twitter
    X
    Home ಚಲನಚಿತ್ರಗಳ ಒಳನೋಟ

    ಬಿಗ್ ಬಾಸ್‌‌ ಕನ್ನಡ ಸೀಸನ್ 1ರಿಂದ 10ರವರೆಗೆ ವಿಜೇತರ ಪಟ್ಟಿ ಇಲ್ಲಿದೆ.

    Author Sowmya Bairappa | Updated: Friday, February 2, 2024, 10:31 AM [IST]

    2013ರಲ್ಲಿ ಕನ್ನಡ ಬಿಗ್ ಬಾಸ್ ಆರಂಭಗೊಂಡಿತ್ತು. ಹಿಂದಿಯಲ್ಲಿ ಭಾರೀ ಬೇಡಿಕೆ ಸೃಷ್ಟಿಸಿಕೊಂಡಿದ್ದ ಈ ಶೋಗೆ ಕನ್ನಡದಲ್ಲಿ ದಿನಕಳೆದಂತೆ ಉತ್ತಮ ಪ್ರತಿಕ್ರೆಯೆ ಬರಲು ಆರಂಭವಾಗಿತ್ತು. ಮೊದಲನೇ ಆವೃತ್ತಿಯಲ್ಲಿ ವಿಜಯ್ ರಾಘವೇಂದ್ರ ವಿಜೇತರಾಗಿ ಹೊರಹೊಮ್ಮಿದ್ದರು. ಬಳಿಕ ಬಿಗ್ ಬಾಸ್ ಕಾರ್ಯಕ್ರಮವನ್ನು ಮುಂದುವರೆಸಿಕೊಂಡು ಬರಲಾಯಿತು. ಪ್ರತಿ ಸೀಸನ್ ನಲ್ಲೂ ಕಿಚ್ಚ ಸುದೀಪ್ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. ಹಾಗಾದರೆ ಬಿಗ್ ಬಾಸ್ ಸೀಸನ್ ಒಂದರಿಂದ ಸೀಸನ್ 10ರವರೆಗೆ ಯಾರೆಲ್ಲಾ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಸದ್ಯ ಅವರೇನು ಮಾಡುತ್ತಿದ್ದಾರೆ ಎಂಬೆಲ್ಲಾ ಮಾಹಿತಿ ಇಲ್ಲಿದೆ.

    cover image
    ವಿಜಯ್ ರಾಘವೇಂದ್ರ

    ವಿಜಯ್ ರಾಘವೇಂದ್ರ

    1

    2013ರಲ್ಲಿ ನಡೆದಿದ್ದ ಬಿಗ್ ಬಾಸ್‌‌ ಸೀಸನ್ 1ರಲ್ಲಿ ನಟ ವಿಜಯ್ ರಾಘವೇಂದ್ರ ಅವರು ವಿಜೇತರಾಗಿದ್ದರು. ಸೀಸನ್ ಒಂದರಲ್ಲಿ ಅರುಣ್ ಸಾಗರ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಸದ್ಯ ವಿಜಯ್ ರಾಘವೇಂದ್ರ ರಿಯಾಲಿಟಿ ಶೋವೊಂದರ ತೀರ್ಪುಗಾರಾಗಿದ್ದು, ಕೆಲ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. 

    ಅಕುಲ್ ಬಾಲಾಜಿ

    ಅಕುಲ್ ಬಾಲಾಜಿ

    2

    ಬಿಗ್ ಬಾಸ್‌‌ ಸೀಸನ್ 2ರಲ್ಲಿ ನಿರೂಪಕ ಅಕುಲ್ ಬಾಲಾಜಿ ಗೆಲುವು ತಮ್ಮದಾಗಿಸಿಕೊಂಡಿದ್ದರು. ಬಿಗ್ ಬಾಸ್‌‌ ಸೀಸನ್ 2, 2014ರಲ್ಲಿ ನಡೆದಿತ್ತು. ಆ್ಯಂಕರಿಂಗ್ ಮೂಲಕ ಮೊದಲೇ ಖ್ಯಾತಿ ಗಳಿಸಿದ್ದ ಅಕುಲ್ ಅವರ ಖ್ಯಾತಿ ಬಿಗ್ ಬಾಸ್​ನಿಂದ ಬಂದ ನಂತರ ದುಪ್ಪಟ್ಟಾಗಿತ್ತು. ಸೃಜನ್ ಲೋಕೇಶ್ ಎರಡನೇ ಸೀಸನ್ನಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಸದ್ಯ ಅಕುಲ್ ರಿಯಾಲಿಟಿ ಶೋವೊಂದರಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  

    ಶೃತಿ

    ಶೃತಿ

    3

    2015-16ನೇ ಸಾಲಿನಲ್ಲಿ ನಡೆದಿದ್ದ ಬಿಗ್ ಬಾಸ್‌‌ ಸೀಸನ್ 3ರಲ್ಲಿ ಕನ್ನಡ ಖ್ಯಾತ ನಟಿ ಶ್ರುತಿ ವಿಜಯಶಾಲಿಯಾಗಿದ್ದರು. ನಟ ಚಂದನ್ ರನ್ನರ್ ಅಪ್ ಆಗಿದ್ದರು. ನಟಿ ಶ್ರುತಿ ರಿಯಾಲಿಟಿ ಶೋವೊಂದರ ತೀರ್ಪುಗಾರರಾಗಿದ್ದು, ಇದರ ಜೊತೆಗೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  ನಟ ಚಂದನ್ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. 

    ಪ್ರಥಮ್

    ಪ್ರಥಮ್

    4

    ಬಿಗ್ ಬಾಸ್‌‌ ಸೀಸನ್ 4ರಲ್ಲಿ ಒಳ್ಳೆ ಹುಡುಗ ಪ್ರಥಮ್ ಗೆಲುವು ಸಾಧಿಸಿದ್ದರು. ಈ ಕಾರ್ಯಕ್ರಮ 2016-17ರಲ್ಲಿ ಜರುಗಿತ್ತು. ಕಿರಿಕ್ ಕೀರ್ತಿ ರನ್ನರ್ ಅಪ್ ಆಗಿದ್ದರು. ಸದ್ಯ ಪ್ರಥಮ್  ನಟನೆ, ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ. ಅವರ ನಟನೆಯ ನಟಭಯಂಕರ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇನ್ನು ಕಿರಿಕ್ ಕೀರ್ತಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.      

    ಚಂದನ್ ಶೆಟ್ಟಿ

    ಚಂದನ್ ಶೆಟ್ಟಿ

    5

    2017-18ರಲ್ಲಿ ನಡೆದಿದ್ದ ಬಿಗ್ ಬಾಸ್‌‌ ಸೀಸನ್ 5ರಲ್ಲಿ ಚಂದನ್ ಶೆಟ್ಟಿ ವಿಜೇತರಾಗಿದ್ದರು. 3 ಪೆಗ್ ಸಾಂಗ್ ಮೂಲಕ ಖ್ಯಾತಿ ಹೊಂದಿದ್ದ ಇವರು, ಬಿಗ್ ಬಾಸ್ ಮನೆ ಸೇರಿ ಮತ್ತಷ್ಟು ಫೇಮಸ್ ಆದರು. ಮನೆಯಿಂದ ಹೊರಬಂದ ನಂತರ ಸಾಕಷ್ಟು ಸಿನಿಮಾಗಳಿಗೆ ಇವರು ಹಾಡನ್ನು ಕಂಪೋಸ್ ಮಾಡಿದ್ದಾರೆ. ಇದರ ಜೊತೆಗೆ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.  ಬಿಗ್ ಬಾಸ್‌‌ ಸೀಸನ್ 5ರಲ್ಲಿ ದಿವಾಕರ್ ರನ್ನರ್ ಅಪ್ ಆಗಿದ್ದರು. ಇವರು ಬಿಗ್ ಬಸ್ ಮನೆಯಿಂದ ಹೊರಬಂದ ಮೇಲೆ ತರಕಾರಿ ಮಾರುತ್ತಿದ್ದು, ಇದರ ಜೊತೆಗೆ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ.    

    ಶಶಿಕುಮಾರ್ (ಬಿಗ್ ಬಾಸ್)

    ಶಶಿಕುಮಾರ್ (ಬಿಗ್ ಬಾಸ್)

    6

    ಬಿಗ್ ಬಾಸ್‌‌ ಸೀಸನ್ 6ರಲ್ಲಿ ಆಧುನಿಕ ರೈತ ಎಂದೇ ಕರೆಸಿಕೊಳ್ಳುವ ಶಶಿಕುಮಾರ್ ವಿಜಯಶಾಲಿಯಾಗಿದ್ದರು.  2018-19ರಲ್ಲಿ ಕಾರ್ಯಕ್ರಮ ನಡೆದಿತ್ತು. ನವೀನ್ ಸಜ್ಜು ಸೀಸನ್ 6ನ ರನ್ನರ್ ಅಪ್ ಆಗಿದ್ದರು. ಸದ್ಯ ಶಶಿಕುಮಾರ್ ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ನವೀನ್ ಸಜ್ಜು ಅವರು ಸಿನಿಮಾ ಹಾಗೂ ಗಾಯನದಲ್ಲಿ ಬ್ಯುಸಿಯಾಗಿದ್ದಾರೆ. 

    ಶೈನ್ ಶೆಟ್ಟಿ

    ಶೈನ್ ಶೆಟ್ಟಿ

    7

    2019-20ರಲ್ಲಿ ನಡೆದಿದ್ದ  ಬಿಗ್ ಬಾಸ್‌‌ ಸೀಸನ್ 7ರಲ್ಲಿ ಶೈನ್ ಶೆಟ್ಟಿ ಗೆಲುವು ತಮ್ಮದಾಗಿಸಿಕೊಂಡಿದ್ದರು. ಹಾಸ್ಯ ನಟ ಕುರಿ ಪ್ರತಾಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಸದ್ಯ ಶೈನ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಹಾಗೆಯೇ ನಟ ಕುರಿ ಪ್ರತಾಪ್ ರಿಯಾಲಿಟಿ ಶೋ ಹಾಗೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  

    ಮಂಜು ಪಾವಗಡ

    ಮಂಜು ಪಾವಗಡ

    8

    2022ರಲ್ಲಿ ಜರುಗಿದ್ದ ಬಿಗ್ ಬಾಸ್ ಸೀಸನ್ 8ರಲ್ಲಿ ಮಜಾಭಾರತ ಖ್ಯಾತಿಯ ಹಾಸ್ಯ ಕಲಾವಿದ ಮಂಜು ಪಾವಗಡ ಗೆಲುವು ಸಾಧಿಸಿದ್ದರು. ಬೈಕರ್ ಅರವಿಂದ್ ರನ್ನರ್ ಅಪ್ ಆಗಿದ್ದರು. ಮಂಜು ಪಾವಗಡ ಸದ್ಯ ರಿಯಾಲಿಟಿ ಶೋ ಹಾಗೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅರವಿಂದ್ ಬೈಕ್ ರೇಸ್ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. 

    9

    ಬಿಗ್ ಬಾಸ್ ಸೀಸನ್ 9ರಲ್ಲಿ ರೂಪೇಶ್ ಶೆಟ್ಟಿ ವಿಜೇತರಾಗಿದ್ದು, ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ. ರೂಪೇಶ್ ಶೆಟ್ಟಿ ಹಲವಾರು ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ರೇಡಿಯೋ ಜಾಕಿ, ನಿರೂಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಬಿಗ್ ಬಾಸ್ ಸೀಸನ್ ೯ರಲ್ಲಿ ಗೆಲುವು ತಮ್ಮದಾಗಿಸಿಕೊಂಡಿದ್ದು, ಕನ್ನಡ ಸಿನಿಮಾಗಳಲ್ಲಿ ಅವಕಾಶ ಸಿಗುವ ನಿರೀಕ್ಷೆಯಿದೆ. ರೂಪೇಶ್ ಶೆಟ್ಟಿ ಓಟಿಟಿ ಸೀಸನ್ ನಲ್ಲೂ ವಿಜೇತರಾಗಿದ್ದರು. 

    ಕಾರ್ತಿಕ್ ಮಹೇಶ್

    ಕಾರ್ತಿಕ್ ಮಹೇಶ್

    10

    2023-2024ನೇ ಸಾಲಿನಲ್ಲಿ ನಡೆದ ಬಿಗ್ ಬಾಸ್‌‌ ಸೀಸನ್ 10ರಲ್ಲಿ ಕಾರ್ತಿಕ್ ಮಹೇಶ್ ವಿಜೇತರಾಗಿ ಹೊರಹೊಮ್ಮಿದ್ದಾರೆ.  ಕಾರ್ತಿಕ್‌ಗೆ 50 ಲಕ್ಷ ರೂಪಾಯಿ ಹಣದ ಜೊತೆ ಮಾರುತಿ ಸುಜುಕಿ ಬ್ರೆಜಾ ಕಾರು ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಸಿಕ್ಕಿದೆ. ರನ್ನರ್ ಅಪ್‌ ಆಗಿ ಡ್ರೋನ್ ಪ್ರತಾಪ್ ಹೊರಹೊಮ್ಮಿದ್ದಾರೆ. 

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X