twitter
    X
    Home ಚಲನಚಿತ್ರಗಳ ಒಳನೋಟ

    ನಟ, ನಿರ್ದೇಶಕ ರಿಷಬ್ ಶೆಟ್ಟಿ ಕುರಿತು ನಿಮಗೆ ಗೊತ್ತಿಲ್ಲದ 12 ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.

    Author Sowmya Bairappa | Updated: Friday, July 7, 2023, 10:03 AM [IST]

    ವಾಟರ್ ಬಿಸಿನೆಸ್, ನಿರ್ಮಾಪಕರ ಬಳಿ ಡ್ರೈವರ್ ಆಗಿ, ಹೋಟಲ್ ಕೆಲಸ, ಹೋಟೆಲ್ ಮಾಲೀಕ, ಸೇಲ್ಸ್‌ಮನ್ ಕೆಲಸವನ್ನೂ ಮಾಡಿದ್ದ ರಿಷಬ್ ಶೆಟ್ಟಿ ಇಂದು ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಮತ್ತು ನಟ. ತಮ್ಮ ವಿಭಿನ್ನ ಚಿತ್ರಗಳು ಮತ್ತು ಭಿನ್ನ ಚಿತ್ರ ನಿರ್ಮಾಣ ಶೈಲಿಯಿಂದ ಪ್ರಸಿದ್ಧರಾಗಿದ್ದಾರೆ. ಸದ್ಯ ರಿಷಬ್‌ ಶೆಟ್ಟಿ ನಿರ್ದೇಶನದ 'ಕಾಂತಾರ' ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ನಿರೀಕ್ಷೆಗೂ ಮೀರಿ ಅದ್ಭುತ ಯಶಸ್ಸುಗಳಿಸಿರುವ 'ಕಾಂತಾರ' ಚಿತ್ರ ಬಾಕ್ಸ್‌ ಆಫೀಸ್‌ನಲ್ಲೂ ಸಖತ್ ಸದ್ದು ಮಾಡುತ್ತಿದೆ. ನೀರಿನ ಕ್ಯಾನ್ ಹೊರುತ್ತಿದ್ದ ದಿನಗಳಿಂದ ಕಾಂತಾರ ಯಶಸ್ಸಿನ ವರೆಗೂ ರಿಷಬ್ ಶೆಟ್ಟಿ ಕುರಿತ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.

    cover image
    ಆರಂಭಿಕ ದಿನಗಳು

    ಆರಂಭಿಕ ದಿನಗಳು

    1

    ರಿಷಬ್ ಶೆಟ್ಟಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೊಡಚಾದ್ರಿ ಬೆಟ್ಟದ ಪಕ್ಕ ಕೆರಾಡಿ ಊರಿನಳ್ಳಿ ಜನಿಸಿದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಏನೂ ಇರಲಿಲ್ಲ. ಬಡ್ಡಿ ಕಟ್ಟಲು ಪರದಾಡಬೇಕಿದ್ದ ದುಸ್ಥಿತಿ ಕಂಡವರು. ತರ್ಲೆ, ತಲೆ ಹರಟೆ ಮಾಡಿಕೊಂಡು ಬೆಳೆದ ರಿಷಬ್ ಶೆಟ್ಟಿಗೆ ಡಾ.ರಾಜ್‌ಕುಮಾರ್ ಮೊದಲ ಸ್ಫೂರ್ತಿ.

    ಮೊದಲ ಹೆಸರು

    ಮೊದಲ ಹೆಸರು

    2

    ಎಲ್ಲರಿಗೂ ತಿಳಿದಿರುವಂತೆ ರಿಷಬ್ ಶೆಟ್ಟಿ ಅವರ ಹೆಸರು. ಆದರೆ, ಹುಟ್ಟಿದಾಗ ಮನೆಯಲ್ಲಿ ಇಟ್ಟ ಹೆಸರು ಪ್ರಶಾಂತ್ ಶೆಟ್ಟಿ.

    ನಟನೆಯ ಬಗ್ಗೆ ಕ್ರೇಜ್

    ನಟನೆಯ ಬಗ್ಗೆ ಕ್ರೇಜ್

    3

    ರಿಷಬ್ ಶೆಟ್ಟಿ ಚಿಕ್ಕ ವಯಸ್ಸಿನಲ್ಲೇ ಉಪೇಂದ್ರ ನಿರ್ದೇಶನ, ನಟನೆಯ ಕ್ರೇಜ್ ಬಗ್ಗೆ ಊರಿನವರನ್ನು ಕೇಳಿ ತಿಳಿದುಕೊಂಡಿದ್ದರು. ಅಲ್ಲಿಂದ ಉಪ್ಪಿ ಹೆಸರು ಕೇಳಿದ್ರೆ ನಿದ್ದೆಯಲ್ಲು ಎದ್ದು ಕುಳಿತುಕೊಳ್ಳುವ ಮಟ್ಟಕ್ಕೆ ಪ್ರಭಾವಿತನಾಗಿದ್ದರು. ಅವರಂತೆ ಆಗ್ಬೇಕು ಅನ್ನುವ ಹಠ ಮನಸ್ಸಿಲ್ಲಿ ಉಳಿದುಕೊಂಡಿತ್ತು. 

    ವಾಟರ್ ಬಿಸಿನೆಸ್ ಮಾಡ್ತಿದ್ದ ರಿಷಬ್

    ವಾಟರ್ ಬಿಸಿನೆಸ್ ಮಾಡ್ತಿದ್ದ ರಿಷಬ್

    4

    ರಿಷಬ್ ಶೆಟ್ಟಿ ಬೆಂಗಳೂರಿನ ಕೋರಮಂಗಲ, ವಿಲ್ಸನ್ ಗಾರ್ಡನ್ ಸುತ್ತ ಮುತ್ತ ಏರಿಯಾದಲ್ಲಿ ಮಿನರಲ್ ವಾಟರ್ ಬಿಸಿನೆಸ್ ಮಾಡುತ್ತಿದ್ದರು. ವಾಟರ್ ಬಿಸಿನೆಸ್ ಜೊತೆ ಜೊತೆಗೆ ಡಿಪ್ಲೋಮಾ ಕೋರ್ಸ್ (ಫಿಲ್ಮ್ ಮೇಕಿಂಗ್) ಮಾಡಿದರು.

    ಸಹಾಯಕ ನಿರ್ದೇಶಕರಾಗಿ ಕೆಲಸ

    ಸಹಾಯಕ ನಿರ್ದೇಶಕರಾಗಿ ಕೆಲಸ

    5

    ರಿಷಬ್ ಪರಿಚಯಸ್ಥರ ಮೂಲಕ ಎಎಂಆರ್ ರಮೇಶ್ ಅವರನ್ನು ಭೇಟಿ ಮಾಡಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸಕ್ಕೆ ಸೇರಿಕೊಂಡರು. ಆಗ ರಮೇಶ್ 'ಸೈನೈಡ್' ಸಿನಿಮಾ ನಿರ್ದೇಶಿಸುತ್ತಿದ್ದರು. ನಂತರ ಜಾಕ್ ಮಂಜು ಅವರ ಮೂಲಕ ರವಿ ಶ್ರೀವತ್ಸ ಜೊತೆ ಸೇರಿದರು. ರವಿ ಶ್ರೀವತ್ಸ 'ಗಂಡ ಹೆಂಡತಿ' ಸಿನಿಮಾ ಮಾಡ್ತಿದ್ದರು. ಈ ಸೆಟ್‌ನಲ್ಲಿ ಕ್ಲಾಪ್ ಬಾಯ್ ಆಗಿ ರಿಷಬ್ ಕೆಲಸ ಮಾಡಿದ್ದಾರೆ. ಯಾರೋ ಮಾಡಿದ ತಪ್ಪಿಗೆ ರವಿ ಶ್ರೀವತ್ಸ ನನ್ನ ತಲೆಗೆ ಹೊಡೆದಿದ್ದರು ಎಂದು ಅನುಶ್ರೀ ಯೂಟ್ಯೂಬ್ ಚಾನಲ್‌ಗೆ ನೀಡಿರುವ ಸಂರ್ದಶನದಲ್ಲಿ ರಿಷಬ್ ನೆನಪಿಸಿಕೊಂಡಿದ್ದಾರೆ.  

    ಹೀರೋ ಆಗಿ ಆಯ್ಕೆಯಾದ ಚಿತ್ರಗಳು ಆರಂಭವೇ ಆಗಲಿಲ್ಲ

    ಹೀರೋ ಆಗಿ ಆಯ್ಕೆಯಾದ ಚಿತ್ರಗಳು ಆರಂಭವೇ ಆಗಲಿಲ್ಲ

    6

    ರಿಷಬ್ ಚಿತ್ರರಂಗಕ್ಕೆ ಬಂದಾಗ ಹೀರೋ ಆಗ್ಬೇಕು ಎಂಬ ಆಸೆ ಹೊಂದಿದ್ದರು. ಸುಮಾರು ಆರೇಳು ಚಿತ್ರಗಳಲ್ಲಿ ರಿಷಬ್ ನಾಯಕನಾಗಿ ಆಯ್ಕೆಯಾಗಿದ್ದರು. ಒಂದಲ್ಲ ಒಂದು ಕಾರಣಕ್ಕೆ ಆ ಸಿನಿಮಾಗಳು ಆರಂಭವಾಗುತ್ತಲೇ ಇರಲಿಲ್ಲವಂತೆ. 

    ಹೋಟೆಲ್ ಬಿಸಿನೆಸ್

    ಹೋಟೆಲ್ ಬಿಸಿನೆಸ್

    7

    ರಿಷಬ್  ವಾಟರ್ ಬಿಸಿನೆಸ್ ನಿಂತ ಬಳಿಕ ದೊಡ್ಡ ಬಂಡವಾಳ ಹಾಕಿ ಹೋಟೆಲ್ ಬಿಸಿನೆಸ್ ಆರಂಭಿಸಿದರು. ಆದರೆ, ಅದು ಅಂದುಕೊಂಡಂತೆ ಆಗಲಿಲ್ಲ. ಪೂರ್ತಿ ನಷ್ಟ ಅನುಭವಿಸಬೇಕಾಯಿತು. ಇದಾದ ಬಳಿಕ ಬಹಳಷ್ಟು ಟೀಕೆಗಳು, ಮಾತುಗಳನ್ನು ಕೇಳಬೇಕಾಯಿತು. ಸಿನಿಮಾದಲ್ಲಿ ದುಡ್ಡು ಹಾಕಿ ಕಳೆದುಕೊಂಡು ಬಿಟ್ಟ ಅಂತ ಜನರು ಮಾತಾಡಿಕೊಳ್ಳುತ್ತಿದ್ದರಂತೆ.  

    ಬಡ್ಡಿ ಕಟ್ಟಲಾಗದ ಪರಿಸ್ಥಿತಿ

    ಬಡ್ಡಿ ಕಟ್ಟಲಾಗದ ಪರಿಸ್ಥಿತಿ

    8

    ರಿಷಬ್ ಅವರು ಧಾರಾವಾಹಿಯಲ್ಲಿ ಕೆಲಸ ಮಾಡಿದ್ದಾರೆ, ನಿರ್ಮಾಪಕರ ಬಳಿ ಡ್ರೈವರ್ ಆಗಿ, ಹೋಟಲ್ ಕೆಲಸ, ಹೋಟೆಲ್ ಮಾಲಿಕ, ಸೇಲ್ಸ್‌ಮನ್ ಕೆಲಸನೂ ಮಾಡಿದ್ದಾರೆ. ತಮ್ಮ ಕಷ್ಟದ ದಿನಗಲ್ಲಿ ಸಂಬಂಧಿಕರ ಬಳಿಯೇ ಬಡ್ಡಿಗೆ ಹಣ ತೆಗೆದುಕೊಳ್ಳಬೇಕಾಯಿತು. ಆ ಬಡ್ಡಿ ಕಟ್ಟಲಾಗದೇ ಮತ್ತೊಬ್ಬರ ಬಳಿ ಬಡ್ಡಿಗೆ ಹಣ ತಂದುಕೊಡಬೇಕಾದ ಸ್ಥಿತಿ. ಸುಮಾರು ಆರೇಳು ವರ್ಷ ಹೀಗೆ ಬಡ್ಡಿಯಲ್ಲೆ ಜೀವನ ಮಾಡಿರುವ ಬಗ್ಗೆ ರಿಷಬ್ ಈ ಹಿಂದೆ ಹೇಳಿಕೊಂಡಿದ್ದರು. 

    ಹೆಸರು ಬದಲಿಸಿದ ಮೇಲೆ ಅದೃಷ್ಟ

    ಹೆಸರು ಬದಲಿಸಿದ ಮೇಲೆ ಅದೃಷ್ಟ

    9

    ಸಂಖ್ಯಾಶಾಸ್ತ್ರದ ಪ್ರಕಾರ ಪ್ರಶಾಂತ್ ಶೆಟ್ಟಿ ಹೆಸರು ಬದಲಿಸಿದರೆ ಮಾಡುವ ಕೆಲಸದಲ್ಲಿ ಏನಾದರೂ ಬದಲಾವಣೆ ಆಗಬಹುದು ಎಂಬ ಭಾವನೆ ಬಂದ ಮೇಲೆ, ತಂದೆಯವರ ಸಲಹೆಯಂತೆ ರಿಷಬ್ ಶೆಟ್ಟಿ ಎಂದು ಮರುನಾಮಕರಣ ಮಾಡಿಕೊಂಡರಂತೆ. ಅದಾದ ಮೇಲೆ ನಿರ್ದೇಶಕ ಅರವಿಂದ್ ಕೌಶಿಕ್ ಪರಿಚಯ ಆಯ್ತು. ಅದೇ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಪರಿಚಯವೂ ಆಯಿತು. ಸ್ವಲ್ಪ ದಿನಗಳ ಬಳಿಕ ತುಘ್ಲಕ್ ಸಿನಿಮಾ ಶುರುವಾಯಿತು.

    ಮೊದಲ ನಿರ್ದೇಶನ

    ಮೊದಲ ನಿರ್ದೇಶನ

    10

    `ರಿಕ್ಕಿ' ಚಿತ್ರದಿಂದ ಸಿನಿಮಾ ನಿರ್ದೇಶನಕ್ಕೆ ಇಳಿದ ರಿಷಬ್ ಮುಂದೆ ಕಿರಿಕ್ ಪಾರ್ಟಿ ಅಂತಹ  ಸೂಪರ್ ಹಿಟ್ ಚಿತ್ರವನ್ನು ಕೊಟ್ಟರು. ರಿಷಬ್ ನಿರ್ದೇಶಿಸಿ, ನಿರ್ಮಿಸಿದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾಗೆ ಅತ್ಯುತ್ತಮ ಮಕ್ಕಳ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. 

    ನಟನೆ

    ನಟನೆ

    11

    ರಿಷಬ್ ಶೆಟ್ಟಿ ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಆಗಿ ಒಂದು ಸಣ್ಣ ಪಾತ್ರ ನಿರ್ವಹಿಸಿದ್ದರು.  ನಂತರ ರಿಷಬ್ ಶೆಟ್ಟಿ ನಿರ್ದೇಶನದ  'ಉಳಿದವರು ಕಂಡಂತೆ' ಚಿತ್ರದಲ್ಲಿ ರಿಷಬ್ ಪ್ರಮುಖ ಪಾತ್ರ ನಿರ್ವಹಿಸಿದರು. ನಂತರ  ಬೆಲ್ ಬಾಟಮ್, ಹೋಮ್‌ಸ್ಟೇ, ಹೀರೋ, ಹರಿಕಥೆ ಅಲ್ಲ ಗಿರಿಕಥೆ, ಕಾಂತಾರ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.  

    ಪ್ರಶಸ್ತಿಗಳು

    ಪ್ರಶಸ್ತಿಗಳು

    12

    ರಿಷಬ್ ಶೆಟ್ಟಿ ನಿರ್ದೇಶಿಸಿ, ಬಂಡವಾಳ ಹಾಕಿದ್ದ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು'. ಇದಕ್ಕೆ ಅತ್ಯುತ್ತಮ ಮಕ್ಕಳ ಸಿನಿಮಾ ವಿಭಾಗದಲ್ಲಿ ರಿಷಬ್ ಶೆಟ್ಟಿ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. 150 ದಿನಗಳ ಕಾಲ ಪ್ರದರ್ಶನಗೊಂಡಿದ್ದ ಕಿರಿಕ್ ಪಾರ್ಟಿ ಸಿನಿಮಾಗೆ ಅತ್ಯುತ್ತಮ ನಿರ್ದೇಶಕನಾಗಿ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿತ್ತು.  

     

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X