twitter
    X
    Home ಚಲನಚಿತ್ರಗಳ ಒಳನೋಟ

    ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸೋತ ಟಾಪ್ 5 ಸೌತ್ ಪ್ಯಾನ್ ಇಂಡಿಯಾ ಸಿನಿಮಾಗಳ ಪಟ್ಟಿ ಇಲ್ಲಿದೆ.

    Author Sowmya Bairappa | Published: Saturday, November 5, 2022, 04:26 PM [IST]

    ಸದ್ಯ ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಭಾಷಿಕ ಪ್ರದೇಶದಲ್ಲಿ ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಿವೆ. ಬಾಲಿವುಡ್ ಸಿನಿಮಾಗಳು ದಕ್ಷಿಣ ಭಾರತ ಸಿನಿಮಾಗಳು ಮುಂದೆ ಮಕಾಡೆ ಮಲಗಿವೆ. ಆದರೆ, ಬಾಹುಬಲಿ ಯಶಸ್ಸಿನ ಹಿಂದೆ ಬಿದ್ದಿದ್ದ ಕೆಲ ಪ್ಯಾನ್ ಇಂಡಿಯಾ ಸಿನಿಮಾಗಳು ಬಾಕ್ಸಾಪೀಸ್‌ನಲ್ಲಿ ಗೆಲ್ಲಲಿಲ್ಲ. ಬಾಹುಬಲಿ ಸಿನಿಮಾದ ಯಶಸ್ಸನ್ನೇ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಕಾಣುವುದಕ್ಕೆ ಹಲವು ಸಿನಿಮಾಗಳು ಬಿಡುಗಡೆಯಾಗಿದ್ದವು. ಆದರೆ, ನಿರೀಕ್ಷೆ ಹುಟ್ಟಿಸಿ ಬಾಲಿವುಡ್‌ನಲ್ಲಿ ಬಿಡುಗಡೆಯಾದ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತು ಸುಣ್ಣವಾಗಿದ್ದವು. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದ ಪ್ಯಾನ್ ಇಂಡಿಯಾ ಸಿನಿಮಾಗಳ ಪಟ್ಟಿ ಇಲ್ಲಿದೆ.

    cover image
    ಪೈಲ್ವಾನ್

    ಪೈಲ್ವಾನ್

    1

     ಕೆಜಿಎಫ್ ಬಳಿಕ ಕನ್ನಡದಲ್ಲಿ ತೆರೆಕಂಡ ದ ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಪೈಲ್ವಾನ್. ಈ ಚಿತ್ರ ಕೂಡ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಆದರೆ, ಪೈಲ್ವಾನ್ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಲಿಲ್ಲ. ಕಿಚ್ಚ ಸುದೀಪ್ ಬಾಲಿವುಡ್ ಚಿತ್ರರಂಗಕ್ಕೆ ಪರಿಚಯವಿದ್ದರೂ ಓಡಲಿಲ್ಲ. ಪೈಲ್ವಾನ್ ರಿಲೀಸ್ ಆದ ಕೆಲವೇ ದಿನಗಳಲ್ಲಿ ಪೈರಸಿ ಆಗಿದ್ದರಿಂದ ಸೋಲಿಗೆ ಕಾರಣ ಎನ್ನಲಾಗಿತ್ತು. 

    ಸೈರಾ ನರಸಿಂಹ ರೆಡ್ಡಿ

    ಸೈರಾ ನರಸಿಂಹ ರೆಡ್ಡಿ

    2

    'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲಾಗಿತ್ತು. ಮೆಗಾಸ್ಟಾರ್ ಚಿರಂಜೀವಿ ಎರಡೂವರೆ ದಶಕಗಳ ಬಳಿಕ ಮತ್ತೆ ಹಿಂದಿ ಸಿನಿಮಾಗಳು ಬಿಡುಗಡೆಯಾಗುವ ಏರಿಯಾಗಳಲ್ಲಿ ಕಾಣಿಸಿಕೊಂಡಿದ್ದರು. ಅಮಿತಾಬ್ ಬಚ್ಚನ್, ತಮನ್ನಾ, ವಿಜಯ್ ಸೇತುಪತಿ, ಕಿಚ್ಚ ಸುದೀಪ್ ಅಂತಹ ದಿಗ್ಗಜರೇ ಇದ್ದ ಈ ಸಿನಿಮಾ ಬಾಲಿವುಡ್‌ನಲ್ಲಿ ಗೆಲ್ಲಲಿಲ್ಲ.

     

    ಮರಕ್ಕಾರ್ - ಅರೇಬಿಯನ್ ಸಮುದ್ರದ ಸಿಂಹ

    ಮರಕ್ಕಾರ್ - ಅರೇಬಿಯನ್ ಸಮುದ್ರದ ಸಿಂಹ

    3

    ಮೋಹನ್ ಲಾಲ್ ನಟಿಸಿದ 'ಮರಕ್ಕರ್' ಸಿನಿಮಾ ಮಲಯಾಳಂ ಚಿತ್ರರಂಗದ ಬಿಗ್ ಬಜೆಟ್ ಸಿನಿಮಾವಾಗಿತ್ತು. 100 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮೊದಲ ಸಿನಿಮಾ ಇದು. ಸೂಪರ್‌ಸ್ಟಾರ್ ಮೋಹನ್ ಲಾಲ್ ವೃತ್ತಿ ಬದುಕಿನಲ್ಲಿಯೇ ಒಂದು ಮೈಲಿಗಲ್ಲಾಗುತ್ತೆ ಎಂದು ಊಹಿಸಿದ್ದ ಸಿನಿಮಾ. ಹೀಗಾಗಿ ಮಲಯಾಳಂ, ಕನ್ನಡ, ತೆಲುಗು, ತಮಿಳು ಸೇರಿದಂತೆ ಹಿಂದಿಯಲ್ಲಿ ರಿಲೀಸ್ ಆಗಿತ್ತು. ಆದರೆ, ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ಹೀಗಾಗಿ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸೋತಿತ್ತು. 

    'ದರ್ಬಾರ್'

    'ದರ್ಬಾರ್'

    4

    2020ರಲ್ಲಿ ಸೂಪರ್‌ಸ್ಟಾರ್ ರಜಿನಿಕಾಂತ್ ನಟನೆಯ 'ದರ್ಬಾರ್' ಸಿನಿಮಾ ಬಿಡುಗಡೆಯಾಗಿತ್ತು. ಎ ಆರ್ ಮುರುಗದಾಸ್ ನಿರ್ದೇಶನದ ಸಿನಿಮಾವಾಗಿದ್ದರಿಂದ ಸಾಕಷ್ಟು ಕುತೂಹಲ ಕೆರಳಿಸಿತ್ತು. ಹಿಂದಿಯಲ್ಲಿ ಘಜನಿಯಂತಹ ಸೂಪರ್ ಹಿಟ್ ಸಿನಿಮಾ ನೀಡಿದ್ದರಿಂದ ಮುರುಗದಾಸ್ ನಿರ್ದೇಶಕದ 'ದರ್ಬಾರ್' ಬಗ್ಗೆ ನಿರೀಕ್ಷೆ ಹೆಚ್ಚಾಗಿತ್ತು. ಅಲ್ಲದೆ ಇದೇ ಮೊದಲ ಬಾರಿಗೆ ರಜಿನಿಕಾಂತ್ ಜೊತೆ ಬಾಲಿವುಡ್‌ ನಟ ಸುನಿಲ್ ಶೆಟ್ಟಿ ಕೂಡ ಖಳನಾಯಕನಾಗಿ ನಟಿಸಿದ್ದರು. ಆದರೆ, ದರ್ಬಾರ್ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ.

    'ಪುಲಿ'

    'ಪುಲಿ'

    5

    ಬಾಹುಬಲಿ ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ತೆರೆಕಂಡ ದಕ್ಷಿಣ ಭಾರತದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಪುಲಿ'. ದಳಪತಿ ವಿಜಯ್ , ಕಿಚ್ಚ ಸುದೀಪ್ ಹಾಗೂ ಶ್ರೀದೇವಿ ನಟನೆಯ ಸಿನಿಮಾ ಪುಲಿ. ಶ್ರೀದೇವಿಯಂತಹ ನಟಿಯರಿದ್ದರೂ ಇದ್ದರೂ, ಸಿನಿಮಾ ಮಾತ್ರ ಗೆಲ್ಲಲಿಲ್ಲ. ತಮಿಳಿನಲ್ಲೇ 'ಪುಲಿ' ಪ್ಲ್ಯಾಪ್ ಆಗಿದ್ದರಿಂದ ಬಾಲಿವುಡ್ ಅನಿವಾರ್ಯವಾಗಿ ಸೋಲನ್ನು ಅನುಭವಿಸಬೇಕಾಗಿತ್ತು.

     

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X