twitter
    X
    Home ಚಲನಚಿತ್ರಗಳ ಒಳನೋಟ

    ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಮುಂಬರುವ ಸಿನಿಮಾಗಳ ಪಟ್ಟಿ ಇಲ್ಲಿದೆ.

    Author Sowmya Bairappa | Updated: Tuesday, October 3, 2023, 06:28 PM [IST]

    ಪುನೀತ್ ರಾಜ್‌ಕುಮಾರ್ ನಟನೆಯ ನಿನ್ನಿಂದಲೇ ಚಿತ್ರದ ಮೂಲಕ ಆರಂಭವಾದ ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಾಣ ಸಂಸ್ಥೆ ನಂತರ ಯಶ್ ನಟನೆಯ ಮಾಸ್ಟರ್ ಪೀಸ್ ಚಿತ್ರವನ್ನು ನಿರ್ಮಿಸಿತ್ತು. ಮತ್ತೊಮ್ಮೆ ಪುನೀತ್ ಅಭಿನಯದ 'ರಾಜಕುಮಾರ' ಚಿತ್ರಕ್ಕೆ ಬಂಡವಾಳ ಹೂಡಿದ ಹೊಂಬಾಳೆ ಫಿಲ್ಮ್ಸ್ ಈ ಚಿತ್ರದ ಮೂಲಕ ಚಿನ್ನದ ಬೆಳೆ ತೆಗೆಯಿತು. ಈ ಚಿತ್ರದ ಯಶಸ್ಸಿನ ಮೂಲಕ ಶುರುವಾದ ಹೊಂಬಾಳೆ ಫಿಲ್ಮ್ಸ್‌ನ ಗೆಲುವಿನ ಓಟ ಎಲ್ಲಿಯೂ ನಿಂತಿಲ್ಲ. ಹೀಗೆ ಸಾಲು ಸಾಲು ಚಿತ್ರಗಳನ್ನು ಘೋಷಿಸಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮುಂಬರುವ ಸಿನಿಮಾಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

    cover image
    ಬಘೀರ

    ಬಘೀರ

    1

    ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸುತ್ತಿರುವ ಬಘೀರ ಚಿತ್ರವನ್ನು ಡಾ.ಸೂರಿ ನಿರ್ದೇಶಿಸುತ್ತಿದ್ದಾರೆ. ಪ್ರಶಾಂತ್ ನೀಲ್ ರವರು ಕಥೆ ಬರೆದಿದ್ದು, ವಿಜಯ್ ಕಿರಂಗಂದುರ್ ಹೊಂಬಾಳೆ ಫಿಲ್ಸ್ಮ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಆಕ್ಸನ್ ಥ್ರಿಲ್ಲರ್ ಚಿತ್ರದಲ್ಲಿ ಮುರಳಿ ಖಡಕ್ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ

    ಕಾಂತಾರ 2 ಸಿನಿಮಾ

    ಕಾಂತಾರ 2 ಸಿನಿಮಾ

    2

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ 2022ರ ಸೆಪ್ಟೆಂಬರ್ 30ರಂದು ರಿಲೀಸ್ ಆಗಿ ಕನ್ನಡಿಗರ ಮನಗೆದ್ದಿತ್ತು. ಕನ್ನಡ ವರ್ಷನ್‌ನಿಂದಲೇ ವಿಶ್ವಾದ್ಯಂತ ಸಿನಿಪ್ರಿಯರ ಪ್ರೀತಿಯನ್ನು ಸಂಪಾದಿಸಿತ್ತು. ಈ ಮಧ್ಯೆ ಹೊರರಾಜ್ಯಗಳಿಂದಲೂ ಬೇಡಿಕೆ ಹೆಚ್ಚಾದ ಕಾರಣ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗೆ 'ಕಾಂತಾರ' ಚಿತ್ರವನ್ನು ಡಬ್ ಮಾಡಲಾಗಿತ್ತು. ಕಾಂತಾರ ಸಿನಿಮಾ ನೋಡಿ ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ದಂಗಾಗಿದ್ದು,  ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಜಾದೂ ಮಾಡಿತ್ತು. ಕಾಂತಾರ ಸಿನಿಮಾ ಯಶಸ್ಸಿನ ಬೆನ್ನಲೇ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾ ಮಾಡಲಿದ್ದು, ಇದನ್ನು ಕೂಡ ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸುತ್ತಿದೆ.  

     

    ರಿಚರ್ಡ್ ಅಂಟನಿ

    ರಿಚರ್ಡ್ ಅಂಟನಿ

    3

    ರಿಚರ್ಡ್ ಆಂಟನಿ ಸಿನಿಮಾವನ್ನು ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ.  ಇದು ಉಳಿದವರು ಕಂಡಂತೆ ಚಿತ್ರದ ಪ್ರಿಕ್ವೆಲ್ ಆಗಿರಲಿದೆ. ಹಿಂದಿನ ಚಿತ್ರದ ಬಹುತೇಕ ತಾರಾಗಣ ಈ ಚಿತ್ರದಲ್ಲೂ ಕೂಡ ಮುಂದುವರೆಯಲಿದ್ದು, ರಿಚರ್ಡ್ ಆಂಟನಿ ಅಲಿಯಾಸ್ ರಿಚ್ಚಿಯ ಕಥೆ ಮುಂದುವರೆಯಲಿದೆ. ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದುರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ, ಕರ್ಮ ಚಾವ್ಲಾ ಛಾಯಾಗ್ರಹಣವಿರಲಿದೆ.

    ಸಲಾರ್

    ಸಲಾರ್

    4

    ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕನ್ನಡ ಚಿತ್ರಗಳನ್ನು ಹೊರತುಪಡಿಸಿ ಮೊದಲು ಘೋಷಿಸಿದ್ದು ತೆಲುಗು ಚಿತ್ರವನ್ನು. ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಶನ್‌ನ ಸಲಾರ್ ಚಿತ್ರವನ್ನು ಘೋಷಿಸಿದ ಹೊಂಬಾಳೆ ಫಿಲ್ಮ್ಸ್ ಟಾಲಿವುಡ್ ಪ್ರವೇಶ ಮಾಡಿತ್ತು. ಈ ಚಿತ್ರ ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಮೂಡಿಬರಲಿದ್ದು, ಬಹುತೇಕ ಕೆಜೆಎಫ್ ತಾಂತ್ರಿಕ ವರ್ಗವೇ ಇರಲಿದೆ. ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡುತ್ತಿದ್ದರೆ, ಭುವನ ಗೌಡ ಛಾಯಾಗ್ರಹಣವಿದೆ. ನಾಯಕಿಯಾಗಿ ಶೃತಿ ಹಾಸನ್ ಅಭಿನಯಿಸಲಿದ್ದಾರೆ. 

    ಟೈಸನ್

    ಟೈಸನ್

    5

    ಪೃಥ್ವಿರಾಜ್ ಸುಕುಮಾರನ್ ನಟನೆ ಹಾಗೂ ನಿರ್ದೇಶನದ 'ಟೈಸನ್' ಎಂಬ ಮಲಯಾಳಂ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಲಿದೆ. ಭಾರತದ ಪ್ರಸ್ತುತತೆ ತಕ್ಕಂತೆ ನಿರ್ಮಿಸಲಾಗುತ್ತಿರುವ ಈ ಸಿನಿಮಾವವು ಪೃಥ್ವಿರಾಜ್ ಸುಕುಮಾರನ್ ಮತ್ತು ಮುರುಳಿ ಗೋಪಿ ಸಹಯೋಗದಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾವಾಗಿದೆ. 2023ರಲ್ಲಿ ಸೆಟ್ಟೇರಲಿರುವ ಈ ಸಿನಿಮಾ 2024ರಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.  

    ರಘು ತಾತ

    ರಘು ತಾತ

    6

    ಇತ್ತೀಚೆಗಷ್ಟೆ ಕೀರ್ತಿ ಸುರೇಶ್ ನಟನೆಯ 'ರಘು ತಾತ' ಎಂಬ ತಮಿಳು ಚಿತ್ರವನ್ನು ಘೋಷಿಸಿರುವ ಹೊಂಬಾಳೆ ಫಿಲ್ಮ್ಸ್ ಸುಧಾ ಕೊಂಗರ ನಿರ್ದೇಶನದ ಚಿತ್ರವೊಂದಕ್ಕೂ ಬಂಡವಾಳ ಹೂಡಲಿದೆ. ಇಷ್ಟೇ ಅಲ್ಲದೇ ಬಾಲಿವುಡ್ ಚಿತ್ರರಂಗಕ್ಕೂ ಸಹ ಹೊಂಬಾಳೆ ಫಿಲ್ಮ್ಸ್ ಪ್ರವೇಶ ಮಾಡಲಿದೆ.

    ಯುವ

    ಯುವ

    7

    ಕನ್ನಡ ಚಿತ್ರರಂಗದ ದಿಗ್ಗಜ ಡಾ.ರಾಜ್‌ಕುಮಾರ್ ಮೊಮ್ಮಗನಾದ ಯುವ ರಾಜ್‌ಕುಮಾರ್ ತಮ್ಮ ಚೊಚ್ಚಲ ಸಿನಿಮಾ ಬಿಡುಗಡೆಯಾಗುವುದಕ್ಕೂ ಮುನ್ನವೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾರೆ. ಇವರು ಸಂತೋಷ್ ಆನಂದರಾಮ್ ನಿರ್ದೇಶನದ  'ಯುವ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಾಣ ಮಾಡುತ್ತಿದ್ದಾರೆ. 

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X