twitter
    X
    Home ಚಲನಚಿತ್ರಗಳ ಒಳನೋಟ

    ಪ್ರಮೋದ್ ಮಂಜುವಿನಿಂದ ಭಜರಂಗಿ ಲೋಕಿಯವರೆಗೆ - 2021ರ ಕನ್ನಡದ ಅತ್ಯುತ್ತಮ ಅಭಿನಯಗಳು

    Author Administrator | Updated: Wednesday, May 18, 2022, 11:07 AM [IST]

    ಒಂದು ಚಿತ್ರದ ಯಶಸ್ಸಿಗೆ ನಾಯಕ-ನಾಯಕಿಯರಷ್ಟೇ ಆ ಚಿತ್ರದ ಪೋಷಕ ಪಾತ್ರಗಳು ಕಾರಣ. ಕೆಲವೊಂದು ಚಿತ್ರಗಳಲ್ಲಿ ಪೋಷಕ ಪಾತ್ರಗಳೇ ಚಿತ್ರದ ಹೈಲೈಟ್ ಆಗುತ್ತವೆ. 2021 ರಲ್ಲಿ ತೆರೆಕಂಡ ಚಿತ್ರಗಳಲ್ಲಿನ ಅತ್ಯುತ್ತಮ ಅಭಿನಯ ನೀಡಿದ ಪಾತ್ರಗಳು ಇಲ್ಲಿವೆ.

    cover image
    ರತ್ನನ್ ಪ್ರಪಂಚ

    ರತ್ನನ್ ಪ್ರಪಂಚ

    1

    ರೋಹಿತ್ ಪಡಕೆ ನಿರ್ದೇಶನದಲ್ಲಿ ಮೂಡಿಬಂದ ` ರತ್ನನ್ ಪ್ರಪಂಚ' ಚಿತ್ರದಲ್ಲಿ ಪ್ರಮೋದ್ ಮಂಜು ಒಬ್ಬ ಹಳ್ಳಿಯ ಮುಗ್ಧ ಮನಸ್ಸಿನ ಮತ್ತು ಕಠೋರ ರೌಡಿಯ ಪಾತ್ರದಲ್ಲಿ ಅದ್ಭುತ ಅಭಿನಯ ಮಾಡಿದ್ದಾರೆ.

    ಭಜರಂಗಿ 2

    ಭಜರಂಗಿ 2

    2

    ಹರ್ಷ ನಿರ್ದೇಶನದ `ಭಜರಂಗಿ 2' ಚಿತ್ರದಲ್ಲಿ ಸೌರವ್ ಲೋಕೇಶ್ ಒಬ್ಬ ಅದ್ಭುತ ಸಾಧಕನ ಪಾತ್ರದಲ್ಲಿ ನಟಿಸಿದ್ದರು. ತನ್ನ ಪ್ರೀತಿಪೂಜ್ಯ ಭಜರಂಗಿಗೆ ಮರುಜೀವ ನೀಡಲು ದೈವವನ್ನೇ ಒಲಿಸಿಕೊಳ್ಳುವ ಒಬ್ಬ ಸಾಧಕನಾಗಿ ನಟಿಸಿದ್ದರು.

    ರತ್ನನ್ ಪ್ರಪಂಚ

    ರತ್ನನ್ ಪ್ರಪಂಚ

    3

    ರೋಹಿತ್ ಫಡಕೆ ನಿರ್ದೇಶನದಲ್ಲಿ ಮೂಡಿಬಂದ `ರತ್ನನ ಪ್ರಪಂಚ' ಚಿತ್ರದಲ್ಲಿ ಉಮಾಶ್ರೀ, ಧನಂಜಯ್ ತಾಯಿ ಪಾತ್ರದಲ್ಲಿ ನಟಿಸಿದ್ದರು. ಸಾಕು ಮಗನೊಬ್ಬನನ್ನು ಸ್ವಂತ ಮಗನಿಗಿಂತ ಜಾಸ್ತಿ ಕಾಳಜಿಯಿಂದ ನೋಡಿಕೊಳ್ಳುವ ತಾಯಿಯೊಬ್ಬಳು ಕೊನೆಗೆ ಹೇಗೆ ಮಗನ ತಾತ್ಸಾರದಿಂದ ಕೊನೆಯುಸಿರೆಳೆಯುತ್ತಾರೆ ಎಂಬುದು ಚಿತ್ರದ ಕಥೆ.

    ಗರುಡ ಗಮನ ವೃಷಭ ವಾಹನ

    ಗರುಡ ಗಮನ ವೃಷಭ ವಾಹನ

    4

    ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ `ಗರುಡ ಗಮನ ವೃಷಭ ವಾಹನ' ಚಿತ್ರದಲ್ಲಿ ಗೋಪಾಲ ಕೃಷ್ಣ ದೇಶಪಾಂಡೆ ಪೋಲಿಸ್ ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿದ್ದಾರೆ.

    ಗರುಡ ಗಮನ ವೃಷಭ ವಾಹನ

    ಗರುಡ ಗಮನ ವೃಷಭ ವಾಹನ

    5

    ರಾಜ್ ಬಿ ಶೆಟ್ಟಿ ನಿರ್ದೇಶಿಸಿ `ಗರುಡ ಗಮನ ವೃಷಭ ವಾಹನ' ಚಿತ್ರದಲ್ಲಿ ರಾಜ್ ತಾವೇ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಶಿವನ ಪಾತ್ರದಲ್ಲಿ ರಾಜ್ ಭಯಂಕರ ಅಭಿನಯ ನೀಡಿದ್ದರು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X