ಫುಡ್ TO ರೋಬೋಟ್‌: ಅಪ್ಪು ಅವರ ಆಲ್ ಟೈಮ್ ಫೇವರೇಟ್ ಗಳು ಇವು..!

  ಅಕ್ಟೋಬರ್ 29ಕ್ಕೆ ಅಪ್ಪು ಆಗಲಿ ಒಂದು ವರ್ಷವಾಗಲಿದೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮೊಂದಿಗೆ ದೈಹಿಕವಾಗಿ ಇಲ್ಲದೆ ಇದ್ದರೂ ಭಾವನಾತ್ಮಕವಾಗಿ ಪ್ರತಿಯೊಬ್ಬರಲ್ಲೂ ಬೆರೆತುಹೋಗಿದ್ದಾರೆ. ಮನೆ ಮಗನಂತೆ ಕರ್ನಾಟಕದ ರಾಜರತ್ನನನ್ನು ಜನರು ಇಂದಿಗೂ ಆರಾಧನೆ ಮಾಡುತ್ತಲೇ ಬಂದಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರನ್ನು ಮರೆಯುವುದು ಅಸಾಧ್ಯ. ಜನಮಾನಸದಲ್ಲಿ ಅಪ್ಪು ಎಂದಿಗೂ ಅಮರ. ಫುಡ್ ಟು ರೋಬೋಟ್‌ ವರೆಗಿನ ಪುನೀತ್‌ರಾಜ್‌ಕುಮಾರ್ ಅವರ ಆಲ್ ಟೈಮ್ ಫೆವರೇಟ್ಗಳ ಬಗ್ಗೆ ಮಾಹಿತಿ ಇಲ್ಲಿದೆ.
  1. ಅಪ್ಪು ಆಹಾರ ಪ್ರಿಯರು

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಭೋಜನ ಪ್ರಿಯರು ಅನ್ನೋದು ಗೊತ್ತೇ ಇದೆ. ಅದರಲ್ಲೂ ಬಿರಿಯಾನಿ ಅಂದ್ರೆ, ನಾನ್ ವೆಜ್ ಅಂದ್ರೆ ಎಲ್ಲಿಲ್ಲದ ಪ್ರೀತಿ. ಪುನೀತ್‌ರಾಜ್‌ಕುಮಾರ್ ಅವರು ತಾವು ಭೋಜನ ಪ್ರಿಯ ಎಂದು ಹೇಳಿಕೊಳ್ಳುತ್ತಿದ್ದರು. ಮಟನ್ ಬಿರಿಯಾನಿ ಅಪ್ಪು ಅವರಿಗೆ ತುಂಬಾ ಪ್ರಿಯವಾದದ್ದು. ಜೊತೆಗೆ ಜೋಳದ ರೊಟ್ಟಿ, ನೀರ್ ದೋಸೆ, ಬೊಯ್ಲ್ಡ್ ರೈಸ್, ಉತ್ತರ ಕರ್ನಾಟಕದ ಶಿರಾ ಪುನೀತ್ ಅವರ ನೆಚ್ಚಿನ ತಿನಿಸುಗಳಾಗಿದ್ದವು. 

  Complete: Biography
  2. ಹಾಡುವುದೆಂದರೆ ಇಷ್ಟ

  ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಅವರು ತಂದೆಯಂತೆಯೇ ಹಾಡುವುದನ್ನು ಇಷ್ಟಪಡುತ್ತಿದ್ದರು. ನಾನು ಚಿಕ್ಕವನಾಗಿದ್ದಾಗಲೇ ನಟನೆ ಮತ್ತು ಹಾಡುವುದನ್ನು ಕಲಿತೆ. ಅದು ಒಂದು ತರಹ ಫನ್ ಆಗಿತ್ತು ಎಂದು ಅಪ್ಪು ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.  

  Complete: Biography
  3. ಸ್ವಂತ ರೋಬೋಟ್ ಹೊಂದಬೇಕೆಂಬ ಆಸೆ

  ಬಾಲ್ಯದಲ್ಲಿದ್ದಾಗ ಟಿವಿಯಲ್ಲಿ ದೈತ್ಯ ರೋಬೋಟ್ ಅನ್ನು ನೋಡುವಾಗ ನನಗೂ ಅದೇ ರೀತಿಯ ರೋಬೋಟ್ ಬೇಕು ಎಂದೆನಿಸುತ್ತಿತ್ತು.  ಅದು ನನ್ನ ಕನಸು. ನನಗೆ ನನ್ನದೇ ಆದ ರೋಬೋಟ್ ಬೇಕು. ನನಗೆ ಹೆಂಡತಿ ಇಲ್ಲದಿದ್ದರೆ, ನಾನು ಮನೆಯ ಪ್ರತಿಯೊಂದು ಕೋಣೆಯ ಮೂಲೆಯಲ್ಲಿ ಗ್ಯಾಜೆಟ್, ಸ್ಪೀಕರ್ ಅಥವಾ ಕೆಲವು ಉಪಕರಣಗಳು ಇರುತ್ತಿದ್ದರು ಎಂದು ತಮಾಷೆಯಾಗಿ ಪುನೀತ್ ಈ ಹಿಂದೆ ಹೇಳಿಕೊಂಡಿದ್ದರು. 

  Complete: Biography
  4. ನೆಚ್ಚಿನ ಸಿನಿಮಾ

  ತಮ್ಮ ಆಲ್ ಟೈಮ್ ಫೆವರೇಟ್ ಸಿನಿಮಾದ ಕುರಿತು ಮಾತನಾಡಿದ್ದ ಪುನೀತ್, ನಾನು ಬಾಲನಟನಾಗಿ ಮೊದಲು ಅಭಿನಯಿಸಿದ ಭಾಗ್ಯವಂತ ನನ್ನ ಫೆವರೇಟ್. ನಂತರ ಬೆಟ್ಟದ ಹೂ. ನಾನು ಅಭಿನಯಿಸಿದ ಎಲ್ಲ ಸಿನಿಮಾಗಳು ನನಗೆ ಇಷ್ಟ. ಅದರಲ್ಲೂ ಮೊದಲ ಸಿನಿಮಾ ಭಾಗ್ಯವಂತ ಹಾಗೂ ನಾನು ನಾಯಕನಾಗಿ ನಟಿಸಿದ ಮೊದಲ ಚಿತ್ರ ಅಪ್ಪು ನನ್ನ ನೆಚ್ಚಿನವು ಎಂದಿದ್ದರು. 

  Complete: Biography
  5. ಫೇವರೇಟ್ ಹಾಡು
  ಬಾನ ದಾರಿಯಲ್ಲಿ ಜಾರಿ ಹೋದ ಹಾಡು ಪುನೀತ್‌ ರಾಜ್‌ಕುಮಾರ್ ಅವರ ಫೆವರೇಟ್ ಹಾಡು. ಬಾಲ್ಯದ ದಿನಗಳನ್ನು ಹಿಂತಿರುಗಿ ನೋಡಿದಾಗ ಬಾನ ದಾರಿಯಲ್ಲಿ ಹಾಡು ನನ್ನನ್ನು ಕಾಡುತ್ತದೆ ಎಂದು ಅಪ್ಪು  ಹೇಳಿಕೊಂಡಿದ್ದರು.  
  Complete: Biography
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X