twitter
    X
    Home ಚಲನಚಿತ್ರಗಳ ಒಳನೋಟ

    ಬರ್ತ್​ಡೇ ಸ್ಪೆಷಲ್: ಕ್ರಿಯೇಟಿವ್‌ ಡೈರೆಕ್ಟರ್ ಗುರುಪ್ರಸಾದ್‌ ನಿರ್ದೇಶನದ ಸಿನಿಮಾಗಳ ಪಟ್ಟಿ ಇಲ್ಲಿದೆ

    Author Sowmya Bairappa | Updated: Thursday, November 2, 2023, 09:33 AM [IST]

    ಗುರುಪ್ರಸಾದ್‌ ಸ್ಯಾಂಡಲ್‌ವುಡ್‌ನ ಕ್ರಿಯೇಟಿವ್‌ ನಿರ್ದೇಶಕ ಎಂದೇ ಹೆಸರುವಾಸಿಯಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ನಿರ್ದೇಶನದ ಸಿನಿಮಾಗಳ ಮೂಲಕವೇ ಗುರುಪ್ರಸಾದ್‌ ಸಂಚಲನ ಸೃಷ್ಟಿಸಿದ್ದಾರೆ. ವಿಭಿನ್ನ ಫಾರ್ಮ್ಯಾಟ್‌ನ ಸಿನಿಮಾಗಳು ಅವರ ಬತ್ತಳಿಕೆಯಿಂದ ಬಂದಿವೆ. ಬರೀ ನಿರ್ದೇಶನದ ಮೂಲಕ ಮಾತ್ರವಲ್ಲದೆ ನಟನೆಯಿಂದಲೂ ಗುರುಪ್ರಸಾದ್‌ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ಗುರುಪ್ರಸಾದ್‌ ನಿರ್ದೇಶನದ ಸಿನಿಮಾಗಳ ಪಟ್ಟಿ ಇಲ್ಲಿದೆ.

    cover image
    ಮಠ

    ಮಠ

    1

    ನಿರ್ದೇಶಕ ಗುರುಪ್ರಸಾದ್ ಆಕ್ಷನ್ ಕಟ್ ಹೇಳಿದ ಮೊದಲ ಸಿನಿಮಾ ಮಠ. ಮಠ-ಮಾನ್ಯಗಳಲ್ಲಿ ನೆಡೆಯುವ ಬೆಳವಣಿಗೆಗಳನ್ನು ಹಾಸ್ಯದ ಕನ್ನಡಿ ಮೂಲಕ ತೋರಿಸಲಾಗಿತ್ತು. ಚಿತ್ರದಲ್ಲಿ ಮುಖ್ಯ ಕಥೆಯ ಜೊತೆಗೆ ಹಲವು ಉಪಕಥೆಗಳು ಬರುತ್ತವೆ. ಮನುಷ್ಯನಲ್ಲಿರುವ ಅವಗುಣಗಳನ್ನು ದಾಟುವ ಬಗೆಯನ್ನು ಒಂದು ಆಲಸಿ ಯುವಕ ತಂಡದ ಮೂಲಕ ತೋರಿಸಿಕೊಟ್ಟಿತು. ಮಠ ಚಿತ್ರದಲ್ಲಿ ಜಗ್ಗೇಶ್ ನಾಯಕನಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಮಂಡ್ಯ ರಮೇಶ್, ಬಿರಾದರ್, ತಬಲಾ ನಾಣಿ, ಸಾಧು ಕೋಕಿಲ, ದೊಡ್ಡಣ್ಣ, ಗಿರೀಶ್ ಶಿವಣ್ಣ, ನಾಗತಿಹಳ್ಳಿ ಚಂದ್ರಶೇಖರ್, ಗುರು ಪ್ರಸಾದ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

     

    ಎದ್ದೇಳು ಮಂಜುನಾಥ

    ಎದ್ದೇಳು ಮಂಜುನಾಥ

    2

    ಗುರುಪ್ರಸಾದ್ ನಿರ್ದೇಶನದ ಎರಡನೇ ಸಿನಿಮಾ ಎದ್ದೇಳು ಮಂಜುನಾಥ. ಈ ಚಿತ್ರದಲ್ಲೂ ಕೂಡ ಜಗ್ಗೇಶ್ ನಾಯಕನಾಗಿ ಕಾಣಿಸಿಕೊಂಡಿದ್ದರು. ವಿಭಿನ್ನ ಟೈಟಲ್ ಮತ್ತು ಅಲೋಚನೆಯೊಂದಿಗೆ ಬಂದ ಸಿನಿಮಾ 'ಎದ್ದೇಳು ಮಂಜುನಾಥ' ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ಮೂಲಕ ಜಗ್ಗೇಶ್ ಅವರ ಅದೃಷ್ಟ ಖುಲಾಯಿಸಿತು ಎಂದೇ ಹೇಳಬಹುದು. ಯಾಕೆಂದರೆ ನಟ ಜಗ್ಗೇಶ್‌ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದರು, ಒಂದು ಸಮಯದಲ್ಲಿ ಅವರ ಸಿನಿಮಾಗಳು ನೆಲಕಚ್ಚಿದ್ದವು. ಅಂತಹ ಸಮಯದಲ್ಲಿ ಬಂದ ಈ 'ಎದ್ದೇಳು ಮಂಜುನಾಥ' ಚಿತ್ರ ಜಗ್ಗೇಶ್ ಅವರಿಗೆ ಹೊಸ ಹುರುಪು ತಂದುಕೊಟ್ಟಿತು. ಈ ಸಿನಿಮಾರಂಗದ ಬಳಿಕ ಜಗ್ಗೇಶ್ ಅವರು ಮತ್ತೆ ಸಾಲು, ಸಾಲು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಬ್ಯುಸಿ ಆಗಿ ಬಿಟ್ಟರು. ಈ ಚಿತ್ರದ ಯಶಸ್ಸಿನ ಮುಖ್ಯ ರೂವಾರಿ ನಿರ್ದೇಶಕ ಗುರುಪ್ರಸಾದ್ ಎಂದರೆ ತಪ್ಪಾಗಲಾರದು. ಎದ್ದೇಳು ಮಂಜುನಾಥ ಚಿತ್ರದಲ್ಲಿ ಯಜ್ಞ ಶೆಟ್ಟಿ, ಎಸ್.ಕೆ.ಶ್ಯಾಮಸುಂದರ್, ವಿ ಮನೋಹರ್, ತಬಲಾ ನಾಣಿ ಮೊದಲಾದವರು  ಅಭಿನಯಿಸಿದ್ದರು.  

     

    ಡೈರೆಕ್ಟರ್ಸ್ ಸ್ಪೆಷಲ್

    ಡೈರೆಕ್ಟರ್ಸ್ ಸ್ಪೆಷಲ್

    3

    ಗುರುಪ್ರಸಾದ್ ನಿರ್ದೇಶನದ ಮೂರನೇ ಸಿನಿಮಾ ಡೈರೆಕ್ಟರ್ ಸ್ಪೆಷಲ್. ಈ ಚಿತ್ರದಲ್ಲಿ ನಟ ಡಾಲಿ ಧನಂಜಯ, ಪೂಜಾಗಾಂಧಿ, ರಂಗಾಯಣ ರಘು, ತಬಲಾ ನಾಣಿ ಮುಖ್ ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ ನಟ ಡಾಲಿ ಧನಂಜಯ್‌ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಸಿನಿಮಾಗಾಗಿ ಬೆಸ್ಟ್ ಆಕ್ಟರ್ ಇನ್ ಡೆಬ್ಯು ಸೈಮಾ ಪ್ರಶಸ್ತಿ ಪಡೆದರು. 

    ಎರಡನೇಸಲ

    ಎರಡನೇಸಲ

    4

    'ಡೈರೆಕ್ಟರ್ ಸ್ಪೆಷಲ್' ಚಿತ್ರದ ನಂತರ ಬೆಳ್ಳಿತೆರೆಯಿಂದ ದೂರ ಇದ್ದ ಗುರುಪ್ರಸಾದ್ ಮತ್ತೆ 'ಎರಡನೇ ಸಲ' ಮೂಲಕ ನಿರ್ದೇಶನಕ್ಕೆ ಹಿಂದಿರುಗಿದರು. ಈ ಸಿನಿಮಾ ಉತ್ತಮ ಸಂಭಾಷಣೆ, ನವಿರಾದ ರೊಮ್ಯಾನ್ಸ್, ಅಮ್ಮನ ಸೆಂಟಿಮೆಂಟ್ ಮತ್ತು ಸಂದೇಶ ಸಂದೇಶ ಹೊಂದಿದ್ದು, ಪ್ರೇಕ್ಷಕರು ಇಷ್ಟಪಟ್ಟಿದ್ದರು.  

     

    ರಂಗನಾಯಕ

    ರಂಗನಾಯಕ

    5

    ನಟ ಜಗ್ಗೇಶ್ ಹಾಗೂ ಗುರುಪ್ರಸಾದ್ ಕಾಂಬಿನೇಷನ್ ನಲ್ಲಿ ಈಗಾಗಲೇ ಎರಡು ಸೂಪರ್ ಹಿಟ್ ಸಿನಿಮಾಗಳು ಬಂದಿವೆ. 'ಮಠ' ಹಾಗೂ 'ಎದ್ದೇಳು ಮಂಜುನಾಥ' ಚಿತ್ರಗಳು ಇಂದಿಗೂ ಕನ್ನಡ ಸಿನಿ ಪ್ರೇಮಿಗಳನ್ನು ನಗಿಸುತ್ತಿವೆ. ಈ ಯಶಸ್ವಿ ಜೋಡಿ ಕಾಂಬಿನೇಷನ್ ನಲ್ಲಿ  'ರಂಗನಾಯಕ' ಎಂಬ ಚಿತ್ರ ಮೂಡಿಬರುತ್ತಿದೆ. ಚಿತ್ರಕ್ಕೆ ಎ.ಆರ್.ವಿಖ್ಯಾತ್ ಬಂಡವಾಳ ಹೂಡಿದ್ದರೆ, ರಾಗನಿಧಿ ಅನೂಪ್ ಸೀಳೀನ್ ಸಂಗೀತ ನೀಡಿದ್ದಾರೆ.

     

    ಅದೇಮಾ

    ಅದೇಮಾ

    6

    ಗುರುಪ್ರಸಾದ್ ನಿರ್ದೇಶನದಲ್ಲಿ 'ಅದೇಮಾ' ಎಂಬ ಸಿನಿಮಾ ಸಿನಿಮಾ ಬರುತ್ತಿದೆ.. ಈ ಚಿತ್ರದಲ್ಲಿ ಅನೂಪ್ ಸಾ.ರಾ.ಗೋವಿಂದ್ ನಾಯಕನಾಗಿದ್ದು, ಸಿನಿಮಾ ಇನ್ನೂ  ಬಿಡುಗಡೆಯಾಗಿಲ್ಲ.  

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X