twitter
    X
    Home ಚಲನಚಿತ್ರಗಳ ಒಳನೋಟ

    ಹ್ಯಾಪಿ ಬರ್ತಡೇ: ಕರಾಟೆ ಕಿಂಗ್ ಶಂಕರ್‌ ನಾಗ್ ಅವರ ಕನಸುಗಳು

    Author Administrator | Updated: Thursday, November 9, 2023, 08:16 AM [IST]

    ಶಂಕರನಾಗ್ ಅಂದರೆ ಸದಾ ಹೊಸತನ. ಹಲವು ಕನಸುಗಳು, ಹಲವು ಯೋಜನೆಗಳನ್ನು ಹೊತ್ತು ತಿರುಗುತ್ತಿದ್ದ ಶಂಕರನಾಗ್ ರದು ಬಹುಮುಖ ವ್ಯಕ್ತಿತ್ವ. ಕೇವಲ ಚಿತ್ರರಂಗ ಮಾತ್ರವಲ್ಲದೇ ತಮ್ಮ ಸುತ್ತುಮುತ್ತಲಿನ ಸಮಸ್ಯೆಗಳಿಗೆ ಏನಾದರೂ ಒಂದು ಹೊಸ ರೀತಿಯ ಸ್ಪಂದನೆ ಹಡುಕುತ್ತಿದ್ದರು. ಇಲ್ಲಿ ಶಂಕರನಾಗ್ ರವರು ಕಂಡ ಕೆಲ ಕನಸುಗಳ ವಿವರಣೆಯಿದೆ..

    cover image
    ಕಂಟ್ರಿ ಕ್ಲಬ್

    ಕಂಟ್ರಿ ಕ್ಲಬ್

    1

    ಬೆಂಗಳೂರು ಹೊರವಲಯದಲ್ಲಿರುವ ತಮ್ಮ ಫಾರ್ಮ್ ಹೌಸಿನಲ್ಲಿ ಕಂಟ್ರಿ ಕ್ಲಬ್ ಕಟ್ಟಬೇಕೆಂಬ ಆಸೆಯನ್ನು ಸಹೋದರ ಅನಂತನಾಗ್ ಮುಂದೆ ವ್ಯಕ್ತಪಡಿಸಿದ್ದರು. ಬೆಂಗಳೂರಿಗೆ ಬರುವ ವಿದೇಶಿಗರು ಮತ್ತು ವಾರಾಂತ್ಯದಲ್ಲಿ ಬೆಂಗಳೂರಿಗರು ಆಧುನಿಕ ಮನರಂಜನೆ ಪಡೆಯುವಂತಹ ಕ್ಲಬ್ ಒಂದನ್ನು ಕಟ್ಟಬೇಕೆಂಬ ಆಸೆ ಹೊಂದಿದ್ದರು.

    ನಂದಿ ಬೆಟ್ಟ

    ನಂದಿ ಬೆಟ್ಟ

    2

    ನಂದಿ ಬೆಟ್ಟ ಬೆಂಗಳೂರಿಗರ ಫೇವರೇಟ್ ವೀಕೆಂಡ್ ಸ್ಪಾಟ್. ತಮ್ಮ ಕೆನಡಾ ಪ್ರವಾಸದಲ್ಲಿ ಕಂಡಂತೆ, ನಂದಿ ಬೆಟ್ಟದ ಕೆಳಗೊಂದು ಅಮ್ಯೂಸ್‌ಮೆಂಟ್ ಪಾರ್ಕ್ ಕಟ್ಟಬೇಕೆಂದು ಶಂಕರನಾಗ್ ಕನಸು ಕಂಡಿದ್ದರು. ಹಾಗೇ ನಂದಿ ಬೆಟ್ಟಕ್ಕೆ ರೋಪ್ ವೇ ಹಾಕಬೇಕು ಮತ್ತು ನಂದಿಬೆಟ್ಟದ ಪಕ್ಕದ ಬೆಟ್ಟದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಫೈವ್ ಸ್ಟಾರ್ ಹೋಟೆಲ್ ಮಾದರಿಯಲ್ಲಿ ವಿದೇಶಿ ವಿನ್ಯಾಸದಲ್ಲಿ ಭರ್ಜರಿ ಹೋಟೆಲ್ ಒಂದನ್ನು ಕಟ್ಟಬೇಕು ಎಂಬ ಯೋಜನೆ ಹೊಂದಿದ್ದರು.

    ಇಟ್ಟಿಗೆ

    ಇಟ್ಟಿಗೆ

    3

    ಕೆಳ ಮತ್ತು ಮಧ್ಯಮ ವರ್ಗದ ಜನರು ತಮ್ಮ ಕನಸಿನ ಮನೆಯನ್ನು ಕಟ್ಟಿಕೊಳ್ಳಲು ಸಹಾಯವಾಗುವಂತೆ ಜರ್ಮನ್ ತಂತ್ರಜ್ಙಾನ ಬಳಸಿ ಇಟ್ಟಿಗೆ ತಯಾರಿಸಿಬೇಕೆಂದು ಕನಸು ಹೊಂದಿದ್ದರು. ಧೀರ್ಘ ಕಾಲ ಬಾಳಿಕೆ ಬರುವ ಈ ಇಟ್ಟಿಗೆಗಳನ್ನು ವಿದ್ಯುತ್ ಇಲ್ಲದೇ, ಕೇವಲ ಗಾಳಿ ಶಕ್ತಿ ಮತ್ತು ವಿಂಡ್ ಮಿಲ್ ಗಳಿಂದ ತಯಾರಿಸುತ್ತಿದ್ದರಿಂದ ಕಡಿಮೆ ಖರ್ಚಿನಲ್ಲಿ ಇಟ್ಟಿಗೆಗಳು ಸಿಗುತ್ತಿತ್ತು.

    ಅಸ್ಟ್ರಿಯನ್ ಫ್ರಿ ಫ್ಯಾಬ್ರಿಕೇಟೆಡ್ ಶೀಟ್

    ಅಸ್ಟ್ರಿಯನ್ ಫ್ರಿ ಫ್ಯಾಬ್ರಿಕೇಟೆಡ್ ಶೀಟ್

    4

    ಅಸ್ಟ್ರಿಯನ್ ತಂತ್ರಜ್ಙಾನ ಬಳಸಿ ಫ್ರಿ ಫ್ಯಾಬ್ರಿಕೇಟೆಡ್ ಶೀಟ್ ಗಳಿಂದ ಸುಮಾರು 50 ವರ್ಷ ಬಾಳಿಕೆ ಬರುವ ಒಂದು ಹಾಲ್, ಬೆಡರೂಮ್, ಕಿಚನ್ ಮತ್ತು ಬಾತರೂಮ್ ಹೊಂದಿರುವ ಮನೆಗಳನ್ನು ಕೇವಲ 45000 ರೂಪಾಯಿಯಲ್ಲಿ ನಿರ್ಮಿಸುವ ಯೋಜನೆ ಹೊಂದಿದ್ದರು. ಈ ತಂತ್ರಜ್ಙಾನದಿಂದ ಕಡಿಮೆ ಖರ್ಚಿನಲ್ಲಿ ತುಂಬಾ ಶೀಘ್ರವಾಗಿ ಮನೆಗಳ ನಿರ್ಮಾಣವಾಗುವುದರಿಂದ ಸ್ಲಮ್ ಗಳಲ್ಲಿನ ಜನತೆಗೆ ಸಾಕಷ್ಟು ಅನಕೂಲವಾಗುವುದು ಎಂದು ಆಲೋಚಿಸಿದ್ದರು.

    ಸಿದ್ಧ ಉಡುಪು ತಯಾರಿಕಾ ಘಟಕ

    ಸಿದ್ಧ ಉಡುಪು ತಯಾರಿಕಾ ಘಟಕ

    5

    ಸಿದ್ಧ ಉಡುಪು ತಯಾರಿಕಾ ಘಟಕ ಸ್ಥಾಪಿಸಿ ವಿದೇಶಿ ರಫ್ತು ಹೆಚ್ಚಿಸುವ ಕುರುತಾಗಿ ಯೋಚಿಸಿದ್ದರು. ಇದರಿಂದ ಸಾಕಷ್ಟು ಉದ್ಯೋಗ ನಿರ್ಮಾಣವಾಗುವದಲ್ಲದೇ, ಟ್ಯಾಕ್ಸ್ ಫ್ರೀ ರಾಷ್ಟ್ರೀಯ ಆದಾಯ ಉತ್ಪನ್ನವಾಗುವುದು ಎಂದು ನಂಬಿದ್ದರು.

    ಬೆಂಗಳೂರು ಮೆಟ್ರೋ

    ಬೆಂಗಳೂರು ಮೆಟ್ರೋ

    6

    ಮಲೇಷಿಯಾ ಮತ್ತು ಟೋಕಿಯೋ ಗಳಲ್ಲಿನ ಮೆಟ್ರೋ ಟ್ರೇನ್ ನೋಡಿದ್ದ ಶಂಕರನಾಗ್ 1980 ರಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ರೈಲಿನ ಕನಸು ಕಂಡಿದ್ದರು. ಇದಕ್ಕಾಗಿ ರೂಪುರೇಷೆ ಕೂಡ ಸಿದ್ಧ ಪಡಿಸಿದ್ದರು. ಈ ಮೇಟ್ರೋ ಯೋಜನೆಯಲ್ಲಿ ಅಂಡರ್ ಗ್ರೌಡ್ ಟ್ರ್ಯಾಕ್ ಕೂಡ ಇತ್ತು,

    ರಂಗಶಂಕರ

    ರಂಗಶಂಕರ

    7

    ಸಹೋದರ ಅನಂತನಾಗ್ ಮತ್ತು ಪತ್ನಿ ಅರುಂಧತಿ ನಾಗ್ ರಂತೆ ಶಂಕರ್ ಕೂಡ ಮೂಲತಃ ರಂಗಭೂಮಿ ಪ್ರತಿಭೆ. ಮುಂಬೈಯಿಂದ ಬೆಂಗಳೂರಿಗೆ ಬಂದು ಕನ್ನಡ ಚಿತ್ರರಂಗದಲ್ಲಿ ಬಿಡುವಿಲ್ಲದಷ್ಟು ಚಿತ್ರಗಳಲ್ಲಿ ತೊಡಗಿಕೊಂಡ ಶಂಕರ್ ಗೆ ರಂಗಭೂಮಿಯತ್ತ ಸದಾ ತುಡಿತವಿತ್ತು. ಬೆಂಗಳೂರಿನಲ್ಲಿ ಒಂದು ಉತ್ತಮ ರಂಗ ಮಂದಿರವನ್ನು ನಿರ್ಮಿಸಬೇಕಉ ಮತ್ತು ಅಲ್ಲಿ ಸದಾ ರಂಗಭೂಮಿ ಚಟುವಟಿಕೆಗಳು ನಡೆಯಬೇಕು ಎಂದು ಬಯಸಿದ್ದರು. ಮುಂದೆ ಅರುಂಧತಿ ನಾಗ್ ರವರು ಈ ಕನಸನ್ನು `ರಂಗಶಂಕರ' ದ ಮೂಲಕ ನೇರವೇರಿಸಿದರು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X