ಮನೆಗೆಲಸದಿಂದ ನಟನೆವರೆಗೆ: ನಟಿ, ನಿರೂಪಕಿ ಅನುಪಮ ಗೌಡ ಕುರಿತ ಇಂಟರೆಸ್ಟಿಂಗ್ ವಿಷಯಗಳು

  ಕಿರುತೆರೆ ನಟಿ, ನಿರೂಪಕಿ ಅನುಪಮ ಗೌಡ ಲಂಕೇಶ್ ಪತ್ರಿಕೆ ಸಿನಿಮಾ ಮೂಲಕ ಬಾಲ ಕಲಾವಿದೆಯಾಗಿ ಕನ್ನಡ ಹಿತ್ರರಂಗಕ್ಕೆ ಪ್ರವೇಶ ಪಡೆದರು. ನಂತರ ಹಲವು ಧಾರಾವಾಹಿಗಳಲ್ಲಿ ನಟಿಸಿದರು. ಮಜಾ ಭಾರತ, ರಾಜ-ರಾಣಿ, ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ಕಾಣಿಸಿಕೊಂಡರು. ಅನುಪಮಾ ಬಹಳ ಕಷ್ಟಪಟ್ಟು ಮೇಲೆ ಬಂದವರು. ಮನೆಗೆಲಸದಿಂದ ನಟನೆವರೆ ಅವರ ಕುರಿತ ಕೆಲ ಆಸಕ್ತಿಕರ ವಿಷಯಗಳು ಇಲ್ಲಿವೆ.
  1. ಬಡತನದಲ್ಲಿ ಬೆಳೆದ ಹುಡುಗಿ

  ಅನುಪಮಾ ಗೌಡ ಮೂಲತಃ ಬೆಂಗಳೂರಿನವರು. ತಂದೆ, ತಾಯಿಯ ಮುದ್ದಿನ ಮಗಳಾದ ಅನುಪಮಾ ಅವರಿಗೆ ತೇಜಸ್ಟಿನಿ ಎಂಬ ತಂಗಿ ಕೂಡ ಇದ್ದಾರೆ. ಅನುಪಮಾ ಅವರದ್ದು ಬಡ ಕುಟುಂಬ. ತಾಯಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರೆ, ತಂದೆ ಸಿನಿಮಾದಲ್ಲಿ ಅಸೋಸಿಯೇಟ್ ಆಗಿದ್ದರು. ಒಂದು ಹೊತ್ತಿನ ಊಟಕ್ಕೂ ಕೂಡ ಕಷ್ಟ ಪಡುವ ಪರಿಸ್ಥಿತಿ ಅವರಿಗಿತ್ತು.

  Complete: Biography
  2. ಓದಿದ್ದು ಬರೀ 6ನೇ ಕ್ಲಾಸ್

  6ನೇ ಕ್ಲಾಸ್ ಮುಗಿಸಿದ ಅನುಪಮಾ 7ನೇ ಕ್ಲಾಸ್ ಸೇರಿಸುವುದಕ್ಕೆ ಅವರ ತಂದೆ ತಾಯಿಯ ಬಳಿ ದುಡ್ಡು ಇರಲಿಲ್ಲ. ಅದೇ ಕಾರಣಕ್ಕೆ ಅವರ ವಿದ್ಯಾಭ್ಯಾಸ ಕೂಡ ಅಲ್ಲಿಗೆ ಕೊನೆಯಾಯಿತು.

  Complete: Biography
  3. ಮನೆ ಕೆಲಸ

  ಶಾಲೆ ಬಿಟ್ಟು ಅಮ್ಮನ ಜೊತೆ ಟೈಲರಿಂಗ್ ಕೆಲಸ ಮಾಡಿದ ಅನುಪಮಾ ನಂತರ ತಾಯಿಗೆ ತಿಳಿಯದಂತೆ ಬೇರೆಯವರ ಮನೆ ಕೆಲಸ ಮಾಡಿದ್ದರು. ಅದರಿಂದ ಬಂದ ದುಡ್ಡನ್ನ ಅಮ್ಮನಿಗೆ ನೀಡಿ ಸಹಾಯ ಮಾಡುತ್ತಿದ್ದರು.

  Complete: Biography
  4. ಮೊದಲು ಸಂಭಾವನೆ 100 ರೂಪಾಯಿ

  ಅನುಪಮಾ ತಾಯಿಯ ಸ್ನೇಹಿತೆಯೊಬ್ಬರು ದರ್ಶನ್ ಅಭಿನಯದ 'ಲಂಕೇಶ್ ಪತ್ರಿಕೆ' ಸಿನಿಮಾದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುವ ಅವಕಾಶ ಕೊಡಿಸಿದರು. ಮೂರು ದಿನ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಅನುಪಮಾ ಅವರ ಮೊದಲ ಸಂಭಾವನೆ ಒಂದು ದಿನಕ್ಕೆ 100 ರೂಪಾಯಿ ಆಗಿತ್ತು.

  Complete: Biography
  5. ಧಾರಾವಾಹಿ

  ಅನುಪಮಾ ಗೌಡ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ  ಚಿ ಸೌ ಸಾವಿತ್ರಿ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ಆದರೆ, ಇದು ಅಷ್ಟು ಖ್ಯಾತಿ ತಂದು ಕೊಟ್ಟಿರಲಿಲ್ಲ. ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಅಕ್ಕ' ಧಾರಾವಾಹಿಯಲ್ಲಿ ದ್ವಿಪಾತ್ರ ನಿಭಾಹಿಸುವುದರ ಮೂಲಕ ಸೈ ಎನಿಸಿಕೊಂಡರು. ಇದು ಅವರಿಗೆ ಹೆಚ್ಚು ಖ್ಯಾತಿಯನ್ನು ತಂದು ಕೊಟ್ಟಿತು.    

  Complete: Biography
  6. ರಿಯಾಲಿಟಿ ಶೋ
  ಕಸ್ತೂರಿ ವಾಹಿನಿಯ 'ಹಳ್ಳಿ ದುನಿಯಾ' ಎಂಬ ರಿಯಾಲಿಟಿ ಶೋ ಮೂಲಕ ಅನುಪಮಾರವರ ಕಿರುತೆರೆಯ ನಂಟು ಶುರುವಾಯಿತು. ಅನುಪಮ ಗೌಡ  ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ  ಭಾಗವಹಿಸಿದ್ದರು. ಇದೀಗ ಎರಡನೇ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 9ಗೆ ಎಂಟ್ರಿ ಕೊಟ್ಟಿದ್ದಾರೆ.
  Complete: Biography
  7. ಸಿನಿಮಾಗಳು
  ಅನುಪಮ ಗೌಡ ಚಾಲೆಂಜಿಂಗ್ ಸ್ಟಾರ್ ದರ್ಶನ್  ಅಭಿನಯದ ಲಂಕೇಶ್ ಪತ್ರಿಕೆ ಸಿನಿಮಾ ಮೂಲಕ ಬಾಲ ಕಲಾವಿದೆಯಾಗಿ ಸ್ಯಾಂಡಲ್‌ವುಡ್‌ ಪ್ರವೇಶಿಸಿದರು. ಅವರ ಮೊಟ್ಟಮೊದಲ ಸಿನಿಮಾ ಲಂಕೇಶ್ ಪತ್ರಿಕೆ. ನಂತರ  'ನಗಾರಿ' ಎಂಬ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಅನುಪಮಾ ಕಾಣಿಸಿಕೊಂಡಿದ್ದರು. ಬಳಿಕ ಜಯರಾಮ್ ಕಾರ್ತಿಕ್ ಅಭಿನಯದ 'ಆ ಕರಾಳ ರಾತ್ರಿ' ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಬಳಿಕ ರಾಘವೇಂದ್ರ ರಾಜ್‌ಕುಮಾರ್ ಮತ್ತು ಆರ್‌ಜೆ ರೋಹಿತ್ ಅಭಿನಯದ ತ್ರಯಂಬಕಂ (2019) ಚಿತ್ರದಲ್ಲಿ ಪತ್ರಕರ್ತೆಯಾಗಿ ನಟಿಸಿದರು. 'ಲೂಸ್ ಕನೆಕ್ಷನ್' ಎಂಬ ವೆಬ್ ಸೀರೀಸ್ ನಲ್ಲಿಯೂ ಅನುಪಮಾ ಅಭಿನಯಿಸಿದ್ದರು.
  Complete: Biography
  8. ಯುಟ್ಯೂಬ್

  ಅನುಪಮಾ ಗೌಡ ಯುಟ್ಯೂಬ್ ಚಾನೆಲ್ ಒಂದನ್ನು ತೆರೆದಿದ್ದು, ಇದರ ಮೂಲಕ ತಮ್ಮ ದಿನಚರಿ, ಪ್ರವಾಸ, ವೈಯಕ್ತಿಕ ಜೀವನದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಹಲವಾರು ಬ್ಯೂಟಿ ಟಿಪ್ಸ್ ಹಾಗೂ ಬ್ಯೂಟಿ ಪ್ರಾಡಕ್ಟ್ ಬಳಕೆ ಬಗ್ಗೆ ತಮ್ಮ ಅಭಿಮಾನಿಗಳಿಗೆ ಸಲಹೆ ನೀಡುತ್ತಿರುತ್ತಾರೆ.   

  Complete: Biography
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X