಂ ಮಂಜು, ಗೌತಮಿ ಜಾದವ್, ಚೈತ್ರಾ ಕುಂದಾಪುರ, ಶಿಶಿರ್ ಶಾಸ್ತ್ರಿ ಸದ್ಯ ಕ್ಯಾಪ್ಟನ್ಸಿ ರೇಸ್‌ನಲ್ಲಿದ್ದಾರೆ. ಈ ಐವರ ಪೈಕಿ ಯಾರು ಕ್ಯಾಪ್ಟನ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕು. 


ಎಲಿಮಿನೇಷನ್ ಇಲ್ಲ

ಈ ವಾರ ಮನೆಯಿಂದ ಹೊರಹೋಗಲು ಭವ್ಯಾ ಗೌಡ, ಧನರಾಜ್, ಧರ್ಮ ಕೀರ್ತಿರಾಜ್, ರಂಜಿತ್, ತ್ರಿವಿಕ್ರಮ್, ಮಾನಸಾ, ಐಶ್ವರ್ಯಾ ಸಿಂಧೋಗಿ, ಗೋಲ್ಡ್ ಸುರೇಶ್, ಹಂಸಾ, ಜಗದೀಶ್ ಹಾಗೂ ಅನುಷಾ ರೈ ನಾಮಿನೇಟ್ ಆಗಿದ್ದರು. ಆದರೆ, ವೋಟಿಂಗ್ ಲೈನ್ಸ್ ತೆರೆದಿರುವುದಿಲ್ಲ ಎಂಬ ಸೂಚನೆ ನೀಡಲಾಗಿದೆ. ಹೀಗಾಗಿ, ಈ ವಾರ ಎಲಿಮಿನೇಷನ್ ಇಲ್ಲ ಎಂಬುದು ಖಾತ್ರಿಯಾಗಿದೆ. ಇದೇ ಶನಿವಾರ ವಿಜಯ ದಶಮಿ ಇರುವ ಕಾರಣ ಹಬ್ಬದಂದು ಯಾರನ್ನೂ ಎಲಿಮಿನೇಟ್ ಮಾಡುವುದಿಲ್ಲ. 


ಜಗದೀಶ್‌ಗೆ ಮೋಕ್ಷಿತಾ ವಾರ್ನಿಂಗ್

ಈ ವಾರದ ಕೊನೆಯ ಟಾಸ್ಕ್ ಮೈತುಂಬಾ ಕೆಸರು, ನಾಮಿನೇಷನ್‌ನಿಂದ ಪಾರು. ಈ ಟಾಸ್ಕ್‌ನಲ್ಲಿ ಕ್ಯಾಪ್ಟನ್ ಹಂಸ ತೆಗೆದುಕೊಂಡ ನಿರ್ಧಾರದಿಂದಾಗಿ ಎರಡು ತಂಡಗಳ ನಡುವೆ ಕಲಹ ಉಂಟಾಗಿತ್ತು. ಆಗ ಸ್ವರ್ಗ-ನರಕದ ಕ್ಯಾಪ್ಟನ್‌ಗಳಾದ ಗೌತಮಿ ಹಾಗೂ ಮೋಕ್ಷಿತಾ ಮಾತನಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು. ಇದರ ಮಧ್ಯೆ ಲಾಯರ್ ಜಗದೀಶ್ ಬಂದು ಕೂಗಾಡುವುದಕ್ಕೆ ಬಂದರು. ಇದರಿಂದ ಸಿಟ್ಟಾದ ಮೋಕ್ಷಿತಾ, ಜಗದೀಶ್‌ಗೆ ಖಡಕ್ ಎಚ್ಚರಿಕೆ ಕೊಟ್ಟರು. ಮೋಕ್ಷಿತಾ ಇಷ್ಟು ಸಿಟ್ಟಿನಿಂದ, ಕೋಪದಿಂದ ಕೂಗಾಡಿದ್ದು ಇದೇ ಮೊದಲ ಬಾರಿ. 


 ಆಸ್ಪತ್ರೆ ಸೇರಿದ ಮಾನಸ

ಎರಡನೇ ವಾರ ದೊಡ್ಮನೆ ಸದಸ್ಯರ ನಡುವೆ ಕಾಂಪಿಟೇಶನ್, ಕಿತ್ತಾಟ ಎಲ್ಲವೂ ಜೋರಾಗಿದೆ. ಈ ನಡುವೆ ತುಕಾಲಿ ಮಾನಸ ಕಾಲಿಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ. ಮಾನಸ ಬಿಗ್‌ಬಾಸ್‌ ಮನೆಗೆ ಬಂದಾಗಿನಿಂದಲೂ ಅಂದುಕೊಂಡಷ್ಟು ಮನೋರಂಜನೆ ನೀಡುತ್ತಿಲ್ಲ. ಟಾಸ್ಕ್‌ನಲ್ಲೂ ಅಷ್ಟಕಷ್ಟೇ. ಹೀಗಾಗಿ, ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಮಾನಸಾ ಅವರನ್ನು ಹೊರ ಕಳುಹಿಸಬೇಕು ಎಂಬ ಮಾತುಗಳು ಕೇಳಿಬರ್ತಿವೆ. ಹೀಗಾಗಿ, ಮಾನಸ ಬೇಗ ಚೇತರಿಸಿಕೊಂಡು ಟಾಸ್ಕ್‌ಗಳಲ್ಲಿ ಭಾಗವಹಿಸುವ ಅಗತ್ಯವಿದೆ.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+