twitter
    X
    Home ಚಲನಚಿತ್ರಗಳ ಒಳನೋಟ

    ನಟ, ನಿರ್ದೇಶಕ ರಿಷಬ್ ಶೆಟ್ಟಿ ಸೈಡ್ ರೋಲ್ ಮಾಡಿದ್ದ 8 ಸಿನಿಮಾಗಳ ಪಟ್ಟಿ!

    Author Sowmya Bairappa | Updated: Thursday, July 6, 2023, 05:32 PM [IST]

    2010ರಲ್ಲಿ ಇಂಡಸ್ಟ್ರಿಗೆ ಕಾಲಿಟ್ಟಿದ್ದ ರಿಷಬ್ ಶೆಟ್ಟಿ 2019ರಲ್ಲಿ ನಟರಾದರು. ಮೊದಲಿಗೆ ಕೆಲ ಚಿತ್ರಗಳಲ್ಲಿ ಸೈಡ್ ರೋಲ್ ಮಾಡಿದ್ದ ರಿಷಬ್ ಶೆಟ್ಟಿ ನಂತರ ನಿರ್ದೇಶಕನಾದರು ಹಾಗೂ ಪೂರ್ಣ ಪ್ರಮಾಣದ ನಟನಾದರು. ಸದ್ಯ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಪ್ರಪಂಚದಾದ್ಯಂತ ಭಾರೀ ಸಡ್ಡು ಮಾಡುತ್ತಿದೆ. ಹದಿನಾರು ಕೋಟಿ ವೆಚ್ಚದಲ್ಲಿ ತಯಾರಾದ ಕಾಂತಾರ ಸಿನಿಮಾ ಸದ್ಯ 400 ಕೋಟಿ ಕ್ಲಬ್ ಸೇರುವ ಹೊಸ್ತಿಲಲ್ಲಿದೆ. ಯಾವುದೇ ಸ್ಟಾರ್ ನಟ ಅಥವಾ ನಟಿಯರಿಲ್ಲದೇ ತೆರೆಕಂಡ ಕಾಂತಾರ ಚಿತ್ರ ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ನಂತರ ಪ್ಯಾನ್ ಇಂಡಿಯಾ ಚಿತ್ರವಾಗಿ ಮಾರ್ಪಟ್ಟಿತು. ಕಾಂತಾರ ಸಿನಿಮಾ ಬಳಿಕ ಸಪ್ತಮಿ ಗೌಡ ಹಾಗೂ ರಿಷಬ್ ಶೆಟ್ಟಿ ಅವರಿಗೆಸಾಲು ಸಾಲು ಆಫರ್‌ಗಳು ಬರುತ್ತಿವೆ. ಅದರಲ್ಲೂ ನಟನೆ ಜೊತೆಗೆ ಅತ್ಯದ್ಭುತ ಚಿತ್ರಕಥೆ ಬರಹಗಾರ ಹಾಗೂ ನಿರ್ದೇಶಕನಾಗಿರುವ ರಿಷಬ್ ಶೆಟ್ಟಿಗೆ ದೊಡ್ಡ ಬೇಡಿಕೆ ಮತ್ತು ಮಾರ್ಕೆಟ್ ಸೃಷ್ಟಿಯಾಗಿದೆ. ಸದ್ಯ ಹಲವಾರು ಆಫರ್‌ಗಳು ಬರುತ್ತಿರುವ ರಿಷಬ್ ಅವರ ಆರಂಭದ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ರಿಷಬ್ ನಾಯಕನಾಗುವ ಮೊದಲು ಎಂಟು ಸಿನಿಮಾಗಳಲ್ಲಿ ಸೈಡ್ ರೋಲ್ ಮಾಡಿದ್ದರು. ಆ ಸಿನಿಮಾಗಳು ಯಾವವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

    cover image
    ನಮ್ ಏರಿಯಲ್ಲೊಂದಿನ

    ನಮ್ ಏರಿಯಲ್ಲೊಂದಿನ

    1

    ರಿಷಬ್ ಶೆಟ್ಟಿ 2010ರಲ್ಲಿ 'ನಮ್ ಏರಿಯಾದಲ್ಲಿ ಒಂದಿನ' ಎಂಬ ಸಿನಿಮಾದಲ್ಲಿ ಹೆಸರಿಲ್ಲದ ಪಾತ್ರದಲ್ಲಿ ನಟಿಸಿದ್ದರು. ಅನೀಶ್ ಹಾಗೂ ರಕ್ಷಿತ್ ಶೆಟ್ಟಿ ಅಭಿನಯಿಸಿದ್ದ ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.  

    ತುಗಲಕ್

    ತುಗಲಕ್

    2

    ನಂತರ 2012ರಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ ತುಗಲಕ್ ಚಿತ್ರದಲ್ಲಿ ರಿಷಬ್ ನಟಿಸಿದ್ದರು. ಈ ಸಿನಿಮಾದಲ್ಲಿಯೂ ಕೂಡ ಹೆಸರಿಲ್ಲದ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದರು.  

    ಅಟ್ಟಹಾಸ

    ಅಟ್ಟಹಾಸ

    3

    2013ರಲ್ಲಿ ಕಿಶೋರ್ ಹಾಗೂ ಅರ್ಜುನ್ ಸರ್ಜಾ ನಟಿಸಿದ್ದ ಅಟ್ಟಹಾಸ ಚಿತ್ರದಲ್ಲಿ ರಿಷಬ್ ಶೆಟ್ಟಿ ಪೊಲೀಸ್ ಪಾತ್ರವೊಂದನ್ನು ನಿರ್ವಹಿಸಿದ್ದರು. ಈ ಸಿನಿಮಾವನ್ನು ಎ.ಎಂ.ಆರ್ ರಮೇಶ್ ನಿರ್ದೇಶನ ಮಾಡಿದ್ದರು.  

    ಲೂಸಿಯಾ

    ಲೂಸಿಯಾ

    4

    ಬಳಿಕ ರಿಷಬ್ ಶೆಟ್ಟಿ ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಚಿತ್ರದಲ್ಲಿ ಪೊಲೀಸ್ ಪೇದೆ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿ ಸತೀಶ್ ನೀನಾಸಂ ನಾಯಕನಾಗಿ ನಟಿಸಿದ್ದರು.  ಈ ಚಿತ್ರ 2013ರಲ್ಲಿ ತೆರೆಕಂಡಿತ್ತು.  

     

    ಉಳಿದವರು ಕಂಡಂತೆ

    ಉಳಿದವರು ಕಂಡಂತೆ

    5

    2014ರಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶನದ 'ಉಳಿದವರು ಕಂಡಂತೆ' ಚಿತ್ರದಲ್ಲಿ ರಿಷಬ್ ಶೆಟ್ಟಿ ರಘು ಎಂಬ ಪಾತ್ರದಲ್ಲಿ ನಟಿಸಿದ್ದರು. 

    ರಿಕ್ಕಿ

    ರಿಕ್ಕಿ

    6

    ನಂತರ 2016ರಲ್ಲಿ ತೆರೆಕಂಡ ತಮ್ಮದೇ ನಿರ್ದೇಶನದ ಮೊದಲ ಸಿನಿಮಾ 'ರಿಕ್ಕಿ'ಯಲ್ಲಿ ಕೂಡ ರಿಷಬ್ ಶೆಟ್ಟಿ ಹೆಸರಿಲ್ಲದ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.  

     

    ಸರ್ಕಾರಿ ಹಿ ಪ್ರಾ ಶಾಲೆ ಕಾಸರಗೋಡು

    ಸರ್ಕಾರಿ ಹಿ ಪ್ರಾ ಶಾಲೆ ಕಾಸರಗೋಡು

    7

    ಇನ್ನು, 2018ರಲ್ಲಿ ಬಿಡುಗಡೆಗೊಂಡ ತಮ್ಮದೇ ನಿರ್ದೇಶನದ ಮೂರನೇ ಚಿತ್ರ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು'ವಿನಲ್ಲಿ ರಿಷಬ್ ಶೆಟ್ಟಿ ಇನ್ಸ್ಪೆಕ್ಟರ್ ಕೆಂಪರಾಜು ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದರು.

    ಅಂಬಿ ನಿಂಗ್ ವಯಸ್ಸಾಯ್ತೋ!

    ಅಂಬಿ ನಿಂಗ್ ವಯಸ್ಸಾಯ್ತೋ!

    8

    2018ರಲ್ಲಿ ತೆರೆಕಂಡಿದ್ದ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ನಿರ್ದೇಶಕನ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಮುಖ್ಯ ಪಾತ್ರ ನಿರ್ವಹಿಸಿದ್ದರು.  

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X